ಐದು ರಾಜ್ಯಗಳ ಫಲಿತಾಂಶದ ಬಗ್ಗೆ ಗೊತ್ತಿದೆ. ನಾನು ಸ್ಥಳೀಯ ಕಾಂಗ್ರೆಸ್ ಬಗ್ಗೆ ಮಾತನಾಡುವುದಿಲ್ಲ. ಬಿಜೆಪಿ ಸರಕಾರವನ್ನು ಇಲ್ಲಿವರೆಗೆ ಏನೂ ಮಾಡಲು ಆಗಿಲ್ಲ ಎಂದು ದೇವೇಗೌಡ ಹೇಳಿದ್ದಾರೆ
ಬೆಂಗಳೂರು(ಮಾ.12): ಬೆಂಗಳೂರಿನಲ್ಲಿರುವ ಜೆಡಿಎಸ್ (JDS) ಮುಖ್ಯ ಕಚೇರಿಯಲ್ಲಿ ಶನಿವಾರ ಮಾಜಿ ಪ್ರಧಾನಿ ದೇವೇಗೌಡ (HD devegowda) ಸುದ್ದಿಗೋಷ್ಠಿ ನಡೆಸಿದ್ದು, ನಾನೇನು ಮತ್ತೆ ಪ್ರಧಾನಿ ಆಗಬೇಕಿಲ್ಲ. ಈ ಪಕ್ಷ ಉಳಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯದ ರಾಜಕೀಯ (Politics) ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ಹೆಚ್‌ಡಿಡಿ, ಐದು ರಾಜ್ಯಗಳ ಚುನಾವಣಾ ಫಲಿತಾಂಶ ಎಲ್ಲರಿಗೂ ಗೊತ್ತಿದೆ. ನಮ್ಮದು ಪ್ರಾದೇಶಿಕ ಪಕ್ಷ , ಉಳಿಸಿ ಕೊಳ್ಳಬೇಕಾದ ಅನಿವಾರ್ಯತೆ ಇದೆ. ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್ (Congress), ಅದನ್ನು ಹೀಯಾಳಿಸಲು ಈ ಸುದ್ದಿಗೋಷ್ಟಿ ಕರೆದಿಲ್ಲ. ಬಿಜೆಪಿ (BJP) ಮೊದಲ ಬಾರಿಗೆ ಮೋದಿ ನೇತೃತ್ವದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಇಲ್ಲಿವರೆಗೂ ಆ ಸರ್ಕಾರವನ್ನು ಏನೂ ಮಾಡಲು ಆಗಲಿಲ್ಲ ಎಂಬುವುದು ವಾಸ್ತವ ಎಂದಿದ್ದಾರೆ.
ಮೋದಿ (Modi) ಚುನಾವಣೆಯನ್ನು ನಿಷ್ಠೆಯಿಂದ ಮಾಡ್ತಾರೆ. ನಾಲ್ಕು ದಿಕ್ಕಿನಲ್ಲಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನ ಮಾಡ್ತಿದ್ದಾರೆ. ಈ ಭಾವನೆ ನಮ್ಮಲ್ಲಿ ಕೂಡ ಬರಬೇಕು ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆ ಯೋಚಿಸಬೇಕು. ಕುಮಾರಸ್ವಾಮಿ ತಮ್ಮ ಕಾರ್ಯಾಗಾರವನ್ನು ಅದ್ಭುತವಾಗಿ ಮಾಡಿದ್ದಾರೆ. ಈ ಸಂಧರ್ಭದಲ್ಲಿ ನಮ್ಮ ಪಕ್ಷ ಉಳಿಸಿ, ಬೆಳೆಸುವುದು ಹೇಗೆ ಎಂಬುದು ಮುಖ್ಯವಾಗುತ್ತದೆ. ಕಾಂಗ್ರೆಸ್ ಸೇರಿ ಎಲ್ಲಾ ಸೆಕ್ಯೂಲರ್ ಪ್ರಾದೇಶಿಕ ಪಕ್ಷಗಳು ಒಂದಾದರೆ ಒಳ್ಳೆಯದು ಎಂದು ಮತ್ತೆ ತೃತೀಯ ರಂಗ ರಚನೆ ಬಗ್ಗೆ ದೇವೇಗೌಡ ತಮ್ಮ ಒಲವು ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ (Kumaraswamy) ಪಂಚರತ್ನ ಯೋಜನೆ , ಜಲಧಾರೆ ಯೋಜನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನೀರನ್ನು ತರಲೇ ಬೇಕು ಅಂತಾ ಬಹಳ ಹೋರಾಟ ಮಾಡಿದ್ರು. ಯಾರ ಕಾಲದಲ್ಲಿ ಏನಾಯಿತು ಅನ್ನೊದೆಲ್ಲಾ ಈಗ ಬೇಡ. ಕಾಂಗ್ರೆಸ್ ನವರು ರಾಮನಗರದಿಂದಲೇ ಮೇಕೆದಾಟು ಪಾದಯಾತ್ರೆ ಹೊರಡಬೇಕು ಅಂತಾ ಮಾಡಿದ್ರು. ಯಾವ ಸಾಕ್ಷಿ ಆಧಾರದ ಮೇಲೆ ಬಾಷಣ ಮಾಡಿದ್ರು ಇವರು. ಕಾಂಗ್ರೆಸ್ ಏನೇ ಹೋರಾಟ ಮಾಡಲಿ, ಅವರ ಹೋರಾಟಕ್ಕೆ ನನ್ನ ತಕಾರಾರಿಲ್ಲ. ನನ್ನ ಪಕ್ಷದ ಕಾರ್ಯಕರ್ತರಿಗೆ ನಿಜಾಂಶ ತಿಳಿಸಲಿ ಎಂದು ಖಡಕ್ ಆಗಿ ಹೇಳಿಕೆ ನೀಡಿದ್ದಾರೆ.
Interesting facts about UP elections: ಠೇವಣಿ ಕಳೆದುಕೊಂಡ 'ಕೈ'ಗಳೆಷ್ಟು
ಮಾರ್ಚ್ 20ರಂದು ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮಾಡುತ್ತೇವೆ. ನಮ್ಮ ಪಕ್ಷದ ಶಾಸಕರಿಗೆ ಜವಾಬ್ದಾರಿ ನೀಡಲಾಗುತ್ತದೆ. ಅಂದು ಶಾಸಕರಿಗೆ ಜಿಲ್ಲೆಗಳ ಉಸ್ತುವಾರಿ ನೀಡುತ್ತೇವೆ. ನಾನು ತಿಂಗಳಿಗೆ ಎರಡು ಜಿಲ್ಲೆಗಳಂತೆ ಪ್ರವಾಸ ಮಾಡುತ್ತೇನೆ ನಾನು ಮಾಡಿರುವ ಕೆಲಸಗಳನ್ನು ಜನರ ಮುಂದೆ ಹೇಳಿಕೊಂಡು ಹೋಗುತ್ತೇನೆ. ನಾನು ಚನ್ನಪಟ್ಟಣ, ರಾಮನಗರ ಮತ್ತು ಬೆಂಗಳೂರಿಗೆ ನೀರು ತರಿಸಿದೆ. ಬಿಜೆಪಿ, ಜೆಡಿಎಸ್ ಏನು ಮಾಡಿದೆ ಅಂತಾ ಸಿದ್ದರಾಮಯ್ಯ ಹೇಳುತ್ತಿದ್ದರು. ನೀವೇ ಉಳಿಸಿಕೊಡಬೇಕು ಅಂತ ನನ್ನ ಮನೆಗೆ ಬಂದಿದ್ದರು. ಕಾವೇರಿ ಕೊಳ್ಳದಲ್ಲಿ ನೀರು ತಂದೇ ಬಿಟ್ವೆವು ಎಂದು ಕಾಂಗ್ರೆಸ್ ನವರು ಹೇಳ್ತಾರೆ. ಮಾ.20ರಂದು ಮುಂದಿನ ಹೋರಾಟದ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಇದೇ ವೇಳೆ ಹೇಳಿದ್ದಾರೆ.
ಪಂಚ ರಾಜ್ಯಗಳಲ್ಲಿ 'ಕೈ'ಗೆ ಹೀನಾಯ ಸೋಲು: ಕಾಂಗ್ರೆಸ್ ತೊರೆಯಲು ಸಜ್ಜಾದ ಹಿರಿಯ ನಾಯಕ..!
ನಾನು ಈ ಬಾರಿಯ ರಾಜ್ಯ ಬಿಜೆಪಿಯ ಬಜೆಟ್ ಅನ್ನು ನೋಡಿದ್ದೇನೆ.ಕೃಷ್ಣಾ ಮೇಲ್ದಂಡೆಗೆ ಐದು ಸಾವಿರ ಕೋಟಿ ಇಟ್ಟಿದಾರೆ. ಇದರಲ್ಲಿ ಏನು ಆಗುತ್ತೆ. ಅದ್ಯಾವ ಖುಷಿಗೆ ಇಟ್ಟಿದ್ದಾರೆಂದು ಅವರೇ ಹೇಳಬೇಕು. ನಾನು ಪ್ರಧಾನಿ ಆಗಿದ್ದಾಗ ಕಾವೇರಿ ಬೇಸಿನ್ ಗೆ ಅನುದಾನ ಕೊಟ್ಟಿದ್ದೆ. ಮೊನ್ನೆಯ ರಾಜ್ಯ ಬಜೆಟ್ನಲ್ಲಿ ನನ್ನ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ 3 ಸಾವಿರ ಕೋಟಿ ರೂಪಾಯಿ ಅನುದಾನ ಇಟ್ಟಿದ್ದಾರೆ. ಆ ಯೋಜನೆ ವೆಚ್ಚವೇ ಸುಮಾರು 8 ಸಾವಿರ ಕೋಟಿ ಇದೆ. ಈ 3 ಸಾವಿರ ಕೋಟಿಯಲ್ಲಿ ಅದೇನು ಆಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಇಬ್ರಾಹಿಂ ಭೇಟಿಯಾಗಿರುವ ಬಗ್ಗೆ ಮಾತನಾಡಿದ ದೇವೇಗೌಡರು ಸಿಎಂ ಇಬ್ರಾಹಿಂ ಅವರಿಗೆ ಕಾಂಗ್ರೆಸ್ ನಲ್ಲಿ ನೋವಾಗಿದೆ. ಅವರು ಬಂದು ನನ್ನನ್ನು ಭೇಟಿ ಮಾಡಿದರು. ಪಕ್ಷ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿಲ್ಲ ಎಂದರು.
