ಪಂಚ ರಾಜ್ಯಗಳಲ್ಲಿ 'ಕೈ'ಗೆ ಹೀನಾಯ ಸೋಲು: ಕಾಂಗ್ರೆಸ್ ತೊರೆಯಲು ಸಜ್ಜಾದ ಹಿರಿಯ ನಾಯಕ..!
* ಇಂದು ಸಿ.ಎಂ.ಇಬ್ರಾಹಿಂ ಜೆಡಿಎಸ್ ಸೇರ್ಪಡೆ
* ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ 2 ನೇ ಸ್ಥಾನಕ್ಕೆ ಕುಸಿದ ಕಾಂಗ್ರೆಸ್
* ಸಿಎಂ ಕುರ್ಚಿಗಾಗಿ ಡಿಕೆಶಿ ಮತ್ತು ಸಿದ್ದು ಮಧ್ಯೆ ಕಿತ್ತಾಟ
ಕೋಲಾರ(ಮಾ.12): ಪಂಚರಾಜ್ಯಗಳ ಚುನಾವಣೆಯಲ್ಲಿ(Five State Election) ಕಾಂಗ್ರೆಸ್(Congress) ಹೀನಾಯ ಸೋಲು ಕಂಡಿದೆ, ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕಾಂಗ್ರೆಸ್ 2 ನೇ ಸ್ಥಾನಕ್ಕೆ ಹೋಗಿದೆ. ಇದೇ ಮಾದರಿ ರಾಜ್ಯದಲ್ಲಿಯೂ ಅನ್ವಯಿಸುತ್ತದೆ. ಹೀಗಿದ್ದರೂ ಮುಖ್ಯಮಂತ್ರಿ ಕುರ್ಚಿಗಾಗಿ ಡಿಕೆಶಿ(DK Shivakumar) ಮತ್ತು ಸಿದ್ದರಾಮಯ್ಯ(Siddaramaiah) ಕಿತ್ತಾಟ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ(CM Ibrahim) ವ್ಯಂಗ್ಯವಾಡಿದರು.
ಕೋಲಾರದ(Kolar) ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಇಬ್ರಾಹಿಂ ರವರು, ಇಂದು(ಶನಿವಾರ) 12 ಗಂಟೆಗೆ ತಾವು ಜೆಡಿಎಸ್(JDS) ಸೇರಲಿದ್ದೇನೆ. ಈಗಾಗಲೇ ಕಾಂಗ್ರೆಸ್ ತೊರೆದಿದ್ದೇನೆ. ನಾವು ಮೂಲ ಕಾಂಗ್ರೆಸ್ಸಿಗರು. ನಮ್ಮನ್ನು ಕಾಂಗ್ರೆಸ್ಸಿಗರು ಮೂಲೆ ಗುಂಪು ಮಾಡಿದ್ದಾರೆ. ನಮ್ಮ ತಂದೆ ತಾಯಿ ಅಜ್ಜ ಎಲ್ಲರೂ ಸ್ವತಂತ್ರ್ಯ ಹೋರಾಟಗಾರರು. ಈಗ ಕಾಂಗ್ರೆಸ್‌ನಲ್ಲಿ ಮೂಲ ಕಾಂಗ್ರೆಸ್ಸಿಗರು ಯಾರೂ ಇಲ್ಲ. 1970ರಿಂದ ಈಚೆಗೆ ಬಂದವರು ಮೂಲ ಕಾಂಗ್ರೆಸ್ಸಿಗರೇ ಅಲ್ಲ ಎಂದರು.
Karnataka Politics ಒಂದೇ ಫೋನ್ ಕಾಲ್, ಸಿಎಂ ಇಬ್ರಾಹಿಂ ಯುಟರ್ನ್, ಜೆಡಿಎಸ್‌ಗೆ ಬಿಗ್ ಶಾಕ್
ನನಗೆ ಪಕ್ಷಕ್ಕಿಂತ ನಮ್ಮ ರಾಜ್ಯದವರು ಪ್ರಧಾನಿಯಾಗಿದ್ದ ದೇವೇಗೌಡರೆ(HD Devegowda) ಮುಖ್ಯ. ಈಗಾಗಲೇ ನಮ್ಮ ಸಮುದಾಯದ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇನೆ ಅದರಂತೆ ನಾಳೆ ಅಧಿಕೃತವಾಗಿ ಜೆಡಿಎಸ್ ಸೇರುವುದಾಗಿ ಇಬ್ರಾಹಿಂ ತಿಳಿಸಿದರು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನವನ್ನು ಕಾಯ್ದುಕೊಳ್ಳಲಿದೆ. ಈಗಿರುವಾಗ ಸಿಎಂ ಕುರ್ಚಿಗಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಕಿತ್ತಾಡಬೇಕೆ ಎಂದು ವ್ಯಂಗ್ಯ ಮಾಡಿದರು.
6 ಬಾರಿ ಗೆದ್ದವರನ್ನು ಅಧಿಕಾರದಿಂದ ಇಳಿಸಲು ಆಗುತ್ತಾ? ಹೀಗೆ ದೇವೇಗೌಡ್ರು ಹೇಳಿದ್ಯಾರಿಗೆ?
ಬೆಂಗಳೂರು: ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ತೊರೆಯುವುದಾಗಿ ಹೇಳಿದ್ದು, ಜೆಡಿಎಸ್ ಸೇರುವ ಒಲವು ತೋರಿದ್ದಾರೆ. ಆದ್ರೆ, ದೆಹಲಿಯಿಂದ ಕರೆ ಬಮದ ಹಿನ್ನೆಲೆಯಲ್ಲಿ ಫೆ.14ರಂದು ರಾಜೀನಾಮೆ ಕೊಡುತ್ತೇನೆ ಎಂದವರು ಯುಟರ್ನ್ ಹೊಡೆದಿದ್ದರು.
ಇಬ್ರಾಹಿಂ ಜೆಡಿಎಸ್‌ಗೆ ಬಂದರೆ ಅಲ್ಪಸಂಖ್ಯಾತ ಮತಗಳನ್ನ ಕ್ರೋಢೀಕರಣ ಮಾಡಬಹುದು ಎನ್ನುವ ಪ್ಲಾನ್‌ನಲ್ಲಿ ದಳಪತಿಗಳು ಇದ್ದಾರೆ. ಆದ್ರೆ, ಇಬ್ರಾಹಿಂ ರಾಜೀನಾಮೆಯಿಂದ ಹಿಂದೆ ಸರಿದಿರುವುದು ಜೆಡಿಎಸ್‌ಗೆ ನಿರಾಸೆಯಾಗಿದೆ.
ಇನ್ನು ಸಿಎಂ ಇಬ್ರಾಹಿಂ ಪಕ್ಷ ಸೇರ್ಪಡೆ ವಿಚಾರಕ್ಕೆ ಜೆಡಿಎಸ್ ರಿಷ್ಠ ಎಚ್‌ಡಿ ದೇವೇಗೌಡ ಪ್ರತಿಕ್ರಿಯಿಸಿ, ನಮ್ಮಲ್ಲಿ ಈಗ ಒಬ್ಬರು ರಾಜ್ಯಾಧ್ಯಕ್ಷರಾಗಿ ಇದ್ದಾರೆ. ಅವರು ಆರು ಬಾರಿ ಗೆದ್ದವರು. ಅವರನ್ನು ನಾಳೆ ಬೆಳಿಗ್ಗೆಯೇ ಅಧಿಕಾರದಿಂದ ಇಳಿಸಲು ಆಗುತ್ತಾ.? ಎಂದು ತಿಳಿಸಿದ್ದರು.
ಸಿಎಂ ಇಬ್ರಾಹಿಂ ಅವರಿಗೆ ಇಷ್ಟೇ ಹೇಳಿದ್ದೇವೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ವೇಳೆ ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟಿದ್ದೇವೆ ಎಂದು ಹೇಳಿದರು. ಈ ಮೂಲಕ ಸದ್ಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಇಲ್ಲ. ಮುಂದಿನ ನೋಡೋಣ ಎನ್ನುವ ಮಾತುಳನ್ನಾಡಿದ್ದರು.
ದಿಲ್ಲಿಯಿಂದ ಬಂತು ಆಹ್ವಾನ, ಮನಸ್ಸು ಬದಲಿಸಿ ಕಾಂಗ್ರೆಸ್‌ನಲ್ಲೇ ಉಳಿಯುತ್ತಾರಾ ಸಿಎಂ ಇಬ್ರಾಹಿಂ?
ಜೆಡಿಎಸ್ ತೊರೆಯುವುದಾಗಿ ಕೆಲ ಮುಖಂಡರು ಬಹಿರಂಗವಾಗಿಯೇ ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷ ಸಂಘಟನೆ ಮಾಡಲು ಸಮಯ ಇನ್ನೂ ಮೀರಿಲ್ಲ ಎಂದ ಅವರು, ಕೇವಲ 123 ಸೀಟುಗಳು ನಮ್ಮ ಗುರಿ ಎಂದು ಘೋಷಿಸುವುದು ಸಾಕವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.
ಇದೇ ವೇಳೆ ಹಿಜಾಬ್ ವಿಚಾರದ ಮಾತನಾಡಿ, ವಿವಾದ ಆರಂಭವಾಗುತ್ತಿದ್ದಂತೆ ಎರಡು ರಾಷ್ಟ್ರೀಯ ಪಕ್ಷಗಳು ಅದನ್ನು ಆರಂಭದಲ್ಲೇ ಚಿವುಟಿ ಹಾಕುವ ಕೆಲಸ ಮಾಡ ಬೇಕಿತ್ತು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದರು
ಅದನ್ನು ಎರಡೂ ರಾಷ್ಟ್ರೀಯ ಪಕ್ಷಗಳೂ ಮಾಡಬೇಕಿತ್ತು. ಆದರೆ ಈಗ ತುಂಬಾ ಬೆಳವಣಿಗೆಗಳಾಗಿವೆ, ಹೀಗಾಗಿ ಕೋರ್ಟ್ ಏನು ತೀರ್ಪು ಕೊಡುತ್ತದೋ ಅದನ್ನು ಒಪ್ಪಬೇಕು ಎಂದು ಎಚ್‌ಡಿ ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದರು.