ಗಾಂಧಿ, ನೆಹರು ಮೀಸಲಾತಿ ವಿರೋಧಿಗಳು: ನಟ ಚೇತನ್‌ ಅಹಿಂಸಾ

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಮೀಸಲಾತಿ ವಿರೋಧಿಗಳಾಗಿದ್ದರು. ಮೀಸಲಾತಿ ಅನುಷ್ಠಾನದ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕೊಡುಗೆ ಶೂನ್ಯ ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಹೇಳಿದ್ದಾರೆ. 

Gandhi Nehru Opponents of Reservation Says Actor Chetan Ahimsa gvd

ಕಲಬುರಗಿ (ಜೂ.30): ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಮೀಸಲಾತಿ ವಿರೋಧಿಗಳಾಗಿದ್ದರು. ಮೀಸಲಾತಿ ಅನುಷ್ಠಾನದ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕೊಡುಗೆ ಶೂನ್ಯ ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಹೇಳಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ್ಯೋತಿಬಾ ಫುಲೆ, ಡಾ. ಅಂಬೇಡ್ಕರ್‌, ಪೆರಿಯಾರ್‌, ಕೃಷ್ಣರಾಜ್‌ ಒಡೆಯರ್‌ ಅಂತಹವರು ಮಾತ್ರ ಮೀಸಲಾತಿಗೆ ನ್ಯಾಯ ಒದಗಿಸಿದ್ದಾರೆ. 

ಈಚೆಗೆ ಬಿಜೆಪಿ ಆರ್ಥಿಕವಾಗಿ ಹಲವು ಸಂಗತಿಗಳನ್ನು ಪರಿಗಮಿಸುವ ಮೂಲಕ ಮೀಸಲಾತಿ ಹಂಚಿಕೆಗೆ ಮುಂದಾಗಿದೆ. ಇದೆಲ್ಲೂವ ಆ ಪಕ್ಷದ ಮೀಸಲಾತಿ ವಿರೋಧಿ ಮನೋಸ್ಥಿತಿ ಎತ್ತಿ ತೋರಿಸುತ್ತದೆ ಎಂದರು. ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆಯುವವರಾಗಿದ್ದರೆ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೆ ತರಲಿ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಿ, ಸರೋಜಿನಿ ಮಹಿಷಿ ವರದಿ ಜಾರಿಗೆ ತರಲಿ, ಎಸ್ಸಿ, ಎಸ್ಟಿ, ಓಬಿಸಿಗೂ ಒಳಮೀಸಲಾತಿ ಕೊಡಲಿ ಎಂದು ಆಗ್ರಹಿಸಿದರು. 

ಆ.11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಶುರು: ಸಂಸದ ಬಿ.ವೈ.ರಾ​ಘ​ವೇಂದ್ರ

ಸಮಾಜದಲ್ಲಿ ಪ್ರಗತಿಯಾಗಬೇಕಾದರೆ ಶಿಕ್ಷಣ, ಆರೋಗ್ಯ ರಾಷ್ಟ್ರೀಕರಣಗೊಳ್ಳಬೇಕು. ಭೂಸುಧಾರಣೆ ಕಾಯ್ದೆ ಮತ್ತೊಮ್ಮೆ ಜಾರಿಗೆ ತನ್ನಿರೆಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಅಕ್ಕಿ ಬದಲು ಹಣ ಕೊಡುವ ವಿಚಾರಕ್ಕೆ ನಟ ಚೇತನ್‌ ಅಸಮಾಧಾನ ಹೊರಹಾಕಿದರು. ಸಿದ್ರಾಮಯ್ಯ ಸರ್ಕಾರ ನುಡಿದಂತೆ ನಡೆಯಬೇಕು. ಸರಕಾರ ಅಕ್ಕಿ ಜೊತೆಗೆ ಹಣ ಮತ್ತು ರಾಗಿ, ಜೋಳ ಸಹ ಕೊಡಬೇಕು. ಅಕ್ಕಿ ವಿಚಾರದಲ್ಲಿ ಸಿದ್ರಾಮಯ್ಯ ಸರ್ಕಾರ ಬೇರೆ ರಾಜ್ಯಕ್ಕೆ ಮೊರೆ ಹೋಗ್ತಿದೆ. ನಮ್ಮ ರಾಜ್ಯದ ರೈತರನ್ನು ಬೆಳೆಸುವ ಕೆಲಸವಾಗಬೇಕಿದೆ ಎಂದರು. 

ನೀರಿನ ಸಮಸ್ಯೆ ತಲೆದೂರದಂತೆ ನಿಗಾವಹಿಸಿ: ಶಾಸಕ ಲಕ್ಷ್ಮಣ ಸವದಿ ಸೂಚನೆ

ಸಚಿವ ಕೆ.ಜೆ ಜಾರ್ಜ್‌ ಬಡವರಿಗೆ ದುಡ್ಡು ಬೇಡ ಅಂತಾರೆ, ಸರ್ಕಾರ ದುಡ್ಡು, ರಾಗಿ, ಜೋಳ ಎಲ್ಲವನ್ನೂ ಕೊಡಬೇಕು. ಸಚಿವ ಕೆ.ಜೆ ಜಾರ್ಜ್‌ ಒಬ್ಬ ಶ್ರೀಮಂತ ವ್ಯಕ್ತಿ ಈ ರೀತಿಯ ಮಾತಾಡೋದು ಅವರಿಗೆ ಶೋಭೆ ತರೋದಿಲ್ಲ ಎಂದರು. ಮೂರು ಕೃಷಿ ಕಾಯ್ದೆ ರದ್ದುಪಡಿಸುವ ಸರ್ಕಾರದ ತೀರ್ಮಾನ ಸರಿಯಿದೆ. ಯಾರು ಬೇಕಾದರೂ ಭೂಮಿ ಖರೀದಿಸಬಹುದು ಎನ್ನುವ ಯಡಿಯೂರಪ್ಪ ಸರ್ಕಾರದ ಕಾಯ್ದೆಯನ್ನೂ ರದ್ದುಪಡಿಸಬೇಕು. ಭೂ ಸುಧಾರಣಾ ಕಾಯ್ದೆ ಸೇರಿದಂತೆ ಇನ್ನೂ ಹಲವಾರು ಕಾಯ್ದೆ ರದ್ದುಪಡಿಸಬೇಕು ಎಂದು ಚೇತನ್‌ ಆಗ್ರಹಿಸಿದರು.

Latest Videos
Follow Us:
Download App:
  • android
  • ios