Asianet Suvarna News Asianet Suvarna News

ಬಳ್ಳಾರಿ ಲೋಕಸಭೆ ಚುನಾವಣೆ: ರಾಜಕೀಯ ಪುನರ್ಜನ್ಮ ನೀಡಿ, ಶ್ರೀರಾಮುಲು

ಇಡೀ ವಿಶ್ವದಲ್ಲಿ ದೇಶವನ್ನು ಬಲಿಷ್ಠ ರಾಷ್ಟ್ರ ಮಾಡಿರುವ ಪ್ರಧಾನಿ ಮೋದಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಲು ಬಳ್ಳಾರಿ ಲೋಕಸಭೆಯಿಂದ ಬಿಜೆಪಿ ಗೆಲ್ಲಿಸಬೇಕು ಎಂದ ಬಿ. ಶ್ರೀರಾಮುಲು 
 

Give political rebirth in Lok Sabha Elections 2024 Says Ballari BJP Candidate B Sriramulu grg
Author
First Published May 5, 2024, 3:08 PM IST

ಹೊಸಪೇಟೆ(ಮೇ.05): ವಿಧಾನಸಭೆ ಚುನಾವಣೆಯಲ್ಲಿ ನನಗೆ ಹಿನ್ನಡೆಯಾಗಿದೆ. ಆದರೆ, ಪ್ರಧಾನಿ ಮೋದಿ ಈ ಬಾರಿ ಬಳ್ಳಾರಿ ಲೋಕಸಭೆ ಟಿಕೆಟ್‌ ನೀಡಿದ್ದಾರೆ. ನೀವೆಲ್ಲರೂ ಸೇರಿ ಶ್ರೀರಾಮುಲು ಅವರಿಗೆ ಮತ್ತೆ ರಾಜಕೀಯ ಪುನರ್ಜನ್ಮ ನೀಡಬೇಕು ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. ನಗರದ ಏಳುಕೇರಿ ಪ್ರದೇಶದಲ್ಲಿ ಶನಿವಾರ ರೋಡ್‌ ಶೋ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ನನ್ನನ್ನು ಚುನಾಯಿಸಿದರೆ ಸಂಸತ್‌ನಲ್ಲಿ ನಿಮ್ಮ ಪರವಾಗಿ ಧ್ವನಿ ಎತ್ತಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.

ಇಡೀ ವಿಶ್ವದಲ್ಲಿ ದೇಶವನ್ನು ಬಲಿಷ್ಠ ರಾಷ್ಟ್ರ ಮಾಡಿರುವ ಪ್ರಧಾನಿ ಮೋದಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಲು ಬಳ್ಳಾರಿ ಲೋಕಸಭೆಯಿಂದ ಬಿಜೆಪಿ ಗೆಲ್ಲಿಸಬೇಕು ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.

SRI RAMULU VS E TUKARAM: ಯಾರ ಪಾಲಾಗುತ್ತೆ ಬಿಜೆಪಿ ಭದ್ರ ಕೋಟೆ..? ಯಾರ ಪರ ಬಳ್ಳಾರಿ ಮತದಾರನ ಒಲವು..?

ಪ್ರಧಾನಿ ಮೋದಿ ಅವರ ಅಲೆ ಇಡೀ ದೇಶದಲ್ಲಿದೆ. ಇಡೀ ಜಗತ್ತೆ ಅವರನ್ನು ಕೊಂಡಾಡುತ್ತಿದೆ. ಆದರೆ, ಕಾಂಗ್ರೆಸ್ ಹಾಗೂ ಅವರ ಇಂಡಿಯಾ ಒಕ್ಕೂಟದ ಪಕ್ಷಗಳು ರಾಜಕೀಯ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿವೆ. ಇಡೀ ದೇಶಕ್ಕೆ ಮೋದಿಯೇ ಗ್ಯಾರಂಟಿಯಾಗಿದ್ದಾರೆ. ದೇಶವನ್ನು ಸುರಕ್ಷಿತವಾಗಿಟ್ಟಿದ್ದಾರೆ. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಮತ್ತೊಮ್ಮೆ ಮೋದಿ ಗೆಲ್ಲಿಸಬೇಕು. ಈಗ ನಾವು ಶ್ರೀಮಂತಿಕೆಯಲ್ಲಿ ವಿಶ್ವದಲ್ಲೇ ಐದನೇ ಸ್ಥಾನದಲ್ಲಿದ್ದೇವೆ. ನಾವು ಮೂರನೇ ಸ್ಥಾನಕ್ಕೆ ಬರಬೇಕು ಎಂದರು.

ಬಿಜೆಪಿ ಮುಖಂಡ ಸಿದ್ದಾರ್ಥ ಸಿಂಗ್‌, ಮುಖಂಡರಾದ ಗೋಸಲ ಭರಮಪ್ಪ, ಜಂಬಾನಹಳ್ಳಿ ರಾಮಣ್ಣ, ತಾರಿಹಳ್ಳಿ ಜಂಬುನಾಥ, ಜಂಬಯ್ಯ ನಾಯಕ, ಮಾರ್ಕಂಡೇಯ ಮತ್ತಿತರರಿದ್ದರು.

ಸ್ಕೂಟಿಯಲ್ಲೇ ಓಡಾಡಿದ ಶ್ರೀರಾಮುಲು: 

ಹೊಸಪೇಟೆಯ ಏಳುಕೇರಿಗಳಲ್ಲಿ ಶನಿವಾರ ರೋಡ್‌ ಶೋ ನಡೆಸಿದ ಬಳಿಕ ನಗರದಲ್ಲಿ ಮತಯಾಚನೆಗಾಗಿ ಮಾಜಿ ಸಚಿವ ಬಿ. ಶ್ರೀರಾಮುಲು ಸ್ಕೂಟಿಯಲ್ಲೇ ಓಡಾಡಿದರು. ಅವರು ಬಿರು ಬಿಸಲನ್ನು ಲೆಕ್ಕಿಸದೇ ಯುವ ನಾಯಕ ಸಿದ್ಧಾರ್ಥ ಸಿಂಗ್ ಅವರ ಸ್ಕೂಟಿ ಏರಿ ನಗರದಲ್ಲಿ ಸಂಚರಿಸಿದರು.

Latest Videos
Follow Us:
Download App:
  • android
  • ios