Asianet Suvarna News Asianet Suvarna News

ರಾಯಚೂರಲ್ಲಿ ಪಂಚರತ್ನ ರಥಯಾತ್ರೆ: ಎಚ್‌ಡಿಕೆಗೆ ಡೊಳ್ಳಿನ ಹಾರ ಹಾಕಿ ಭರ್ಜರಿ ಸ್ವಾಗತ!

ಇಂದು ರಾಯಚೂರು ಜಿಲ್ಲೆಗೆ ಎಂಟ್ರಿ ಕೊಟ್ಟ ಎಚ್‌ಡಿ ಕುಮಾರಸ್ವಾಮಿ ಅವರ  ಪಂಚರತ್ನ ರಥಯಾತ್ರೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.  

pancharatna rathayatre in raichuru HD kumaraswamy statement at mudgal rav
Author
First Published Jan 24, 2023, 8:45 PM IST

ರಾಯಚೂರು (ಜ.24) : ಇಂದು ರಾಯಚೂರು ಜಿಲ್ಲೆಗೆ ಎಂಟ್ರಿ ಕೊಟ್ಟ ಎಚ್‌ಡಿ ಕುಮಾರಸ್ವಾಮಿ ಅವರ  ಪಂಚರತ್ನ ರಥಯಾತ್ರೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.  
ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿಗೆ ಡೊಳ್ಳು ಹಾರ ಹಾಕುವ ಮೂಲಕ ಭರ್ಜರಿಯಾಗಿ ಸ್ವಾಗತ ಮಾಡಲಾಯಿತು. 25ಕ್ಕೂ ಹೆಚ್ಚು ಡೊಳ್ಳುಗಳಿಂದ ತಯಾರಿಸಿದ ಬೃಹತ್ ಹಾರ ಹಾಕಿ ಬರಮಾಡಿಕೊಂಡಿರುವ ಬೆಂಬಲಿಗರು.

ರಾಯಚೂರಲ್ಲಿ ರಥಯಾತ್ರೆ: 

ರಾಯಚೂರು ಜಿಲ್ಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ನಡೆಯಲಿರುವ ಪಂಚರತ್ನ ರಥಯಾತ್ರೆ ನಡೆಯಲಿದೆ ಮುದಗಲ್‌ನಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಮಸ್ಯೆ ಗಳಿಗೆ ಪರಿಹಾರ ಸಿಗುತ್ತಿಲ್ಲ. ಬಡವರು ಬಡವರಾಗೇ ಇದ್ದಾರೆ.  ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Assembly election: ಬಿಜೆಪಿ ಆಪರೇಷನ್‌ಗೆ ಯಾರೇ ಹೋದರೂ ಜೆಡಿಎಸ್‌ಗೆ ಸಮಸ್ಯೆಯಿಲ್ಲ: ಕುಮಾರಸ್ವಾಮಿ

ಕಲ್ಯಾಣ ಕರ್ನಾಟಕ ಅಂತ ಹೆಸರು ಬದಲು ಮಾಡಿದ್ದಾರೆ. ಆದರೆ ಅಭಿವೃದ್ಧಿಗಾಗಿ ಬಂದ ಹಣ ಖರ್ಚು ಮಾಡುತ್ತಿಲ್ಲ ಈಗಿನ ಸರ್ಕಾರ ನಿಷ್ಕ್ರಿಯವಾಗಿದೆ. ಈ ಸರ್ಕಾರದಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಅಸಾಧ್ಯ ಎಂದರು. 

ಕಲ್ಯಾಣ ಕರ್ನಾಟಕದ ಹಳ್ಳಿಯಲ್ಲಿ ಇವತ್ತಿಗೂ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಈ ಸರ್ಕಾರ ಬಂದ ಮೇಲೆ ಶೇ. 20, 30ರಷ್ಟು ಕೂಡ ಅಭಿವೃದ್ಧಿ ಕೆಲಸ ಆಗಿಲ್ಲ. ಕಲ್ಯಾಣ ಕರ್ನಾಟಕಕ್ಕೆ  ಕೊಟ್ಟ ಅನುದಾನ ಬೇರೆ ಕಡೆ ಡೈವರ್ಟ್ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಪಂಚರತ್ನ ಯಾತ್ರೆ ಪ್ರತಿಯೊಂದು ಕುಟುಂಬಕ್ಕೂ ಅನುಕೂಲವಾಗುವ ಕಾರ್ಯಕ್ರಮ. ಇದನ್ನು ಜನರಿಗೆ ತಿಳಿಸಲು ಪಂಚರತ್ನ ಯಾತ್ರೆ ಶುರು ಮಾಡಿದ್ದೇವೆ ಎಂದರು.

ಪಿಎಸ್ ಐ ಹಗರಣ:

ಈ ಸರ್ಕಾರ ನಡೆಯುತ್ತಿರುವುದು ದಂಧೆಕೋರರ ಸೂಚನೆಯಂತೆ. ದಂಧೆಕೋರರು ಅಧಿಕಾರಿಗಳ ವರ್ಗಾವಣೆಗೆ  ಅವರು ಕೊಟ್ಟ ಹೆಸರುಗಳನ್ನು ಮೇಲೆ ವರ್ಗಾವಣೆ, ನೇಮಕಗಳು ನಡೆಯುತ್ತಿವೆ.
ದಂಧೆಕೋರರು ಹೇಳಿದಂತೆ ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಗಾಣಗಾಪೂರ ಕ್ಷೇತ್ರ ಕಾಶಿ ಮಾದರಿ ಅಭಿವೃದ್ಧಿ ವಿಚಾರ; ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಎಚ್‌ಡಿ ಕುಮಾರಸ್ವಾಮಿ ಅವರು, ಮೂರು ತಿಂಗಳಲ್ಲಿ ಈ ಸರ್ಕಾರ ಹೋದ್ರೆ ಈ ಸಿಎಂ ಮಾತು ಯಾವನು ಕೇಳುತ್ತಾರೆ? ಮೂರು ವರ್ಷ ಮಾಡದೇ ಇರುವರು ಈಗ ಮಾಡುತ್ತಾರಾ? ಜನರ ಮತಗಳು ಪಡೆಯಲು, ಜನರನ್ನು ದಾರಿ ತಪ್ಪಿಸಲು ಘೋಷಣೆ ಮಾಡಿದ್ದಾರೆ ವಿನಹ ಈ ಸರ್ಕಾರದಿಂದ ಯಾವ ಕೆಲಸವೂ ಆಗಲ್ಲ ಎಂದರು.

ಜೆಡಿಎಸ್ ಭದ್ರಕೋಟೆ :

ಎಲ್ಲಾ ಪಕ್ಷಗಳು ತಮ್ಮ ಸಂಖ್ಯೆ ಏರಿಕೆ ಮಾಡಿಕೊಳ್ಳಲು ಹೋರಾಟ ಮಾಡುತ್ತಿವೆ ಮಂಡ್ಯದಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಈ ಬಾರಿ ಮುಗಿಸಬೇಕು ಅಂತ ಹೊರಟ್ಟಿದ್ದಾರೆ. ಆದರೆ  ಜೆಡಿಎಸ್ ಪಕ್ಷವನ್ನು ಮುಗಿಸುವುದು ಅವರ ಕೈಯಲ್ಲಿ ಇದೀಯಾ? ಜನ ತೀರ್ಮಾನ ಮಾಡಬೇಕು. ರಾಜ್ಯದ ಜನತೆ ಜೆಡಿಎಸ್ ಪಕ್ಷದೊಂದಿಗೆ ಇದ್ದಾರೆಂಬುದುಕ್ಕೆ ಪಂಚರತ್ನ ರಥಯಾತ್ರೆ ಸಾಕ್ಷಿ ಎಂದರು.

ನಿಖಿಲ್- ಸುಮಲತಾ ಬಗ್ಗೆ ಎಚ್ ಡಿಕೆ ವ್ಯಂಗ್ಯ

 ಏಯ್ ಬಿಟ್ಟಾಕಿ ಅವರದೂ ಅದೇ ಕಥೆ ಆಯ್ತು. ನಿಖಿಲ್‌ಗೂ ಅದಕ್ಕೂ ಸಂಬಂಧ ಇಲ್ಲ ವ್ಯಂಗ್ಯವಾಡಿದರು. ನಾವು ಎಲ್ಲಾ ಸಣ್ಣ ಜನ ಅವರ ಬಗ್ಗೆ ಚರ್ಚೆ ಮಾಡೋದು ಬೇಡವೆಂದರು. 

ಬಿ.ಎಲ್.ಸಂತೋಷ್ ಯಾರು? ನನಗೆ ಗೊತ್ತಿಲ್ಲ!

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ 40 ಸೀಟು ಗೆಲ್ಲಲಿದೆ ಎಂಬ ಬಿಎಲ್ ಸಂತೋಷ ವಿಚಾರ ಪ್ರಸ್ತಾಪಿಸಿದ ಎಚ್ಡಿ ಕುಮಾರಸ್ವಾಮಿಯವರು,  ಬಿ.ಎಲ್. ಸಂತೋಷ ಯಾರು? ಅವರು ಯಾರು ಅಂತಾ ನನಗಂತೂ ಗೊತ್ತಿಲ್ಲ. ಅವರು 40 ಸೀಟು ಗೆಲುತ್ತಾರೆ ಅಂದ್ರೆ ನಾವು ಯಾಕೆ ಇರಬೇಕು ಎಂದು ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಮೋದಿ ಕಾರ್ಯಕ್ರಮ ವಿಚಾರ: 

ಪ್ರಧಾನಿ ನರೇಂದ್ರ ಮೋದಿ ಅವರು ಯಾದಗಿರಿ ಮತ್ತು ಕಲಬುರಗಿ ‌ಬಂದ್ರು ಹೋದ್ರು. ಈ ಜಿಲ್ಲೆಗಳಿಗೆ ಏನು ಮಾಡಿದ್ದಾರೆ? ತೊಗರಿ ಬೆಳೆದ 25 ರೈತರು ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ. ಚಕಾರ ಎತ್ತಲಿಲ್ಲ. ನರೇಂದ್ರ ಮೋದಿ ಏನು ಮಾಡಿದ್ದಾರೆ ಅಂತಾ ಇವರು ಓಟು ಹಾಕುತ್ತಾರೆ ಎಂದು ಕಿಡಿಕಾರಿದರು.

ಕೈಗಾರಿಕೆಗಳನ್ನು ಉತ್ತರ ಭಾರತಕ್ಕೆ ತೆಗೆದುಕೊಂಡು ಹೋಗಿದ್ದಾರೆ ಈ ಭಾಗದ ಯುವಕರನ್ನು ಬೀದಿಪಾಲು ಮಾಡಿದ್ದಾರೆ ಯಾವ ಮುಖ ಇಟ್ಟುಕೊಂಡು ಓಟು ಕೇಳೋಕೆ ಬರ್ತಾರೆ? ಎಂದ ಎಚ್ಡಿಕೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಜನರ ಸಂಕಷ್ಟ ನಿವಾರಣೆಗೆ ಜೆಡಿಎಸ್‌ಗೆ ಅಧಿಕಾರ ಕೊಡಿ: ಎಚ್‌.ಡಿ.ಕುಮಾರಸ್ವಾಮಿ

ಕಲ್ಯಾಣ ಕರ್ನಾಟಕ ಹಳ್ಳಿಗಳು ಶಿಲಾಯುಗದಲ್ಲಿ ಇದ್ದಂತೆ ಇವೆ ಎಂದ ಎಚ್‌ಡಿ ಕುಮಾರಸ್ವಾಮಿ ಅವರು, ಈ ಬಾರಿ ನನಗೆ ಬಹುಮತ ನೀಡಿ, ನಾನು ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿ ಪಡಿಸುತ್ತೇನೆ. ನಾನು ಯಾವುದೇ ಪಕ್ಷದ ಜೊತೆಗೆ ಹೋಗುವುದಿಲ್ಲ ಎಂದರು. 

ಈ ಕಳ್ಳಕಾಕರ ಜೊತೆಗೆ ನಾನು ಯಾವುದೇ ಕಾರಣಕ್ಕೂ ಹೋಗಲ್ಲ. ಈಗಾಗಲೇ ನಾನು ಎರಡು ಕಡೆ ಮೋಸ ಹೋಗಿ ಅನುಭವಿಸಿ ಬಿಟ್ಟಿದ್ದೇನೆ. ಬಿಜೆಪಿ ಜೊತೆಗೂ ನೋಡಾಯ್ತು..ಕಾಂಗ್ರೆಸ್ ಜೊತೆಗೂ ನೋಡಾಯ್ತು. ನನಗೀಗ ಅವರ ಅವಶ್ಯಕತೆ ‌ಇಲ್ಲ ಎಂದರು.

Follow Us:
Download App:
  • android
  • ios