Asianet Suvarna News Asianet Suvarna News

ಸ್ವಾತಂತ್ರ್ಯ ಉಳಿಸಿದ್ದು ಕಾಂಗ್ರೆಸ್‌: ವೀರಪ್ಪ ಮೊಯ್ಲಿ

ಇಂದಿರಾ ಗಾಂಧಿ, ಮನಮೋಹನ್‌ ಸಿಂಗ್‌ ಮುಂತಾದ ಕಾಂಗ್ರೆಸ್‌ ಪ್ರಧಾನ ಮಂತ್ರಿಗಳ ಆಡಳಿತ ಅವಧಿಯಲ್ಲಿ ಯಾವುದೇ ಅಕ್ಕ ಪಕ್ಕ ದೇಶಗಳ ದಾಳಿ ನಡೆಯುತ್ತಿರಲಿಲ್ಲ, ಆದರೆ, ಇದೀಗ ಪಾಕಿಸ್ತಾನ ಹಾಗೂ ಚೀನಾ ದೇಶಗಳು ನಿರಂತರ ದಾಳಿಯಿಂದ ಭಾರತ ಅಭದ್ರತೆಯಿಂದ ಕೂಡಿದೆ ಎಂದ ವೀರಪ್ಪ ಮೊಯ್ಲಿ 

Former Union Minister Veerappa Moily Talks Over Congress grg
Author
First Published Dec 21, 2022, 3:30 AM IST

ವಿಜಯಪುರ(ಡಿ.21):  ಇಂದಿರಾ ಗಾಂಧಿ, ಮನಮೋಹನ್‌ ಸಿಂಗ್‌ ಮುಂತಾದ ಕಾಂಗ್ರೆಸ್‌ ಪ್ರಧಾನ ಮಂತ್ರಿಗಳ ಆಡಳಿತ ಅವಧಿಯಲ್ಲಿ ಯಾವುದೇ ಅಕ್ಕ ಪಕ್ಕ ದೇಶಗಳ ದಾಳಿ ನಡೆಯುತ್ತಿರಲಿಲ್ಲ, ಆದರೆ, ಇದೀಗ ಪಾಕಿಸ್ತಾನ ಹಾಗೂ ಚೀನಾ ದೇಶಗಳು ನಿರಂತರ ದಾಳಿಯಿಂದ ಭಾರತ ಅಭದ್ರತೆಯಿಂದ ಕೂಡಿದೆ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳಿದರು.ಹಳಿಯೂರು ವಸುಂದರಿ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಎತ್ತಿನಹೊಳೆ ಯೋಜನೆ ರೂಪಿಸಿದ್ದು ಕೇವಲ ಕೊನೆಯ ಹಂತದ 3000 ಕೋಟಿ ರು. ವೆಚ್ಚ ಮಾಡಿದ್ದರೆ ಯೋಜನೆ ಸಂಪೂರ್ಣ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಭಾಗಗಳಿಗೆ ಶುದ್ಧವಾದ, ಉತ್ತಮ ಕುಡಿವ ನೀರು ದೊರಕುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಮೂರು ಪೈಸೆ ವೆಚ್ಚ ಮಾಡಿಲ್ಲ, ಜೆಡಿಎಸ್‌ನ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಈ ಬಗ್ಗೆ ಯಾವುದೇ ಹೋರಾಟ ನಡೆಸಿಲ್ಲ, ಇನ್ನೂ ರಸ್ತೆ ಗುಂಡಿ ಮತ್ತಿತರ ಅವ್ಯವಸ್ಥೆಗಳ ಬಗ್ಗೆ ಹೇಳುವಂತೆಯೇ ಇಲ್ಲ ಎಂದರು.

ಬರೀ ಗಾಂಧಿ ಎಂಬ ಹೆಸರನ್ನು ಇಟ್ಟುಕೊಂಡರೆ ಎಲ್ಲರೂ ಮಹಾತ್ಮರಾಗುವುದಿಲ್ಲ: ಈಶ್ವರಪ್ಪ

ಸಿದ್ದರಾಮಯ್ಯ ಕಾಲದಲ್ಲಿ ಎಚ್‌.ಎನ್‌.ವ್ಯಾಲಿ, ಕೆ.ಸಿ.ವ್ಯಾಲಿ ಮೂಲಕ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾ.ಜಿಲ್ಲೆಗಳಿಗೆ ನೀರು ಬಿಡುತ್ತಿದ್ದು, ಇದೀಗ ಕೇವಲ 100 ಅಡಿಗಳಲ್ಲಿಯೇ ಕೊಳವೆ ಬಾವಿಗಳಲ್ಲಿ ನೀರು ದೊರೆಯುವಂತಾಗಿದೆ ಎಂದರು.

ಪ.ಜಾ.ಗೆ ರು.30000 ಪ.ವ.ಕ್ಕೆ 6000 ಕೋಟಿ ನೀಡಿದ ಹೆಗ್ಗಳಿಕೆ, ಮಹಿಳೆಯರಿಗೆ ಮೀಸಲಾತಿ ನೀಡುವುದರೊಂದಿಗೆ ಆಸ್ತಿಯಲ್ಲಿ ಪಾಲು ನೀಡುವ ಯೋಜನೆಗಳನ್ನು ಕಾಂಗ್ರೆಸ್‌ ಸರ್ಕಾರವೇ ಜಾರಿಗೆ ತಂದಿದೆ, ಬೆಂ.ಅಂ. ವಿಮಾನ ನಿಲ್ದಾಣ ನಿರ್ಮಿಸಿದ್ದು, ನಾಡಪ್ರಭು ಕೆಂಪೇಗೌಡರ ಹೆಸರನ್ನು ಅದಕ್ಕೆ ಇಡಲು ಯೋಜನೆ ಮಾಡಿದ್ದನ್ನು ಕಾಂಗ್ರೆಸ್‌ ಸರ್ಕಾರವೇ ಹೊರತು ಬಿಜೆಪಿ ಸರ್ಕಾರ ಅಲ್ಲ, ಈ ಭಾಗದಲ್ಲಿನ ರೈತರು ಕೋಟ್ಯಾದಿಪತಿಗಳಾಗಲು ಕಾಂಗ್ರೆಸ್‌ ಪಕ್ಷದ ಸಮಯದಲ್ಲಿ ಸಾವಿರಾರು ಮಂದಿಗೆ ಬಗರ್‌ ಹುಕುಂ ಸಾಗುವಳಿ ಜಮೀನು ನೀಡಿದ್ದನ್ನು ಯಾರು ಮರೆಯಬಾರದೆಂದು ತಿಳಿಸಿದರು.

ದೇವನಹಳ್ಳಿಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸುವುದರೊಂದಿಗೆ ಯಾರಿಗೆ ಆಗಲಿ ಟಿಕೆಟ್‌ ದೊರೆತಾಗ, ಅವರ ಪರವಾಗಿ ಐಕ್ಯತೆಯಿಂದ ಕಾರ್ಯನಿರ್ವಹಿಸುವುದಾಗಿ ಪ್ರತಿಜ್ಞೆ ಹಾಗೂ ಸಂಕಲ್ಪ ತೊಡಬೇಕೆಂದು ಮೀಸಲಾತಿ ಕ್ಷೇತ್ರದಲ್ಲಿ ಗೆಲುವು ಬಂದರೆ ಪ.ವ., ಪ.ಜಾ.ಗೆ ಶಕ್ತಿ ಬರುತ್ತದೆ ಎಂದು ತಿಳಿಸಿದರು.

ಹಳೆಯ ಸದಸ್ಯರನ್ನು ಕರೆತನ್ನಿ: ಕೇಂದ್ರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ದತ್‌, ಕೇವಲ ನಾಲ್ಕು ತಿಂಗಳು ಮಾತ್ರ ಉಳಿದಿದ್ದು, ಪ್ರತಿಯೊಬ್ಬ ಕಾರ್ಯಕರ್ತರು ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳುವ ಮೂಲಕ ಪ್ರತಿಯೊಬ್ಬರು ಸಂಪರ್ಕ ಹೊಂದಿಕೊಂಡಿದ್ದು ಪಕ್ಷದ ಯಾವುದೇ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿರಬೇಕೆಂದು, ಹಳೆಯ ಕಾಂಗ್ರೆಸ್‌ ಸದಸ್ಯರು ಯಾರೇ ಆಗಿದ್ದರೂ ಮತ್ತೆ ಪಕ್ಷಕ್ಕೆ ತರುವ ಮುಖಾಂತರ ಪಕ್ಷ ಬಲಪಡಿಸಬೇಕೆಂದು ತಿಳಿಸಿದರು.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾದ ಮಾಜಿ ಶಾಸಕ ವೆಂಕಟಸ್ವಾಮಿ ಮಾತನಾಡಿ, ಪಕ್ಷ 2013 ಹಾಗೂ 2018ರಲ್ಲಿ ತಮಗೆ ಟಿಕೆಟ್‌ ನೀಡಿದ್ದರೂ ತಾವು ಸೋಲಬೇಕಾಯಿತು. ಆದರೆ, ಇದೀಗ ಪಕ್ಷವು ಟಿಕೆಟ್‌ ನೀಡಿದರೆ ಗೆಲುವು ಸಾಧ್ಯವಾಗಲಿದ್ದು, ಕೇವಲ ನಮಗೆ ಮಾತ್ರವಲ್ಲ ಪಕ್ಷವು ಯಾರಿಗೇ ಟಿಕೆಟ್‌ ನೀಡಿದರೂ ಪಕ್ಷದ ಅಭ್ಯರ್ಥಿ ಪರ ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು.

ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್‌ ಮಾತನಾಡಿ, ಪಕ್ಷ ಯಾರಿಗೇ ಟಿಕೆಟ್‌ ನೀಡಿದರೂ ಕಾರ್ಯಕರ್ತರಾಗಿ ನಾವು ಕೆಲಸ ಮಾಡಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರುವಂತೆ ಮಾಡುತ್ತೇವೆ ಎಂದು ತಿಳಿಸಿದರು. ಮಾಜಿ ಶಾಸಕ ಮುನಿನರಸಿಂಹಯ್ಯಮಾತನಾಡಿ, ತಾವು, ಒಂದು ಬಾರಿ ಗೆದ್ದು, ಎರಡು ಬಾರಿ ಸೋತರೂ ತಾವು ನಿರಂತರವಾಗಿ ಜನರೊಂದಿಗೆ ಜೀವನ ನಡೆಸಿಕೊಂಡು ಪಕ್ಷದ ಧ್ಯೇಯೋದ್ದೇಶಗಳೊಂದಿಗೆ ನಡೆದುಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿ ಶಾಂತಕುಮಾರ್‌ ಮಾತನಾಡಿ, ಈಗಾಗಲೇ ಕಳೆದ ಎರಡು ಅವಧಿಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರಿಲ್ಲದ ಕಾರಣ ಕಾರ್ಯಕರ್ತರು ಅನಾಥರಂತೆ ಆಗಿದ್ದು, ಯಾವುದೇ ಸರ್ಕಾರಿ ಮತ್ತಿತರ ಕೆಲಸಗಳು ಆಗದೆ ಯಾವುದೇ ಇಲಾಖೆಗಳಲ್ಲಿ ಯಾರೂ ಸ್ಪಂದಿಸುತ್ತಿಲ್ಲವೆಂದು ಪಕ್ಷದ ಎಂ.ಎಲ್‌.ಎ ಇದ್ದರೆ ಎಲ್ಲರ ಕೆಲಸ ನಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಮತ್ತೊಬ್ಬ ಆಕಾಂಕ್ಷಿ ಲೋಕೇಶ್‌ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ನಿರ್ಮಿಸುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಕೈ ಬಲಪಡಿಸಬೇಕಾಗಿದೆ ಎಂದು ತಿಳಿಸಿದರು.

ಎಸ್‌ ಸಿ ಘಟಕದ ಮಾಜಿ ಜಿಲ್ಲಾಧ್ಯಕ್ಷ ಚಿನ್ನಪ್ಪ ರವರು ಮಾತನಾಡಿ, ಈಗಾಗಲೇ ಪಕ್ಷದ ಕಾರ್ಯಕರ್ತರು ಸಾಕಷ್ಟುನೊಂದಿದ್ದು ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಮೂಲಕ ವನವಾಸವನ್ನು ಕೊನೆಗೊಳಿಸಿಕೊಳ್ಳಬೇಕೆಂದು ತಿಳಿಸಿದರು.

ನಿಮ್ಮ ಮನೆಯ ನಾಯಿಯಾದ್ರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ಯಾ ಎಂದ ಖರ್ಗೆ: ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

ದೇವನಹಳ್ಳಿ ಪುರಸಭೆಯ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಚಂದೇನಹಳ್ಳಿ ಮುನಿಯಪ್ಪ, ದೇವನಹಳ್ಳಿ ತಾ.ಪಂ.ಮಾಜಿ ಅಧ್ಯಕ್ಷ ಮುದುಗುರ್ಕಿ ನಾರಾಯಣ ಸ್ವಾಮಿ ಮತ್ತಿತರರು ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯರಾದ ರವಿ ಪ್ರಾಸ್ತಾವಿಕ ಮಾತನಾಡಿದರು.

ಕಾಂಗ್ರೆಸ್‌ ಮುಖಂಡರಾದ ಮಾಜಿ ಮೇಯರ್‌ ಪದ್ಮಾವತಮ್ಮ, ವಿಜಯಪುರ ಪುರಸಭೆ ಮಾಜಿ ಅಧ್ಯಕ್ಷ ಎಂ ಸತೀಶ್‌ ಕುಮಾರ್‌, ಕೆಪಿಸಿಸಿ ಕಾರ್ಯದರ್ಶಿ ವಿ ಮಂಜುನಾಥ್‌, ಮಾಜಿ ಸಂಸದ ಸಿ ನಾರಾಯಣಸ್ವಾಮಿ, ದೇವನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಪ್ರಸನ್ನ, ಕಾರ್ಯದರ್ಶಿ ಎಸ್‌.ಪಿ. ಮುನಿರಾಜು, ಮಾಜಿ ಅಧ್ಯಕ್ಷರಾದ ಜಗನ್ನಾಥ್‌, ವಿಜಯಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಮಚಂದ್ರಪ್ಪ, ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಬಿ ರಾಜಣ್ಣ, ಹೋಬಳಿ ಕಾಂಗ್ರೆಸ್‌ ಅಧ್ಯಕ್ಷ ವಿ.ಎಂ.ನಾಗರಾಜು, ಕಾರ್ಯದರ್ಶಿ ನಟರಾಜ್‌, ಅಲ್ಪ ಸಂಖ್ಯಾತ ಘಟಕದ ಕಲೀಮ್‌, ಮಹಿಳಾ ಘಟಕದ ಅಕ್ಕಯಮ್ಮ, ಯುವ ಘಟಕದ ಜಿಲ್ಲಾಧ್ಯಕ್ಷ ನಾಗೇಶ್‌, ಮುಕೇಶ್‌ ಬಾಬು, ಜಿ.ಪಂ. ಮಾಜಿ ಸದಸ್ಯ ಬಾಲೇಪುರ ಲಕ್ಷಿತ್ರ್ಮೕನಾರಾಯಣಪ್ಪ, ದೇವನಹಳ್ಳಿ, ವಿಜಯಪುರ ಪುರಸಭೆಗಳ ಸದಸ್ಯರು, ಮಾಜಿ ಸದಸ್ಯರು, ಗ್ರಾ.ಪಂ., ತಾ.ಪಂ., ಜಿ.ಪಂ. ಸದಸ್ಯರು ಹಾಗೂ ಮಾಜಿ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದು, ಸಭೆ ಕಿಕ್ಕಿರಿದು ತುಂಬಿತ್ತು.
 

Follow Us:
Download App:
  • android
  • ios