ದೇಶದ ಇಂದಿನ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಅಪಾರ ಕೊಡುಗೆಯೇ ಕಾರಣ ಎಂದ ಮಾಜಿ ಶಾಸಕಿ ಸೌಮ್ಯಾರೆಡ್ಡಿ

ಬೆಂಗಳೂರು(ಡಿ.29): ದೇಶದ ಇಂದಿನ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಅಪಾರ ಕೊಡುಗೆಯೇ ಕಾರಣ ಎಂದು ಮಾಜಿ ಶಾಸಕಿ ಸೌಮ್ಯಾರೆಡ್ಡಿ ಹೇಳಿದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಗುರುವಾರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 139ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ದೇಶದ ಅಭ್ಯುದಯಕ್ಕೆ ಕಾಂಗ್ರೆಸ್‌ ಪಕ್ಷವೇ ಸೂಕ್ತ ಎಂದರು. 

ಕಾಂಗ್ರೆಸ್ ಸಂಸ್ಥಾಪನಾ ದಿನ: ಇಂದು ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿವ ಸಂಭ್ರಮ, ಡಿಕೆಶಿ

ಪದ್ಮನಾಭನಗರ ಬ್ಲಾಕ್ ಅಧ್ಯಕ್ಷ ರಘುನಾಥ್ ನಾಯ್ಡು, ಎಲ್.ಶ್ರೀನಿವಾಸ್, ಎಂ.ವಿ.ಪ್ರಸಾದ್ ಬಾಬು, ಸಂಜಯ್‌ಗೌಡ, ಬಾಲಕೃಷ್ಣ, ಗೋವಿಂದ ರಾಜು, ಈ.ಮಹಾದೇವ್‌ ಪಾಲ್ಗೊಂಡಿದ್ದರು.