Karnataka Politics: ಪುಗಸಟ್ಟೆ ಬಂಧಿಸೋಕೆ ನಾನೇನು ಕುರಿಯೇ?: ಈಶ್ವರಪ್ಪ

*   ಸುಮ್ಮನೆ ಬಂಧಿಸೋಕೆ ಬರೋದಿಲ್ಲ, ಪ್ರಚಾರಕ್ಕಾಗಿ ಯಾರೋ ದೂರು ಕೊಟ್ಟಿದ್ದಾರೆ
*   ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನವರು ಕುತಂತ್ರದ ರಾಜಕಾರಣ, ಮುಸ್ಲಿಮರಿಗೂ ಅವಮಾನ
*   ಕಾಂಗ್ರೆಸ್‌ನ ನಾಯಕರಲ್ಲಿ ಅತೃಪ್ತಿಯಿಂದಾಗಿ ಒಬ್ಬೊಬ್ಬರೇ ರಾಜೀನಾಮೆ ಕೊಡುತ್ತಿದ್ದಾರೆ
 

Former Minister KS Eshwarappa React on Case Against Him grg

ಶಿವಮೊಗ್ಗ(ಜೂ.02): ನನ್ನನ್ನು ಪುಗಸಟ್ಟೆ ಬಂಧಿಸೋಕೆ ನಾನೇನು ಕುರಿನೋ, ಕೋಳಿಯೋ, ಎಮ್ಮೆಯೋ? ಹಾಗೆ ಸುಮ್ಮನೆ ಬಂಧಿ​ಸೋಕೆ ಬರುವುದಿಲ್ಲ ಎಂದು ದೆಹಲಿ ಪೊಲೀಸ್ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ದೂರಿನ ಕುರಿತು ಶಾಸಕ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರಾರಯರೋ ಕಂಪ್ಲೆಂಟ್ಕೊಟ್ರು, ಕೇಸ್ಹಾಕಿದ್ರು ಅಂದ ತಕ್ಷಣ ಬಂಧಿಸ್ತಾರಾ? ಈಗ ನಾನೂ ನಿಮ್ಮ ಮೇಲೆ ಕಂಪ್ಲೆಂಟ್ಕೊಟ್ಟರೆ ನಿಮ್ಮನ್ನ ಬಂಧಿಸಿ ಬಿಡ್ತಾರಾ? ಯಾರೋ ಅವರ ಪ್ರಚಾರಕ್ಕಾಗಿ ನನ್ನ ಮೇಲೆ ಕೇಸು ದಾಖಲಿಸಿದ್ದಾರಷ್ಟೆ. ಅದರಿಂದ ಏನೂ ಪ್ರಯೋಜನವಿಲ್ಲ. ಅವರಿಗೆ ಒಳ್ಳೆಯದಾಗ್ಲಿ ಎಂದು ನುಡಿದರು.

Shivamogga: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ!

ಈಗ ಯಾರೋ ಹೊಸಬರು ಪಾಪ ಅವರ ಹೆಸರು ಮಾಧ್ಯಮಗಳಲ್ಲಿ ಬರಲಿ ಎಂದು ನನ್ನ ಮೇಲೆ ಕೇಸ್ಹಾಕಿದ್ದಾರೆ. ಇಂತಹ ನೂರು ಕೇಸ್ಹಾಕಿದರೂ ನಾನು ಎದುರಿಸುತ್ತೇನೆ. ಕರ್ನಾಟಕದಲ್ಲಿ ಏನಾದರೂ ಮಾಡಲಿಕ್ಕೆ ಇಂದಿರಾ ಗಾಂ​ಧಿ, ನೆಹರೂ ಕೈಯಲ್ಲೇ ಆಗಲಿಲ್ಲ. ಪಾಪ ಈ ಆಪ್ನವರು ಏನ್ಮಾಡ್ತಾರೆ? ನನ್ನ ವಿರುದ್ಧ ದೂರು ದಾಖಲಾಗಿದೆಯೇ ವಿನಃ ಎಫ್ಐಆರ್ಅಲ್ಲ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದವರು ರಾಷ್ಟ್ರದ್ರೋಹಿಗಳು ಎಂದು ಸ್ವತಃ ನಾನೇ ಈ ಹಿಂದೆಯೇ ಹೇಳಿದ್ದೇನೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದರೆ ನಾವು ಬಿಡಲ್ಲ ಎಂದರು.

ನೂರೋ, ಇನ್ನೂರೋ, ಐನೂರೋ ವರ್ಷ ಬಿಟ್ಟು ಕೆಂಪು ಕೋಟೆ ಮೇಲೆ ಭಗವಾಧ್ವಜ ಹಾರಿಸಬಹುದೆಂದು ನಾನು ಹೇಳಿದ್ದು ನಿಜ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ನಾನೇನು ವ್ಯತ್ಯಾಸ ಮಾಡಿಲ್ಲ. ದೇಶದಲ್ಲಿ ಹಿಂದುತ್ವದ ಬಗ್ಗೆ, ಹಿಂದು ಧರ್ಮದ ಬಗ್ಗೆ ಸಾಕಷ್ಟುಚರ್ಚೆಯಾಗುತ್ತಿದೆ. ಇದನ್ನು ಅವತ್ತು ಹೇಳಿದ್ದೇನೆ. ಆಗ ಸದನದಲ್ಲೂ ಚರ್ಚೆಯಾಗಿದೆ. ಕಾನೂನು ವಿರುದ್ಧವಾಗಿ ಈಶ್ವರಪ್ಪ ಮಾತನಾಡಿಲ್ಲ ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ. ಅದೇ ರೀತಿ ಸ್ಪೀಕರ್ಹಾಗೂ ಕಾನೂನು ಸಚಿವರು ಕೂಡ ಹೇಳಿದ್ದಾರೆ. ಆದರೆ, ಕಾಂಗ್ರೆಸ್ನವರು ಈ ವಿಷಯ ತಂದು ಹಾಗೇ, ಹೀಗೆ ಎಂದು ಹೇಳುತ್ತಿದ್ದಾರೆ. ಅದೀಗ ಬಿದ್ದು ಹೋಗಿರುವ, ಮುಗಿದು ಹೋಗಿರುವ ಕಥೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಸಿಎಂ ಆಗುವುದಕ್ಕೆ ಫೈಟ್‌ ನಡೆಯುತ್ತಿದೆ. ಪರಸ್ಪರ ಇಬ್ಬರ ನಡುವೆ ಸಿಎಂ ಆಗಲು ಪೈಪೋಟಿ ಏರ್ಪಟಿದ್ದು, ಅವರ ಬೆಂಬಲಿಗರು ಪರಸ್ಪರ ಮುಂದಿನ ಸಿಎಂ ಘೋಷಣೆಯಲ್ಲಿ ತೊಡಗಿದ್ದಾರೆ. ವಿಪರ್ಯಾಸ ಏನೆಂದರೆ ಸಿದ್ದರಾಮಯ್ಯಗೆ ಕ್ಷೇತ್ರ ಇನ್ನೂ ಫಿಕ್ಸ್ಆಗಿಲ್ಲ. ಅವರಿಗೆ ಚುನಾವಣೆ ಸೋಲಿನ ಭಯದ ವಾತಾವರಣದಲ್ಲಿದ್ದಾರೆ ಎಂದು ಛೇಡಿಸಿದರು.
ಆರ್‌ಎಸ್‌ಸ್‌ ಕುರಿತಾಗಿ ಸಿದ್ದರಾಮಯ್ಯ ನೀಡಿದ ಹೇಳಿಕೆ ಖಂಡಿಸಿದ ಈಶ್ವರಪ್ಪ, ಸಿದ್ದರಾಮಯ್ಯ ಆರ್ಎಸ್ಎಸ್ಬಗ್ಗೆ ಹುಚ್ಚು ಹುಚ್ಚು ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಇನ್ನು ಎಲ್ಕೆಜಿ ಸ್ಟೂಡೆಂಟ್ಆ ಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಮುಸಲ್ಮಾನರಿಗೆ ಕಾಂಗ್ರೆಸ್‌ನಿಂದ ಅಪಮಾನ:

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನವರು ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ. ಮುಸಲ್ಮಾನರಿಗೂ ಅಪಮಾನಿಸುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಎರಡು ಸ್ಥಾನದಲ್ಲಿ ಗೆಲ್ಲುವಂತಹ ಅವಕಾಶ ಇಲ್ಲ. ಆದರೆ, ಕಾಂಗ್ರೆಸ್ನಾಯಕ ಸಿದ್ದರಾಮಯ್ಯ ಮುಸ್ಲಿಮರಿಗೆ ಒಂದು ರೀತಿಯಲ್ಲಿ ದ್ರೋಹ ಮಾಡುತ್ತಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ರಾಜ್ಯಸಭೆಗೆ ಒಬ್ಬರನ್ನು ಮಾತ್ರ ಆಯ್ಕೆ ಮಾಡಿ ಕಳಿಸಬಹುದು. ಆದರೆ, ಎರಡನೇ ಅಭ್ಯರ್ಥಿಯನ್ನಾಗಿ ಮುಸ್ಲಿಮರೊಬ್ಬರನ್ನು ಆಯ್ಕೆ ಮಾಡಿದ್ದಾರೆ. ಮುಸ್ಲಿಂ ಅಭ್ಯರ್ಥಿ ಸೋಲುತ್ತಾರೆ ಎಂದು ಗೊತ್ತಿದ್ದರೂ ಓಲೈಸುವ ನೆಪದಲ್ಲಿ ಹಾಗೂ ಮುಸ್ಲಿಮರಿಗೆ ಆದ್ಯತೆ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳಲು ಈ ರೀತಿಯ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅತೃಪ್ತರ ಮತ ಬಿಜೆಪಿಗೆ:

ಒಂದು ಕಡೆ ಜೆಡಿಎಸ್‌ ಮುಖಂಡರು ಬಿಜೆಪಿಗೆ ಬೆಂಬಲ ನೀಡಬಹುದು. ಮತ್ತೊಂದು ಕಡೆ ಕಾಂಗ್ರೆಸ್ಪಕ್ಷದ ಅತೃಪ್ತರು ಬಿಜೆಪಿಯ ಮೂರನೇ ಅಭ್ಯರ್ಥಿಗೆ ಮತ ಹಾಕಿದರೂ ಆಶ್ವರ್ಯವಿಲ್ಲ. ಹಾಗಾಗಿ ಬಿಜೆಪಿ ಮೂರು ಸ್ಥಾನಗಳನ್ನು ಗೆಲುವು ಸಾಧಿಸುತ್ತದೆ. ಕಾಂಗ್ರೆಸ್ತನ್ನಲ್ಲಿರುವ ಉಳಿದ ಮತಗಳನ್ನು ಉಳಿಸಿಕೊಳ್ಳುತ್ತದೋ, ಜೆಡಿಎಸ್‌ಗೆ ಕೊಡುತ್ತದೋ ಅದು ನಮಗೆ ಗೊತ್ತಿಲ್ಲ. ಅದು ಆ ಪಕ್ಷಕ್ಕೆ ಬಿಟ್ಟವಿಚಾರ. ಆದರೆ, ತಮ್ಮ ಒಬ್ಬ ಅಭ್ಯರ್ಥಿ ಸೋಲುತ್ತಾರೆ ಎಂದು ಗೊತ್ತಿದ್ದೂ, ಎರಡನೇ ಅಭ್ಯರ್ಥಿಯನ್ನಾಗಿ ಮುಸ್ಲಿಮರನ್ನು ಕಣಕ್ಕೆ ಇಳಿಸಿರುವುದು ಆ ಜನಾಂಗಕ್ಕೆ ಮಾಡಿದ ಅವಮಾನ ಎಂದು ದೂರಿದರು.

ಸಿದ್ದರಾಮಯ್ಯ ಅಲೆಮಾರಿ, ಅಧಿಕಾರದಾಹಿ: ಈಶ್ವರಪ್ಪ ವಾಗ್ದಾಳಿ

ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೆಗೌಡರೇ ಕಾಂಗ್ರೆಸ್ನಾಯಕಿ ಸೋನಿಯಾ ಗಾಂ​ಧಿ ಜೊತೆಗೆ ಮಾತನಾಡಿ ಜೆಡಿಎಸ್ಗೆ ಬೆಂಬಲ ನೀಡುವುದಾಗಿ ಒಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ಅ ಭ್ಯರ್ಥಿ ವಿಥ್ಡ್ರಾ ಮಾಡಿ ಜೆಡಿಎಸ್ಗೆ ಬೆಂಬಲ ನೀಡುತ್ತಾರಾ ನೋಡಬೇಕು ಎಂದರು.

ಕಾಂಗ್ರೆಸ್ಕೆಲ ನಾಯಕರಲ್ಲಿ ಅತೃಪ್ತಿ ಇದೆ. ಹೀಗಾಗಿಯೇ ಕಾಂಗ್ರೆಸ್ನಾಯಕರು ಒಬ್ಬೊಬ್ಬರೇ ರಾಜೀನಾಮೆ ಕೊಡುತ್ತಿದ್ದಾರೆ. ಅಡ್ವೊಕೇಟ್ಬ್ರಿಜೇಶ್ಕಾಳಪ್ಪನಂತವರೇ ರಾಜೀನಾಮೆ ಕೊಟ್ಟಿದ್ದಾರೆ. ಇನ್ನೂ ಕಾಂಗ್ರೆಸ್ನಲ್ಲಿ ಎಷ್ಟುಜನರಿಗೆ ಅತೃಪ್ತಿ ಇದೆಯೋ ಗೊತ್ತಿಲ್ಲ. ಅತೃಪ್ತಿ ಇರುವ ಶಾಸಕರು ಬಿಜೆಪಿಗೂ ಬೆಂಬಲ ಕೊಡಬಹುದು. ನಮ್ಮ ಮೂರನೇ ಅಭ್ಯರ್ಥಿ ಗೆಲ್ಲಬಹುದು. ಆದರೆ ಕಾಂಗ್ರೆಸ್ನ ಮುಸಲ್ಮಾನರ ಪರವಾಗಿರುವ ಬಣ್ಣ ಈ ಬಾರಿ ಹೊರಗೆ ಬರುತ್ತದೆ ಎಂದರು.
 

Latest Videos
Follow Us:
Download App:
  • android
  • ios