ರಾಜ್ಯದ ನೂತನ ಸಚಿವರಿಗೆ ಹೊಸ ಕಾರು ಖರೀದಿಗೆ ಸರ್ಕಾರದ ತೀರ್ಮಾನಿಸಿದೆ. ಎಲ್ಲಾ 33 ಸಚಿವರಿಗೆ ಕಾರು ನೀಡಲಾಗುತ್ತಿದ್ದು, ಬರೋಬ್ಬರಿ 9 ಕೋಟಿ 90 ಲಕ್ಷ ರೂ ಬಳಕೆ ಮಾಡಲಾಗುತ್ತಿದೆ.
ಬೆಂಗಳೂರು (ಸೆ.01): ರಾಜ್ಯದ ನೂತನ ಸಚಿವರಿಗೆ ಹೊಸ ಕಾರು ಖರೀದಿಗೆ ಸರ್ಕಾರದ ತೀರ್ಮಾನಿಸಿದೆ. ಎಲ್ಲಾ 33 ಸಚಿವರಿಗೆ ಕಾರು ನೀಡಲಾಗುತ್ತಿದ್ದು, ಬರೋಬ್ಬರಿ 9 ಕೋಟಿ 90 ಲಕ್ಷ ರೂ ಬಳಕೆ ಮಾಡಲಾಗುತ್ತಿದೆ. 30 ಲಕ್ಷ ರೂ ಬೆಲೆಯ ಇನ್ನೋವಾ ಕಾರುಗಳನ್ನು ಖರೀದಿ ಮಾಡಲು ನಿರ್ಣಯಿಸಲಾಗಿದ್ದು, ಕಾರುಗಳನ್ನು ನೇರವಾಗಿ ಕಂಪನಿಯಿಂದಲೇ ಖರೀದಿ ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಇನ್ನು ನೇರ ಖರೀದಿಗೆ ಅನುಕೂಲ ಆಗುವಂತೆ 4 ಜಿ ವಿನಾಯಿತಿಯನ್ನು ಸರ್ಕಾರ ನೀಡಿದೆ.
ದೇವರ ಹೆಸರಲ್ಲಿಯೇ ಜಾತಿ ಸೃಷ್ಟಿ: ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಆದರೆ, ಆ ದೇವರ ಹೆಸರಿನಲ್ಲಿಯೇ ಜಾತಿ ಸೃಷ್ಟಿಸಿ ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ಹುಟ್ಟುಹಾಕಲಾಗಿದೆ. ಅದನ್ನು ಹೋಗಲಾಡಿಸಲು ಎಲ್ಲರೂ ಒಗ್ಗಟ್ಟಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದತ್ತಪೀಠವನ್ನ ಬೇಲಿ ರಹಿತ ಮಾಡುವುದೇ ನಮ್ಮ ಸಂಕಲ್ಪ: ಶೋಭಾ ಕರಂದ್ಲಾಜೆ
ಬುದ್ಧ, ಬಸವ, ಕನಕದಾಸರ ರೀತಿಯಲ್ಲಿಯೇ ನಾರಾಯಣ ಗುರುಗಳು ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆಯನ್ನು ತೊಡೆದು ಹಾಕುವ ಕೆಲಸ ಮಾಡಿದರು. ಬಸವಾದಿ ಶರಣರು 850 ವರ್ಷಗಳ ಹಿಂದೆಯೇ ಸಮಾಜದಲ್ಲಿ ಸುಧಾರಣೆ ತರುವ ಪ್ರಯತ್ನ ಮಾಡಿದರು. ಶೂದ್ರರನ್ನು ದೇವಸ್ಥಾನಗಳಿಗೆ ಪ್ರವೇಶಿಸಲು ವಿರೋಧ ವ್ಯಕ್ತಪಡಿಸಿದಾಗ, ನಾರಾಯಣ ಗುರುಗಳು ಶೂದ್ರರಲ್ಲಿ ಜಾಗೃತಿ ಮೂಡಿ ಪ್ರತ್ಯೇಕ ದೇವಸ್ಥಾನ ಸ್ಥಾಪಿಸಿ ಪೂಜಿಸುವಂತೆ ಮಾಡಿದರು. ಆ ಮೂಲಕ ಮೇಲ್ವರ್ಗದ ದಬ್ಬಾಳಿಕೆ ನಿವಾರಿಸುವ ಕೆಲಸ ಮಾಡಿದರು ಎಂದರು.
ದೇವರ ದೃಷ್ಟಿಯಲ್ಲಿ ಸಮಾಜದ ಪ್ರತಿಯೊಂದು ಜೀವಿಯೂ ಸಮಾನ. ಆದರೆ, ಆ ದೇವರ ಹೆಸರಿನಲ್ಲೂ ಜಾತಿ ಸೃಷ್ಟಿಸಿ ಕೆಳ ವರ್ಗದವರನ್ನು ಕೀಳಾಗಿ ಕಾಣಲಾಯಿತು. ಆ ಮನಸ್ಥಿತಿ ಈಗಲೂ ಇದ್ದು, ಧರ್ಮ, ಜಾತಿಗಳ ನಡುವೆ ಸಂಘರ್ಷ ಉಂಟು ಮಾಡಲಾಗುತ್ತಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜಾತಿ ವ್ಯವಸ್ಥೆ ನಿವಾರಣೆಯಾಗದಂತೆ ನೋಡಿಕೊಳ್ಳುತ್ತಿವೆ. ದೇವರು ಮೇಲ್ಜಾತಿಗಳಿಗಷ್ಟೇ ಸೀಮಿತವಲ್ಲ ಎಂಬುದನ್ನು ಎಲ್ಲರೂ ತಿಳಿಯಬೇಕು. ನಾರಾಯಣ ಗುರುಗಳು ಕೆಳಜಾತಿಯವರಿಗೂ ದೇವರನ್ನು ಪೂಜಿಸುವ ಹಕ್ಕು ನೀಡಲು 60ಕ್ಕೂ ಹೆಚ್ಚಿನ ದೇವಸ್ಥಾನಗಳನ್ನು ನಿರ್ಮಿಸಿದರು ಎಂದು ಹೇಳಿದರು.
ಸುಪ್ರೀಂಕೋರ್ಟ್ನಲ್ಲಿ ನಾಳೆ ಕಾವೇರಿ ನೀರು ವಿಚಾರಣೆ ಅನುಮಾನ?: ಯಾಕೆ ಗೊತ್ತಾ!
ನಾನು ಹಿಂದೆ ದೇವಸ್ಥಾನವೊಂದಕ್ಕೆ ಹೋದಾಗ ಬಟ್ಟೆಬಿಚ್ಚಿ ಬರುವಂತೆ ಅಲ್ಲಿನವರು ಹೇಳಿದರು. ಅದನ್ನು ವಿರೋಧಿಸಿದ್ದ ನಾನು ಹೊರಗಿನಿಂದಲೇ ದೇವರಿಗೆ ನಮಸ್ಕರಿಸಿ ವಾಪಾಸಾಗಿದ್ದೆ. ದೇವರ ದೃಷ್ಟಿಯಲ್ಲಿ ಈ ರೀತಿಯ ಆಚರಣೆಗಳೆಲ್ಲವೂ ಅಮಾನವೀಯ. ಎಲ್ಲರೂ ವಿಶ್ವ ಮಾನವರಾಗುವತ್ತ ಮುನ್ನಡೆಯಬೇಕು. ಆದರೆ, ಅಲ್ಪ ಮಾನವರಾಗುವತ್ತ ಗಮನಹರಿಸುತ್ತಿದ್ದಾರೆ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಭಾವನೆ ಎಲ್ಲರಲ್ಲೂ ಬರಬೇಕು ಎಂದು ಅಭಿಪ್ರಾಯಪಟ್ಟರು. ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಸಚಿವರಾದ ಶಿವರಾಜ್ ಎಸ್.ತಂಗಡಗಿ, ಮಧು ಬಂಗಾರಪ್ಪ ಶಾಸಕರಾದ ಎಚ್.ಆರ್.ಗವಿಯಪ್ಪ, ಬೇಳೂರು ಗೋಪಾಲಕೃಷ್ಣ, ಹರೀಶ್ ಕುಮಾರ್, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ. ಎಂ.ತಿಮ್ಮೇಗೌಡ ಇದ್ದರು.
