ಕನ್ನಡ ನಾಡಿನಲ್ಲಿ ರಾಜಕಾರಣಿಗಳ ಈ ಭಾಷಣ ಸರಿ. ಆದ್ರೆ ಹಿಂದಿ ನಾಡಿನಲ್ಲಿ ಕನ್ನಡದಲ್ಲಿ ನಮಸ್ಕಾರ, ಚನ್ನಾಗಿದ್ದೀರಾ ಅಂಥ ಸುದ್ದಿಗೋಷ್ಠಿ ಶುರುವಾದ್ರೆ ಪತ್ರಕರ್ತರು ಕೂಡ ಉಬ್ಬೇರಿಸಿನೋಡುವಂತೆ ಆಯ್ತು. ಇಷ್ಟಕ್ಕೂ ಇಂಥ ನಮಸ್ಕಾರಕ್ಕೆ ಸಾಕ್ಷಿಯಾಗಿದ್ದು ದೆಹಲಿ ರೈಲು ಭವನ.
ಕನ್ನಡ ನೆಲದಲ್ಲಿ ಹಿಂದಿಯೇರಿಕೆ ಕುರಿತು ಪರ-ವಿರೋಧ ಮಾತುಗಳು ಚರ್ಚೆಯಾಗುತ್ತಲೇ ಇವೆ. ಅದರೊಟ್ಟಿ ಈ ಬಗ್ಗೆ ರಾಜಕೀಯ ನಾಯಕರ ಮಾತುಗಳು, ಇದೇ ಹೆಸರಲ್ಲಿ ರಾಷ್ಟ್ರೀಯತೆಯನ್ನು ಗುರಾಣಿಯಾಗಿ ಬಳಸಿಕೊಂಡಿದ್ದು ಎಲ್ಲವೂ ಕನ್ನಡಿಗರು ನೋಡಿ ಆಯ್ತು. ಆದ್ರೆ ಈಗ ಎಲ್ಲಿ ಹೋದ್ರು ಕನ್ನಡದಲ್ಲಿ 'ನಮಸ್ಕಾರಗಳು' ಅನ್ನೋ ಪದಗಳು ಕೇಳಿ ಬರುತ್ತಿವೆ. ಇನ್ನು ಕನ್ನಡ ನೆಲದಲ್ಲಿ ಚುನಾವಣೆ ಕಾವು ಪಡೆದುಕೊಳ್ಳುತ್ತಿರುವ ಹೊತ್ತಲ್ಲಿ ದೆಹಲಿ ಸೇರಿ ಉತ್ತರ ಇಂಡಿಯಾದಿಂದ ಬರುವ ಯಾವುದೇ ನಾಯಕರು ಎಲ್ಲರಿಗೂ ನಮಸ್ಕಾರಗಳು ಎನ್ನುವ ಪದಗಳಿಂದಲೇ ಭಾಷಣ ಶುರು ಮಾಡುತ್ತಾರೆ.. ಅದು ಪ್ರಧಾನಿ ಮೋದಿ ಇರಲಿ, ಅಮಿತ್ ಶಾ ಅವರು ಇರಲಿ ಅವರ ಭಾಷಣದ ಆರಂಭ ಮತ್ತು ಅಂತ್ಯದ ಪದಗಳು ಕನ್ನಡದ ಪದಗಳಾಗಿರುತ್ತವೆ.
ಕನ್ನಡ ನಾಡಿನಲ್ಲಿ ರಾಜಕಾರಣಿಗಳ ಈ ಭಾಷಣ ಸರಿ. ಆದ್ರೆ ಹಿಂದಿ ನಾಡಿನಲ್ಲಿ ಕನ್ನಡದಲ್ಲಿ ನಮಸ್ಕಾರ, ಚನ್ನಾಗಿದ್ದೀರಾ ಅಂಥ ಸುದ್ದಿಗೋಷ್ಠಿ ಶುರುವಾದ್ರೆ ಪತ್ರಕರ್ತರು ಕೂಡ ಹುಬ್ಬೇರಿಸಿನೋಡುವಂತೆ ಆಯ್ತು. ಇಷ್ಟಕ್ಕೂ ಇಂಥ ನಮಸ್ಕಾರಕ್ಕೆ ಸಾಕ್ಷಿಯಾಗಿದ್ದು ದೆಹಲಿ ರೈಲು ಭವನ. ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಬಜೆಟ್ ನಲ್ಲಿ ಕರ್ನಾಟಕದ ರೈಲ್ವೆ ವಿಭಾಗಕ್ಕೆ ದೊರತೆ ಅನುದಾನ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆದಿದ್ದರು. ಗೋಷ್ಠಿ ಆರಂಭಕ್ಕೆ ನಮಸ್ಕಾರ, ಚನ್ನಾಗಿದ್ದೀರಾ ಅಂತಲೇ ಶುರುಮಾಡಿದರು. ಹತ್ತು ನಿಮಿಷಗಳಲ್ಲಿ ಮುಗಿದ ಸುದ್ದಿಗೋಷ್ಠಿಯಲ್ಲಿ ಐದಾರು ಬಾರಿ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ರು. ಬಳಿಕ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ಅನುದಾನದ ಬಗ್ಗೆ ಮಾಹಿತಿ ಹಂಚಿಕೊಂಡು, ಎಲ್ಲರಿಗೂ ವಂದನೆಗಳು ಅಂತ ಕನ್ನಡದಲ್ಲಿ ಹೇಳಿ ಮುಗಿಸಿದರು. ಹಿಂದಿ ರಾಜಕಾರಣಿಗಳ ಕನ್ನಡ ಪ್ರೇಮದ ಹಿಂದಿನ ಮರ್ಮದ ಬಗ್ಗೆ ಇನ್ನೂ ತಿಳಿಯಬೇಕಿದೆ?
ಸಮಾಜವಾದಿಯ ನೇತಾಜಿ..!: ತಮ್ಮ ಟ್ವಿಟರ್ ಪುಟದಲ್ಲಿ ಏನಾದರೂ ಪೋಸ್ಟ್ ಆದಾಗ ಸಮಾಜವಾದಿ ಪಕ್ಷದ ಹಿರಿಯ ನಾಯಕರೆಲ್ಲಾ ತಣ್ಣನೆಯ ಬೆವರಿ ಹರಿಸಲು ಆರಂಭವಾಗುತ್ತದೆ. ಆದರೆ, ಅದಕ್ಕೀಗ ಕೊಂಚ ವಿರಾಮ ಸಿಕ್ಕಿದೆ. ಸಮಾಜವಾದಿ ನಾಯಕರೊಬ್ಬರು ಬ್ರಾಹ್ಮಣರು ಹಾಗೂ ಪಂಡಿತರ ಮೇಲೆ ರಾಜಕೀವ ವಿಷ ಉಗುಳಿದ್ದಕ್ಕಾಗಿ ಜೈಲು ಪಾಲಾದ ದಿನಗಳ ಸಮಯದಲ್ಲಿ ಎಸ್‌ಪಿ ನಾಯಕತ್ವವು ಸ್ವಲ್ಪ ಚಿಂತಿತವಾಗಿತ್ತು. ಆದರೆ, ಬಿಡುಗಡೆಯಾದ ಒಂದು ದಿನದೊಳಗೆ ಅವರು ಅಬ್ಬರದಿಂದ ಹಿಂತಿರುಗಿದ್ದಾರೆ. ಅಧಿಕೃತ ಹ್ಯಾಂಡಲ್ ಅನ್ನು ಸಾಧನವಾಗಿ ಬಳಸುವುದನ್ನು ತಡೆಯುವ ದೃಷ್ಟಿಯಿಂದ ಎಸ್ಪಿ ಅವರನ್ನು ತನ್ನ ಮಾಧ್ಯಮ ಕೋಶದಿಂದ ತೆಗೆದುಹಾಕಿದರೂ, ನೇತಾಜಿ ಮೇಲ್ಜಾತಿಗಳ ಮೇಲೆ ಅಸ್ಪಷ್ಟತೆಯನ್ನು ಬಿತ್ತರಿಸುವುದನ್ನು ಮುಂದುವರಿಸಲು ತಮ್ಮ ವೈಯಕ್ತಿಕ ಟ್ವಿಟರ್ ಹ್ಯಾಂಡಲ್‌ಅನ್ನು ಆಶ್ರಯಿಸಿದ್ದಾರೆ. ಬಹುಶಃ ಅವರ ರೆಕ್ಕೆಗಳನ್ನು ಕತ್ತರಿಸುವ ಸಮಯ ಇದಾಗಿರಬಹುದು ಎನ್ನುವ ಚರ್ಚೆ ಕೂಡ ಆರಂಭವಾಗಿದೆ.
ಅಖಿಲೇಶ್ ಯಾದವ್ ಗಿಮಿಕ್: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಮ್ಮ ರಾಜಕೀಯ ಗ್ಯಾಲರಿಯನ್ನು ಸಂತೋಷಪಡಿಸಲು ಮಾಡಿದ ಗಿಮಿಕ್‌ಗೆ ಬೆಹನ್‌ಜೀ ಮಾಯಾವತಿ ಅನಿರೀಕ್ಷಿತ ಗೂಗ್ಲಿಯನ್ನು ಎಸೆದಿದ್ದು ವಿಶೇಷವಾಗಿತ್ತು. ಅಖಿಲೇಶ್ ಇತ್ತೀಚೆಗೆ 'ನಾನು ಶೂದ್ರ' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು. ರಾಮಚರಿತಮಾನಸ್‌ನ ಉಲ್ಲೇಖಗಳ ಮೇಲೆ ಎದುರಾಗಿರುವ ವಿವಾದದ ಬೆನ್ನಲ್ಲಿಯೇ ಅಖಿಲೇಶ್ ಯಾದವ್ ಈ ಅಭಿಯಾನ ಆರಂಭಿಸಿದ್ದಾರೆ. ಆದರೆ ಅಖಿಲೇಶ್ `ಪೋಸ್ಟರ್ ಬಾಯ್' ಆಗಿ ಜನಮನದಲ್ಲಿ ಉಳಿಯುವುದು ಬಹಳ ಅಲ್ಪ ಸಮಯವಾಗಿತ್ತು.
ಬಾಬಾ ಸಾಹೇಬ್ ಮತ್ತು ಸಂವಿಧಾನವನ್ನು ಉಲ್ಲೇಖಿಸುವ ಮೂಲಕ ಬೆಹೆನ್‌ಜಿ ಇದನ್ನು ಎದುರಿಸಿದರು. ಚಾತುರ್ವರ್ಣದ ದಿನಗಳು ಮುಗಿದಿವೆ ಮತ್ತು ಸಂವಿಧಾನವು ಎಲ್ಲರಿಗೂ ಸಮಕಾಲೀನ ವರ್ಗೀಕರಣವನ್ನು ನೀಡಿದೆ ಎಂದು ಅವರು ಅಖಿಲೇಶ್‌ಗೆ ನೆನಪಿಸಿದರು. ಇದರಿಂದ ಸ್ಟಂಪ್ ಔಟ್ ಆದಂತಾದ ಅಖಿಲೇಶ್ ಯಾದವ್ ತಕ್ಷಣವೇ ಅವರನ್ನು ಬಿಜಿಪಿ ಪ್ರೇಮಿ ಎನ್ನುವ ಮೂಲಕ ಈ ಹಿಂದಿನಿಂದಲೂ ಇದ್ದ ತಮ್ಮ ರಕ್ಷಣಾ ತಂತ್ರವನ್ನು ಅನುಸರಿಸಿದರು. ಆದರೆ, ಬಿಜೆಪಿಗೆ ಮಾತ್ರ ಮಾಯಾವತಿ ಬಿಜೆಪಿ ಪ್ರೇಮಿ ಎನ್ನುವುದು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.
500 ರೂಪಾಯಿ ದುಡ್ಡು, ಪ್ಲೇಟ್ ಉಪ್ಪಿಟ್ಟಿನ ಕಥೆ..!: ಕನ್ನಡ ನೆಲದಲ್ಲಿ ಚುನಾವಣೆಗೆ ಅಧಿಕೃತ ವಾಗಿ ಡಂಗೂರ ಸಾರಲು ದಿನಗಣನೆ ಮಾತ್ರ ಬಾಕಿ ಉಳಿದಿದೆ. ಇಡೀ ಕರುನಾಡಿನಲ್ಲಿ ಪಕ್ಷಗಳ ಎಲೆಕ್ಷನ್ ಯಾತ್ರೆಗಳ ಸಂಭ್ರಮ. ಉದ್ದುದ್ದ ಭಾಷಣ, ಮತದಾರರ ಮನ ಗೆಲ್ಲಲೂ ಆಶ್ವಾಸನೆಗಳು, ರಾಜಕೀಯಕವಾಗಿ ಬೈದಾಟಗಳು ಹೀಗೆ ನಾನಾ ರೀತಿಯಲ್ಲಿ ಪಕ್ಷದ ಪ್ರಮುಖ ನಾಯಕರು ಮತದಾರ ಪ್ರಭುವಿಗೆ ಅರ್ಪಿಸುತ್ತಿದ್ದಾರೆ. ಇದರ ರಂಗು, ಕಾವು ಇನ್ನೂ ಏರಲಿದೆ. ಇಂಥ ಎಲೆಕ್ಷನ್ ಗೆ ರಾಜಕೀಯ ನಾಯಕರ ನವರಂಗಿ ಆಟುಗಳು ಕಡಿಮೆ ಇರೋದಿಲ್ಲ ಬಿಡಿ. ಗಿಫ್ಟ್ ಐಟಂಗಳು ಈಗಾಗಲೇ ಮತದಾರರ ಮನೆ ಹಾಗು ಮನ ಎರಡೂ ಮುಟ್ಟಿವೆ. ಇಷ್ಟರ ಜೊತೆಗೆ ಪಾದಯಾತ್ರೆ, ರಥ ಯಾತ್ರೆಗಳು ಅಂಥ ತಮ್ಮತಮ್ಮ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ.
ಇಂಥದ್ದೇ ರಥಯಾತ್ರೆಯ ಪ್ಲೇಟ್ ಉಪ್ಪಿಟ್ಟಿನ ಕಥೆ ಬಹಳ ತಮಾಷೆ ಯಾಗಿದೆ. ಉತ್ತರ ಕರ್ನಾಟಕ ದಲ್ಲಿ ಇತ್ತೀಚೆಗೆ ಬೈ ಎಲೆಕ್ಷನ್ ನಡೆಯಿತು. ಅದಕ್ಕೆ ಅವಿಭಜಿತ ಕೋಲಾರ ಜಿಲ್ಲೆಯ ಸಚಿವರಿಬ್ಬರನ್ನು ಪ್ರಚಾರಕ್ಕೆ ನಿಯೋಜಿಸಿದ್ದರಂತೆ. ಬೆಂಗಳೂರು, ಕೋಲಾರ ಭಾಗದಲ್ಲಿ ದುಡ್ಡು, ಉಪ್ಪಿಟ್ಟು ಹಂಚಿ ಜನ ಓಗೂಡಿಸಿದರು. ರೋಡ್ ಶೋ ನಡೆಸಿದರು. ಅಲ್ಲಿದ್ದ ಕಮಲ ನಾಯಕರಲ್ಲಿ ಬೆರಗು ಮೂಡಿಸಿದರು. ಆದ್ರೆ ಅದು ಬರೀ 20 ನಿಮಿಷ ಅನ್ನೋ ಸತ್ಯ ಈ ದುಡ್ಡು ಹಂಚಿ ಗೆಲ್ಲೋ ಮಂತ್ರಿಗಳಿಗೆ ಗೊತ್ತಿಲ್ಲ. ಅದರೆ ಉತ್ತರ ಕರ್ನಾಟಕ ದಲ್ಲಿ ಶಾಸಕರಾಗಬೇಕು, ಸಂಸದರು ಆಗಬೇಕು ಅನ್ನೋರು ರೋಡ್ ಶೋ ಮಾಡಿದ್ರೆ ಹಳ್ಖಿಕಟ್ಟೆಯ ಮೇಲೆ ಕುಂತವರಿಗೆ ಆಹಾರ ಆಗೋದೆ. ಅದು ಈ ಮಗನಿಗೆ ಈ ಸಾರಿ ಪಾಠ ಕಲ್ಸಬೇಕು ಕಣ್ಲಾ ಅನ್ನೋ ತನಕ ಹೋಗಿ ಸೋತರು ಆಶ್ಚರ್ಯ ಇಲ್ಲ. ಹೆಚ್ಚಾಗಿ ಉತ್ತರ ಕರ್ನಾಟಕ ಅಭ್ಯರ್ಥಿಗಳು ರೋಡ್ ಶೋ ಮಾಡಲ್ವಂತೆ. ಇನ್ನೂ ಈ ಉಪ್ಪಿಟ್ಟು, 500 ರೂಪಾಯಿ ಹಂಚಿದ ಮಂತ್ರಿಗಳಿಗೂ ಶಾಕ್ ಎನ್ನುವಂತೆ ಬರೀ 20 ನಿಮಿಷದಲ್ಲಿ ಹಿಂದೆ ಮುಂದೆ ಬಹುಪರಾಕ್ ಹೇಳುವವರು ಖಾಲಿ.. ಮಂತ್ರಿದ್ವಯರ ಜೇಬು ಖಾಲಿ.. ಅದಕ್ಕೆ ಹೇಳೋದು ದುಡ್ಡೇ ಎಲ್ಲಾ ಅಲ್ಲ ಅಂತ.
ಸಿಂಹ ಪಾಲು: ಇವರ ತಂದೆಯ ಘರ್ಜನೆ ಭರತ್‌ಪುರವನ್ನು ಮಾತ್ರವಲ್ಲ, ಮುಖ್ಯಮಂತ್ರಿ ಕಚೇರಿಯನ್ನು ಕೂಡ ಅಲುಗಾಡಿಸಬಹುದು. ಆದರೆ ರಾಜಸ್ಥಾನದ ಈ ಮಂತ್ರಿಯ ಮಗ ತಮ್ಮನ್ನು ತಾವಯ ರಾಜಕೀಯ ಕಾಡಿನ 'ರಾಜ' ಎಂದು ಪರಿಗಣಿಸುವುದಿಲ್ಲ. ಜೂನಿಯರ್ ಮತ್ತು ಅವರ ಪತ್ನಿ ಯಾವಾಗಲೂ ಯಂಗ್ ಟರ್ಕ್‌ಗೆ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಿದ್ದಾರೆ, ಅವರು ಮುಂಬರುವ ಚುನಾವಣೆಯಲ್ಲಿ ಅವರು ಪೈಲಟ್ ಸ್ಥಾನಕ್ಕೆ ಬರಲು ಆಶಿಸುತ್ತಿದ್ದಾರೆ. ಅವರ ತಂದೆ ಗೆಹ್ಲೋಟ್ ಕ್ಯಾಬಿನೆಟ್‌ನಲ್ಲಿ ಸಚಿವರಾಗಿದ್ದಾರೆ ಎಂಬ ಅಂಶವು ಗುಜ್ಜರ್ ನಾಯಕನೊಂದಿಗೆ ಇವರ ಸಾಂಗತ್ಯವನ್ನು ತಡೆಯಲು ಸಾಧ್ಯವಾಗಲಿಲ್ಲ. ಕೊನೆಯದಾಗಿ ಅವರ ಇತ್ತೀಚಿನ ಟ್ವೀಟ್‌ನೆಂದರೆ, ಮಗ ತನ್ನ ತಂದೆ ಮತ್ತು ಸಿಎಂಗೆ ವ್ಯಕ್ತಿತ್ವವಿಲ್ಲದ ನಾಯಕನ ನೇರ ಉಲ್ಲೇಖದಲ್ಲಿ ``ಕಾಡಿನಲ್ಲಿ ಒಂದೇ ಸಿಂಹವಿದೆ ಮತ್ತು ಅದು ಯಾರೆಂದು ಎಲ್ಲರಿಗೂ ತಿಳಿದಿದೆ" ಎಂದು ಬರೆದುಕೊಂಡಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಹೇಳುವ ಪ್ರಕಾರ, ತಂದೆಯ ಶಕ್ತಿಯ ವಿರುದ್ಧ ಮಗನ ಅಡೆತಡೆಯಿಲ್ಲದ ಸ್ಪಷ್ಟ ನಿಲುವನ್ನು ಉಲ್ಲೇಖಿಸುವ ವೇಳೆ, 'ದೀಯಾ ತಲೇ ಅಂಧೇರಾ' (ದೀಪದ ಕೆಳಗೆ ಕತ್ತಲೆ ಇದೆ) ಎನ್ನುವ ಮಾತನ್ನು ನೆನಪಿಸಿಕೊಳ್ಳುತ್ತಾರೆ.
ಹಳಿತಪ್ಪಿದ ಟೂರ್: ಬೆಂಗಳೂರು ಮತ್ತು ಊಟಿ ಪ್ರವಾಸದ ಮೂಲಕ ತನ್ನ ಅಸಮಧಾನ ಹೊಂದಿದ್ದ ಕೌನ್ಸಿಲರ್‌ಗಳನ್ನು ಸಮಾಧಾನಪಡಿಸುವ ರಾಜಸ್ಥಾನದ ಪ್ರಬಲ ಮಹಿಳಾ ಮೇಯರ್ ಅವರ ಯೋಜನೆ ಕೊನೆಯ ಕ್ಷಣದಲ್ಲಿ ವಿಫಲವಾಗಿದೆ. ಇಬ್ಬರು ಮಂತ್ರಿಗಳಿಗೆ ಆಪ್ತರಾಗಿರುವ ಈ ಕಾಂಗ್ರೆಸ್ ಮೇಯರ್, ದುರಹಂಕಾರ ಮತ್ತು ಧೋರಣೆಯನ್ನು ತೋರ್ಪಡಿಸಿದ್ದಕ್ಕಾಗಿ ತಮ್ಮ ಸ್ವಂತ ಪಕ್ಷದ ಕೌನ್ಸಿಲರ್‌ಗಳಿಂದಲೇ ತರಾಟೆಗೆ ಒಳಗಾಗಿದ್ದರು. 100 ಕ್ಕೂ ಹೆಚ್ಚು ವಾರ್ಡ್‌ಗಳನ್ನು ಹೊಂದಿರುವ ನಿಗಮವು ರಾಜಸ್ಥಾನದ ಅತಿದೊಡ್ಡ ನಾಗರಿಕ ಸಂಸ್ಥೆಯಾಗಿದೆ. ಅನೇಕ ಕಾಂಗ್ರೆಸ್ ಕೌನ್ಸಿಲರ್‌ಗಳು ರಿಸ್ಕ್ ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ, ಮೇಡಮ್ ಅಪಾಯವನ್ನು ಗ್ರಹಿಸಿದರು. ಇದೇ ಕಾರಣಕ್ಕಾಗಿ ಅವರು ಬೆಂಗಳೂರು ಮತ್ತು ಊಟಿ ಪ್ರವಾಸವನ್ನು ಮಾಡುವ ಯೋಜನೆ ಮಾಡಿದ್ದರು. ಆದರೆ, ಮುಖ್ಯಮಂತ್ರಿ ಅಶೋಕ್ ಗ್ಲೆಹೊಟ್ ಅಂತಿಮ ಕ್ಷಣದಲ್ಲಿ ಇದಕ್ಕೆ ನಿರಾಕರಿಸಿದ್ದರಿಂದ ಪ್ಲ್ಯಾನ್ ವಿಫಲವಾಯಿತು. ಪ್ರಸ್ತಾಪಿತ `ಟೂರ್ ಡಿ ಊಟಿ' ಯೋಜನೆ ಪ್ರತಿಪಕ್ಷಗಳಿಗೆ ಸೋರಿಕೆಯಾಗುವ ಹಿಂದೆ ಕಾಂಗ್ರೆಸ್ ಕೌನ್ಸಿಲರ್‌ಗಳೊಬ್ಬರ ಕೈವಾಡವಿದೆ ಎಂದು ಹೇಳಲಾಗಿದೆ, ಇದು ಅಂತಿಮವಾಗಿ ಸಿಎಂ ಕೋಪಕ್ಕೆ ಕಾರಣವಾಗಿದ್ದರಿಂದ ಗದ್ದಲದಲ್ಲಿ ಈ ವಿಚಾರ ಕೊನೆಗೊಂಡಿದೆ.
India Gate ಸೊಸೆಯಂದಿರ ಪೈಪೋಟಿಗೆ ದೇವೇಗೌಡರು ಸುಸ್ತು, ಕಾಂಗ್ರೆಸ್‌ಗೆ ತಲೆನೋವಾದ ಗೆಹ್ಲೋಟ್ ಮಾತು!
ರೆಸಾರ್ಟ್ ಕ್ರಾಂತಿ: ನಾಯಕ ಕುದುರೆ ವ್ಯಾಪಾರವನ್ನು ತಡೆಯುವ ರಾಜಕೀಯ ಪಕ್ಷಗಳ ಪ್ರಯತ್ನಗಳಿಗೆ ರೆಸಾರ್ಟ್ ಪ್ರವಾಸೋದ್ಯಮವು ಉತ್ತಮ ಆಯ್ಕೆ. ಆದರೆ ಪ್ರವಾಸಿ ರೆಸಾರ್ಟ್‌ಗಳ ವಿಚಾರದಲ್ಲಿ ಕೇರಳ ಸಿಪಿಎಂ ವಿಭಿನ್ನ ಸವಾಲನ್ನು ಎದುರಿಸುತ್ತಿದೆ. ಸಿಪಿಎಂನ ಯುವ ನಾಯಕಿ ಚಿಂತಾ ಜೆರೋಮ್ ಮತ್ತು ಕುಟುಂಬವು ಪ್ರವಾಸಿ ರೆಸಾರ್ಟ್‌ನಲ್ಲಿ ವರ್ಷಗಳ ಕಾಲ ತಂಗಿದ್ದಾರೆ ಎಂದು ಬಹಿರಂಗಪಡಿಸಿದ ನಂತರ ಇತ್ತೀಚೆಗೆ ಕೇರಳ ಸಿಪಿಎಂ ಪಕ್ಷ ವಿವಾದಕ್ಕೆ ಸಿಲುಕಿದೆ. ಚಿಂತಾ ಅವರು ರಾಜ್ಯ ಸಮಿತಿಯ ಕಿರಿಯ ಸದಸ್ಯರಲ್ಲಿ ಒಬ್ಬರು ಮತ್ತು ರಾಜ್ಯ ಯುವ ಆಯೋಗದ ಅಧ್ಯಕ್ಷರು. ತನ್ನ ಪಿಎಚ್‌ಡಿ ಪ್ರಬಂಧದಲ್ಲಿನ ಮುಜುಗರದ ತಪ್ಪುಗಳಿಗಾಗಿ ಮತ್ತು ಕೇರಳ ಆರ್ಥಿಕ ಬಿಕ್ಕಟ್ಟಿನಲ್ಲಿ ತತ್ತರಿಸುತ್ತಿರುವ ಸಮಯದಲ್ಲಿ ಭಾರಿ ಸಂಬಳದ ಬಾಕಿಗಾಗಿ ಬೇಡಿಕೆಯಿಟ್ಟಿದ್ದಕ್ಕಾಗಿ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದರು. ಚಿಂತಾ ಉಚಿತವಾಗಿ ಸ್ನೇಹಿತೆಯ ರೆಸಾರ್ಟ್‌ನಲ್ಲಿ ತಂಗಿದ್ದಾಳೆ ಎಂದು ಆರೋಪಿಸಲಾಗಿತ್ತಾದರೂ, ಆಕೆ ಅದನ್ನೆಲ್ಲ ನಿರಾಕರಿಸಿ ಕಾಟೇಜ್‌ಗೆ ಮಾಸಿಕ 20,000 ರೂ. ಬಾಡಿಗೆ ನೀಡಿರುವುದಾಗಿ ಹೇಳಿದ್ದಾರೆ.
From The India gate; ಚುನಾವಣೆ ಬೆನ್ನಲ್ಲೇ ಎಲ್ಲೆಲ್ಲೂ ಕನ್ನಡ ಕಾವು, ಬಿಜೆಪಿಗೆ ಮದುವೆ ತಂದಿಟ್ಟ ತಲೆನೋವು!
ಈ ನಡುವೆ ಸಿಪಿಎಂ ಮುಖದ ಮೇಲೆ ಮತ್ತೊಂದು ರೆಸಾರ್ಟ್ ವಿವಾದ ಬಿದ್ದಿದೆ. ಪಕ್ಷದ ನಾಯಕತ್ವದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಕಣ್ಣೂರಿನ ಪ್ರಬಲ ಇ ಪಿ ಜಯರಾಜನ್ ಮತ್ತು ಪಿ ಜಯರಾಜನ್ ನಡುವಿನ ಮಾತಿನ ಸಮರ ಇನ್ನೂ ಮುಂದುವರೆದಿದೆ. ಕೆಲ ದಿನಗಳ ಹಿಂದೆ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಪಿ ಜಯರಾಜನ್ ಅವರು ಕಣ್ಣೂರಿನ ಐಷಾರಾಮಿ ಆಯುರ್ವೇದ ರೆಸಾರ್ಟ್‌ನಲ್ಲಿ ಇಪಿ ಭಾರಿ ಹೂಡಿಕೆ ಮತ್ತು ಪಟ್ಟಭದ್ರ ಹಿತಾಸಕ್ತಿ ಹೊಂದಿದ್ದಾರೆ ಎಂಬ ಆರೋಪವನ್ನು ಪುನರುಚ್ಚರಿಸಿದರು. ಇಪಿ ಅವರ ಮಗ ಮತ್ತು ಪತ್ನಿ ಮಂಡಳಿಯಲ್ಲಿ ನಿರ್ದೇಶಕರಾಗಿದ್ದಾರೆ. ಈ ಆರೋಪವನ್ನು ಪರಿಶೀಲಿಸಲು ಸಿಪಿಎಂ ತನಿಖಾ ಸಮಿತಿಯನ್ನು ರಚಿಸಿದೆ ಎಂದು ವದಂತಿಗಳಿವೆಯಾದರೂ, ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ ವಿ ಗೋವಿಂದನ್ ಅದನ್ನು ನಿರಾಕರಿಸಿದರು ಮತ್ತು ಇದೆಲ್ಲವೂ ಮಾಧ್ಯಮದ ಕಾಲ್ಪನಿಕ ಕಥೆ ಎಂದು ಆರೋಪಿಸಿದರು.
