ನಾನು ಕಣ್ಣೀರು ಹಾಕಿದ್ದಕ್ಕೆ ಸಿದ್ದರಾಮಯ್ಯ ಡಿಸಿಎಂ ಆಗಿದ್ದು: ದೇವೇಗೌಡ

ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ಮೇಲೆ ದಾಳಿ ಮಾಡ್ತಿವೆ| ನಮ್ಮಲ್ಲಿ ಕೆಲವರನ್ನ ಸೆಳೆಕೊಂಡು ಹೋಗಿರಬಹುದು. ನಾನು ಧೃತಿಗೆಡಲ್ಲ| ಮಹಾಜನತೆ ಎಲ್ಲವನ್ನೂ ಎದುರಿಸಿ ನಿಂತು ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸ್ತಾರೆ ಎಂದ ಎಚ್‌.ಡಿ.ದೇವೇಗೌಡ| 

Former PM H D Devegowda Talks Over Siddaramaiah grg

ತುಮಕೂರು(ಅ.22): ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ಮೇಲೆ ದಾಳಿ ಮಾಡುತ್ತಿವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬುಧವಾರ ಜಿಲ್ಲೆಯ ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ದೊಡ್ಡ ಆಲದ ಮರದ ಬಳಿ ಮಾತನಾಡಿದ ದೇವೇಗೌಡ, ಅವರ ದಾಳಿಗೆ ಪ್ರತ್ಯುತ್ತರವಾಗಿ ಎಲ್ಲ ವಿಷಯವನ್ನ ಹೊರ ಹೊಮ್ಮಿಸಿ ಮಾತನಾಡೋಕೆ ಸಿದ್ದನಿದ್ದೇನೆ. ಇವತ್ತು ಒಂದೇ ದಿನ ಅಲ್ಲ, ಹತ್ತು ದಿನ ಇಲ್ಲೇ ಇರ್ತೀನಿ. ಯಾರ್ಯಾರು ಏನೇನು ದಾಳಿ ಮಾಡ್ತಾರೆ. ಅವರಿಗೆ ಉತ್ತರ ಕೊಡೋಕೆ ನಾನಿಲ್ಲೇ ಇರ್ತೀನಿ. ನಾನು ದಾರಿ ತಪ್ಪಿ ಮಾತಾಡೋದಿಲ್ಲ. ನಡೆದ ಘಟನಾವಳಿಗಳನ್ನ ಹೇಳೋಕೆ ನನಗ್ಯಾವ ಭಯನೂ ಇಲ್ಲ. ಸಮರ್ಥವಾಗಿ ಉತ್ತರ ಕೊಡೋಕೆ ಈಗ್ಲೂ ಶಕ್ತಿ ಇದೆ. ಆ ಕೆಲ್ಸ ಮಾಡ್ತೀನಿ ಎಂದರು.

ಶಿರಾ ಉಪಚುನಾವಣೆ ಪ್ರಚಾರಕ್ಕೆ ಮೊದಲ ಬಾರಿ ಬಂದಿದ್ದೇನೆ. ನಾಳೆಯಿಂದ ನಾನು ಇಲ್ಲೇ ಇರುತ್ತೇನೆ. ನವೆಂಬರ್‌ 1 ರವರೆಗೂ ಉಪಚುನಾವಣೆ ಕೆಲಸ ಮಾಡೋಕೆ ಟೊಂಕಕಟ್ಟಿ ಬಂದಿದ್ದೇನೆ. ನಾನು ಸಿಎಂ ಆಗಿದ್ದಾಗ ತುಮಕೂರಲ್ಲಿ 9 ಜೆಡಿಎಸ್‌ ಶಾಸಕರು ಗೆದ್ದಿದ್ದು. ಈತ್ತೀಚೆಗೆ 4 ಜನ ಗೆದಿದ್ದಾರೆ. ಅವರಲ್ಲಿ ಸತ್ಯನಾರಾಯಣ್‌ ಅಗಲಿದ್ದಾರೆ. ಸತ್ಯನಾರಾಯಣ ಅವರ ಶ್ರೀಮತಿ ಅವ್ರನ್ನೇ ನಿಲ್ಲಿಸಿದ್ದೇವೆ. ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ಮೇಲೆ ದಾಳಿ ಮಾಡ್ತಿವೆ. ನಮ್ಮಲ್ಲಿ ಕೆಲವರನ್ನ ಸೆಳೆಕೊಂಡು ಹೋಗಿರಬಹುದು. ನಾನು ಧೃತಿಗೆಡಲ್ಲ. ಮಹಾಜನತೆ ಎಲ್ಲವನ್ನೂ ಎದುರಿಸಿ ನಿಂತು ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸ್ತಾರೆ ಎಂದರು.

ಬಿಜೆಪಿಯಿಂದ ಬಂದಿತ್ತು ಆಮಿಷ : ಎಚ್‌ಡಿಕೆ ಬಾಂಬ್

ಎರಡೂ ರಾಷ್ಟ್ರೀಯ ಪಕ್ಷಗಳು ಈ ಪ್ರಾದೇಶಿಕ ಪಕ್ಷವನ್ನ ಸಂಪೂರ್ಣವಾಗಿ ನಾಶ ಮಾಡ್ತೀನಿ ಅನ್ನೋ ಪಣತೊಟಿದ್ದಾರೆ. ಆದರೆ ಮಹಾಜನತೆ ಈ ಪ್ರಾದೇಶಿಕ ಪಕ್ಷದ ಅವಶ್ಯಕತೆಯನ್ನ ಅರ್ಥ ಮಾಡಿಕೊಂಡಿದ್ದಾರೆ. ಹಣದ ಹೊಡೆತ ಆದರೂ ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡ್ತಿದ್ದಾರೆ ಎಂದರು.

ಕಣ್ಣೀರು ಹಾಕಿದ್ದಕ್ಕೆ ಸಿದ್ದು ಡಿಸಿಎಂ ಆಗಿದ್ದು:

ಹೆಚ್ಡಿಕೆ ಕಣ್ಣೀರಿಗೆ ಕರಗಬೇಡಿ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡರು, ನಾನು ಈ ಹಿಂದೆ ಕಣ್ಣೀರು ಹಾಕಿದ್ದಕ್ಕೆ ಸಿದ್ದರಾಮಯ್ಯ ಈ ಹಿಂದೆ ಉಪಮುಖ್ಯಮಂತ್ರಿ ಆಗಿದ್ದು. ನನ್ನ ಮಗ ಆಗಲಿಲ್ಲ ಎಂದರು.
ಸಿದ್ದರಾಮಯ್ಯನವರು ರಾಜಕೀಯಕ್ಕೆ ಯಾವಾಗ ಬಂದ್ರು. ದೇವೇಗೌಡ್ರು ಹಿಂದಿನಿಂದಲೂ ಕೆಲಸ ಮಾಡ್ತಿದ್ದಾರೆ. 20 ವರ್ಷ ಆದ ಮೇಲೆ ಸಿದ್ದರಾಮಯ್ಯನವರು ನಮ್‌ ಜೊತೆ ಬಂದರು ಎಂದು ಮಾರ್ಮಿಕವಾಗಿ ನುಡಿದರು.

ವಿಶೇಷ ಅರ್ಥ ಬೇಡ:

ಗುಬ್ಬಿ ಶಾಸಕ ಎಸ್‌. ಆರ್‌.ಶ್ರೀನಿವಾಸರ ಗೈರು ವಿಚಾರ ಕುರಿತಂತೆ ಮಾತನಾಡಿದ ದೇವೇಗೌಡರು, ಅವರಿಗೆ ಕೊರೋನಾ ಅಂತಾ ಹೇಳಿದ್ದಾರೆ. ಅದಕ್ಕೆ ವಿಶೇಷ ಕಲ್ಪಿಸೋದು ಬೇಡ ಎಂದರು.
 

Latest Videos
Follow Us:
Download App:
  • android
  • ios