ಶಾಸಕ ಶಾಮನೂರು ಶಿವಶಂಕರಪ್ಪಗೆ 1 ವರ್ಷವಾದರೂ ಸಿಎಂ ಸ್ಥಾನ ನೀಡಿ: ಕಾಂಗ್ರೆಸ್ ಮುಖಂಡ ಒತ್ತಾಯ

ಹಿರಿಯ ಶಾಸಕ, ಕೆಪಿಸಿಸಿ ಕಾಯಂ ಖಜಾಂಚಿಯಾದ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪಗೆ ಒಂದು ವರ್ಷದ ಅವಧಿಗಾದರೂ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್‌ ಮುಖಂಡ ಎಸ್‌.ಎಲ್‌.ಆನಂದಪ್ಪ ಪಕ್ಷದ ಹೈಕಮಾಂಡ್‌ಗೆ ಒತ್ತಾಯಿಸಿದರು.

Give the post of CM to Shamanur Shivshankarappa for at least one year congress leader demand at davanagere rav

ದಾವಣಗೆರೆ (ಜೂ.29) : ಹಿರಿಯ ಶಾಸಕ, ಕೆಪಿಸಿಸಿ ಕಾಯಂ ಖಜಾಂಚಿಯಾದ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪಗೆ ಒಂದು ವರ್ಷದ ಅವಧಿಗಾದರೂ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್‌ ಮುಖಂಡ ಎಸ್‌.ಎಲ್‌.ಆನಂದಪ್ಪ ಪಕ್ಷದ ಹೈಕಮಾಂಡ್‌ಗೆ ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ 93 ವರ್ಷ ವಯಸ್ಸಾಗಿದ್ದರೂ ಈಗಲೂ ಉತ್ಸಾಹ ಮಾತ್ರ ಕುಂದಿಲ್ಲ. ಆಡಳಿತದಲ್ಲಿ ಸೂಕ್ಷ್ಮತೆ ಮತ್ತು ಕಠಿಣತೆ ಹೊಂದಿರುವ ಶಾಮನೂರು 6 ಬಾರಿ ಸತತ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಂದು ಬಾರಿ ಸಂಸದರೂ ಆಗಿದ್ದಾರೆ. ಸುಮಾರು 4 ದಶಕಕ್ಕಿಂತ ಅಧಿಕ ಪಕ್ಷಕ್ಕೆ ಸೇವೆ ಸಲ್ಲಿಸಿರುವ ಅಜಾತಶತ್ರುವಾದ ಅವರ ಒಂದು ಬಾರಿಯಾದರೂ ಮುಖ್ಯಮಂತ್ರಿ ಸ್ಥಾನ ನೀಡಲು ಮನವಿ ಮಾಡಿದರು.

ಶಾಮನೂರು ಶಿವಶಂಕರಪ್ಪ ಏನು ಹೇಳಿದರು ನನಗೆ ಆಶೀರ್ವಾದವೇ - ಸಂಸದ ಜಿ ಎ‌ಂ ಸಿದ್ದೇಶ್ವರ್ 

ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪಗೆ ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಅವರಿಗೆ ಸಿಎಂ ಹುದ್ದೆ ನೀಡಿದಲ್ಲಿ ಲಿಂಗಾಯತರ ಮತಗಳ ಕಾಂಗ್ರೆಸ್‌ ಪಡೆಯಬಹುದು. ಆದ್ದರಿಂದ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಪಕ್ಷದ ವರಿಷ್ಠರಿಗೆ ಒತ್ತಾಯಿಸಿ ಶಾಮನೂರುಗೆ ಮುಖ್ಯಮಂತ್ರಿ ಗಾದಿ ಕೊಡಿಸಲು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಕರೂರು ಗಣೇಶ, ಸಿದ್ದಪ್ಪ, ಅಕ್ಕಿ ರಾಮಚಂದ್ರ, ಎಂ.ಮನು, ಸುರೇಶ ಕೋಗುಂಡೆ ಇತರರಿದ್ದರು.

 

ಸಿದ್ದೇಶ್ವರ್‌ಗೆ ಟಿಕೆಟ್ ಸಿಕ್ಕರೆ ತಂದು ಎಂಪಿ ಚುನಾವಣೆಗೆ ನಿಲ್ಲಲಿ, ನಾನೇ ಫಂಡ್ ಮಾಡುತ್ತೇನೆ: ಶಾಮನೂರು ಶಿವಶಂಕರಪ್ಪ

Latest Videos
Follow Us:
Download App:
  • android
  • ios