ಅಯೋಧ್ಯೆಗೆ ಪ್ರತಿದಿನ 35 ರೈಲುಗಳ ಓಡಾಟ. ಜ.25ರಿಂದ 60 ದಿನಗಳ ಕಾಲ ಮಹಾ ಸಂಪರ್ಕ ಅಭಿಯಾನ. ಪ್ರತಿದಿನ 50 ಸಾವಿರ ಜನರಿಗೆ ದರ್ಶನ ಮಾಡಿಸಲು ಪಣ. ಪ್ರಯಾಣ ವೆಚ್ಚ ಭಕ್ತರದ್ದು, ಅನುಕೂಲ ಕಲ್ಪಿಸುವ ಹೊಣೆ ಬಿಜೆಪಿಗರದ್ದು.

ನವದೆಹಲಿ (ಜ.3): ಅಯೋಧ್ಯೆಗೆ ಭೇಟಿ ನೀಡಲು ಇಚ್ಛಿಸುವ ರಾಮಭಕ್ತರಿಗೆ ಜ.25ರಿಂದ 2 ತಿಂಗಳವರೆಗೆ ರೈಲು ಪ್ರಯಾಣದ ಅನುಕೂಲ ಕಲ್ಪಿಸಲು ಬಿಜೆಪಿ ನಿರ್ಧರಿಸಿದೆ. ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ಮಂಗಳವಾರ ದಿಲ್ಲಿಯಲ್ಲಿ ಬಿಜೆಪಿ ಸಭೆಯಲ್ಲಿ ಮಾತನಾಡಿದ ಅವರು, ‘ಜ.25ರಿಂದ ಅಯೋಧ್ಯೆಗೆ ಮಹಾ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿದಿನ 50 ಸಾವಿರ ಮಂದಿಯಂತೆ 60 ದಿನಗಳ ಕಾಲ ರಾಷ್ಟ್ರಾದ್ಯಂತ ಜನರನ್ನು ಅಯೋಧ್ಯೆಗೆ ಕರೆತರಲು ನಾವೆಲ್ಲ ಪಣ ತೊಡಬೇಕಿದೆ. ಅದಕ್ಕಾಗಿ ಅಯೋಧ್ಯೆಯಿಂದ ದೇಶದೆಲ್ಲೆಡೆಗೆ ದಿನಕ್ಕೆ ಕನಿಷ್ಠ 35 ರೈಲುಗಳು ಸಂಚರಿಸುವಂತೆ ರೈಲ್ವೆ ಸಚಿವರಲ್ಲಿ ಮನವಿ ಮಾಡಲಾಗುವುದು’ ಎಂದರು.

ರಾಮಲಲ್ಲಾ ವಿಗ್ರಹ ಆಯ್ಕೆ ಘೋಷಣೆ ಜ.17ಕ್ಕೆ, 11 ಟ್ರಸ್ಟಿಗಳಿಂದ ಮತದಾನ ಮೂಲಕ ವಿಗ್ರಹ ಆಯ್ಕೆ

ಆದರೆ ಅಯೋಧ್ಯೆಗೆ ಪ್ರಯಾಣ ವೆಚ್ಚವನ್ನು ಭಕ್ತಾದಿಗಳೇ ಭರಿಸಬೇಕು. ಭಕ್ತರಿರುಗೆ ಪ್ರಯಾಣಕ್ಕೆ ಬೇಕಾದ ಅಗತ್ಯ ಸಹಾಯವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕು. ಈ ಮೂಲಕ ಹೆಚ್ಚಿನ ಜನರಿಗೆ ರಾಮನ ದರ್ಶನ ಮಾಡಿಸಲು ಪಣ ತೊಡಬೇಕು ಎಂದು ಪಕ್ಷದಿಂದ ಸೂಚಿಸಲಾಗಿದೆ ಎಂದು ಮೂಳಗಳು ಹೇಳಿವೆ.

ಶ್ರೀರಾಮ ಮಂದಿರದ ಎಲೆಕ್ಟ್ರಿಕಲ್ ಕಾರ್ಯದಲ್ಲಿ ಕನ್ನಡಿಗ
ಅಯೋಧ್ಯೆ ರಾಮಮಂದಿರಕ್ಕೆ ಎಲೆಕ್ಟ್ರಿಕಲ್ ಕಾರ್ಯನಿರ್ವಹಿಸಲು ಕೋಲಾರ ಜಿಲ್ಲೆ ಟೇಕಲ್‌ನ ಬನಹಳ್ಳಿ ಗ್ರಾಮದ ಪ್ರವೀಣ್‌ಕುಮಾರ್.ಬಿ.ಕೆ ಎರಡು ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವುದು ಇಲ್ಲಿನ ಬನಹಳ್ಳಿ ಗ್ರಾಮದ ಜನತೆಯ ಹೆಮ್ಮೆಯ ಸಂಗತಿಯಾಗಿದೆ.

ರಾಮಮಂದಿರದಲ್ಲಿ ಹಲವಾರು ಶಿಲ್ಪಿಗಳು ವಿವಿಧ ಕಾರ್ಯಗಳಲ್ಲಿ ಅತಿ ಹೆಚ್ಚು ಕನ್ನಡಿಗರೇ ಕೆಲಸ ಮಾಡುತ್ತಿದ್ದು ಪ್ರವೀಣ್‌ಕುಮಾರ್ ಕೂಡ ಎಲೆಕ್ಟ್ರಿಕಲ್ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಿಜೆಪಿ ರಾಮ ಎನ್ನೋರಿಗೆ ಕೇಂದ್ರ ನಾಯಕರು ಆಹ್ವಾನ ಕೊಟ್ಟಿಲ್ಲ: ಕೆ.ಎಸ್‌.ಈಶ್ವರಪ್ಪ

ಎಲೆಕ್ಟ್ರಿಕಲ್ ಸೂಪರ್‌ವೈಸರ್
ಬೆಂಗಳೂರಿನಲ್ಲಿ ವಿವಿಧ ಕಟ್ಟಡಗಳಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ಪ್ರವೀಣ್‌ಕುಮಾರ್‌, ಬಳಿಕ ಮಧ್ಯೆ ಭಾರತದ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಎಲೆಕ್ಟ್ರಿಕಲ್ ಸೂಪರ್‌ವೈಸರ್ ಆಗಿ ಸೇರ್ಪಡೆಯಾಗಿದ್ದಾರೆ. ಕಳೆದ ನವೆಂಬರ್‌ನಲ್ಲಿ ಈ ಕಂಪನಿ ರಾಮಮಂದಿರದ ಎಲೆಕ್ಟ್ರಿಕಲ್ ಕಾರ್ಯನಿರ್ವಹಿಸಲು ಆಯ್ಕೆಯಾಗಿದ್ದು, ಇಲ್ಲಿಯ ಕೆಲಸಗಾರರಲ್ಲಿ ಪ್ರವೀಣ್‌ಕುಮಾರ್ ಸಹ ಒಬ್ಬರಾಗಿದ್ದಾರೆ.

ಪ್ರವೀಣ್‌ಕುಮಾರ್ ಹೇಳುವಂತೆ, ನಾನು ಕಾರ್ಯಕ್ಕೆ ಆಯ್ಕೆಯಾಗಿರುವುದು ನನ್ನ ಸೌಭಾಗ್ಯ. ಕಳೆದ ಎರಡು ತಿಂಗಳನಿಂದ ನಾವು ಮಂದಿರದ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದೇವೆ. ನನ್ನ ಕೈಲಾದ ಮಟ್ಟಿಗೆ ಶ್ರೀರಾಮನ ಸೇವೆ ಮಾಡುತ್ತಿರುವುದಾಗಿ ನಮ್ಮ ತಂದೆ ತಾಯಿ ಆಶೀರ್ವಾದ ನನ್ನ ಬನಹಳ್ಳಿ ಗ್ರಾಮದ ತಾಯಿ ಚಾಮುಂಡೇಶ್ವರಿ, ಮುನೇಶ್ವರಸ್ವಾಮಿರವರ ಕೃಪೆ ನನ್ನ ಮೇಲಿದೆ ಎನ್ನುತ್ತಾರೆ.