ಈಗಲೇ ಕಾಂಗ್ರೆಸ್ ಸರ್ಕಾರದೊಳಗೆ ಅಸಹನೆ ಕುದಿಯುತ್ತಿದೆ: ಸಿ.ಟಿ.ರವಿ

ಕಾಂಗ್ರೆಸ್ ಒಳಗೆ ಭೂಕಂಪದ ಮುನ್ಸೂಚನೆ ಕಾಣ್ತಿದೆ ಅನ್ಸತ್ತೆ, ಆ ಭೂಕಂಪ ಕಾಂಗ್ರೆಸ್ ಪಕ್ಷವನ್ನೇ ದುರ್ಬಲಗೊಳಿಸುವ ಭೂಕಂಪ ಆಗಬಹುದು, ಆಗದಿರಬಹುದು: ಮಾಜಿ ಶಾಸಕ ಸಿ.ಟಿ. ರವಿ 

Former MLA CT Ravi Slams Congress grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಮೇ.23): ಕಾಂಗ್ರೆಸ್ ಸರ್ಕಾರದ ಆರಂಭದಲ್ಲೇ ಸರ್ಕಾರದ ಒಳಗೆ ಅಸಹನೆ ಕುದಿಯುತ್ತಿರುವುದು ನೋಡಿದರೇ, ಕಾಂಗ್ರೆಸ್ ಒಳಗೆ ಭೂಕಂಪ ಸಂಭವಿಸುವ ಮುನ್ಸೂಚನೆ ಕಾಣುತ್ತಿದೆ ಎಂದು ಬಿಜೆಪಿ ರಾ ಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಎಂ.ಬಿ.ಪಾಟೀಲ್ ಹೇಳಿಕೆ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿ, ಈ ಅಸಹನೆ ಭೂಕಂಪ ಕಾಂಗ್ರೆಸ್ ಪಕ್ಷವನ್ನೇ ದುರ್ಬಲಗೊಳಿಸುವ ಭೂಕಂಪ ಆಗಬಹುದು. 

ಈಗಲೇ ಏಕೆ ಮುಖ್ಯಮಂತ್ರಿ ಕುರ್ಚಿ ಬಗ್ಗೆ ಚರ್ಚೆ : 

ಸಿದ್ದರಾಮಯ್ಯ ಅವರು ಈಗ ತಾನೇ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದಾರೆ. ಈಗಲೇ ಏಕೆ ಮುಖ್ಯಮಂತ್ರಿ ಕುರ್ಚಿ ಬಗ್ಗೆ ಚರ್ಚೆಯಾಗುತ್ತಿದೆ ಗೊತ್ತಾಗುತ್ತಿಲ್ಲ ಎಂದರು.ಇದನ್ನು ಗಮನಿಸಿದಾಗ ಒಳಗೆ ಏನೋ ನಡೆಯುತ್ತಿದೆ ಅನಿಸುತ್ತಿದೆ. ಪಕ್ಷದಲ್ಲಿ ಅಸಹನೆ ಹುಟ್ಟುವುದು ಕಡೆ ವರ್ಷದಲ್ಲಿ, ಆರಂಭದಲ್ಲೇ ಒಳಗೆ ಕುದಿಯುತ್ತಿದೆ ಎಂದರೇ, ಭೂಕಂಪದ ಮುನ್ಸೂಚನೆ ಯಾಕೋ ಕಾಣುತ್ತಿದೆ ಎಂದು ಹೇಳಿದರು. ಮುಖ್ಯಮಂತ್ರಿ ಯಾರು ಎಂಬ ವಿಚಾರಕ್ಕೂ ಬಿಜೆಪಿಗೂ ಸಂಬಂಧವಿಲ್ಲ, ನಾವು ವಿರೋಧ ಪಕ್ಷದಲ್ಲಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಿದ್ದೇವೆ. ಕಾಂಗ್ರೆಸ್ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಿ ಎಂದರು.

ಮೋಸ ಹೋಗಬೇಡಿ, ಹಣ ಕೇಳಿ ನಿಮಗೂ ಬರಬಹುದು ಅವಧೂತ ವಿನಯ್ ಗುರೂಜಿ ಮೆಸೇಜ್!

ನೂತನ ಶಾಸಕ ತಮ್ಮಯ್ಯನಿಗೆ ರವಿ ಅಭಿನಂದನೆ

ವಿಧಾನಸೌಧದ ಪಡಸಾಲೆಯಲ್ಲಿ ಸರ್... ಸಿ.ಟಿ.ರವಿ ಸೋಲ್ಸಿದ್ದು ನಾನೇ... ಸಿ.ಟಿ.ರವಿ ಸೋಲ್ಸಿದ್ದು ನಾನೇ ಎಂದು ತನ್ನನ್ನ ತಾನು ಪರಿಚಯಿಸಿಕೊಳ್ಳುತ್ತಿದ್ದ ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯನಿಗೆ ಸಿ.ಟಿ.ರವಿ ಅಭಿನಂದನೆ ಸಲ್ಲಿಸಿದ್ದಾರೆ. ಪರಿಚಯ ಮಾಡಿಕೊಳ್ಳುವಾಗ ಅನಿವಾರ್ಯ, ಅವರಿಗೆ ಯಾವ ಪಾರ್ಟಿಯಲ್ಲಿ ಇದ್ದೇ ಅಂದ್ರೆ ಬಿಜೆಪಿ ಅಂತಾನೇ ಹೇಳಬೇಕು. ಬಿಜೆಪಿಯಲ್ಲಿ ಗುರು-ಶಿಷ್ಯರ ಸಂಬಂಧ ಇಲ್ಲ. ನಾವು ಆ ರೀತಿ ಇಟ್ಟುಕೊಳ್ಳಲ್ಲ. ನಮ್ಮಲ್ಲಿ ಎಲ್ಲರೂ ಒಂದೇ. ಎಲ್ಲರೂ ಕಾರ್ಯಕರ್ತರು ಅಷ್ಟೆ. ಕಾರ್ಯಕರ್ತರು, ನಾಯಕರು ಅಷ್ಟೆ ಇರೋದು. ಬಿಜೆಪಿಯಲ್ಲಿ 14-15 ವರ್ಷ ಇದ್ದೆ. ಹೇಳಬೇಕಾಗುತ್ತೆ. ಬಿಜೆಪಿಯವ್ರು ನನ್ನನ್ನ ಮುನ್ಸಿಪಾಲಿಟಿ ಅಧ್ಯಕ್ಷರನ್ನಾಗಿ ಮಾಡಿದ್ರು ಹೇಳಬೇಕಾಗುತ್ತೆ. ಅದಕ್ಕೂ ಮುಂಚೆ ಕಾಂಗ್ರೆಸ್, ಅದಕ್ಕೂ ಮುಂಚೆ ಜೆಡಿಎಸ್‍ನಲ್ಲಿ ಇದ್ದೇ ಎಂದು ಹೇಳಬೇಕಾಗುತ್ತೆ. ಈಗ ಮತ್ತೆ ಕಾಂಗ್ರೆಸ್ಸಿಗೆ ಬಂದಿದ್ದೇನೆ ಎಂದೇ ಪರಿಚಯ ಮಾಡಿಕೊಳ್ಳಬೇಕು. ಅದ ಬಿಟ್ರೆ ಬೇರೆ ಏನ್ ಪರಿಚಯ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ. ಇಷ್ಟಾದ ಮೇಲೂ ಅವರು ಗೆದ್ದಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಯಾವುದೇ ಹೊಟ್ಟೆಕಿಚ್ಚು ಇಲ್ಲ. ಗೆಲುವೊಂದೇ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಾನದಂಡ ಅಲ್ಲ. ಅವರು ಒಳ್ಳೆ ಕೆಲಸ ಮಾಡಲಿ. ಒಳ್ಳೆ ಕೆಲಸದ ಮೂಲಕ ಒಳ್ಳೆ ಹೆಸರು ಪಡೆಯಲಿ ಎಂದು ಕಿವಿಮಾತು ಹೇಳಿದ್ದಾರೆ.ನಾವು ಏನೇನು ಯೋಜನೆಗಳನ್ನ ಚಿಕ್ಕಮಗಳೂರಿಗೆ ತಂದಿದ್ದೇವೋ ಆ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗುವಂತೆ ನೋಡಿಕೊಳ್ಳಲಿ ಎಂದರು.

Latest Videos
Follow Us:
Download App:
  • android
  • ios