ರಾಜ್ಯದಲ್ಲಿ ಆಡಳಿತವೇ ಇಲ್ಲದಂತಹ ಪರಿಸ್ಥಿತಿ: ವಿಶ್ವೇಶ್ವರ ಹೆಗಡೆ ಕಾಗೇರಿ

ರಾಜ್ಯದಲ್ಲಿ ಸುಮಾರು 220 ತಾಲೂಕುಗಳ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಆದರೆ ರಾಜ್ಯದಲ್ಲಿ ಆಡಳಿತವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್‌ ಸರ್ಕಾರ ತನ್ನ ಎಲ್ಲಾ ವಿಫಲತೆಗಳ ಮರೆ ಮಾಚಲು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸಿ ತನ್ನ ಜವಾಬ್ದಾರಿಯಿಂದ ನುಣಚಿಕೊಳ್ಳುವ ಕೆಲಸ ಮಾಡುತ್ತಿದೆ: ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ 

Former Speaker Vishweshwar Hegde Kageri Slams Karnataka Congress Government grg

ಹೊನ್ನಾಳಿ(ನ.07):  ರಾಜ್ಯದಲ್ಲಿ ಬರಗಾಲದಿಂದಾಗಿ ರೈತರು ಸಂಕಷ್ಟದಲ್ಲಿ ಮುಳುಗಿದ್ದರೂ ಕಾಂಗ್ರೆಸ್‌ ಸರ್ಕಾರ ಅಧಿಕಾರ ಲಾಲಸೆಯಲ್ಲಿ ಮುಳುಗಿದ್ದು, ಬಿಜೆಪಿ ಪ್ರತಿಪಕ್ಷವಾಗಿ ಬರ ಅಧ್ಯಯನ ನಡೆಸಿ ತನ್ನ ಜವಾಬ್ದಾರಿ ನಿರ್ವಹಿಸಿ ರೈತ ಸಮೂಹದ ಬೆಂಬಲಕ್ಕೆ ನಿಲ್ಲುವ ಕೆಲಸ ಮಾಡಿದೆ ಎಂದು ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಹೊನ್ನಾಳಿ -ನ್ಯಾಮತಿ ಅವಳಿ ತಾಲೂಕಿನಲ್ಲಿ ಸೋಮವಾರ ಬರ ಅಧ್ಯಯನ ತಂಡದೊಂದಿಗೆ ಹೊನ್ನಾಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 220 ತಾಲೂಕುಗಳ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಆದರೆ ರಾಜ್ಯದಲ್ಲಿ ಆಡಳಿತವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್‌ ಸರ್ಕಾರ ತನ್ನ ಎಲ್ಲಾ ವಿಫಲತೆಗಳ ಮರೆ ಮಾಚಲು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸಿ ತನ್ನ ಜವಾಬ್ದಾರಿಯಿಂದ ನುಣಚಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

6 ತಿಂಗಳಲ್ಲಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೀರಿ?: ಶಾಸಕ ಶಾಂತನಗೌಡಗೆ ರೇಣುಕಾಚಾರ್ಯ ಸವಾಲು

ಸುದ್ದಿಗಾರರೊಂದಿಗೆ ಮಾತನಾಡುವ ಮೊದಲು ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ಬರ ಅಧ್ಯಯನ ತಂಡವು ನ್ಯಾಮತಿ ರಸ್ತೆಯಲ್ಲಿ ಬರುವ ಕೆಲ ಜಮೀನುಗಳಿಗೆ ಭೇಟಿ ನೀಡಿ ಒಣಗಿ ನಿಂತ ಪೈರುಗಳ ಪರಿಶೀಲನೆ ನಡೆಸಿತು.
ಸಂಸದ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ್‌, ವಿಧಾನ ಪರಿಷತ್‌, ಮಾಜಿ ಮುಖ್ಯಸಚೇತಕರಾದ ಡಾ. ಶಿವಯೋಗಿ ಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ , ಮಾಜಿ ಶಾಸಕ ಪ್ರೊ. ಲಿಂಗಣ್ಣ, ಜಗಳೂರು ಮಾಜಿ ಶಾಸಕ ಎಸ್‌.ವಿ. ರಾಮಚಂದ್ರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್‌ ಹನಗವಾಡಿ ಪ್ರಧಾನ ಕಾರ್ಯದರ್ಶಿ ಜಗದೀಶ್‌, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಾಂತರಾಜ್‌ ಪಾಟೀಲ್‌, ಬಿಜೆಪಿ ಪ್ರಕೋಷ್ಠದ ನಾಯಕರಾದ ಎ.ಬಿ.ಹನುಮಂತಪ್ಪ, ರುದ್ರೇಶ್‌, ರೈತ ಮುಖಂಡರಾದ ಧನಂಜಯ ಕಡ್ಲೇಬಾಳು, ಸತೀಶ್‌,ಮಂಜಾನಾಯ್ಕ ಸೇರಿ ಜಿಲ್ಲಾ ಮತ್ತು ತಾಲೂಕಿನ ಅನೇಕ ಮುಖಂಡರು ಇದ್ದರು.

ರೇಣುಕಾಚಾರ್ಯ ಜವಾಬ್ದಾರಿಯುತ ಕಾರ್ಯಕರ್ತರಾಗಲಿ

ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯರನ್ನು ಬರ ಅಧ್ಯಯನ ತಂಡದಿಂದ ಹೊರಗಿಟ್ಟಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ರೇಣುಕಾಚಾರ್ಯ ಅವರು ಒಬ್ಬ ಶಿಸ್ತಿನ ಮತ್ತು ಜವಾಬ್ದಾರಿಯುತ ಕಾರ್ಯಕರ್ತರಾಗಿ ಕೆಲಸ ಮಾಡಲಿ ಹಾಗೂ ಪಕ್ಷದ ಸೂಕ್ತ ವೇದಿಕೆಯಲ್ಲಿ ತಮ್ಮ ಅಭಿಪ್ರಾಯಗಳ ಹಂಚಿಕೊಂಡು ತಮ್ಮಲ್ಲಿರುವ ಗೊಂದಲಗಳಿಗೆ ಪರಿಹಾರ ಕಂಡು ಕೊಳ್ಳಬಹುದು ಎಂದು ಕಾಗೇರಿ ಹೇಳಿದರು.

Latest Videos
Follow Us:
Download App:
  • android
  • ios