Asianet Suvarna News Asianet Suvarna News

ರಾಜ್ಯದಲ್ಲಿ ಎಟಿಎಂ ಸರ್ಕಾರವಿದ್ದು, ಡಿಕೆಶಿ ಡಮ್ಮಿ ಡಿಸಿಎಂ: ಗೋವಾ ಸಿಎಂ ಪ್ರಮೋದ್ ಸಾವಂತ್ ವ್ಯಂಗ್ಯ

ಜಿಲ್ಲೆಯ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ನಡೆದ ಲೋಕಸಭಾ ಕ್ಷೇತ್ರದ ಬಿಜೆಪಿ ಭೂತ್ ಪ್ರಮುಖರ ಸಭೆಯಲ್ಲಿ ಗೋವಾ ಸಿಎಂ ಡಾ. ಪ್ರಮೋದ್ ಸಾವಂತ್ ರಾಜ್ಯ ಸರ್ಕಾರದ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. 

Goa CM Pramod Sawant Slams On Karnataka Congress Govt At Chitradurga gvd
Author
First Published Mar 7, 2024, 4:47 PM IST

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಮಾ.07): ಜಿಲ್ಲೆಯ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ನಡೆದ ಲೋಕಸಭಾ ಕ್ಷೇತ್ರದ ಬಿಜೆಪಿ ಭೂತ್ ಪ್ರಮುಖರ ಸಭೆಯಲ್ಲಿ ಗೋವಾ ಸಿಎಂ ಡಾ. ಪ್ರಮೋದ್ ಸಾವಂತ್ ರಾಜ್ಯ ಸರ್ಕಾರದ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಳೆದ 10ತಿಂಗಳಲ್ಲಿ 500ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯ ಸಂಗತಿ. ರೈತರಿಗೆ ನೀಡುವ ಸಬ್ಸಿಡಿ ಮತ್ತಿತರೆ ಯೋಜನೆಗಳು ನೀಡಿಲ್ಲ. ಸಿಎಂ ಸಿದ್ಧರಾಮಯ್ಯ ಘೋಷಿಸಿದ ಗ್ಯಾರಂಟಿ ಪೂರ್ಣಗೊಳಿಸಿಲ್ಲ. ಪ್ರಧಾನಿ ಮೋದಿ ನೀಡಿದ ಗ್ಯಾರಂಟಿ ಪೂರ್ಣಗೊಳಿಸಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ಪ್ರತಿ ಮನೆಗೆ ನೀರು, ವಿದ್ಯುತ್, ಶೌಚಾಲಯ ಮೋದಿ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ. ಮುದ್ರಾ ಯೋಜನೆಯಂಥ ಗ್ಯಾರಂಟಿ ಯೋಜನೆ ಮೋದಿ ನೀಡಿದ್ದಾರೆ. ಪಿಎಂ ವಿಶ್ವಕರ್ಮ ಯೋಜನೆ ಮೋದಿ ಯೋಜನೆ, ಸಾಮಾಜಿಕ ನ್ಯಾಯ ನೀಡುವ ಕೆಲಸ ಮೋದಿ ಸರ್ಕಾರ ಮಾಡಿದೆ. ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಕಾರ್ಯವಾಗಿದೆ. ತ್ರಿಬಲ್ ತಲಾಕ್ ರದ್ದುಗೊಳಿಸಿ ಮಹಿಳಾ ನ್ಯಾಯ ನೀಡಿದ್ದು ಮೋದಿ ಸರ್ಕಾರದ ಸಾಧನೆಯಾಗಿದೆ. ಮಹಿಳೆಯರಿಗೆ ಮೀಸಲಾತಿ ನೀಡುವ ಯೋಜನೆ ಮೋದಿ ಸರ್ಕಾರ ತಂದಿದೆ. 

ಪ್ರಧಾನಿ ಮೋದಿಯಿಂದ ದೇಶಕ್ಕೆ ಗಂಡಾಂತರ: ಎಸ್.ಆರ್.ಹಿರೇಮಠ

ಯುವ ಸಮೂಹಕ್ಕೆ ಸ್ಕಿಲ್ ಇಂಡಿಯಾ ಯೋಜನೆ ತಂದಿದ್ದ ಮೋದಿಯವರು,ಕಿಸಾನ್ ಫಸಲ್‌ ವಿಮಾ, ಬ್ಯಾಂಕ್ ಸಾಲ ಸೇರಿ ಅನೇಕ ಮೋದಿ ಗ್ಯಾರಂಟಿ ಯೋಜನೆ, ದೇಶಾದ್ಯಂತ ಗರೀಬ್ ಕಲ್ಯಾಣಕ್ಕಾಗಿ 5ಕೆಜಿ ಅಕ್ಕಿ ಉಚಿತ ಪಡಿತರ ಯೋಜನೆ ತಂದಿದ್ದಾರೆ. ಅಂತ್ಯೋದಯ, ಗ್ರಾಮೋದಯ, ಸರ್ವೋದಯ ಬಿಜೆಪಿ,‌ ಮೋದಿ ತತ್ವವಾಗಿದೆ. ಆದ್ರೆ ಸಿಎಂ ಸಿದ್ಧರಾಮಯ್ಯ ಅವರಿಗೆ ನಾನು ಸವಾಲು ಹಾಕುತ್ತೇನೆ ಎಂದ ಸಿಎಂ ಸಾವಂತ್,  ಯುಪಿಎ ಅವಧಿಯಲ್ಲಾದ ಒಂದೇ ಒಂದು ಅಭಿವೃದ್ಧಿ ತೋರಿಸಲಿ. ಮೋದಿ ಸರ್ಕಾರದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ತೋರಿಸುತ್ತೇನೆ ಎಂದು ಸವಾಲು ಹಾಕಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರವಾಗಿದೆ. ಕರ್ನಾಟಕದ ಲೂಟಿ ಸರ್ಕಾರ ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್, ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿಗಾಗಿ ಸರ್ಕಾರ ಜನರಿಗಾಗಿ ಯಾವುದೇ ಯೋಜನೆ ತಲುಪಿಸಲು ಆಗುತ್ತಿಲ್ಲ. ಸಿಎಂ ಸಿದ್ಧರಾಮಯ್ಯ, ಡಿಕೆಶಿ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಡಿಸಿಎಂ ಡಿಕೆಶಿಗೆ ಡಮ್ಮಿ‌ ಚೀಫ್ ಮಿನಿಸ್ಟರ್ ಎಂದು ಗೋವಾ ಸಿಎಂ ಸಾವಂತ್ ಲೇವಡಿ ಮಾಡಿದರು. ಇನ್ನೂ ಐವರು ಸಿಎಂ ಆಗಲು ಸರದಿಯಲ್ಲಿ ನಿಂತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಾರಕಿಹೊಳಿಗೆ ಸಿಎಂ ಬಯಕೆಯಿದೆ. ತಾನು ಸೂಪರ್ ಸಿಎಂ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. ಪ್ರಿಯಾಂಕ್ ಅವರ ಅಪ್ಪ ‌ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅದ್ಯಕ್ಷರಿದ್ದಾರೆ ಎಂದರು. 

ಮುಂದಿನ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ: ಆರಗ ಜ್ಞಾನೇಂದ್ರ

ಇನ್ನೂ ಶಾಡೋ ಸಿಎಂ ಯತೀಂದ್ರ ಸಿದ್ಧರಾಮಯ್ಯ ಎಂದು ವಾಗ್ದಾಳಿ ಮಾಡಿದರು. ಬಿಜೆಪಿಯಲ್ಲಿ ಒಬ್ಬರೇ ದೇಶದ ಪ್ರಧಾನಿ ನರೇಂದ್ರ ಮೋದಿ‌ ಎಂದರು. ಯುಪಿಎ ಆಡಳಿತದ ಹತ್ತು ವರ್ಷದಲ್ಲಿ ಹಗರಣಗಳ ಸರಣಿ ನಡೆದಿತ್ತು. ಮೋದಿ ಆಡಳಿತದಲ್ಲಿ ಯಾವುದೇ ಹಗರಣಗಳು ಇಲ್ಲ ಯುಪಿಎ ಅವಧಿಯಲ್ಲಿ ಅನೇಕರು ಒಳಗೆ ಹೋಗಿದ್ದರು, ಕೆಲವರು ಹೊರಗೆ ಬಂದಿದ್ದಾರೆ. ಈಗ ಹೊರಗೆ ಇರುವವರೂ ಸಹ ಒಳಗೆ ಹೋಗುವವರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ ರಾಹುಲ್ ಗಾಂಧಿ ನಾಯಿಯನ್ನು ಜತೆಗೆ ಕರೆದೊಯ್ಯುತ್ತಾರೆ. ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತರಿಗೆ‌ ನೀಡುತ್ತಾರೆ ಎಂದು ವ್ಯಂಗ್ಯ ಮಾಡಿದರು.

Follow Us:
Download App:
  • android
  • ios