ಜನಾರ್ದನ ರೆಡ್ಡಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ, ತಮ್ಮ ಟಿಕೆಟ್‌ ಭದ್ರ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುನವಳ್ಳಿ, ‘ನಾನು ಶಾಸಕನಿದ್ದು, ನನಗೆ ಟಿಕೆಟ್‌ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ. 

ಕೊಪ್ಪಳ(ಡಿ.11):  ಮಾಜಿ ಸಚಿವ ಜನಾರ್ದನ ರೆಡ್ಡಿಯವರು ಗಂಗಾವತಿಯಲ್ಲಿಯೇ ನೆಲೆಸಲು ಮುಂದಾಗಿದ್ದು, ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಗೆ ಟಿಕೆಟ್‌ ತಪ್ಪುವ ಆತಂಕ ಎದುರಾಗಿದೆ. ಅಲ್ಲದೆ, ಸ್ಥಳೀಯ ಬಿಜೆಪಿಯಲ್ಲಿ ನಾಲ್ಕಾರು ಗುಂಪುಗಳಾಗಿದ್ದು, ಕೆಲವರು ಜನಾರ್ದನ ರೆಡ್ಡಿ ಪರ, ಇನ್ನು ಕೆಲವರು ಅವರ ವಿರೋಧಿ ಗುಂಪು ಕಟ್ಟಿಕೊಳ್ಳುತ್ತಿದ್ದಾರೆ. ಇದೂ ಕೂಡ ಸ್ಥಳೀಯ ಶಾಸಕರ ಬೇಗುದಿಗೆ ಕಾರಣವಾಗಿದೆ.

ಹೀಗಾಗಿ, ಅವರು ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ, ತಮ್ಮ ಟಿಕೆಟ್‌ ಭದ್ರ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುನವಳ್ಳಿ, ‘ನಾನು ಶಾಸಕನಿದ್ದು, ನನಗೆ ಟಿಕೆಟ್‌ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.

ಜನಾರ್ಧನ ರೆಡ್ಡಿ ರಾಜಕೀಯ ಎಂಟ್ರಿಗೆ ಭಾರಿ ಮುನ್ನಡೆ: 4 ಕೋರ್ಟ್ ಕೇಸ್‌ ರದ್ದು

ಈ ಮಧ್ಯೆ, ಬಿಜೆಪಿ ಟಿಕೆಟ್‌ ನಿರಾಕರಿಸಿದರೆ ರೆಡ್ಡಿಯವರು ಪಕ್ಷೇತರರಾಗಿ, ಇಲ್ಲವೆ ಜೆಡಿಎಸ್‌ನಿಂದ ಅಥವಾ ಆಂಧ್ರದ ವೈಎಸ್‌ಆರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಬಹುದು ಎನ್ನುವ ಬಗ್ಗೆಯೂ ಚರ್ಚೆಯಾಗುತ್ತಿದೆ. ಆದರೆ, ರೆಡ್ಡಿಯವರು ಈವರೆಗೂ ತಮ್ಮ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ. ‘ನಾನು ಈಗಲೇ ರಾಜಕೀಯ ಕುರಿತು ಮಾತನಾಡುವುದಿಲ್ಲ. ಡಿ.18ರ ನಂತರ ಎಲ್ಲವನ್ನು ವಿವರವಾಗಿ ಹೇಳುತ್ತೇನೆ’ ಎಂದಿದ್ದಾರೆ.