Asianet Suvarna News Asianet Suvarna News

ಕನ್ನಡ ನಾಮಫಲಕ ಸುಗ್ರಿವಾಜ್ಞೆಗೆ ರಾಜ್ಯಪಾಲರು ಒಪ್ಪದ್ದಕ್ಕೆ ಕಾರಣವೇನು? ವಿಧೇಯಕ ಪಾಸ್‌ಗೆ ಮುಂದಾದ ಸರ್ಕಾರ

ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಮಣಿದು ಸಿದ್ಧಪಡಿಸಿದ್ದ ಕನ್ನಡ ನಾಮಫಲಕ ಸುಗ್ರಿವಾಜ್ಞೆಗೆ ಹಿನ್ನಡೆಯಾಗಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ನಿಯಮದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ವಾಪಸ್‌ ಕಳುಹಿಸಿದ್ದಾರೆ. ಸಿಎಂ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Governor Thaawarchand Gehlot  rejects ordinance on 60% signage in Kannada name plate gow
Author
First Published Jan 31, 2024, 12:45 PM IST

ಬೆಂಗಳೂರು (ಜ.31): ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಮಣಿದು ಸಿದ್ಧಪಡಿಸಿದ್ದ ಕನ್ನಡ ನಾಮಫಲಕ ಸುಗ್ರಿವಾಜ್ಞೆಗೆ ಹಿನ್ನಡೆಯಾಗಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ನಿಯಮದ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಾಪಸ್‌ ಕಳುಹಿಸಿದ್ದಾರೆ. ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಕಡ್ಡಾಯ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಇದಕ್ಕೆ ಒಪ್ಪಿಗೆ ಸೂಚಿಸದ ರಾಜ್ಯಪಾಲರು ಸುಗ್ರೀವಾಜ್ಞೆ ಬದಲು ವಿಧೇಯಕ ತರಲು ಸೂಚನೆ ನೀಡಿದ್ದಾರೆ.

ಈ ವಿಚಾರವಾಗಿ ಎರಡು ದಿನಗಳ ಹಿಂದೆ   ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಇದೀಗ ಸಿಎಂಗೆ ಸೂಚಿಸಿರುವ ರಾಜ್ಯಪಾಲರು ಈ ಅಧಿವೇಶನದಲ್ಲಿ ವಿಧೇಯಕ ತಂದು ಶಿಫಾರಸು ಮಾಡಲು ಸಲಹೆ ನೀಡಿದ್ದಾರೆ. ರಾಜ್ಯಪಾಲರ ಸಲಹೆಯಂತೆ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಕಡ್ಡಾಯ ಮಾಡಲು ವಿಧೇಯಕ ಪಾಸ್‌ ಮಾಡುವ ಸಲುವಾಗಿ  ಬಜೆಟ್ ಅಧಿವೇಶನದಲ್ಲಿ ನಿರ್ಧರಿಸಲು ಯೋಜನೆ ಹಾಕಿಕೊಂಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳಿಗೆ ಕನ್ನಡ ನಾಮಫಲಕ ಖಡ್ಡಾಯಕ್ಕೆ ಸೂಚನೆ

ರಾಜ್ಯಪಾಲರು ಕನ್ನಡ ನಾಮಫಲಕ ಸುಗ್ರಿವಾಜ್ಞೆ ವಾಪಸ್ ಕಳಿಸಲು ಕಾರಣವೇನು?

  • ತಾಂತ್ರಿಕ ಕಾರಣಗಳಿಂದ ಸುಗ್ರಿವಾಜ್ಞೆಗೆ ಸಹಿ ಹಾಕದೇ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. 
  • ರಾಜ್ಯ ಸರ್ಕಾರದ ಕನ್ನಡ ನಾಮಫಲಕ ವಿಚಾರವಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ನಿಯಮ 2022 ಸೆಕ್ಷನ್ ಷ,17(6)ಕ್ಕೆ  ತಿದ್ದುಪಡಿ ತಂದು ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿತ್ತು.
  • ಈ ಸುಗ್ರಿವಾಜ್ಞೆಗೆ ರಾಜ್ಯಪಾಲರ ಅಂಕಿತ ಹಾಕಲು ರಾಜ್ಯ ಸರ್ಕಾರ ಕಳುಹಿಸಿ ಕೊಟ್ಟಿತ್ತು.
  • ಆದ್ರೆ ಅಧಿವೇಶನ ಕರೆದ ಸಂದರ್ಭದಲ್ಲಿ ಸುಗ್ರಿವಾಜ್ಞೆಗೆ ಸಹಿ ಹಾಕಲು ಬರೋದಿಲ್ಲ ಎಂದು ಸಹಿ ಹಾಕದೆ ವಾಪಸ್ ಕಳುಹಿಸಿದ್ದಾರೆ. 
  • ಆದ್ರೆ ರಾಜ್ಯ ಸರ್ಕಾರದ ಸುಗ್ರಿವಾಜ್ಞೆಯನ್ನ ರಾಜ್ಯಪಾಲರ ಅಂಕಿತಕ್ಕೆ ಸಹಿ ಹಾಕಲು ಕಳುಹಿಸಿದ್ದಾಗ ಇನ್ನೂ ಅಧಿವೇಶನ ಕರೆದಿರಲಿಲ್ಲ. 
  • ಆದ್ರೆ ರಾಜ್ಯಪಾಲರು ಸುಗ್ರಿವಾಜ್ಞೆಯನ್ನ ಪರಿಶೀಲಿಸಿ ಅಂಕಿತದೊಂದಿಗೆ ಕಳುಹಿಸಿಕೊಡುವ ಸಂದರ್ಭದಲ್ಲಿ ವಿಧಾನಮಂಡಲದ ಅಧಿವೇಶನ ಕರೆದಿರುವ ಹಿನ್ನೆಲೆಯಲ್ಲಿ ಅಂಕಿತ ಹಾಕದೇ ವಾಪಸ್ ಕಳುಹಿಸಿದ್ದಾರೆ.
  • ಜನವರಿ 8 ರಂದು ಸುಗ್ರಿವಾಜ್ಞೆಗೆ ಅಂಕಿತ ಹಾಕಲು ರಾಜ್ಯ ಸರ್ಕಾರ ಕಳುಹಿಸಿ ಕೊಟ್ಟಿತ್ತು. ಆಗ ಅಧಿವೇಶನ ದಿನಾಂಕ ಇನ್ನೂ ಘೋಷಣೆ ಯಾಗಿರಲಿಲ್ಲ. ಅಧಿವೇಶನ ಕರೆದಾಗ ಸುಗ್ರಿವಾಜ್ಞೆಗೆ ಸಹಿ ಹಾಕಲು ಬರೋದಿಲ್ಲ.

ಸೂಪರ್‌ ಸ್ಟಾರ್‌ ಜತೆ ಡೇಟಿಂಗ್‌ನಲ್ಲಿದ್ದು ಬ್ರೇಕಪ್‌ ಬಳಿಕ ಅದೇ ನಟನ ಕುಟುಂಬ ವೈದ್ಯನನ್ನು ಮದುವೆಯಾದ ಸ್ಟಾರ್‌ ನಟಿ

ಕನ್ನಡ ಕಡ್ಡಾಯ ನಾಮಫಲಕ ಸುಗ್ರಿವಾಜ್ಞೆ ರಾಜ್ಯಪಾಲರು ವಾಪಸ್ ಕಳಿಸಿರೋ ವಿಚಾರವಾಗಿ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್‌
ನಾವು ಅಧಿವೇಶನ ಘೋಷಣೆ ಮಾಡೋಕೆ ಮುಂಚೆ ಸುಗ್ರಿವಾಜ್ಞೆ ಮಾಡಿದ್ವಿ. ದೇಶದ ರಕ್ಷಣೆ ವಿಚಾರ ಹೇಗೆ ಕಾಪಾಡ್ತೀವೋ. ಅದೇ ರೀತಿ ರಾಜ್ಯದ ಗೌರವದ ವಿಚಾರ ಇದು. ನಾವು ಅದಕ್ಕೆ 60% ಕನ್ನಡ ಇರಬೇಕು ಅಂತ ಮಾಡಿರುವುದು. ಯಾವುದೇ ಗೊಂದಲ ಇರಬಾರದು ಅಂತ ಸುಗ್ರಿವಾಜ್ಞೆ ಹೊರಡಿಸಿದ್ವಿ. ಅಸ್ಮಿತೆ, ಸ್ವಾಭಿಮಾನ, ಭಾಷೆ,‌ಸಂಸ್ಕೃತಿ ರಕ್ಷಣೆ ಮಾಡೋದು ನಮ್ಮ ಕರ್ತವ್ಯ. ಅದೃಷ್ಟಿಯಿಂದ ಗಲಾಟೆ, ಚಳುವಳಿ ನಡೆಯುತ್ತಿತ್ತು. ಹೀಗಾಗಿ ಕನ್ನಡ ಕಡ್ಡಾಯ ಅಂತ ಮಾಡಿದ್ವಿ. ರಾಜ್ಯಪಾಲರು ಯಾಕೆ ವಾಪಸ್ ಕಳಿಸಿದ್ರೋ ಗೊತ್ತಿಲ್ಲ. ಮಾಹಿತಿ ಪಡೆದುಕೊಳ್ತೀನಿ. ನಾವು ಅಧಿವೇಶನದಲ್ಲಿ ಪಾಸ್ ಮಾಡ್ತೀವಿ. ರಾಜ್ಯಪಾಲರು ಅಧಿವೇಶನದವರೆಗೆ ಕಾಯಬಾರದು. ಅಧಿವೇಶನದಲ್ಲಿ ನಾವು ಪಾಸ್ ಮಾಡೇ ಮಾಡ್ತೀವಿ. ಸರಕಾರದ ಪರವಾಗಿ ಅಪೀಲ್ ಮಾಡ್ತೀನಿ. ಯಾರು ಇದಕ್ಕೆ ವಿರೋಧ ಮಾಡ್ತಿಲ್ಲ. ಯಾಕೆ ರಾಜ್ಯಪಾಲರು ವಿರೋಧ ಮಾಡಿದ್ರೋ ಗೊತ್ತಿಲ್ಲ ಎಂದಿದ್ದಾರೆ.

ಕರ್ನಾಟದಲ್ಲಿ ಇದ್ದೀರಾ. ಕರ್ನಾಟಕದಲ್ಲಿ ರಾಜ್ಯಪಾಲರು ಆಗಿದ್ದೀರಾ. ಇದೊಂದು ಭಾವನಾತ್ಮಕ ವಿಚಾರ. ಸರ್ಕಾರದಲ್ಲಿ ನೀವು ತಪ್ಪು ಕಂಡು ಹಿಡಿಯಬಾರದು. ನಾಗರೀಕರು ಯಾರಾದ್ರು ವಿರೋಧ ಮಾಡಿದ್ದಾರಾ? ಯಾರಾದ್ರು ಪಕ್ಷದರು ವಿರೋಧ ಮಾಡಿದ್ದಾರಾ? ಯಾರು ವಿರೋಧ ಮಾಡೊಲ್ಲ. ಹೀಗಾಗಿ ರಾಜ್ಯಪಾಲರು ಮರು ಚಿಂತನೆ ಮಾಡಬೇಕು ಎಂದು ಡಿಕೆಶಿವಕುಮಾರ್ ಒತ್ತಾಯಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಅವರು ಕನ್ನಡ ನಾಮಪಲಕ ಸುಗ್ರಿವಾಜ್ಞೆ ಗೆ ಅಂಕಿತ ಹಾಕದೇ ರಾಜ್ಯಪಾಲರು ವಾಪಸ್ ಕಳಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ನಾಮ ಫಲಕಗಳಲ್ಲಿ 60% ಕನ್ನಡ ಕಡ್ಡಾಯ ಸುಗ್ರೀವಾಜ್ಞೆಗೆ ಸಹಿ ಹಾಕದೇ ರಾಜ್ಯಪಾಲರಿಂದ ವಾಪಸ್ ವಿಚಾರವಾಗಿ ಮಾತನಾಡಿರುವ ಶಾಸಕ ಅಶ್ವಥ್ ನಾರಾಯಣ,  ಸುಗ್ರೀವಾಜ್ಞೆಯಲ್ಲಿ ಏನಿತ್ತೋ ನಮಗೆ ಗೊತ್ತಿಲ್ಲ. ಸುಗ್ರೀವಾಜ್ಞೆ ವಾಪಸ್ ಯಾಕೆ ಕಳಿಸಿದ್ದಾರೆ ಅಂತ ಗೊತ್ತಿಲ್ಲ. ಸುಗ್ರೀವಾಜ್ಞೆ ವಾಪಸ್ ಬಗ್ಗೆ ಮಾಹಿತಿ ಪಡೆದು ಮಾತಾಡ್ತೇನೆ. ಅಧಿವೇಶನದಲ್ಲೂ ಇದರ ಬಗ್ಗೆ ಚರ್ಚೆಗೆ ಬರಲಿದೆ. ಸರ್ಕಾರ ಇದರ ಬಗ್ಗೆ ಸ್ಪಷ್ಟತೆ ಕೊಡಲಿ. ನಮಗೆ ಸರ್ಕಾರ ಅದರ ಸುಗ್ರೀವಾಜ್ಞೆ ತೋರಿಸಿಲ್ಲ ಎಂದಿದ್ದಾರೆ.
 

Follow Us:
Download App:
  • android
  • ios