ಬಿ.ವೈ.ವಿಜಯೇಂದ್ರಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸವಾಲ್
ತಾಕತ್ತಿದ್ದರೆ ನಮ್ಮ ಕ್ಷೇತ್ರಕ್ಕೆ ಬಂದು ನಿಲ್ಲಲಿ, ಇಲ್ಲವಾದರೆ ನಾನೇ ಶಿಕಾರಿಪುರಕ್ಕೆ ಬಂದು ನಾನೇನು ಅನ್ನೋದನ್ನ ತೋರಿಸುತ್ತೇನೆ ಎಂದು ಹೇಳುವ ಮೂಲಕ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಸವಾಲ್ ಹಾಕಿದರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಆ.14): ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ತಾಕತ್ತಿದ್ದರೆ ನಮ್ಮ ಕ್ಷೇತ್ರಕ್ಕೆ ಬಂದು ನಿಲ್ಲಲಿ, ಇಲ್ಲವಾದರೆ ನಾನೇ ಶಿಕಾರಿಪುರಕ್ಕೆ ಬಂದು ನಾನೇನು ಅನ್ನೋದನ್ನ ತೋರಿಸುತ್ತೇನೆ ಎಂದು ಹೇಳುವ ಮೂಲಕ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಸವಾಲ್ ಹಾಕಿದರು. ಅವರು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪಾದಯಾತ್ರೆಗೆ ಚಾಲನೆ ನೀಡಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಿರಂತರವಾಗಿ ವಿಜಯೇಂದ್ರ ಅವರನ್ನು ಬಿಜೆಪಿ ಮುಖಂಡರು ಹುನಗುಂದ ಮತಕ್ಷೇತ್ರಕ್ಕೆ ಕರೆ ತರುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ವಿಜಯೇಂದ್ರ ನಮ್ಮ ಮತಕ್ಷೇತ್ರಕ್ಕೆ ಬರೋದಕ್ಕೂ, ಹೋಗೋದಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಪಕ್ಷದ ಕಾರ್ಯಕ್ರಮಕ್ಕೆ ಬಂದು ಹೋಗ್ತಾರೆ. ಇದು ಹುನಗುಂದ ಮತಕ್ಷೇತ್ರ, ಇದು ಶಿಕಾರಿಪುರ ಅಲ್ಲ. ಹುನಗುಂದ ಮತಕ್ಷೇತ್ರ ನನ್ನ ಮತಕ್ಷೇತ್ರ. ಇಲ್ಲಿ ನನ್ನ ಜನತೆ ಇದೆ, ವಿಜಯೇಂದ್ರನ ಜನತೆ ಇಲ್ಲ. ಮೇಲಾಗಿ ತಾಕತ್ತಿದ್ದರೆ ವಿಜಯೇಂದ್ರ ಇಲ್ಲಿ ಬಂದು ನಿಂತು ತೋರಿಸಲಿ, ನಾನೇನು ಅನ್ನೋದನ್ನ ವಿಜಯೇಂದ್ರಗೆ ತೋರಿಸುತ್ತೇನೆ ಎಂದ ಅವರು, ಇಲ್ಲವಾದ್ರೆ ನಾನೇ ಬಾ ಅಂದರೂ ಶಿಕಾರಿಪುರಕ್ಕೆ ಬಂದು ನಾನೇನು ಅನ್ನೋದನ್ನ ತೋರಿಸುತ್ತೇನೆ ಎಂದರು.
ಟಿಪ್ಪು ಭಾವಚಿತ್ರದ ಬ್ಯಾನರ್ ಹರಿದಿದ್ದರ ಹಿಂದೆ ಬಿಜೆಪಿ, ಅರ್.ಎಸ್.ಎಸ್. ಕುತಂತ್ರ: ಇನ್ನು ಬೆಂಗಳೂರಿನಲ್ಲಿ ಟಿಪ್ಪು ಭಾವಚಿತ್ರದ ಬ್ಯಾನರ್ ಹರಿದ ವಿಚಾರವಾಗಿ ಪ್ರತಿಕ್ರಿಯಿಸಿ,ಇದು ಬಿಜೆಪಿ ಕುತಂತ್ರವಾಗಿದೆ, ಯಾರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ ಎಂಬುದು ಇವರಿಗೆ ಗೊತ್ತಿಲ್ಲ, ನಮ್ಮ ಪಾದಯಾತ್ರೆಯಲ್ಲಿ 75 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಮೆರವಣಿಗೆ ಮಾಡುತ್ತಿದ್ದೇವೆ, ಅದರಲ್ಲಿ ಟಿಪ್ಪು ಸುಲ್ತಾನ್ ಭಾವ ಚಿತ್ರವೂ ಕೂಡಾ ಇದೆ, ಶಿವಾಜಿ ಮಹಾರಾಜರು ಇದ್ದಾರೆ,ಝಾನ್ಸಿ ಲಕ್ಷ್ಮೀಭಾಯಿ, ಸುಭಾಸ್ ಚಂದ್ರ ಬೋಸ್ ಇದ್ದಾರೆ. ಅವರೆಲ್ಲ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೀವ ತ್ಯಾಗ ಮಾಡಿದ್ದಾರೆ. ಆದರೆ ಇವ್ರು ಸುಮ್ನೆ ಹಿಂದೂ ಕಾರ್ಯಕರ್ತರು,ಆರ್ ಎಸ್ ಎಸ್ ನವರದ್ದೆ ಇದೆಲ್ಲಾ ಆಗಿದ್ದು, ಇದು ಬಿಜೆಪಿ ಕುತಂತ್ರ ಎಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದರು.
ಕಾಶಪ್ಪನವರ ನೇತೃತ್ವದಲ್ಲಿ ಕೂಡಲಸಂಗಮದಿಂದ ಹುನಗುಂದವರೆಗೆ ಕೈ ಪಕ್ಷದಿಂದ ಭರ್ಜರಿ ಪಾದಯಾತ್ರೆ: ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ಯ ಪಾದಯಾತ್ರೆ ನಡೆದಿರೋ ಬೆನ್ನಲ್ಲೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಿಂದ ಹುನಗುಂದ ಪಟ್ಟಣದವರೆಗೆ ಪಾದಯಾತ್ರೆ ನಡೆಸಲಾಯಿತು. ಪಾದಯಾತ್ರೆಯಲ್ಲಿ ಯುವಕರಿಂದ ಜಾಂಜ್ ಸೇರಿದಂತೆ ವಿವಿಧ ಕಲಾಪ್ರಕಾರಗಳ ಜೊತೆ ದೇಶಭಕ್ತಿ ಗೀತೆಗಳ ಅನಾವರಣ ಕಂಡು ಬಂತು. ಇನ್ನು ಪಾದಯಾತ್ರೆಯಲ್ಲಿ ಹುನಗುಂದ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಭಾರತೀಯರ ಹೃದಯ ಜೋಡಿಸಿದ ಹರ್ ಘರ್ ತಿರಂಗಾ, ಹುಲ್ಲಿನ ಮನೆ ಮೇಲೆ ಅರಳಿದ ರಾಷ್ಟ್ರಧ್ವಜ!
ಅಮೃತ ಮಹೋತ್ಸವಕ್ಕಾಗಿ ಅಟೋಗಳ ಮೂಲಕ 75 ಸ್ವಾತಂತ್ರ್ಯ ಹೋರಾಟಗಾರ ಭಾವಚಿತ್ರದ ಮೆರವಣಿಗೆ: ಕೂಡಲಸಂಗಮದಿಂದ ಆರಂಭಗೊಂಡ ಅಮೃತ ಮಹೋತ್ಸವದ ನಡಿಗೆಯಲ್ಲಿ 75 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳಗಳ ಮೆರವಣಿಗೆ ಗಮನ ಸೆಳೆಯಿತು. ಅದರಲ್ಲಿ ಮಹಾತ್ಮಾ ಗಾಂಧಿ, ಸುಭಾಶ್ಚಂದ್ರ ಬೋಸ್, ಬಾಲ ಗಂಗಾಧರ ತಿಲಕ್, ಶಿವಾಜಿ, ಟಿಪ್ಪು ಸುಲ್ತಾನ್ ಸೇರಿದಂತೆ ಅನೇಕ ದಾರ್ಶನಿಕರ ಭಾವಚಿತ್ರಗಳ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.
ಮಂಗಳೂರಿನಲ್ಲಿ 100 ಮೀ. ರಾಷ್ಟ್ರಧ್ವಜದ ಜೊತೆ 28 ಕಿ.ಮೀ ನಡಿಗೆ!
ಈಶ್ವರಪ್ಪಗೆ ಬುದ್ಧಿ ಮಂದವಾಗಿದೆ, ನಾಲಿಗೆಗೂ ತಲೆಗೂ ಲಿಂಕ್ ಇಲ್ಲ: ನೆಹರೂ ಅವರ ವಿರುದ್ಧ ಮಾತನಾಡಿರೋ ಮಾಜಿ ಸಚಿವ K.S. ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಕಾಶಪ್ಪನವರ, ನೆಹರೂ ಅವರ ಬಗ್ಗೆ ಈಶ್ವರಪ್ಪಗೆ ಏನು ಗೊತ್ತಿಲ್ಲ, ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದು 11 ವರ್ಷಗಳ ಕಾಲ ಜೈಲಿಗೆ ಹೋಗಿ ಬಂದಂತಹ ನೆಹರೂ ಅವರ ವ್ಯಕ್ತಿತ್ವದ ಬಗ್ಗೆ ಗೊತ್ತಿಲ್ಲದ ಈಶ್ವರಪ್ಪನ ಬುದ್ದಿ ಮಂಕಾಗಿದೆ, ಅವರ ನಾಲಿಗೆಗೂ ತಲೆಗೂ ಲಿಂಕ್ ಇಲ್ಲ, ಅಂತವರ ಬಗ್ಗೆ ಮಾತನಾಡೋದು ಏನಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ನಡೆಸಿದರು.