ಪೇ ಸಿಎಂ ಪೋಸ್ಟ್‌ ಮಾಡುವಷ್ಟು ಕಾಂಗ್ರೆಸ್‌ ನೀಚಮಟ್ಟಕ್ಕೆ ಇಳಿಬಾರದಿತ್ತು: ಈಶ್ವರಪ್ಪ

ಹಿಂದುಳಿದ ವರ್ಗದ ವಿಚಾರದಲ್ಲಿ ಖಾಲಿ ಡಬ್ಬ ಅಲುಗಾಡಿಸಿದ್ದು ಬಿಟ್ಟರೆ ಕಾಂಗ್ರೆಸ್‌ ಏನೂ ಮಾಡಿಲ್ಲ,ಕಾಂಗ್ರೆಸ್‌ ವಿಭಜನೆಯತ್ತ ಸಾಗಿದೆ: ಕೆ.ಎಸ್‌.ಈಶ್ವರಪ್ಪ

Former Minister KS Eshwarappa Slams Congress grg

ಶಿವಮೊಗ್ಗ(ಸೆ.24): ಖಾಲಿ ಡಬ್ಬ ಅಲುಗಾಡಿಸಿ ಶಬ್ಧ ಜಾಸ್ತಿ ಮಾಡಿದ್ದು, ಬಿಟ್ಟರೆ ಹಿಂದುಳಿದ ವರ್ಗಕ್ಕೆ ಕಾಂಗ್ರೆಸಿಗರು ಏನೂ ಮಾಡಿಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಹಿಂದುಳಿದ ವರ್ಗದ ಸಮಾವೇಶ ಮಾಡದೇ ಸಿದ್ಧರಾಮೋತ್ಸವ ಮಾಡಿದ್ದಾರೆ. ಈಗಾಗಲೇ ಡಿ.ಕೆ.ಶಿವಕುಮಾರ್‌ ಸರ್ವಾಧಿಕಾರಿ ಧೋರಣೆ ವಿರುದ್ಧ ದಿನೇಶ್‌ ಗುಂಡೂರಾವ್‌, ಆರ್‌.ವಿ.ದೇಶಪಾಂಡೆ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ ವಿಭಜನೆಯತ್ತ ಸಾಗಿದೆ. ಹಿಂದುಳಿದ ವರ್ಗದ ಬಗ್ಗೆ ಕಾಂತರಾಜ್‌ ವರದಿಯನ್ನು 140 ಕೋಟಿ ರು. ವೆಚ್ಚದಲ್ಲಿ ತಯಾರಿಸಿ ಅದನ್ನು ವಿಧಾನಸಭೆಯಲ್ಲಿ ಮಂಡಿಸಲಿಲ್ಲ. ಆ ವರದಿಗೆ ಮುಖ್ಯ ಕಾರ್ಯದರ್ಶಿ ಸಹಿಯನ್ನೇ ಹಾಕಿಲ್ಲ. ಮೂಗಿಗೆ ತುಪ್ಪ ಸವರಿ ಕಾಂಗ್ರೆಸ್‌ನವರು ಹಿಂದುಳಿದ ವರ್ಗಕ್ಕೆ ಮೋಸ ಮಾಡಿದ್ದಾರೆ. ಹಿಂದುಳಿದವರ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಆ.30ರಂದು ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ

ರಾಜ್ಯ ಬಿಜೆಪಿಯಿಂದ ಕಲಬುರಗಿಯಲ್ಲಿ ಅ.30ರಂದು ನಡೆಯಲಿರುವ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ನಡೆಯಲಿದ್ದು, 4 ಲಕ್ಷಕ್ಕೂ ಹೆಚ್ಚು ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

PayCM: ಬಿಜೆಪಿ ಭ್ರಷ್ಟಾಚಾರ ಬಿಟ್ಹಾಕಿ, ಕ್ರಿಯೇಟಿವಿಟಿಗೆ ಮಾತ್ರ ನೆಟ್ಟಿಗರು ಫುಲ್ ಫಿದಾ

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವರಾಜ್‌, ನಾಗರಾಜ್‌, ಮಧುಸೂದನ್‌, ಸಂತೋಷ್‌ ಬಳ್ಳೆಕೆರೆ, ದಿನೇಶ್‌, ಅಣ್ಣಪ್ಪ, ಬಾಲು ಇದ್ದರು.

ಕಾಂಗ್ರೆಸ್‌ ಇಷ್ಟು ನೀಚಮಟ್ಟಕ್ಕೆ ಇಳಿಬಾರದಿತ್ತು

ಪೇ ಸಿಎಂ ಪೋಸ್ಟ್‌ ಮಾಡುವಷ್ಟು ಕಾಂಗ್ರೆಸ್‌ ನೀಚಮಟ್ಟಕ್ಕೆ ಇಳಿಬಾರದಿತ್ತು. ಗುತ್ತಿಗೆದಾರರ ಸಂಗದ ಅಧ್ಯಕ್ಷ, ಕಾಂಗ್ರೆಸ್ಸಿಗರ ಚೇಲಾ ಕೆಂಪಣ್ಣ ಪ್ರಧಾನಿ ಮೋದಿಗೂ ಪತ್ರ ಬರೆದು ಆರೋಪ ಮಾಡಿದರು. ಆದರೆ, 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ಒಂದೇ ಒಂದು ದಾಖಲೆ ಬಿಡುಗಡೆಯಾಗಿಲ್ಲ. ಚುನಾವಣೆ ನಡೆದರೆ ಕಾಂಗ್ರೆಸ್‌ ಮತ ಬ್ಯಾಂಕ್‌ನಲ್ಲಿ ಶೇ.40ರಷ್ಟು ಮತಗಳು ಕಡಿಮೆಯಾಗಲಿವೆ ಅಂತ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios