Asianet Suvarna News Asianet Suvarna News

Raichur: ಪ್ರಧಾನಿ ಮೋದಿ 2040ರವರೆಗೆ ಅಧಿಕಾರ ಕೇಳ್ತಾರೆ; ನನಗೆ 5 ವರ್ಷ ಕೊಡಿ ಸಾಕು: ಎಚ್‌ಡಿಕೆ

ಪಂಚರತ್ನ ರಥಯಾತ್ರೆಗೆ ಯಾವುದೇ ಜಾತಿ ಧರ್ಮ ಇಲ್ಲ. ಪಂಚರತ್ನ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು  52 ದಿನಗಳಿಂದ ಈ  ರಥಯಾತ್ರೆ ಮುಂದುವರಿಸಿದ್ದೇವೆ. ಇಲ್ಲಿ ಎಲ್ಲ ಧರ್ಮ, ಜಾತಿಯವರು ಸೇರಿದ್ದಾರೆ ಎಂದರು.

Give me a clear majority, Kalyan Karnataka will develop says hdk at raichur rav
Author
First Published Jan 24, 2023, 9:36 PM IST

ರಾಯಚೂರು (ಜ.24) ಪಂಚರತ್ನ ರಥಯಾತ್ರೆಗೆ ಯಾವುದೇ ಜಾತಿ ಧರ್ಮ ಇಲ್ಲ. ಪಂಚರತ್ನ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು  52 ದಿನಗಳಿಂದ ಈ  ರಥಯಾತ್ರೆ ಮುಂದುವರಿಸಿದ್ದೇವೆ. ಇಲ್ಲಿ ಎಲ್ಲ ಧರ್ಮ, ಜಾತಿಯವರು ಸೇರಿದ್ದಾರೆ. ರಥಯಾತ್ರೆಯಲ್ಲಿ ಎಲ್ಲರೂ ಸೇರಿದ್ದಾರೆ ಎಂದರು.

ಮುದಗಲ್ ಪಟ್ಟಣದಲ್ಲಿ ರಥಯಾತ್ರೆಗೆ ಅದ್ಭುತ ಕಾರ್ಯಕ್ರಮ ಆಯೋಜನೆ ಆಗಿದೆ. ಈ ಠಥ ಯಾತ್ರೆಗೆ ನೀವು ಬೆಂಬಲಿಸಿದಕ್ಕೆ ನನ್ನ ಗೌರವ ಪೂರ್ವಕ ವಂದನೆ ಎಂದು ಹೇಳಿದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಭೂತಪೂರ್ವವಾಗಿ ಜಯಗಳಿಸುತ್ತೆ. ಸಿದ್ದು ಬಂಡಿ ಆಯ್ಕೆಯಾಗಿ ವಿಧಾನಸೌಧಕ್ಕೆ ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯಾವುದು ಇದು ಪಂಚರತ್ನಯಾತ್ರೆ ಅಂತಾ ಕಾಂಗ್ರೆಸ್ ನವರು ಅಂದು ವ್ಯಂಗ್ಯ ಮಾಡಿದ್ರು. ಈಗ ರಥಯಾತ್ರೆ ರಾಜ್ಯದ ಜನರು ಬೆಂಬಲಿಸುತ್ತಿರುವುದು ನೋಡಿ ಅವರಿಗೆ ಭಯವಾಗಿದೆ. ಕೈ ನಾಯಕರು ಕುಮಾರಸ್ವಾಮಿ ಅಧಿಕಾರಕ್ಕೆ ಬರಲ್ಲ ಎಂದಿದ್ದಾರೆ. ಆದರೆ ಈ ಬಾರಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2006ರಲ್ಲಿ ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿ ಆದೆ. ಅದಕ್ಕೆ ಕಾರಣ ಆಗಿನ ರಾಜಕೀಯ ಬೆಳವಣಿಗೆಗಳು. ಮುಖ್ಯಮಂತ್ರಿ ಆಗುವ 
ಆಸೆ ಇಲ್ಲದಿದ್ದರೂ ಅದು ಅನಿವಾರ್ಯ. ಆ ದಿನ 6 ಕೋಟಿ ಜನರ ಆರ್ಶಿವಾದ ನನಗೆ ಇರಲಿಲ್ಲ. ಆಗ ನಮ್ಮ ಅಭ್ಯರ್ಥಿ ಅಮರೇಗೌಡರನ್ನ ಆಯ್ಕೆ ಮಾಡಿದ್ರಿ. ಅದರಿಂದ ನಾನು‌ ಮುಖ್ಯಮಂತ್ರಿ ಆಗಿದ್ದೆ,ಅದರಲ್ಲಿ ನಿಮ್ಮ ಪಾಲು ಇದೆ ಎಂದರು.

ರಾಯಚೂರಲ್ಲಿ ಪಂಚರತ್ನ ರಥಯಾತ್ರೆ: ಎಚ್‌ಡಿಕೆಗೆ ಡೊಳ್ಳಿನ ಹಾರ ಹಾಕಿ ಭರ್ಜರಿ ಸ್ವಾಗತ!

ಮುಖ್ಯಮಂತ್ರಿಯ ಆಡಳಿತ ಎಂದರೆ ಬೆಂಗಳೂರಿನ ವಿಧಾನಸೌಧದಿಂದ ಅಲ್ಲ. ಆ ನಿಟ್ಟಿನಲ್ಲಿ ನಾನು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನ ಮಾಡಿದ್ದೆ. ಹಳ್ಳಿ ಜನರ ಸಮಸ್ಯೆ ಕಂಡು ಸುವರ್ಣ ಗ್ರಾಮ ಯೋಜನೆ ಕನಸು ಇದೆ.  ಪ್ರತಿ ಹಳ್ಳಿಗಳಲ್ಲಿ ನಗರ ಸಭೆ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡುವುದಾಗಿದೆ. ಈ ಬಾರಿ ನಿಮ್ಮ ಬೆಂಬಲದಿಂದ ನಾವು ಅಧಿಕಾರಕ್ಕೆ ಬರಲಿದ್ದೇವೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು.

ಪಂಚರತ್ನ ಯಾತ್ರೆಯನ್ನ ಜನರ ಮುಂದೆ ನಾನು ಸುಮ್ಮನೆ ತಂದಿಲ್ಲ. ಬಿಜೆಪಿ ನಾಯಕರು ಸುವರ್ಣ ಗ್ರಾಮ ಯೋಜನೆ ನಿಲ್ಲಿಸಿದರು. ಕಾಂಗ್ರೆಸ್ ನಾಯಕರು ಸುವರ್ಣ ಗ್ರಾಮದ ಹೆಸರು ಬದಲಾವಣೆ ಮಾಡಿದ್ರು. ಸುವರ್ಣ ಗ್ರಾಮ ಹೆಸರು ತೆಗೆದು ಗ್ರಾಮ ವಿಕಾಸ ಅಂತ ಮಾಡಿದ್ರು. ಹೈದ್ರಾಬಾದ್ ಕರ್ನಾಟಕದ ಹೆಸರನ್ನ ಬದಲಾವಣೆ ಮಾಡಿದ್ರು. ಕಲ್ಯಾಣ ಕರ್ನಾಟಕ ಅಂತ ನಾಮಕರಣ ಮಾಡಿದ್ರು. ಆದರೆ ಏನು ಪ್ರಯೋಜನ? ಈ ಭಾಗದ ಅಭಿವೃದ್ಧಿ ಆಗಿದೆಯಾ? ಎಂದು ಪ್ರಶ್ನಿಸಿದರು.

ಬೀದರ, ಯಾದಗಿರಿ ಜಿಲ್ಲೆಯಲ್ಲಿ ನಾನು‌ ಪ್ರವಾಸ ಮಾಡಿದ್ದೀನಿ. ಹಳ್ಳಿಗಳಲ್ಲಿ ಇನ್ನೂ ಸರಿಯಾದ ರಸ್ತೆ ನಿರ್ಮಾಣ ಮಾಡಲು ಆಗಿಲ್ಲ. 75 ವರ್ಷ ಕಳೆದರೂ ದೇಶ ಯಾವುದೇ ಅಭಿವೃದ್ಧಿ ಕಂಡಿಲ್ಲ. ಮೋದಿಯವರು 8 ವರ್ಷದಲ್ಲಿ ವಿಶ್ವಗುರು ಮಾಡ್ತೀವಿ ಅಂದಿದ್ರು. ಆದರೆ ಏನಾಗಿದೆ? ಅಭಿವೃದ್ಧಿ ಕಂಡಿದೆಯಾ? ಕಲ್ಬುರ್ಗಿ ಜಿಲ್ಲೆಯಲ್ಲಿ  ಎಷ್ಟು ರೈತರ ಆತ್ಮಹತ್ಯೆಗಳು ಆಗಿವೆ..? ಅವರಿಗೆ ರೈತರ ಅತ್ಮಹತ್ಯೆ ಬಗ್ಗೆ ಮಾಹಿತಿ ಹೋಗಿಲ್ವಾ? ರಾಜ್ಯದ ಸಿಎಂರನ್ನು ಗುಲಾಮರ ಹಾಗೆ ಕೆಲಸ ಮಾಡಲು ‌ನೀವು ಆಯ್ಕೆ ಮಾಡಿದ್ದೀರಾ? ಎಂದು ಪ್ರಶ್ನಿಸಿದರು.

121 ಶ್ರೀಮಂತರ ಆದಾಯ ಪ್ರತಿದಿನಕ್ಕೆ 3,848 ಕೋಟಿರೂ. ಆಗಿದೆ. ಜನರ ತೆರಿಗೆ ಹಣದಲ್ಲಿ, ಈ 121 ಜನರು ಮಜಾ ಮಾಡ್ತಾರೆ. ನಾನು ಯಾವುದೇ ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಓದಿಲ್ಲ. ನಾನು ಆರೋಗ್ಯ ಲೆಕ್ಕಿಸದೆ ನಿಮ್ಮಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ. ಜನರು ಸಾಲದಲ್ಲಿ ‌ಮುಳಗಡೆ,ಆಗಬಾರದು ಎಂಬ ಕಾರಣಕ್ಕೆ ಪಂಚರತ್ನ ರಥಯಾತ್ರೆ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ಮೋದಿಯವರು‌ 2040ವರೆಗೆ ಅಧಿಕಾರ ಕೇಳುತ್ತಿದ್ದಾರೆ. ನನಗೆ 5 ವರ್ಷ ಮಾತ್ರ ಅಧಿಕಾರ ಕೊಡಿ ಸಾಕು. ಪ್ರತಿ ಪಂಚಾಯತ್ ನಲ್ಲಿ ಆಸ್ಪತ್ರೆ ನಿರ್ಮಾಣ ‌ಮಾಡುತ್ತೇನೆ. ಜನರಿಗೆ ವಸತಿ, ಮೂಲಭೂತ ಸೌಲಭ್ಯ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು.

ಕಲ್ಬುರ್ಗಿಯಲ್ಲಿ ಮೋದಿಯವರು ಹಕ್ಕು ಪತ್ರ ವಿತರಣೆ ಮಾಡಿದ್ರು. ಸ್ವಾಮಿ ಬಂಜಾರು ಸಮಾಜದ ಸಮಸ್ಯೆ ಏನಿದೆ..? ನಿಮ್ಮ ಹಕ್ಕು ಪತ್ರ ಇಟ್ಕೊಂಡು ನೆಕ್ಕಾಬೇಕಾ..? ಕಂದಾಯ ಗ್ರಾಮ ಮಾಡಿದ್ರಿ,ಹಕ್ಕು ಪತ್ರ ಕೊಡಲೆಬೇಕು. ಬೇರೆ ಬೇರೆ ರಾಜ್ಯಗಳಿಗೆ ಈ‌ ಸಮಾಜದ ‌ಜನ್ರು ವಲಸೆ ಹೋಗ್ತಾರೆ.. ಇದೆಲ್ಲವೂ ನಿಲ್ಲಬೇಕು ಎನ್ನುವುದು ನನ್ನ ಉದ್ದೇಶ.

ಅವರಿಗೆ ಹಸು,ಮೇಕೆ ಸಾಕು ಅಂತ ಯೋಜನೆ ಆಗಬೇಕು. ಈ ಬಗ್ಗೆ ಹಳ್ಳಿಗಳಲ್ಲಿ ಕಮಿಟಿ ಮಾಡ್ತೀನಿ. ಮೈತ್ರಿ ಸರಕಾರದಲ್ಲಿ ಸಾಕಷ್ಟು ಕೆಲಸಗಳನ್ನ ಮಾಡಿದೆ. 14 ತಿಂಗಳಲ್ಲಿ 26 ಸಾವಿರ ಕುಟುಂಬಗಳ ಸಾಲಮನ್ನ ಮಾಡಿದ್ದೆ.

 ಮುಸ್ಲಿಂ ಬಂಧುಗಳೇ ಕಾಂಗ್ರೆಸ್ ನಂಬಬೇಡಿ:

ಮುಸ್ಲಿಂರು ಕಾಂಗ್ರೆಸ್‌ನವರು ನಂಬಬೇಡಿ. ಅವರು ನಿಮ್ಮನ್ನ ವೋಟ್ ಬ್ಯಾಂಕ್ ಮಾಡಿದ್ದಾರೆ. ಮುಸ್ಲಿಂರ ಬಗ್ಗೆ ನೈಜ ಕಾಳಜಿಯಿಲ್ಲ. ಓಟಿಗಾಗಿ ಬಣ್ಣದ ಮಾತು ಆಡುತ್ತಾರೆ. ನನಗೆ ಯಾವುದೇ ಜಾತಿ, ಧರ್ಮ ಭೇದವಿಲ್ಲ ಎಂದರು.

ಜನತಾದಳಕ್ಕೆ ವೋಟ್ ಹಾಕಿದ್ರೆ ಬಿಜೆಪಿ ಹಾಕಿದಂತೆ ಅಂತಾ ಕಾಂಗ್ರೆಸ್ ಅಪಪ್ರಚಾರ ಮಾಡ್ತಿದೆ. ಅವರು ಹೀಗೆ ಹೇಳಿ ನಮ್ಮನ್ನು ಹಾಳು ಮಾಡಿದ್ರು. ಬಿಜೆಪಿ ಸಹವಾಸ ಬೇಡ ಎಂದು ಕಾಂಗ್ರೆಸ್ ಜೊತೆ ಕೈ ಜೋಡಿಸಿದೆ. ಆದರೆ ನಮ್ಮ ಪಕ್ಷದ ಮರ್ಯಾದೆ ಉಳಿಸಿದ್ರಾ..?

ಕ್ಷೇತ್ರದ ಅಭಿವೃದ್ಧಿಯಲ್ಲಿ ಎಚ್ಡಿಕೆ ವಿಫಲ: ಸಿಪಿವೈ

ಬಿಜೆಪಿಯವರು ಹಿಂದೂ-ಮುಸ್ಲಿಂ ನಡುವೆ ಕಂದಕ ಸೃಷ್ಟಿಸಿದರು. ಸರ್ವಜನಾಂಗದ ತೋಟಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿದ್ರು ಧರ್ಮ ಮನೆಯಲ್ಲಿ ಇರಲಿ, ಬದುಕು ‌ಮಾತ್ರ ನಮಗೆ ಮುಖ್ಯ. ನನಗೆ ಯಾವಾಗಲೂ ಮಾಜಿ ಮುಖ್ಯಮಂತ್ರಿ ಅಂತರೇ ಮಣ್ಣು ಆಗುವವರೆಗೂ  ನನಗೆ ಮಾಜಿ‌ ಮುಖ್ಯಮಂತ್ರಿ ಅಂತಾರೆ. ಕಾಂಗ್ರೆಸ್ ನವರ ಕಟ್ಟಿಕೊಂಡು ಅಧಿಕಾರಕ್ಕೆ ಬರಲು ಆಗಲ್ಲ. ನನಗೆ ಸ್ಪಷ್ಟವಾದ ಬಹುಮತ ನೀಡಿ. ಸರಕಾರ ರಚನೆ ಆದ 2 ತಿಂಗಳಲ್ಲಿ ‌ಮುದಗಲ್ ತಾಲೂಕು ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುದಗಲ್ ಕೋಟೆಯನ್ನ  ಅಭಿವೃದ್ಧಿಗೊಳಿಸಿ ಪ್ರವಾಸ ತಾಣವಾಗಿ ಮಾಡುವೆ. ಯಾರೂ ನೋಡಿದ್ರೂ ಕುಮಾರಣ್ಣ ನೀವೇ‌ ಮುಖ್ಯಮಂತ್ರಿ  ಆಗಬೇಕು ಅಂತಾರೆ. ಹಾಗಾಗಿ ಇನ್ಯಾರೋ ಮನೆ ಬಾಗಿಲು ಮುಂದೆ ಹೋಗಿ ಅಧಿಕಾರ ಕೇಳುವುದು ಬೇಡ. ನನಗೆ ಸ್ಪಷ್ಟ ಬಹುಮತ ಕೊಡಿ ಎಂದು ಮನವಿ ಮಾಡಿದರು.

Follow Us:
Download App:
  • android
  • ios