ಭ್ರಷ್ಟಾಚಾರದ ಹಣ ಚೆಲ್ಲಿ ರಾಜ್ಯದಲ್ಲಿ ಉಪಚುನಾವಣೆ ಗೆದ್ದಿದ್ದಾರೆ: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ರೇಣುಕಾಚಾರ್ಯ

ಜನಾದೇಶ ನಮ್ಮ ವಿರುದ್ಧ ಇದೇ ಅಂತ ನಾನು ಹೇಳಲ್ಲಾ. ಕಾರ್ಯಕರ್ತರು ಮುಖಂಡರಿಗೆ ಮನವಿ ಮಾಡಿಕೊಳ್ಳುತ್ತೇನೆ, ಸೋಲೆ ಗೆಲುವಿನ ಮೆಟ್ಟಿಲು. ಕಾರ್ಯಕರ್ತರು ಆತ್ಮಸ್ಥೈರ್ಯದಿಂದ ಕುಂದಬಾರದು. ಯಾರೂ ಕೂಡ ಮನಸ್ಸಿಗೆ ನೋವು ಉಂಟು ಮಾಡಿಕೊಳ್ಳಲಾರದು ಪಕ್ಷ, ನಾವು ನಿಮ್ಮ ಜೊತೆ ಇದ್ದೇವೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

Former Minister MP Renukacharya React to Congress won in Karnataka Byelection grg

ದಾವಣಗೆರೆ(ನ.23):  ಮಹಾರಾಷ್ಟ್ರದಲ್ಲಿ‌ ಕಾಂಗ್ರೆಸ್‌ಗೆ ಮಾರ್ಮಾಘಾತವಾಗಿದೆ. ಜಾರ್ಖಂಡ್‌ನಲ್ಲಿ‌ ಕಾಂಗ್ರೆಸ್ ಬಂದಿದೆ. ರಾಕ್ಯದ ಮೂರು‌ ಉಪ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು, ಹಣ ಬಲ, ತೋಳ್ಬಲ, ಅಧಿಕಾರದ‌ ಬಲದಿಂದ. ಭ್ರಷ್ಟಾಚಾರದ ಹಣ ಲೂಟಿ ಹೊಡೆದು ಹಣ ಚೆಲ್ಲಿ ಚುನಾವಣೆ ಗೆದಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ. 

ಮಹಾರಾಷ್ಟ್ರ, ಜಾರ್ಖಂಡ್, ರಾಜ್ಯದ ಮೂರು ಉಪಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ ಅವರು,  ಜನಾದೇಶ ನಮ್ಮ ವಿರುದ್ಧ ಇದೇ ಅಂತ ನಾನು ಹೇಳಲ್ಲಾ. ಕಾರ್ಯಕರ್ತರು ಮುಖಂಡರಿಗೆ ಮನವಿ ಮಾಡಿಕೊಳ್ಳುತ್ತೇನೆ, ಸೋಲೆ ಗೆಲುವಿನ ಮೆಟ್ಟಿಲು. ಕಾರ್ಯಕರ್ತರು ಆತ್ಮಸ್ಥೈರ್ಯದಿಂದ ಕುಂದಬಾರದು. ಯಾರೂ ಕೂಡ ಮನಸ್ಸಿಗೆ ನೋವು ಉಂಟು ಮಾಡಿಕೊಳ್ಳಲಾರದು ಪಕ್ಷ, ನಾವು ನಿಮ್ಮ ಜೊತೆ ಇದ್ದೇವೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ. 

ಮೂರನೇ ತಲೆಮಾರಿಗೆ ರಾಮನಗರದಿಂದ ಜೆಡಿಎಸ್ ವಾಶ್‌ಔಟ್; ನಿಖಿಲ್ ಕುಮಾರಸ್ವಾಮಿಗೆ ಹ್ಯಾಟ್ರಿಕ್ ಸೋಲು!

ಸಂಡೂರಿನಲ್ಲಿ ಎಂಟು‌ ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ. ಮುಂದೆ ವಿಜಯೇಂದ್ರ ಅವರ ನೇತೃತ್ವದಲ್ಲಿ 135 ಸ್ಥಾನ ಗೆಲ್ತೀವಿ ಕಾರ್ಯಕರ್ತರು ಕುಂದುವುದು ಬೇಡ ಎಂದಿದ್ದಾರೆ. 

ದೀಪ ಆರುವಾಗ ಜೋರಾಗಿ ಉರಿಯುತ್ತದೆ, ಪಟಾಕಿ ಹಚ್ಚಿದಾಗ ಸೌಂಡ್ ಬರುತ್ತೇ ನಂತರ ಸುಟ್ಟು ಕರಕಲಾಗುತ್ತದೆ. ಯಡಿಯೂರಪ್ಪನವರ ಆಶೀರ್ವಾದಿಂದ ನೀವು ಶಾಸಕರಾಗಿದ್ದು. ಅದನ್ನ ನೀವು ಮರಿಯೋದ ಬೇಡ. ಮಂತ್ರಿ ಮಾಡಿಲ್ಲಾ ಎಂಬ ಕಾರಣಕ್ಕೆ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಮಾತನಾಡುತ್ತಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. 

ಬಳ್ಳಾರಿ ರೆಡ್ಡಿ ಪಡೆಗೆ ಮತ್ತೆ ಗುಮ್ಮಿದ ಟಗರು; ಕಾಂಗ್ರೆಸ್ ಕೋಟೆಯಲ್ಲಿ ಸೋತರೂ ತೊಡೆ ತಟ್ಟಿದ ಬಂಗಾರು!

ವಿಜಯೇಂದ್ರ ನೇತೃತ್ವದಲ್ಲಿ ಮುಂದಿನ ಚುನಾವಣೆ ಮಾಡ್ತೀವಿ, ಬಿಜೆಪಿ ಗೆಲ್ಲುತ್ತೆ. ಮುಂದುಗಡೆ ಗೂಳಿ ಹೋಗ್ತಾ ಇದೇ ಹಿಂದುಗಡೆ ತೋಳ ಹೋಗ್ತಾ ಇದೇ ಕಾಯ್ತಾ ಇರ್ರೀ ಎಂದು ಯತ್ನಾಳ್‌ಗೆ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ. 
ಯಾರ ಹೆಸರು ಹೇಳಲು ನಾನು ಇಷ್ಟ ಪಡೋಲ್ಲಾ. 2023 ರ ಚುನಾವಣೆಯಲ್ಲಿ ಯಾರು ವಿಧಾನಸೌಧದ ಹೊರಗೆ ಒಳಗೆ ನಾಲಿಗೆ ಹರಿಬಿಟ್ಟಿದ್ರು. ಬಾಯಿ ಚಟಕ್ಕೆ ಇವರಿಗೆ ಟಿ ಆರ್ ಪಿ ಬೇಕು ಮಾತನಾಡುತ್ತಾರೆ. 2023 ರ ಚುನಾವಣೆಯ ಸೋಲಿಗೆ ಅವರೇ ಕಾರಣ, ಆಗ ಹೈಕಮಾಂಡ್ ಕ್ರಮ ತೆಗೆದುಕೊಳ್ಳಲಿಲ್ಲಾ. ಹರಕು ಬಾಯಿಯಿಂದ ಯಾರ ಮಾತನಾಡುತ್ತಾರೋ ಅವರೇ 2023 ರ ಚುನಾವಣೆಯಲ್ಲಿ ಸೋಲಿಗೆ ಕಾರಣ. ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಹೈಕಮಾಂಡ್. ವಿಜಯೇಂದ್ರ ಅವರನ್ನ ವಿರೋಧ ಮಾಡುವುದು ಒಂದೇ ಹೈಕಮಾಂಡ್ ವಿರುದ್ಧ ಮಾತನಾಡುವುದು ಒಂದೇ ಎಂದು ಯತ್ನಾಳ್‌ ವಿರುದ್ಧ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ. 

ಕಾಂಗ್ರೆಸ್‌ನಿಂದ ಬಂದ ಮೂರ್ನಾಲ್ಕು ಜನ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಸೈಕಲ್ ತುಳಿದು ಪಕ್ಷ ಕಟ್ಟಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂತು. ನಿಮ್ಮ ಹರಕು ಬಾಯಿಯಿಂದ ವಿರೋಧ ಮಾಡುವುದು ಸರಿಯಲ್ಲಾ. ನಿಮ್ಮ ಹರಕು ಬಾಯಿಯಿಂದ ಮೂರು‌ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಯಡಿಯೂರಪ್ಪ, ವಿಜಯೇಂದ್ರ ಹೈಕಮಾಂಡ್ ಬಗ್ಗೆ ಟೀಕೆ ಮಾಡ್ತಾರೆ. ಕಾಂಗ್ರೆಸ್ ವಿರುದ್ಧ ಹೋರಾಟ ಬೇಡ ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ. ಮಂತ್ರಿ ಆಗಿಲ್ಲಾ ಎಂಬ ಒಂದೇ ಕಾರಣಕ್ಕೆ ನಾಲಿಗೆ ಹರಿ ಬಿಟ್ಟು ಮಾತನಾಡುತ್ತಾರೆ. ನಮ್ಮ ಹರಕು ಬಾಯಿಯಿಂದ‌ ನಾವು ಸೋತಿದ್ದೇವೆ. ಹೈಫೈ ‌ಲೈಫ್ ನಡೆಸುತ್ತಿದ್ದೀರಿ, ಯಡಿಯೂರಪ್ಪ ಉಪವಾಸ ವನವಾಸ ಇದ್ದು‌ ಪಕ್ಷ ಕಟ್ಟಿ ಜೈಲಿಗೆ ಹೋಗಿದ್ದರು. ಮುಂದಿನ ಚುನಾವಣೆಗೆ ಈ ಉಪಚುನಾವಣೆ ದಿಕ್ಸೂಚಿಯಲ್ಲ. ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Latest Videos
Follow Us:
Download App:
  • android
  • ios