Asianet Suvarna News Asianet Suvarna News

ಡಿಕೆಶಿ, ಸಿದ್ದರಾಮಯ್ಯ ಪರಸ್ಪರ ಯಾವಾಗ ಚುಚ್ಚಿಕೊಳ್ತಾರೋ?: ಕೆ.ಎಸ್‌.ಈಶ್ವರಪ್ಪ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಪ್ರತಿ​ಪಕ್ಷ ನಾಯ​ಕ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ​ ಹೇಳಿದರು ಎಂಬ ಕಾರ​ಣಕ್ಕಷ್ಟೇ ಪರ​ಸ್ಪರ ತಬ್ಬಿ​ಕೊ​ಳ್ಳು​ತ್ತಾ​ರೆ. ಆದರೆ, ಇಬ್ಬರ ಕೈಯಲ್ಲೂ ಚಾಕು ಇದೆ. ಯಾವಾಗ ಪರಸ್ಪರ ಚುಚ್ಚಿಕೊಳ್ಳುತ್ತಾರೋ ಗೊತ್ತಿ​ಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು. 

Former Minister KS Eshwarappa Slams On Siddaramaiah And DK Shivakumar gvd
Author
First Published Mar 3, 2023, 3:00 AM IST | Last Updated Mar 3, 2023, 3:00 AM IST

ಚಾಮರಾಜನಗರ (ಮಾ.03): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಪ್ರತಿ​ಪಕ್ಷ ನಾಯ​ಕ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ​ ಹೇಳಿದರು ಎಂಬ ಕಾರ​ಣಕ್ಕಷ್ಟೇ ಪರ​ಸ್ಪರ ತಬ್ಬಿ​ಕೊ​ಳ್ಳು​ತ್ತಾ​ರೆ. ಆದರೆ, ಇಬ್ಬರ ಕೈಯಲ್ಲೂ ಚಾಕು ಇದೆ. ಯಾವಾಗ ಪರಸ್ಪರ ಚುಚ್ಚಿಕೊಳ್ಳುತ್ತಾರೋ ಗೊತ್ತಿ​ಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು. ನಗ​ರ​ದಲ್ಲಿ ಗುರು​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿ, ಸಿದ್ದ​ರಾ​ಮಯ್ಯ ಅವರು ಕೆಲ ಬಾರಿ ಹೈಕಮಾಂಡ್‌ ಸೂಚಿಸಿದ ಕಡೆ ಸ್ಪರ್ಧಿಸು​ತ್ತೇ​ನೆ ಎನ್ನುತ್ತಾರೆ. 

ಹಾಗಿದ್ದರೆ, ಕೋಲಾರದಲ್ಲಿ ನಿಲ್ಲಲು ಅವ​ರಿ​ಗೆ ಹೈಕಮಾಂಡ್‌ ಹೇಳಿತ್ತಾ? ಅವರು ಬಾದಾ​ಮಿ​ಯಲ್ಲಿ ಸೋಲುವ ಭಯದಿಂದ ಕೋಲಾರಕ್ಕೆ ಹೋಗಿದ್ದಾರೆ. ಅವ​ರನ್ನು ಇದೀಗ ಅಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌​ನ ಒಳಗಿರುವವರೇ ಸೋಲಿಸಲಿದ್ದಾ​ರೆ ಎಂದರು. ಈ ಹಿಂದೆ ಮುಖ್ಯಮಂತ್ರಿ ಸ್ಥಾನ​ಕ್ಕೆ ಪ್ರತಿಸ್ಪರ್ಧಿ ಎಂದು ಜಿ.ಪರಮೇಶ್ವರ್‌ರನ್ನು ಸೋಲಿಸಿದರೆ, ತಮ್ಮ ಆಪ್ತ ರಮೇಶ್‌ ಕುಮಾರ್‌ ಮೂಲಕ ಮುನಿಯಪ್ಪರಿಗೆ ಸೋಲಿನ ರುಚಿ​ಕಾ​ಣಿ​ಸಿ​ದ​ರು. ​ಮತ್ತೊಂದು ಕಡೆ ಒಕ್ಕಲಿಗರು, ದಲಿತರು ಸಿದ್ದರಾಮಯ್ಯಗೆ ಪಾಠ ಕಲಿ​ಸಲು ಕಾಯುತ್ತಿದ್ದಾರೆ. 

4 ಸಚಿವರು ಸೇರಿ ಬಿಜೆಪಿಯ 8 ಶಾಸಕರು ಕಾಂಗ್ರೆಸ್ ಸೇರುವುದು ಖಚಿತ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಈ ಎರಡು ಸಮುದಾಯದವರು ಕೈಬಿಟ್ಟಿರುವ ಹಿನ್ನೆ​ಲೆ​ಯಲ್ಲಿ ಸಿದ್ದ​ರಾ​ಮಯ್ಯ ಮುಸ್ಲಿಂ ಓಲೈ​ಕೆಗೆ ಮುಂದಾ​ಗಿ​ದ್ದಾ​ರೆ ಎಂದು ಹೇಳಿದರು.ಸಿದ್ದರಾಮಯ್ಯ ಮಿಮಿಕ್ರಿ ಆರ್ಟಿಸ್ಟ್‌ ಆಗಬೇಕಿತ್ತು. ಪ್ರಧಾನಿ ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಅವ​ರಿಗೆ ಏಕವಚನದಲ್ಲಿ ವಾಗ್ದಾಳಿ ನಡೆ​ಸು​ತ್ತಾರೆ. ರಾಜ್ಯದ ಯಾವುದೇ ಕ್ಷೇತ್ರ​ದಲ್ಲಿ ನಿಂತರೂ ಗೆಲ್ಲುತ್ತೇನೆ ಅನ್ನುತ್ತಾರೆ. ಹಾಗಿದ್ದವರು ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಹೋಗಿದ್ದು ಯಾಕೆ ಎಂದು ಪ್ರಶ್ನಿಸಿದ ಈಶ್ವ​ರಪ್ಪ, ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡವರನ್ನು ನಾಯಕ ಎಂದು ಹೇಗೆ ಕರೆಯು​ತ್ತಾರೆ ಎಂದು ಕಿಡಿ​ಕಾ​ರಿ​ದ​ರು.

ಅನಾರೋಗ್ಯದಿಂದ ಸೋಮಣ್ಣ ಗೈರು: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ವಿಜಯಸಂಕಲ್ಪ ಯಾತ್ರೆಗೆ ಗೈರಾಗಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಸ್ಪಷ್ಟನೆ ನೀಡಿ​ದ್ದಾ​ರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಸಚಿವ ಸೋಮಣ್ಣ ನಡುವೆ ಯಾವುದೇ ಮುಸುಕಿನ ಗುದ್ದಾಟ ಇಲ್ಲ. ಆರೋಗ್ಯ ಸರಿ ಇಲ್ಲದ ಕಾರಣ ವಿಜಯಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಬಂದಿಲ್ಲ. ಅವರು ಅನಾರೋಗ್ಯದಿಂದಾಗಿ ಕ್ಷೇತ್ರದಲ್ಲೇ ಉಳಿದುಕೊಂಡಿ​ದ್ದಾ​ರೆ. ನಾನು ಕೂಡ ಯಡಿಯೂರಪ್ಪ ಅವ​ರ ಅನೇಕ ಕಾರ್ಯಕ್ರಮಕ್ಕೆ ಹೋಗಿಲ್ಲ. ಅದನ್ನೂ ಮುಸುಕಿನ ಗುದ್ದಾಟ ಎಂದು ಹೇಳಲು ಆಗುತ್ತಾ? ಅನಾರೋಗ್ಯದ ಕಾರಣದಿಂದ ಸೋಮಣ್ಣ ಕಾರ್ಯ​ಕ್ರ​ಮಕ್ಕೆ ಬಂದಿಲ್ಲ ಅಷ್ಟೆಎಂದು ಸ್ವಷ್ಟಪಡಿಸಿದರು.

ಬೊಮ್ಮಾಯಿ ಯಾರೆಂದು ಕೇಳಿದರೆ 40% ಕಮಿಷನ್ ಸರ್ಕಾರದ ಸಿಎಂ ಎನ್ನುತ್ತಿದ್ದಾರೆ: ರಣದೀಪ್ ಸಿಂಗ್ ಸುರ್ಜೇವಾಲ

ಸಿದ್ದರಾಮಯ್ಯ ಕೋಲಾರಲ್ಲಿ ಸ್ಪರ್ಧೆ ಮಾಡಿದ್ರೆ ಬ್ರಹ್ಮ ಬಂದ್ರು ಗೆಲ್ಲಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರಲ್ಲಿ ಸ್ಪರ್ಧೆ ಮಾಡಿದ್ರೆ ಬ್ರಹ್ಮ ಬಂದ್ರೂ ಗೆಲ್ಲಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದರು. ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ದಲಿತರು ಸಿದ್ದರಾಮಯ್ಯಗೆ ಕೋಲಾರದಲ್ಲಿ ಓಟ್‌ ಹಾಕಲ್ಲ, ವರ್ತೂರು ಹುಲಿ ಇರುವ ಕಾರಣ ಕುರುಬರು ಓಟ್‌ ಹಾಕಲ್ಲ ಎಂದರು. ದಲಿತರು, ಕುರುಬರು ಓಟು ಹಾಕಲ್ಲ ಇದು ಸತ್ಯ. ಇನ್ನು ಉಳಿದ ಸಾಬರು ಮಾತ್ರ. ಇನ್ನೂ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ನಡುವೆ ಸಿಎಂ ಕಿತ್ತಾಟ ಇರುವ ಕಾರಣ ಗೆಲ್ಲೋದು ಡೌಟು ಎಂದರು. ಕಾಂಗ್ರೆಸ್ಸಿಗರು ನಿಜವಾದ ಜಾತಿವಾದಿಗಳು. ನಾವು, ಬಿಜೆಪಿ ರಾಷ್ಟಿ್ರೕಯವಾದಿಗಳು. ಇದೆ ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios