ಸುಪ್ರೀಂಕೋರ್ಟ್‌ನಲ್ಲಿ ನಾಳೆ ಕಾವೇರಿ ನೀರು ವಿಚಾರಣೆ ಅನುಮಾನ?: ಯಾಕೆ ಗೊತ್ತಾ!
ತಮಿಳುನಾಡು- ಕರ್ನಾಟಕ ಜಲ ಜಗಳ ಪ್ರಕರಣಕ್ಕೆ ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುವುದು ಅನುಮಾನವಾಗಿದ್ದು, ಅರ್ಜಿ ವಿಚಾರಣೆ ನಡೆಸುವ ನ್ಯಾ. ಬಿ.ಆರ್.ಗವಾಯಿ ಅವರು 370 ವಿಧಿ ರದ್ದು ಕುರಿತು ವಿಚಾರಣೆ ನಡೆಯುತ್ತಿರುವ ಸಂವಿಧಾನ ಪೀಠದಲ್ಲಿ ಇದ್ದಾರೆ.
ಬೆಂಗಳೂರು (ಆ.31): ತಮಿಳುನಾಡು- ಕರ್ನಾಟಕ ಜಲ ಜಗಳ ಪ್ರಕರಣಕ್ಕೆ ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುವುದು ಅನುಮಾನವಾಗಿದ್ದು, ಅರ್ಜಿ ವಿಚಾರಣೆ ನಡೆಸುವ ನ್ಯಾ. ಬಿ.ಆರ್.ಗವಾಯಿ ಅವರು 370 ವಿಧಿ ರದ್ದು ಕುರಿತು ವಿಚಾರಣೆ ನಡೆಯುತ್ತಿರುವ ಸಂವಿಧಾನ ಪೀಠದಲ್ಲಿ ಇದ್ದಾರೆ. ನಾಳೆ ಕೂಡ 370 ವಿಧಿ ರದ್ದು ಕುರಿತು ವಿಚಾರಣೆ ಮುಂದುವರೆಯುವ ಹಿನ್ನಲೆಯಲ್ಲಿ ಬಹುತೇಕ ತಮಿಳುನಾಡು, ಕರ್ನಾಟಕ ಅರ್ಜಿಗಳು ವಿಚಾರಣೆಗೆ ಬರುವುದು ಅನುಮಾನವಾಗಿದೆ
ಕರ್ನಾಟಕ ನಡೆಗೆ ಫುಲ್ ಮಾಕ್ಸ್: ಜಲ ಜಗಳ ವಿಚಾರದಲ್ಲಿ ಕರ್ನಾಟಕ ರಾಜ್ಯ ಚಾಚು ತಪ್ಪದೇ ಪ್ರಾಧಿಕಾರದ ಆದೇಶ ಪಾಲಿಸಿದೆ. ಹೀಗಂಥ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ವರದಿಯಲ್ಲಿ CWMA ಹೇಳಿದೆ. ಕರ್ನಾಟಕ ಸರ್ಕಾರವು ಆಗಸ್ಟ್ 11 ರಂದು ಜಲ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಂಗೀಕರಿಸಿದ್ದ ಆದೇಶವನ್ನು ಸಂಪೂರ್ಣವಾಗಿ ಜಾರಿಗೊಳಿಸಿದೆ. ಆಗಸ್ಟ್ 28 ರಂದು ನಡೆದ ನಿರ್ವಹಣಾ ಆಯೋಗದ ತುರ್ತು ಸಭೆಯಲ್ಲಿ ಆಗಸ್ಟ್ 29 ರಿಂದ ಸೆಪ್ಟೆಂಬರ್ 12 ರ ಅವಧಿಗೆ 15 ದಿನಗಳ ಕಾಲ 5,000 ಕ್ಯೂಸೆಕ್ಸ್ ಬಿಡುವಂತೆ ಕೂಡ CWMAಆದೇಶಿಸಿದೆ.
ಸದ್ಬಳಕೆ ಮಾಡದ ತಮಿಳುನಾಡು: ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ 2023-24 ರ ಸಾಲಿನ ಮಳೆ ವರ್ಷದಲ್ಲಿ ಸಮರ್ಪಕ ನೀರಿತ್ತು. ಈ ನೀರನ್ನು ಮಳೆಕೊರತೆ ಸಮಯದಲ್ಲಿ ತಮಿಳುನಾಡು ಸಮರ್ಪಕವಾಗಿ ಬಳಕೆ ಮಾಡಿಲ್ಲ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
CWMA ವಿರುದ್ದವೂ ತಮಿಳುನಾಡು ಆಕ್ಷೇಪ: CWMA ವರದಿಗೆ ಆಕ್ಷೇಪಿಸಿ ತಮಿಳುನಾಡಿನಿಂದ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ಗೆ ಹೆಚ್ಚುವರಿ ಆಕ್ಷೇಪಣೆ ಸಲ್ಲಿಕೆ ಮಾಡಿದ ತಮಿಳುನಾಡು, ಮಳೆ ಕೊರತೆ ವರ್ಷಗಳಲ್ಲಿ ಪಾಲಿಸಬೇಕಾದ ವೈಜ್ಞಾನಿಕ ವಿಧಾನವನ್ನು Cwma ಸಿದ್ದಪಡಿಸಿಲ್ಲ. ವೈಜ್ಞಾನಿಕ ವಿಧಾನದ ಸೂತ್ರವನ್ನು ಸಿದ್ದಪಡಿಸಲು ಸುಪ್ರೀಂ ಕೋರ್ಟ್ cwmaಗೆ ಸೂಚಿಸಬೇಕು. ಮಳೆ ಕೊರತೆ ವರ್ಷ ಎಂದು ತೀರ್ಮಾನಿಸಿ ತಮಿಳುನಾಡಿನ ಪಾಲು ಹಂಚಿಕೆ ಮಾಡುವಾಗ ಪಾರದದರ್ಶಕತೆ, ನ್ಯಾಯಯುತವಾಗಿ ಮಾಡುವಂತೆ cwmaಗೆ ನಿರ್ದೇಶನ ನೀಡಬೇಕು. 10 ದಿನಕ್ಕೊಮ್ಮೆ ನೀರು ಹಂಚಿಕೆ ಕುರಿತು ಸೂಕ್ತ ನಿರ್ದೇಶನ ನೀಡುತ್ತಿರಬೇಕು. ನಮ್ಮ ಉಳಿಕೆಯ ಪಾಲು 8.98 ಟಿಎಂಸಿ ನೀರು ಬಿಡುವಂತೆ ಆದೇಶಿಸಬೇಕು.
Chikkamagaluru: ಬೆಟ್ಟಗೆರೆ ಹೈಸ್ಕೂಲ್‌ನಲ್ಲಿ ಹೈಡ್ರಾಮಾ: ಮುಖ್ಯ ಶಿಕ್ಷಕಿ ಮೇಲೆ ಬಂದ ಗ್ರಾಮ ದೇವತೆ ದೇವರು?
ಸುಪ್ರೀಂ ನಲ್ಲಿ ಸಮರ್ಪಕ ವಾದ: ಶುಕ್ರವಾರ ಜಲ ಜಗಳ ಅರ್ಜಿ ಸುಪ್ರೀಂ ನಲ್ಲಿ ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ ದೆಹಲಿಯಲ್ಲೇ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಬಿಡುಬಿಟ್ಟಿದ್ದು, ಇದೇ ಹಿನ್ನೆಲೆಯಲ್ಲಿ ಜಲತಜ್ಞರು, ಎಂಜಿನಿಯರ್ ಗಳು, ಸುಪ್ರೀಂಕೋಟ್೯ ಕಾನೂನು ತಜ್ಞರ ಜೊತೆ ಸಭೆ ನಡೆಸಿದ್ದಾರೆ. ಕಾವೇರಿ ನೀರು ವಿಚಾರದಲ್ಲಿ ಸುಪ್ರೀಂ ಕೋರ್ಟ್ ಗೆ ನೀರಿನ ಲಭ್ಯತೆ ಕುರಿತು ಮನವರಿಕೆ ಮಾಡಿಕೊಡಲು ಪೂರ್ಣ ಸಿದ್ದತೆಯನ್ನು ಕಾನೂನು ತಂಡ ನಡೆಸಿದೆ.