ಚುನಾವಣೆ ಬಂದಂತೆ ಬಿಜೆಪಿ ಸರ್ಕಾರದಲ್ಲಿ ಪರ್ಸಂಟೇಜ್ 60ಕ್ಕೆ ಏರಿಕೆ: ಎಂ.ಬಿ. ಪಾಟೀಲ್
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಆರೋಗ್ಯ ಕ್ರಾಂತಿ, ವೈದ್ಯಕೀಯ ಕ್ರಾಂತಿ ಸೇರಿದಂತೆ ಅನೇಕ ತಂತ್ರಜ್ಞಾನದ ಅಭಿವೃದ್ಧಿ ಆಗಿದ್ದು, ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ. ಮೋದಿ ಸರ್ಕಾರದ ಅವಧಿಯಲ್ಲಿ ನಿರುದ್ಯೋಗ, ಬೆಲೆ ಏರಿಕೆ ಜನರ ಜೀವ ಹಿಂಡುತ್ತಿವೆ ಎಂದು ಬಿಎಸ್‌ವೈ 600 ಬೇಡಿಕೆಗಳ ಪೈಕಿ ಕೇವಲ 50 ಬೇಡಿಕೆ ಈಡೇರಿಸಿದ್ದಾರೆ. ಬಿಜೆಪಿ ಘೋಷಣೆಗಳು ಕೇವಲ ಅಧಿಕಾರಗಿಟ್ಟಿಸಿಕೊಳ್ಳಲು ಮಾತ್ರ ಎಂದು ಟೀಕಿಸಿದ ಎಂ.ಬಿ. ಪಾಟೀಲ್
ಬಸವಕಲ್ಯಾಣ(ಫೆ.04): ಈ 40 ಪರ್ಸಂಟ್ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಚುನಾವಣೆ ಸಮೀಪಿಸುತ್ತಿದ್ದಂತೆ ಇವರ ಶೇ. 60ಕ್ಕೆ ಏರಿದ್ದೆಯಾದಲ್ಲಿ ಅಚ್ಚರಿಯಿಲ್ಲ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದರು. ಶುಕ್ರವಾರ ಬಸವಕಲ್ಯಾಣದ ರಥ ಮೈದಾನದಲ್ಲಿ ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಚಿಂತನೆಗಳು ಸಾಮಾಜಿಕ ಚಳವಳಿ ಹಾಗೂ ಸಿದ್ಧಾಂತ ಆಧಾರಿತವಾಗಿವೆ ಎಂದರು.
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಆರೋಗ್ಯ ಕ್ರಾಂತಿ, ವೈದ್ಯಕೀಯ ಕ್ರಾಂತಿ ಸೇರಿದಂತೆ ಅನೇಕ ತಂತ್ರಜ್ಞಾನದ ಅಭಿವೃದ್ಧಿ ಆಗಿದ್ದು, ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ. ಮೋದಿ ಸರ್ಕಾರದ ಅವಧಿಯಲ್ಲಿ ನಿರುದ್ಯೋಗ, ಬೆಲೆ ಏರಿಕೆ ಜನರ ಜೀವ ಹಿಂಡುತ್ತಿವೆ ಎಂದು ಬಿಎಸ್‌ವೈ 600 ಬೇಡಿಕೆಗಳ ಪೈಕಿ ಕೇವಲ 50 ಬೇಡಿಕೆ ಈಡೇರಿಸಿದ್ದಾರೆ. ಬಿಜೆಪಿ ಘೋಷಣೆಗಳು ಕೇವಲ ಅಧಿಕಾರಗಿಟ್ಟಿಸಿಕೊಳ್ಳಲು ಮಾತ್ರ ಎಂದು ಟೀಕಿಸಿದರು.
Bidar: ಭಾಲ್ಕಿ ಕ್ಷೇತ್ರ ಅಭಿವೃದ್ಧಿಗೆ 24 ಕೋಟಿ: ಶಾಸಕ ಈಶ್ವರ ಖಂಡ್ರೆ
ಕೆಪಿಸಿಸಿ ಕಾರ್ಯಾಧಕ್ಷ ಈಶ್ವರ ಖಂಡ್ರೆ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಜೆಪಿ ಸರ್ಕಾರ ಕೇವಲ ಅನುದಾನ ಘೋಷಣೆ ಮಾಡುತ್ತದೆ ಹೊರತು ಅನುದಾನ ಸದ್ಬಳೆಕೆಯನ್ನು ಮಾಡುವಲ್ಲಿ ಯೋಚನೆ, ಯೋಜನೆಯನ್ನೂ ಮಾಡುವುದಿಲ್ಲ. ಈ ಭಾಗದ ಅಭಿವೃದ್ಧಿ ಬಿಜೆಪಿ ಸರ್ಕಾರಕ್ಕೆ ಬೇಕಿಲ್ಲ ಎಂದರು.
ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಬಿಕೆಡಿಬಿ ಆರಂಭಿಸಿದ್ದೆವು. ಕೋಂಗಳಿ ಬ್ಯಾರೇಜ್ ಮಾಡಿ ಬಸವಕಲ್ಯಾಣದ 15 ಕೆರೆಗಳಿಗೆ ನೀರು ತುಂಬುವ ಯೋಜನೆ ಇನ್ನೂ ನೀರು ಹರಿಸಿಲ್ಲ. ಶೇ. 40ರಷ್ಟುಭ್ರಷ್ಟಾಚಾರ ನಡೆಯುತ್ತಿರುವುದೇ ಇದಕ್ಕೆ ಕಾರಣ ಎಂದರು.
ಬಸವಕಲ್ಯಾಣ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿಯಾಗಲಿ ಅವರಿಗೆ ಈ ಜನ ವಿರೋಧಿ ಬಿಜೆಪಿಯನ್ನು ಬುಡಸಮೇತ ಕಿತ್ತುಹಾಕುವದಕ್ಕೆ ಮತದಾರರು ಮತ ಚಲಾಯಿಸಬೇಕು. ಟಿಕೆಟ್‌ಗಾಗಿ ಅರ್ಜಿ ಹಾಕಿದವರು ಸಾಕಷ್ಟುಜನರಿದ್ದಾರೆ. ಆದರೆ ಪಕ್ಷದ ಹೈಕಮಾಂಡ್ ಅರ್ಹರನ್ನು ಗುರುತಿಸಿ ಟಿಕೆಟ್ ನೀಡುತ್ತೆ ಅವರಿಗೆ ಗೆಲ್ಲಿಸಿ ತರುವದಕ್ಕೆ ಸಹಕರಿಸುವಂತೆ ಕೋರಿದರು.
ಶಾಸಕ ರಾಜಶೇಖರ ಪಾಟೀಲ್ ಹುಮನಾಬಾದ್ ಮಾತನಾಡಿ, ಅನುಭವ ಮಂಟಪ ನಿರ್ಮಾಣ ಮಾಡಲು ಆಗ್ರಹಿಸಿ ವಿಧಾನಸಭೆ ಒಳಗೆ ಹಾಗೂ ಹೊರಗೆ ಹೋರಾಟ ಮಾಡಿದ್ದು ಬಿ. ನಾರಾಯಣರಾವ್. ಅವರು ಈ ಕ್ಷೇತ್ರದ ಶಾಸಕರಾಗಿ ಶ್ರಮಿಸಿದ್ದರು. ಅವರ ಕನಸುಗಳನ್ನು ನನಸು ಮಾಡಲು ಕಾಂಗ್ರೆಸ್ ಅಭ್ಯರ್ಥಿಯನ್ನು ಮತ್ತೊಮ್ಮೆ ಇಲ್ಲಿ ಗೆಲ್ಲಬೇಕಾಗಿದೆ. ಶೇ. 40ರಷ್ಟುಕಮಿಷನ್ ಪಡೆಯುವ ಈ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯುವತ್ತ ಮತದಾರ ಮನಸ್ಸು ಮಾಡಬೇಕಿದೆ ಎಂದರು.
ಬಿಜೆಪಿ ಹಿರಿಯರು ನಿದ್ರೆಗೆ ಜಾರಿದ್ದರೆ, ಹೊಸಬರಿಂದ ಹಗಲುಗನಸು: ರಾಜಶೇಖರ ಪಾಟೀಲ್
ಕಾಂಗ್ರೆಸ್ ಪಕ್ಷ ಬಡವರ, ರೈತರ, ಯುವ ಪೀಳಿಗೆಯ ಹಾಗೂ ಶೋಷಿತರ ಏಳ್ಗೆಯನ್ನು ಬಯಸುವ ಪಕ್ಷವಾಗಿದೆ. ಕೇಂದ್ರ ಸಚಿವ ಭಗವಂತ ಖೂಬಾ ಕಾಂಗ್ರೆಸ್ ಮುಕ್ತ ಮಾಡುವ ಮಾತುಗಳನ್ನಾಡುತ್ತಿದ್ದಾರೆ. ಆದರೆ ಅದು ಅಸಾಧ್ಯದ ಮಾತು ಎಂದರು.
ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಕಾಂಗ್ರೆಸ್ ಬಡವರ ಪಕ್ಷವಾಗಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೆಯಾದಲ್ಲಿ ಬಡವರ ಏಳ್ಗೆಗೆ ಯೋಜನೆಗಳ ಮಹಾಪೂರ ಹರಿಸುತ್ತೇವೆ. ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.