ಬಳ್ಳಾರಿ ರೆಡ್ಡಿ ಪಡೆಗೆ ಮತ್ತೆ ಗುಮ್ಮಿದ ಟಗರು; ಕಾಂಗ್ರೆಸ್ ಕೋಟೆಯಲ್ಲಿ ಸೋತರೂ ತೊಡೆ ತಟ್ಟಿದ ಬಂಗಾರು!
ದಶಕದ ಬಳಿಕ ಬಳ್ಳಾರಿಗೆ ಬಂದರೂ ಜನಾರ್ಧನ ರೆಡ್ಡಿ ಸಂಡೂರಿನ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಲು ಸಾಧ್ಯವಾಗಲಿಲ್ಲ. ಮತದಾರರು ಮತ್ತೆ ಸಿಎಂ ಸಿದ್ದರಾಮಯ್ಯ ಅವರ ಗ್ಯಾರಂಟಿಗಳನ್ನು ನೋಡಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರನ್ನು ಗೆಲ್ಲಿಸಿದ್ದಾರೆ.
ಬಳ್ಳಾರಿ (ನ.23): ದಶಕದ ಬಳಿಕ ಬಳ್ಳಾರಿಗೆ ಬಂದರೂ ಸಂಡೂರಿನ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸದ ಜನಾರ್ಧನ ರೆಡ್ಡಿ. ಬಂಗಾರು ಹನುಮಂತು ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಸಂಡೂರು ಅಭಿವೃದ್ಧಿ ಆಗಿಲ್ಲ ಎಂಬ ಸಬೂಬು ಹೇಳುತ್ತಿದ್ದ ಮತದಾರರು ಮತ್ತೆ ಸಿಎಂ ಸಿದ್ದರಾಮಯ್ಯ ಅವರ ಗ್ಯಾರಂಟಿಗಳನ್ನು ನೋಡಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರನ್ನು ಗೆಲ್ಲಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಸಂಡೂರು ಕಾಂಗ್ರೆಸ್ ಭದ್ರಕೋಟೆ ಎಂಬ ಖ್ಯಾತಿಯನ್ನು ಉಳಿಸಿಕೊಂಡಿದೆ. ಆದರೆ, ಕಾಂಗ್ರೆಸ್ ಕೋಟೆಯಲ್ಲಿ ಸೋತರೂ, ತುಕಾರಾಂ ಪಡೆಗೆ ತೊಡೆ ತಟ್ಟಿದ್ದಾರೆ.
ಕಳೆದ 20 ವರ್ಷಗಳ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಭದ್ರಕೋಟೆ ಎಂದರೆ ಬಳ್ಳಾರಿ ಎಂದು ಹೇಳಲಾಗುತ್ತಿತ್ತು. ಆದರೆ, ಈ ಭದ್ರಕೋಟೆಗೆ ಸುಷ್ಮಾ ಸ್ವರಾಜ್ ಬಂದು ಸ್ಪರ್ಧಿಸಿ ಸೋತು ಹೋದ ನಂತರ ಇಲ್ಲಿ ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು ಸೇರಿ ಬಳ್ಳಾರಿ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಕಮಲವನ್ನು ಅರಳಿಸಿದ್ದರು. ಆದರೆ, ಯಾವಾಗ (ಕಳೆದ 15 ವರ್ಷಗಳ ಹಿಂದೆ) ಸಿದ್ದರಾಮಯ್ಯ ಬಳ್ಳಾರಿಯಿಂದ ಪಾದಯಾತ್ರೆ ಆರಂಭಿಸಿದರೋ ಆಗ ಕಾಂಗ್ರೆಸ್ ಪುನಃ ತನ್ನ ಅಧಿಃಪತ್ಯ ಸ್ಥಾಪಿಸಲು ಮುಂದಡಿಯಿಟ್ಟಿತು. ಇದಾದ ನಂತರ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಸ್ವತಃ ಕಮಲ ಅರಳಿಸಿದ್ದ ಶ್ರೀರಾಮುಲು ಅವರೇ ಸತತ ಸೋಲಿನಿಂದ ಕಂಗೆಟ್ಟು ಹೋಗಿದ್ದಾರೆ.
ಇದಾದ ನಂತರ ಗಣಿಗಾರಿಕೆ ಹಗರಣದಲ್ಲಿ ಜನಾರ್ಧನರೆಡ್ಡಿ ಜೈಲು ಸೇರಿ ಬಳ್ಳಾರಿ ಜಿಲ್ಲೆಗೆ ಕಾಲಿಡದಂತೆ ನ್ಯಾಯಾಲಯದ ಆದೇಶ ಹೊರಡಿಸಿತ್ತು. ಇತ್ತೀಚೆಗೆ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವಾಗ ನ್ಯಾಯಾಲದಿಂದ ಜನಾರ್ಧನ ರೆಡ್ಡಿ ಅವರು ಬಳ್ಳಾರಿ ಜಿಲ್ಲೆಗೆ ಹೋಗಬಹುದು ಎಂದು ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಅವರು ಸಂಡೂರಿನಲ್ಲಿಯೇ ನೆಲೆಯೂರಿ ಭರ್ಜರಿ ಪ್ರಚಾರ ಕಾರ್ಯಗಳನ್ನು ನಡೆಸಿದರೂ ಇದೀಗ ಮತದಾರರು ಮಾತ್ರ ಅವರನ್ನು ಕೈ ಹಿಡಿಯಲು ಮನಸ್ಸು ಮಾಡಲಿಲ್ಲ. ಅದರಲ್ಲಿಯೂ ಬಳ್ಳಾರಿಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರ ಮಾತ್ರ ಕಾಂಗ್ರೆಸ್ ಭದ್ರಕೋಟೆಯಾಗಿಯೇ ಉಳಿದುಕೊಂಡಿದೆ. ಇದೀಗ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಂಸದ ತುಕಾರಾಂ ಅವರ ಹೆಂಡತಿ ಅನ್ನಪೂರ್ಣ ತುಕಾರಾಂ ಅವರು ಗೆಲುವು ಸಾಧಿಸಿದ್ದಾರೆ. ಇನ್ನು ಜನಾರ್ಧನ ರೆಡ್ಡಿಯ ಆಪ್ತ ಬಂಗಾರು ಹನುಮಂತು ಅವರು ಸೋಲು ಅನುಭವಿಸಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣ ಫಲಿತಾಂಶದ ಕುತೂಹಲ: ಡಿ.ಕೆ. ಶಿವಕುಮಾರ್ ಕಾರ್ಯಕ್ರಮ ರದ್ದು
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲು ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೋಲಿಗೆ ಬಿಜೆಪಿ ಮುಖಂಡರು ಕಾರಣಗಳನ್ನ ವಿಶ್ಲೇಷಣೆ ಮಾಡುತ್ತಿದ್ದಾರೆ. ಮಾಜಿ ಸಚಿವ ಜನಾರ್ಧನ್ ರೆಡ್ಡಿ ಉಪ ಚುನಾವಣೆ ಪರೀಕ್ಷೆಯಲ್ಲಿ ಫೇಲಾಗಿದ್ದಾರೆ. ಜನಾರ್ದನ್ ರೆಡ್ಡಿಯ ಯಾವುದೇ ಪ್ರಯೋಗಗಳು ಕ್ಷೇತ್ರದಲ್ಲಿ ಯಶಸ್ವಿಯಾಗಲಿಲ್ಲ. ರೆಡ್ಡಿಗೆ ಹೆಚ್ಚಿನ ಆದ್ಯತೆ ನೀಡಿರುವುದಕ್ಕೆ ಶ್ರೀರಾಮುಲು ಬಣದಿಂದ ವಿರೋಧ ವ್ಯಕ್ತವಾಗಿದೆ. ಇನ್ನು ಶ್ರೀರಾಮುಲು ಇಲ್ಲಿ ಪ್ರಚಾರ ಕಣದಲ್ಲಿ ಹೆಚ್ಚು ಸಕ್ರಿಯವಾಗಲಿಲ್ಲ. ಹೆಚ್ಚಿನ ಸಂಖ್ಯೆಯ ಗಣಿ ಮಾಲೀಕರು ಜನಾರ್ದನ್ ರೆಡ್ಡಿಯ ಆಗಮನಕ್ಕೆ ಮುನಿಸಿಕೊಂಡಿದ್ದಾರೆ ಎಂದು ವಿಶ್ಲೇಷಣೆ ಮಾಡಿದ್ದಾರೆ.
ಇದನ್ನೂ ಓದಿ: ಕೋವಿಡ್ ವರದಿ ಬಗ್ಗೆ ವಿವಾದಾತ್ಮಕ ಹೇಳಿಕೆ; ನ್ಯಾಯಮೂರ್ತಿಗಳಿಗೆ ಕ್ಷಮೆ ಕೋರಿದ ಸಚಿವ ಪ್ರಹ್ಲಾದ್ ಜೋಶಿ!
ಇನ್ನು ಬಿಜೆಪಿಯಿಂದ ಅಂತರ ಕಾಪಾಡಿಕೊಂಡ ಗಣಿ ಮಾಲೀಕರು ಮತ್ತು ಕಾರ್ಮಿಕರು, ಕಾಂಗ್ರೆಸ್ ಗೆಲುವಿಗೆ ಸಹಕಾರ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕ್ಷೇತ್ರದ ಬಗ್ಗೆ ಹೆಚ್ಚು ಆಸಕ್ತಿ ವ್ಯಕ್ತಪಡಿಸುತ್ತಿದ್ದಂತೆ ಇತರ ನಾಯಕರು ಆಸಕ್ತಿ ತೋರಿಸದೇ ಅಂತರ ಕಾಯ್ದುಕೊಂಡರು. ಸಂಡೂರು ಗೆಲ್ಲುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ವಿಜಯೇಂದ್ರಗೆ ಹಿನ್ನಡೆ ಉಂಟಾಗಿದೆ. ಸಂಡೂರು ಕ್ಷೇತ್ರದಲ್ಲಿ ಬಿ.ವೈ. ವಿಜಯೇಂದ್ರ ಕೈ ಹಿಡಿಯದ ರಾಜಕೀಯ ಲೆಕ್ಕಾಚಾರ. ಆಪ್ತರ ಮೂಲಕ ಕ್ಷೇತ್ರದಲ್ಲಿ ಪ್ರಚಾರದ ಪ್ಲಾನ್ ಮಾಡಿದ್ದ ವಿಜಯೇಂದ್ರ ಬಗ್ಗೆ ಸ್ಥಳೀಯ ನಾಯಕರ ವಿರೋಧ ವ್ಯಕ್ತಪಡಿಸಿದ್ದರು.