Asianet Suvarna News Asianet Suvarna News

ರಾಜ್ಯಪಾಲರು ಒಂದೇ ಒಂದು ದಾಖಲೆ ತೋರಿಸಲಿ: ಗೌರ್ನರ್ ನಿಯಮ ಉಲ್ಲಂಘಿಸಿದ್ದಾರೆ, ಸಚಿವ ಕೃಷ್ಣ

ಭಾರತ ಸರ್ಕಾರವು 2021 ರ ಸೆಪ್ಟೆಂಬರ್ 3 ರಲ್ಲಿ 17 'ಎ' ಸೆಕ್ಷನ್ ಅನ್ನು ಹೇಗೆ ಪರಿಗಣಿಸಬೇಕು ಎಂದು ನಿಯಮಾವಳಿ ರೂಪಿಸಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮುಂಚೆ ಯಾವ್ಯಾವ ದಾಖಲೆಗಳನ್ನು ಒದಗಿಸಬೇಕು ಎಂಬ ಪಟ್ಟಿ ನೀಡಿದೆ. ಇದರಲ್ಲಿ ಯಾವುದಾದರೂ ಒಂದೇ ಒಂದು ದಾಖಲೆಯನ್ನು ರಾಜ್ಯಪಾಲರು ತೋರಿಸಲಿ ಎಂದು ಸವಾಲು ಹಾಕಿದ ಸಚಿವ ಕೃಷ್ಣ ಬೈರೇಗೌಡ
 

Governor violated the rule says Krishna Byre Gowda grg
Author
First Published Aug 18, 2024, 4:35 AM IST | Last Updated Aug 18, 2024, 4:35 AM IST

ಬೆಂಗಳೂರು(ಆ.18):  ಮುಡಾ ನೆಪ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಯವರ ವಿರುದ್ಧ ತನಿಖೆಗೆ ಅವಕಾಶ ನೀಡಿರುವ ರಾಜ್ಯಪಾಲರು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರವು 2021 ರ ಸೆಪ್ಟೆಂಬರ್ 3 ರಲ್ಲಿ 17 'ಎ' ಸೆಕ್ಷನ್ ಅನ್ನು ಹೇಗೆ ಪರಿಗಣಿಸಬೇಕು ಎಂದು ನಿಯಮಾವಳಿ ರೂಪಿಸಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮುಂಚೆ ಯಾವ್ಯಾವ ದಾಖಲೆಗಳನ್ನು ಒದಗಿಸಬೇಕು ಎಂಬ ಪಟ್ಟಿ ನೀಡಿದೆ. ಇದರಲ್ಲಿ ಯಾವುದಾದರೂ ಒಂದೇ ಒಂದು ದಾಖಲೆಯನ್ನು ರಾಜ್ಯಪಾಲರು ತೋರಿಸಲಿ ಎಂದು ಸಚಿವ ಕೃಷ್ಣ ಬೈರೇಗೌಡ ಸವಾಲು ಹಾಕಿದರು.

ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಹೊರಡಿಸಿದ ಪತ್ರದಲ್ಲಿ ಪ್ರಾಸಿಕ್ಯೂಷನ್ ಪದವೇ ಇಲ್ಲ!

ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡುವ ಮೊದಲು ಪ್ರಾಥಮಿಕ ತನಿಖೆ ನಡೆಯಬೇಕು. ಈ ಬಗ್ಗೆ ಭಾರತ ಸರ್ಕಾರ 2021 ರಲ್ಲಿ 17 'ಎ' ಸೆಕ್ಷನ್ ಹೇಗೆ ಪರಿಗಣಿಸಬೇಕು ಎಂದು ನಿಯಮಾವಳಿ ರೂಪಿಸಿದೆ. ತನಿಖೆಗೆ ಒಳಪಡಿಸಬೇಕು ಎಂದರೆ ಪೊಲೀಸ್ ಅಧಿಕಾರಿಯು ಈ ಸೆಕ್ಷನ್ ಅಡಿ ಅನುಮತಿ ಪಡೆಯಬೇಕು. ಆದರೆ ಇಲ್ಲಿ ಯಾವ ಪೊಲೀಸ್ ಅಧಿಕಾರಿ ಅನುಮತಿ ಕೇಳಿದ್ದರು. ಇದಕ್ಕೆ ದಾಖಲೆ ಇದೆಯೇ ಎಂದು ಪ್ರಶ್ನಿಸಿದರು.

17 'ಎ' ಸೆಕ್ಷನ್ ಇರುವುದೇ ಪೊಲೀಸ್ ಅಧಿಕಾರಿಗಳು ಅನುಮತಿ ಪಡೆಯುವ ಸಲುವಾಗಿ. ಯಾವ ಪೊಲೀಸ್ ಅಧಿಕಾರಿಯು ತನಿಖೆಗೆ ಅನುಮತಿ ನೀಡಿ ಎಂದು ನಿಮ್ಮನ್ನು ಕೇಳಿದ್ದರು ರಾಜ್ಯಪಾಲರೇ. ಕೇಳಿದ್ದರೆ ಆ ದಾಖಲೆ ಕೊಡಿ. ಪೊಲೀಸ್ಅ ಧಿಕಾರಿಗಳು ತನಿಖೆಗೆ ಅನುಮತಿ ನೀಡಿ ಎಂದು ಕೇಳಿರುವ ಎಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ್ ರೆಡ್ಡಿ ಪ್ರಕರಣಗಳಲ್ಲಿ ಏಕೆ ಇನ್ನೂ ಅನುಮತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಾಗ ಪ್ರಕರಣದಲ್ಲಿ ತಪ್ಪು ಮಾಡಿರುವವರ ವಿರುದ್ದದಾಖಲೆ ಇರಬೇಕು. ಯಾರ ಮೇಲೆ ಆರೋಪ ಬಂದಿದೆ ಅವರು ಯಾವ ತೀರ್ಮಾ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಪೊಲೀಸರು ರಾಜ್ಯಪಾಲರಿಗೆ ನೀಡಬೇಕು. ಆಗ ಮಾತ್ರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ಸಾಧ್ಯ. ಭಾರತ ಸರ್ಕಾರವು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮುಂಚೆ ಯಾವ, ಯಾವ ದಾಖಲೆಗಳನ್ನು ಒದಗಿಸಬೇಕು ಎಂಬ ಪಟ್ಟಿ ನೀಡಿದೆ. ಇದರಲ್ಲಿ ಒಂದೇ ಒಂದು ದಾಖಲೆಯನ್ನು ರಾಜ್ಯಪಾಲರು ತೋರಿಸಲಿ ಎಂದು ಆಗ್ರಹಿಸಿದರು.

Latest Videos
Follow Us:
Download App:
  • android
  • ios