Asianet Suvarna News Asianet Suvarna News

ರಾಹುಲ್‌ ವಿಚಾರ ಗಮನಿಸುತ್ತಿದ್ದೇವೆ ಎಂದ ಜರ್ಮನಿ: ಆಂತರಿಕ ವಿಷಯದಲ್ಲಿ ತಲೆ ಹಾಕಬೇಡಿ ಎಂದ ಕೇಂದ್ರ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅನರ್ಹತೆ ಪ್ರಕರಣವನ್ನು ನಾವು ಗಮನಿಸುತ್ತಿದ್ದೇವೆ ಎಂದು ಜರ್ಮನಿ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಇದಕ್ಕೆ ಭಾರತ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್‌ ಪಕ್ಷ ಧನ್ಯವಾದ ಸಲ್ಲಿಸಿದೆ.

Germany says they are monitoring Rahuls issue Center says not to interfere in internal matters akb
Author
First Published Mar 31, 2023, 6:54 AM IST

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅನರ್ಹತೆ ಪ್ರಕರಣವನ್ನು ನಾವು ಗಮನಿಸುತ್ತಿದ್ದೇವೆ ಎಂದು ಜರ್ಮನಿ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಇದಕ್ಕೆ ಭಾರತ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್‌ ಪಕ್ಷ ಧನ್ಯವಾದ ಸಲ್ಲಿಸಿದೆ. ಜರ್ಮನಿಯ ಹೇಳಿಕೆ ಕಾಂಗ್ರೆಸ್‌-ಬಿಜೆಪಿ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ.

ರಾಹುಲ್‌ ಗಾಂಧಿ (Rahul Gandhi) ಪ್ರಕರಣದಲ್ಲಿ ಮೂಲಭೂತ ಪ್ರಜಾಸತ್ತಾತ್ಮಕ ತತ್ವಗಳು ಪಾಲನೆಯಾಗಬೇಕು. ನಾವು ಕೋರ್ಟ್ ತೀರ್ಪನ್ನು ಹಾಗೂ ನಂತರ ಸಂಸತ್‌ ಸ್ಥಾನದಿಂದ ರಾಹುಲ್‌ರನ್ನುವ ಜಾಗೊಳಿಸಿದ್ದನ್ನು ಗಮನಿಸಿದ್ದೇವೆ. ನಮ್ಮ ಪ್ರಕಾರ ರಾಹುಲ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ನಂತರವಷ್ಟೇ ಅವರ ವಿರುದ್ಧದ ತೀರ್ಪು ಸರಿಯಾಗಿದೆಯೇ ಹಾಗೂ ಅನರ್ಹತೆ ಊರ್ಜಿತವಾಗುತ್ತದೆಯೇ ಎಂಬುದು ತಿಳಿಯುತ್ತದೆ ಎಂದು ಜರ್ಮನ್‌ ವಿದೇಶಾಂಗ ಸಚಿವಾಲಯದ ವಕ್ತಾರೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ನಮ್ಮ ಆಂತರಿಕ ವಿಷಯದಲ್ಲಿ ತಲೆಹಾಕಬೇಡಿ-ಕೇಂದ್ರ:

ಜರ್ಮನಿಯ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು, ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ವಿದೇಶಿ ಶಕ್ತಿಗಳನ್ನು ಆಹ್ವಾನಿಸಿದ ರಾಹುಲ್‌ ಗಾಂಧಿಯವರಿಗೆ ಧನ್ಯವಾದಗಳು. ಆದರೆ, ಭಾರತದ ನ್ಯಾಯಾಂಗದ ಮೇಲೆ ವಿದೇಶಿ ಶಕ್ತಿಗಳು ಪ್ರಭಾವ ಬೀರಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ. ಭಾರತವೀಗ ತನ್ನ ಆಂತರಿಕ ವಿಷಯಗಳಲ್ಲಿ ವಿದೇಶಗಳ ಹಸ್ತಕ್ಷೇಪವನ್ನು ಸಹಿಸುವುದಿಲ್ಲ, ಏಕೆಂದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಎಂದು ಟ್ವೀಟ್‌ ಮಾಡಿದ್ದಾರೆ.
ಇದೇ ವೇಳೆ, ಹಲವಾರು ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರು ಜರ್ಮನಿಯ ಹಸ್ತಕ್ಷೇಪದ ವಿಚಾರದಲ್ಲಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

ರಾಹುಲ್‌ಗೊಂದು, ಇನ್ನೊಬ್ಬರಿಗೊಂದು ಕಾನೂನಿಲ್ಲ: ಸಿಎಂ ಬೊಮ್ಮಾಯಿ

ಜರ್ಮನಿಗೆ ಧನ್ಯವಾದಗಳು

ರಾಹುಲ್‌ ಗಾಂಧಿ ವಿರುದ್ಧ ಸೇಡಿನ ಕ್ರಮ ಕೈಗೊಳ್ಳುವ ಮೂಲಕ ಭಾರತದಲ್ಲಿ ಹೇಗೆ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗುತ್ತಿದೆ ಎಂಬುದನ್ನು ಗಮನಿಸಿರುವುದಕ್ಕೆ ಧನ್ಯವಾದಗಳು. ಬಿಜೆಪಿಯವರು ಅದಾನಿ ವಿವಾದದಿಂದ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ (Congress leader Digvijay Singh) ಜರ್ಮನಿಯ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿದ್ದಾರೆ. ದಿಗ್ವಿಜಯ್‌ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ.

ರಾಹುಲ್‌ ಗಾಂಧಿ ಅನರ್ಹತೆ ಅಸಂವಿಧಾನಿಕ ನಡೆ : ಹಿಂದುಳಿದ ವರ್ಗಗಳ ಜಾಗೃತ ವೇದಿಕೆ

Follow Us:
Download App:
  • android
  • ios