ವಿಷ ಕುಡಿವ ಬದಲು ಕಾಂಗ್ರೆಸ್ ಸೇರಿದೆ: ಮಾಜಿ ಶಾಸಕ ಗೌರಿಶಂಕರ್
ಚನ್ನಿಗಪ್ಪ ಅವರ ಕುಟುಂಬ 35 ವರ್ಷಗಳ ಕಾಲ ದೇವೇಗೌಡರ ಕುಟುಂಬಕ್ಕೆ ಹೆಗಲಿಗೆ ಹೆಗಲು ಕೊಟ್ಟು ದುಡಿದಿದೆ. ಆದರೆ ಇಂದು ಬಿಜೆಪಿ ಜತೆ ಹೋಗುತ್ತಿರುವ ಜೆಡಿಎಸ್ ಕ್ರಮ ವಿರೋಧಿಸಿ ಕಾರ್ಯಕರ್ತರು ಬಿಜೆಪಿ ಜತೆ ಹೋದರೆ ವಿಷ ಕೊಟ್ಟು ಹೋಗಿ ಎಂದು ಆದೇಶಿಸುತ್ತಿದ್ದಾರೆ.
ಬೆಂಗಳೂರು (ನ.16): ಚನ್ನಿಗಪ್ಪ ಅವರ ಕುಟುಂಬ 35 ವರ್ಷಗಳ ಕಾಲ ದೇವೇಗೌಡರ ಕುಟುಂಬಕ್ಕೆ ಹೆಗಲಿಗೆ ಹೆಗಲು ಕೊಟ್ಟು ದುಡಿದಿದೆ. ಆದರೆ ಇಂದು ಬಿಜೆಪಿ ಜತೆ ಹೋಗುತ್ತಿರುವ ಜೆಡಿಎಸ್ ಕ್ರಮ ವಿರೋಧಿಸಿ ಕಾರ್ಯಕರ್ತರು ಬಿಜೆಪಿ ಜತೆ ಹೋದರೆ ವಿಷ ಕೊಟ್ಟು ಹೋಗಿ ಎಂದು ಆದೇಶಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ತುಮಕೂರು ಗ್ರಾಮಾಂತರ ಜೆಡಿಎಸ್ ಮಾಜಿ ಶಾಸಕ ಗೌರಿಶಂಕರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಅವರು ಮಾತನಾಡಿದರು.
ಶಿವಕುಮಾರ್ ಅವರು ಚುನಾವಣೆಗೂ ಮುನ್ನ ಕಾಂಗ್ರೆಸ್ 136 ಸೀಟುಗಳನ್ನು ಗೆಲ್ಲಲಿದೆ ಎಂಬ ಭವಿಷ್ಯ ನುಡಿದರು. ಅದರಂತೆ ಕಾಂಗ್ರೆಸ್ ಪಕ್ಷ 136 ಸೀಟುಗಳನ್ನು ಗೆದ್ದಿದೆ. ದಾಸರಹಳ್ಳಿ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರಗಳು ಅವಳಿ ಕ್ಷೇತ್ರಗಳಿದ್ದಂತೆ. ನಾನು ಹಾಗೂ ಮಂಜುನಾಥ್ ಅವರು ಒಟ್ಟಿಗೆ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಒಟ್ಟಿಗೆ ದುಡಿದು ಕಾಂಗ್ರೆಸ್ ಬಲ ಹೆಚ್ಚಿಸುತ್ತೇವೆ ಎಂದರು.
ವಿದ್ಯುತ್ ಕಳ್ಳತನ ಪ್ರಕರಣ: ಕುಮಾರಸ್ವಾಮಿ-ಶಿವಕುಮಾರ್ ವಾಕ್ಸಮರ
ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ನಾವು ಪಕ್ಷದಲ್ಲಿ ಮುಂದುವರಿಯುವುದಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ಭೇಟಿ ಮಾಡಿ ಹೇಳಿ ಬಂದಿದ್ದೇವೆ. ನನ್ನ ಕ್ಷೇತ್ರದ ಹಳ್ಳಿಗಳಲ್ಲಿ ನಮ್ಮ ಕಾರ್ಯಕರ್ತರು ಬಿಜೆಪಿಯವರ ಜತೆ ಸೇರುವುದಿಲ್ಲ. ಅಷ್ಟರ ಮಟ್ಟಿಗೆ ಜಿದ್ದಾಜಿದ್ದಿನ ರಾಜಕೀಯ ಮಾಡುತ್ತೇವೆ. ನನ್ನ ವಿರುದ್ಧ ಗೆದ್ದಿರುವ ಶಾಸಕರ ಜತೆ ನಾನು ಕಳೆದ 15 ವರ್ಷಗಳಿಂದ ವ್ಯಕ್ತಿಗತವಾಗಿ ಯುದ್ಧ ಮಾಡಿದ್ದೇವೆ. ಈಗ ಅವರ ಜತೆ ಕೈಕುಲುಕಿ ರಾಜಕೀಯ ಮಾಡಲು ನಾನು ಮುಂದಾದರೂ ಕಾರ್ಯಕರ್ತರು ಮಾತ್ರ ಯಾವುದೇ ಕಾರಣಕ್ಕೂ ಅವರ ಜತೆ ಕೈಜೋಡಿಸುವುದಿಲ್ಲ. ಹೀಗಾಗಿ ಸ್ವ ಇಚ್ಛೆಯಿಂದ ಕಾಂಗ್ರೆಸ್ ಸೇರಿದ್ದೇನೆ ಎಂದು ಹೇಳಿದರು.