ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ 9 ಜನರು ಪೈಪೋಟಿ ನಡೆಸಿದ್ದರು. ಗೋನಾಲದ ಗಡೇ ದುರ್ಗಮ್ಮ ದೇವಿ ಭವಿಷ್ಯದಂತೆ ಡಿ.ಕೆ.ಶಿವಕುಮಾರ್‌ ಶೀಘ್ರ ಮುಖ್ಯಮಂತ್ರಿ ಆಗಲಿದ್ದಾರೆ. 

ಯಾದಗಿರಿ (ಮೇ 18): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕನಸು ಈಡೇರಿಸ್ತಿದಾಳ ಯಾದಗಿರಿಯ ದೇವತೆ..! ಡಿಕೆಶಿ ರಾಜ್ಯದ ಮುಖ್ಯಮಂತ್ರಿ ಆಗೋದು ಗ್ಯಾರಂಟಿ..! ಈ ಬಾರಿ ತಪ್ಪಿದ್ರೂ ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಗೋನಾಲದ ಗಡೇ ದುರ್ಗಾದೇವಿ ಹೇಳಿದ ಭವಿಷ್ಯವನ್ನು ಅರ್ಚಕ ಮಹಾದೇವಪ್ಪ ಪೂಜಾರಿ ನುಡಿದಿದ್ದಾರೆ. 

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಯಾದಗಿರಿ ಜಿಲ್ಲೆಯ ವಡಿಗೇರಾ ತಾಲೂಕಿನ ಗೋನಾಲದ ಗಡೇ ದುರ್ಗಾದೇವಿಯ ಭಕ್ತರಾಗಿದ್ದಾರೆ. ಈ ಮೊದಲು ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗೋದಕ್ಕೂ ತಾಯಿಯ ಪ್ರೇರಣೆ ಸಿಕ್ಕಿತ್ತು. ಈ ವರ್ಷ ಕಾಂಗ್ರೆಸ್‌ ರಾಜ್ಯದಲ್ಲಿ ಬಹುಮತವನ್ನು ಗಳಿಸಿದಾಗ ಒಟ್ಟು 9 ಜನರು ಮುಖ್ಯಮಂತ್ರಿ ಆಗುವ ಪೈಪೋಟಿಯಲ್ಲಿದ್ದರು. ಆದರೆ, ಮುಖ್ಯಮಂತ್ರಿ ಸ್ಥಾನ ನೀಡೋದಕ್ಕೆ ತಾಯಿಯಿಂದ ಇಬ್ಬರಿಗೆ ಪ್ರೇರಣೆ ಆಗಿತ್ತು. ಅದರಂತೆ ಮೊದಲ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಎರಡನೇ ಅವಧಿಗೆ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಮಹಾದೇವಪ್ಪ ಪೂಜಾರಿ ಹೇಳಿದ್ದಾರೆ.

ಸರ್ಕಾರ ರಚನೆಗೆ ಸಿದ್ದರಾಮಯ್ಯಗೆ ಗ್ರೀನ್‌ ಸಿಗ್ನಲ್‌ ನೀಡಿದ ರಾಜ್ಯಪಾಲರು: ನಾಳಿದ್ದು ಪ್ರಮಾಣವಚನ

ಸಿಎಂ ಆಯ್ಕೆ ಕಗ್ಗಂಟಿನಲ್ಲಿ ಅರ್ಚಕರೊಂದಿಗೆ ಡಿಕೆಶಿ ಸಂಪರ್ಕ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಯ್ಕೆಯ ಕಗ್ಗಂಟಿನ ನಡುವೆಯೂ ಮಹಾದೇವಪ್ಪ ಪೂಜಾರಿಗೆ ಜೊತೆ ಡಿಕೆಶಿ ಸಂಪರ್ಕದಲ್ಲಿದ್ದರಂತೆ. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರರು ಪೂಜಾರಿ ಮಹದೇವಪ್ಪ ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದುಕೊಂಡು, ತಾಯಿಯ ಆಜ್ಞೆ ಏನಿದೆ ಅನ್ನೋದನ್ನ ತಿಳಿದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ, ಕಾಂಗ್ರೆಸ್‌ನಲ್ಲೂ ಸಮ್ಮಿಶ್ರ ಸರ್ಕಾರ ಆಗುತ್ತೆ ಎಂದು ಅವರಿಗೆ ಮಾಹಿತಿಯನ್ನು ನೀಡಿದ್ದರಂತೆ ಮಹಾದೇವಪ್ಪ ಪೂಜಾರಿ. ಆದರ, ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದು, ಎರಡನೇ ಅವಧಿಗೆ ಸಿಎಂ ಸ್ಥಾನ ಪಡೆದುಕೊಳ್ಳುವಂತೆ ಡಿಕೆಶಿವಕುಮಾರ್ಗೆ ತಾಯಿ ಆಶೀರ್ವಾದ ಮಾಡಿದ್ದಾಳೆ ಎಂದು ಪೂಜಾರಿ ಮಹದೇವಪ್ಪ ಹೇಳಿದ್ದಾರೆ.

ಸರ್ಕಾರ ರಚನೆಗೆ ರಾಜ್ಯಪಾಲರಿಂದ ಅಸ್ತು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್‌ನ ಮುಖಂಡ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಬಹುಮತಗಳಿಸಿ ನಂತರ ರಾಜ್ಯಪಾಲ ಥಾವರ ಚಂದ್‌ ಗೆಹ್ಲೋಟ್‌ ಅವರಿಗೆ ಸರ್ಕಾರ ರಚನೆ ಮಾಡುವುದಾಗಿ ಅನುಮತಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಹಕ್ಕುಮಂಡಿಸುವಂತೆ ರಾಜ್ಯಪಾಲರು ಕೂಡ ಹಸಿರು ನಿಶಾನೆ ತೋರಿಸಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ. ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಶನಿವಾರ (ಮೇ 20ರಂದು) ಮಧ್ಯಾಹ್ನ 12.30ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸುವಂತೆಯೂ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷ ನಾಯಕನಾಗಿ ಸಿದ್ದರಾಮಯ್ಯ ಆಯ್ಕೆ: 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಬಾಕಿ

ರಾಜ್ಯಪಾಲರಿಗೆ ಜನ್ಮದಿನದ ಶುಭಾಶಯ: ಬೆಂಗಳೂರಿನ ಕಾಂಗ್ರೆಸ್‌ ಭವನದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಎಲ್ಲ ಶಾಸಕರ ಅನುಮೋದನೆಯೊಂದಿಗೆ ಬಹುಮತವನ್ನು ಗಳಿಸಿದ ನಂತರ, ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್‌ ಅವರೊಂದಿಗೆ ರಾಜ್ಯಪಾಲ ಥಾವರ ಚಂದ್‌ ಗೆಹ್ಲೋಟ್‌ (Thavar chandra gahlot) ಕಚೇರಿಗೆ ತೆರಳಿ ಸರ್ಕಾರ ರಚನೆ ಮಾಡುವುಕ್ಕೆ ಅನುಮತಿಯನ್ನು ಕೇಳಿದರು. ಇಂದು ರಾಜ್ಯಪಾಲರ ಜನ್ಮದಿನವಾದ್ದರಿಂದ ಕಾಂಗ್ರೆಸ್‌ ನಾಯಕರು ರಾಜ್ಯಪಾಲರಿಗೆ ಜನ್ಮದಿನದ ಶುಭಾಶಯವನ್ನು ಕೂಡ ತಿಳಿಸಿದರು.