ಹುನಗುಂದ: ಶಾಸಕ ಕಾಶಪ್ಪನವರ್‌ ವಿರುದ್ಧ ಪೆನ್ ಡ್ರೈವ್ ಬಾಂಬ್ ಸಿಡಿಸಿದ ದೊಡ್ದನಗೌಡ ಪಾಟೀಲ್!

ಹುನಗುಂದ ಮತಕ್ಷೇತ್ರದಲ್ಲಿ ಅವ್ಯಾಹತವಾಗಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಇಲಕಲ್ ತಹಶೀಲ್ದಾರ್‌ ಕಚೇರಿಯಲ್ಲಿ ಲೋಕಾಯುಕ್ತರ ಹೆಸರಲ್ಲಿ ಹಣ ವಸೂಲಿ ಮಾಡಿರೋ ಬಗ್ಗೆ ಸಿಬ್ಬಂದಿಗಳು ಮಾತನಾಡಿರೋ ವಿಡಿಯೋ ವೈರಲ್ ಆಗಿದ್ದು, ಈ ಕುರಿತು ತನಿಖೆಯಾಗಬೇಕು: ಮಾಜಿ ಶಾಸಕ ದೊಡ್ಡನಗೌಡ ಪಾಟೀಲ 

Former MLA Doddanagouda Patil Allegation against MLA Vijayanand Kashappanavar's Corruption grg

ಬಾಗಲಕೋಟೆ(ಡಿ.15):  ಹುನಗುಂದ ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದೆ. ಇನ್ನು ಸಾಕಷ್ಟು ಇವೆ. ಇನ್ನು ಇಲ್ಲಿ ಇದೆ, ಇದರಲ್ಲಿ ಇನ್ನೂ ಹಲವಾರು ಪ್ರಕರಣಗಳು ಇವೆ ಎಂದು ಜೇಬಿನಲ್ಲಿದ್ದ ಪೆನ್ ಡ್ರೈವ್ ತೋರಿಸುವ ಮೂಲಕ ಹಾಲಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಮಾಜಿ ಶಾಸಕ ದೊಡ್ದನಗೌಡ ಪಾಟೀಲ್ ಪೆನ್ ಡ್ರೈವ್ ಬಾಂಬ್ ಸಿಡಿಸಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಶಾಸಕ ದೊಡ್ದನಗೌಡ ಪಾಟೀಲ್ ಅವರು, ಸಮಯ ಬಂದಾಗ ಬಿಚ್ಚಿಡುಡ್ತೇನೆ. ಇದೇ ತರ ಸಬ್ಜೆಕ್ಟ್ ಇವೆ. ಹುನಗುಂದ ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿವೆ ಎಂದು ಆರೋಪಿಸಿದ್ದಾರೆ. 

ಗೋಡ್ಸೆ ಸಂತತಿಯಿಂದ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ: ಸಚಿವ ತಿಮ್ಮಾಪೂರ

ಶಾಸಕರಿಗೆ ಸಂಬಂಧಿಸಿದಂತೆ ಇವೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ದೊಡ್ದನಗೌಡ ಪಾಟೀಲ್ ಅವರು, ಅದರದ್ದು ಇವೆ. ಶಾಸಕರಿಗೆ ಸಂಬಂಧಿಸಿದ್ದು ಇರುತ್ತೆ, ಇಲ್ಲದೆ ಹೇಗೆ?. ಭ್ರಷ್ಟಾಚಾರದ್ದು ಇವೆ. ಅವುಗಳನ್ನ ಯಾವ ರೀತಿ ಸಮಯ ಸಂದರ್ಭ ನೋಡಿಕೊಂಡು ಬಿಡ್ತೀನಿ. ಪೆನ್ ಡ್ರೈವ್ ರೆಡಿ ಇದೆ ಅಂತ ಬಾಂಬ್‌ ಸಿಡಿಸಿದ್ದಾರೆ. 

ಇಲಕಲ್ ತಹಶೀಲ್ದಾರ ಕಚೇರಿಯಲ್ಲಿ ಲೋಕಾ ಹೆಸರಲ್ಲಿ ವಸೂಲಿ ದಂಧೆ 

ಜಿಲ್ಲೆಯ ಇಲಕಲ್ ತಹಶೀಲ್ದಾರ್‌ ಕಚೇರಿಯಲ್ಲಿ ಲೋಕಾಯುಕ್ತರ ಹೆಸರಿನಲ್ಲಿ ಹಣ ವಸೂಲಿ ದಂಧೆ ನಡೆದಿದೆ ಎಂದು ಆರೋಪಿಸಿರುವ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್‌ ಈ ಕುರಿತು ಸಂಪೂರ್ಣ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ. 

ಹುನಗುಂದ ಮತಕ್ಷೇತ್ರದಲ್ಲಿ ಅವ್ಯಾಹತವಾಗಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಇಲಕಲ್ ತಹಶೀಲ್ದಾರ್‌ ಕಚೇರಿಯಲ್ಲಿ ಲೋಕಾಯುಕ್ತರ ಹೆಸರಲ್ಲಿ ಹಣ ವಸೂಲಿ ಮಾಡಿರೋ ಬಗ್ಗೆ ಸಿಬ್ಬಂದಿಗಳು ಮಾತನಾಡಿರೋ ವಿಡಿಯೋ ವೈರಲ್ ಆಗಿದ್ದು, ಈ ಕುರಿತು ತನಿಖೆಯಾಗಬೇಕು ಮತ್ತು ಹುನಗುಂದ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮರಳು ದಂಧೆ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಸಂಬಂಧ ಪೆನ್ ಡ್ರೈವ್ ಸಹ ಇದ್ದು ಕಾಲ ಬಂದಾಗ ಬಿಡುಗಡೆ ಮಾಡುವುದಾಗಿ ದೊಡ್ಡನಗೌಡ ಪಾಟೀಲ ಹೇಳಿದ್ದಾರೆ. 

Latest Videos
Follow Us:
Download App:
  • android
  • ios