ಜನ​ಸ್ನೇಹಿ ಆಡ​ಳಿತ ನೀಡಿ, ಇಲ್ಲ ನಿಮ್ಮ ದಾರಿ ನೋಡಿ​ಕೊಳ್ಳಿ: ಸಂಸದ ಸುರೇಶ್‌ ಖಡಕ್‌ ವಾರ್ನಿಂಗ್‌

ಇನ್ನು ಮುಂದೆ ನಮ್ಮ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕೆಲಸ ಮಾಡ​ಬೇಕು. ಪರ್ಸೆಂಟೇಜ್‌, ಭ್ರಷ್ಟಾ​ಚಾ​ರಕ್ಕೆ ಇತಿಶ್ರೀ ಹಾಡ​ಬೇಕು. ಸಮ​ಸ್ಯೆಗೆ ಪರಿ​ಹಾರ ಕಲ್ಪಿ​ಸುವ ಜನ​ಸ್ನೇ​ಹಿ ಆಡ​ಳಿತ ನೀಡಿ, ಸಾಧ್ಯ​ವಾ​ಗ​ದಿ​ದ್ದರೆ ಬೇರೆ​ಡೆಗೆ ವರ್ಗಾ​ವಣೆ ಮಾಡಿ​ಸಿ​ಕೊಂಡು ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂದು ಸಂಸದ ಡಿ.ಕೆ.​ಸು​ರೇಶ್‌ ಅಧಿ​ಕಾ​ರಿ​ಗ​ಳಿಗೆ ಖಡಕ್‌ ವಾರ್ನಿಂಗ್‌ ನೀಡಿ​ದರು.

Give people friendly governance no take care of your own way Says MP DK Suresh gvd

ರಾಮ​ನ​ಗರ (ಜೂ.18): ಇನ್ನು ಮುಂದೆ ನಮ್ಮ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕೆಲಸ ಮಾಡ​ಬೇಕು. ಪರ್ಸೆಂಟೇಜ್‌, ಭ್ರಷ್ಟಾ​ಚಾ​ರಕ್ಕೆ ಇತಿಶ್ರೀ ಹಾಡ​ಬೇಕು. ಸಮ​ಸ್ಯೆಗೆ ಪರಿ​ಹಾರ ಕಲ್ಪಿ​ಸುವ ಜನ​ಸ್ನೇ​ಹಿ ಆಡ​ಳಿತ ನೀಡಿ, ಸಾಧ್ಯ​ವಾ​ಗ​ದಿ​ದ್ದರೆ ಬೇರೆ​ಡೆಗೆ ವರ್ಗಾ​ವಣೆ ಮಾಡಿ​ಸಿ​ಕೊಂಡು ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂದು ಸಂಸದ ಡಿ.ಕೆ.​ಸು​ರೇಶ್‌ ಅಧಿ​ಕಾ​ರಿ​ಗ​ಳಿಗೆ ಖಡಕ್‌ ವಾರ್ನಿಂಗ್‌ ನೀಡಿ​ದರು. ನಗ​ರದ ಜಿಲ್ಲಾ ಪಂಚಾ​ಯಿತಿ ಸಭಾಂಗ​ಣ​ದಲ್ಲಿ ಶನಿ​ವಾ​ರ ನಡೆದ ಕೇಂದ್ರ ಪುರ​ಸ್ಕೃತ ಯೋಜ​ನೆ​ಗಳ ಜಿಲ್ಲಾ ಅಭಿ​ವೃದ್ದಿ ಸಮ​ನ್ವಯ ಮತ್ತು ಉಸ್ತು​ವಾರಿ ಸಮಿತಿ ಸಭೆ​ಯಲ್ಲಿ ಮಾತ​ನಾ​ಡಿದರು.

ನಿಮ್ಮ ಆಡ​ಳಿತ ಪಾರ​ದ​ರ್ಶ​ಕ​ವಾಗಿ ಇರ​ಬೇಕು. ಇಂದಿ​ನಿಂದಲೇ ನಿಮ್ಮ ಕಾರ್ಯವೈಖ​ರಿ​ಯನ್ನು ಬದ​ಲಾ​ಯಿ​ಸಿ​ಕೊ​ಳ್ಳ​ಬೇಕು. ಯಾವ ಅಧಿ​ಕಾ​ರಿಗೆ ಕೆಲಸ ಮಾಡಲು ಇಷ್ಟ​ವಿದಿಯೋ ಇರ​ಬ​ಹುದು. ಕೆಲಸ ಮಾಡಲು ಆಸಕ್ತಿ ಇಲ್ಲ​ದಿ​ದ್ದರೆ ನಿಮಗೆ ಬೇಕಾದ ಕಡೆಗೆ ವರ್ಗಾ​ವಣೆ ಮಾಡಿ​ಸಿ​ಕೊಂಡು ಹೋಗ​ಬ​ಹುದು. ನಿಮಗೆ ಅನು​ಕೂಲ ಇರುವ ಕಡೆಗೆ ಹೋಗು​ವು​ದಾ​ದರೆ ಹೋಗಿ ನಮ್ಮ​ದೇನು ಅಭ್ಯಂತರ ಇಲ್ಲ. ನಿಮ್ಮ ತಲೆ​ಯಲ್ಲಿ ವರ್ಗಾ​ವಣೆ ಆಲೋ​ಚನೆ ಬಂದಿ​ದ್ದರೆ ನಾನೇನು ಮಾಡಲು ಆಗಲ್ಲ. ನಿಮ್ಮನ್ನು ವರ್ಗಾ​ವಣೆ ಮಾಡು​ವುದು ಸುಲಭ. ಆ ರೀತಿ ವರ್ಗಾ​ವಣೆ ಮಾಡಿ​ಸುವ ವ್ಯಕ್ತಿ ನಾನಲ್ಲ. ನೀವಾಗಿ ನೀವು ಹೋಗು​ವು​ದಾ​ದರೆ ಹೋಗ​ಬ​ಹುದು ಎಂದು ಹೇಳಿ​ದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಯೇ ಪ್ರತಿಷ್ಠಾನದ ಗುರಿ: ಮಕ್ಕಳ ಕಲಿಕೆಗೆ ಅಗತ್ಯ ಸಲಕರಣೆಗಳ ವಿತ​ರ​ಣೆ

ಜನರ ಭಾವ​ನೆ​ಗ​ಳಿಗೆ ವಿರುದ್ಧ ನಡೆ​ಯ​ಬೇ​ಡಿ: ಸರ್ಕಾರಿ ಅಧಿ​ಕಾ​ರಿ​ಗಳು ರೈತರು ಮತ್ತು ಜನ​ಸಾ​ಮಾ​ನ್ಯರ ಕಷ್ಟಸುಖ​ಗ​ಳನ್ನು ಆಲಿ​ಸು​ವು​ದರ ಜೊತೆಗೆ ಅದಕ್ಕೆ ಪರಿ​ಹಾರ ಸೂಚಿ​ಸ​ಬೇಕು. ಇನ್ನು ಮುಂದೆ ನಿಮ್ಮ ಪರ್ಸೆಂಟೇಜ್‌ , ಭ್ರಷ್ಟಾ​ಚಾ​ರಕ್ಕೆ ಇತಿಶ್ರೀ ಹಾಡ​ಬೇಕು. ಜನರ ಭಾವ​ನೆ​ಗಳು ಹಿಂದಿನ ಸರ್ಕಾ​ರದ ಆಡ​ಳಿತದ ವಿರುದ್ಧ ಇತ್ತು. ಭ್ರಷ್ಟಾ​ಚಾರ ಎಂಬುದು ಸಾಕೆ​ನ್ನು​ವ​ಷ್ಟರ ಮಟ್ಟಿಗೆ ತಲು​ಪಿತ್ತು. ಹೀಗಾಗಿ ಬದ​ಲಾ​ವಣೆ ಬಯಸಿ ಜನರು ಕಾಂಗ್ರೆಸ್‌ ಪಕ್ಷವನ್ನು ಅಧಿ​ಕಾ​ರಕ್ಕೆ ತಂದಿ​ದ್ದಾರೆ. ಜನರ ಭಾವ​ನೆ​ಗ​ಳಿಗೆ ವಿರು​ದ್ಧ​ವಾಗಿ ನಡೆ​ದು​ಕೊ​ಳ್ಳ​ಬೇಡಿ ಎಂದು ತಾಕೀತು ಮಾಡಿ​ದ​ರು.

ಕೆಲಸ ಮಾಡದೆ ಕಾಲ​ಹ​ರಣ ಮಾಡಿ​ದರೆ, ಭ್ರಷ್ಟಾ​ಚಾ​ರ​ದಲ್ಲಿ ತೊಡ​ಗಿ​ದರೆ ಯಾರ ಮೇಲೂ ಮರ್ಜಿ ತೋರದೆ ಶಿಸ್ತು ಕ್ರಮಕ್ಕೆ ಸರ್ಕಾ​ರಕ್ಕೆ ವರದಿ ಸಲ್ಲಿ​ಸು​ತ್ತೇವೆ. ನಿಮ್ಮ ಆಡ​ಳಿತ ಪಾರ​ದ​ರ್ಶ​ಕ​ವಾಗಿ ಇರ​ಬೇಕು. ಇಂದಿ​ನಿಂದಲೇ ನಿಮ್ಮ ಕಾರ್ಯವೈಖ​ರಿ​ಯನ್ನು ಬದ​ಲಾ​ಯಿ​ಸಿ​ಕೊ​ಳ್ಳ​ಬೇಕು. ಎಲ್ಲರು ಬದ​ಲಾವಣೆಯ ನಿರೀಕ್ಷೆ ಇಟ್ಟು​ಕೊಂಡು ಕೆಲಸ ಮಾಡ​ಬೇಕು ಎಂದರು.

ನಿಮ್ಮಿಂದ ಟೀ ಬಿಸ್ಕೆಟ್‌ ಬಯ​ಸಲ್ಲ: ಸರ್ಕಾ​ರದ ಯೋಜ​ನೆ​ಗಳ ಅನು​ಷ್ಠಾನ ಹಾಗೂ ಅಭಿ​ವೃದ್ಧಿ ವಿಚಾ​ರ​ದಲ್ಲಿ ರಾಮ​ನ​ಗರ ಜಿಲ್ಲೆ ರಾಜ್ಯ​ದ​ಲ್ಲಿಯೇ ಮುಂಚೂ​ಣಿ​ಯಲ್ಲಿ ಇರ​ಬೇಕು. ನಿಮ್ಮಿಂದ ಆ ರೀತಿ ಉತ್ತಮ ಜನ​ಸ್ನೇ​ಹಿ ಆಡ​ಳಿ​ತ ಮಾತ್ರ ನಿರೀಕ್ಷೆ ಮಾಡು​ತ್ತೇ​ವೆಯೇ ಹೊರತು ನಯಾ ಪೈಸೆ, ಟೀ ಬಿಸ್ಕೆಟ್‌ ಬಯ​ಸಲ್ಲ. ಅಭಿ​ವೃದ್ಧಿ ವಿಚಾ​ರ​ವಾಗಿ ನಿಮಗೆ ಸಂಪೂರ್ಣ ಸಹ​ಕಾರ ನೀಡು​ತ್ತೇವೆ. ನೀವು​ಗಳು ಆಡ​ಳಿತ ಸುಧಾ​ರಣೆ ಮತ್ತು ಅಭಿ​ವೃದ್ಧಿ ವಿಚಾ​ರ​ವಾಗಿ ಏನಾ​ದರು ಸಲಹೆ ಸೂಚ​ನೆಗಳಿ​ದ್ದರೆ ನೀಡಿ, ಮುಕ್ತ​ವಾಗಿ ಸ್ವೀಕ​ರಿ​ಸು​ತ್ತೇವೆ ಎಂದು ಹೇಳಿ​ದರು.

ಜಿಲ್ಲಾ​ಮ​ಟ್ಟದ ಅಧಿ​ಕಾ​ರಿ​ಗಳು ಸಹ ತಮ್ಮ ಕಾರ್ಯ​ವೈ​ಖ​ರಿ​ಯಲ್ಲಿ ಬದ​ಲಾ​ವಣೆ ತಂದು​ಕೊ​ಳ್ಳ​ಬೇಕು. ಕಚೇ​ರಿ​ಯಲ್ಲಿ ಕುಳಿತು ದರ್ಬಾರ್‌ ನಡೆ​ಸು​ವುದು, ಟೈಮ್‌ ಪಾಸ್‌ ಮಾಡುವುದನ್ನು ಬಿಡ​ಬೇಕು. ಐದು ತಾಲೂ​ಕು​ಗ​ಳಿಗೂ ಭೇಟಿ ನೀಡಿ ಫೀಲ್ಡ್‌ ವರ್ಕ್ ಮಾಡ​ಬೇಕು. ಜಿಲ್ಲಾ​ಧಿ​ಕಾ​ರಿ​ಗಳು ಹಾಗೂ ಜಿಪಂ ಸಿಇ​ಒ, ಜಿಲ್ಲಾ​ಮ​ಟ್ಟದ ಅಧಿ​ಕಾ​ರಿ​ಗಳ ಕಾರ್ಯ​ವೈ​ಖರಿ ಮೇಲೆ ನಿಗಾ ವಹಿ​ಸ​ಬೇಕು. ಯಾವ ಅಧಿ​ಕಾರಿ ಫೀಲ್ಡ್‌ ವರ್ಕ್ ಮಾಡು​ವು​ದಿ​ಲ್ಲವೋ ಅಂತ​ಹ​ವರ ವಿರುದ್ಧ ಶಿಸ್ತು ಕ್ರಮ ಜರು​ಗಿ​ಸ​ಬೇಕು ಎಂದು ಸೂಚನೆ ನೀಡಿ​ದರು.

ಕಚೇ​ರಿಗೆ ಬರುವ ಅರ್ಜಿ​ಗ​ಳನ್ನು ನ್ಯಾಯ​ಯು​ತ​ವಾಗಿ ವಿಲೇ​ವಾರಿ ಮಾಡ​ಬೇಕು. ಸಮ​ಸ್ಯೆ​ಯನ್ನು ಮುಂದೂ​ಡದೆ ಪರಿ​ಹಾರ ಕಲ್ಪಿ​ಸುವ ಪ್ರಾಮಾ​ಣಿಕ ಪ್ರಯತ್ನ ಮಾಡ​ಬೇಕು. ವಿನಾ ಕಾರಣ ಜನ​ರಿಗೆ ತೊಂದರೆ ನೀಡಿ​ದರೆ ಆಡ​ಳಿತ ಕುಸಿದು ಪ್ರಗತಿ ಕಾಣು​ವು​ದಿಲ್ಲ. ಸಮ​ಸ್ಯೆಗೆ ಪರಿ​ಹಾರ ನೀಡು​ವಂತಹ ಜನ​ಸ್ನೇ​ಹಿ ಆಡ​ಳಿತ ನೀಡ​ಬೇ​ಕು ಎಂದು ಸುರೇಶ್‌ ಅಧಿ​ಕಾ​ರಿ​ಗ​ಳಿಗೆ ಎಚ್ಚ​ರಿ​ಕೆಯ ಸಂದೇಶ ರವಾ​ನಿ​ಸಿ​ದರು. ಸಭೆ​ಯಲ್ಲಿ ಶಾಸಕ ಇಕ್ಬಾಲ್‌ ಹುಸೇನ್‌, ವಿಧಾನ ಪರಿ​ಷತ್‌ ಸದಸ್ಯ ಎಸ್‌.ರವಿ, ಜಿಲ್ಲಾ​ಧಿ​ಕಾರಿ ಅವಿ​ನಾಶ್‌, ಅಪರ ಜಿಲ್ಲಾ​ಧಿ​ಕಾರಿ ಶಿವಾ​ನಂದ​ಮೂರ್ತಿ ಇತರರಿದ್ದರು.

ಬೇಡಿಕೆ ಕಳೆ​ದು​ಕೊಂಡ ಶಿಕ್ಷಣ ಹಕ್ಕು ಕಾಯಿದೆ: ಬದ​ಲಾದ ನಿಯ​ಮ​ದಿಂದಾಗಿ ಸೀಟು ಕೇಳು​ವ​ವರೇ ಇಲ್ಲ!

48 ಗಂಟೆ​ಯೊ​ಳಗೆ ವರದಿ ಸಲ್ಲಿ​ಸಿ - ಶಿಸ್ತು ಕ್ರಮ ಜರು​ಗಿಸಿ: ಹಿಂದಿನ ಮತ್ತು ಈಗಿನ ದಿಶಾ ಸಭೆ​ಯಲ್ಲಿ ಯಾವ ಇಲಾಖೆ ಅಧಿ​ಕಾ​ರಿ​ಗಳು ಗೈರಾ​ಗಿ​ದ್ದರೊ ಅವ​ರಿ​ಗೆಲ್ಲ ಕಾರಣ ಕೇಳಿ ನೋಟಿಸ್‌ ಜಾರಿ ಮಾಡ​ಬೇಕು. ಮುಂದಿನ 48 ಗಂಟೆ​ಯೊ​ಳಗೆ ನನಗೆ ವರದಿ ಸಲ್ಲಿ​ಸ​ಬೇಕು ಎಂದು ಜಿಪಂ ಸಿಇಒ ದಿಗ್ವಿ​ಜಯ್‌ ಬೋಡ್ಕೆ ಅವ​ರಿಗೆ ಸಂಸದ ಡಿ.ಕೆ.ಸುರೇಶ್‌ ಸೂಚನೆ ನೀಡಿ​ದರು. ಚನ್ನ​ಪ​ಟ್ಟಣ ತಾಲೂಕು ಮೈಲ​ನಾ​ಯ​ಕ​ನ​ಹಳ್ಳಿ ಗ್ರಾಪಂ ಕಚೇ​ರಿ​ಯಲ್ಲಿ ​ರೈ​ತ​ನೊ​ಬ್ಬ ಕುರಿ ಕೂಡಿ ಹಾಕಿ ಪ್ರತಿ​ಭ​ಟನೆ ನಡೆ​ಸಿದ ವಿಷಯ ಪ್ರಸ್ತಾ​ಪಿ​ಸಿದ ಸಂಸದರು, ಯಾವ ಕಾರ​ಣ​ದಿಂದಾಗಿ ವರ್ಷ​ವಾ​ದರು ಕೊಟ್ಟಿಗೆ ಹಣ ಬಿಡು​ಗಡೆ ಮಾಡಿ​ಲ್ಲ​ವೆಂದು ಪ್ರಶ್ನಿ​ಸಿ​ದರು. ಇಒ ಶಿವ​ಕು​ಮಾರ್‌ ಆಧಾರ್‌ಲಿಂಕ್‌ ಸಮಸ್ಯೆ ಕಾರ​ಣ​ವೆಂದು ಹೇಳಿ ಸಮ​ಜಾ​ಯಿಷಿ ನೀಡಿ​ದರು. ಇದನ್ನು ಒಪ್ಪದ ಸಂಸ​ದರು ವರದಿ ಪಡೆದು ಪಿಡಿಒ ಸೇರಿ​ದಂತೆ ಗ್ರಾಪಂ ಅಧಿ​ಕಾ​ರಿ​ಗ​ಳ ವಿರುದ್ಧ ಶಿಸ್ತು ಕ್ರಮ ಜರು​ಗಿ​ಸು​ವಂತೆ ಜಿಪಂ ಸಿಇ​ಒಗೆ ಸೂಚಿ​ಸಿ​ದರು.

Latest Videos
Follow Us:
Download App:
  • android
  • ios