ಹೆಣ್ಮಕ್ಕಳು ಕಸಬರಿಗೆ ಹಿಡಿದು ಕಾಂಗ್ರೆಸ್ಸಿಗರ ಬೆನ್ನು ಹತ್ತುವ ಕಾಲ ದೂರವಿಲ್ಲ: ಗೋವಿಂದ ಕಾರಜೋಳ
ಹೆಣ್ಣು ಮಕ್ಕಳು ಸರ್ಕಾರದ ವಿರುದ್ಧ ಕೆಂಡವಾಗಿದ್ದಾರೆ. ಯೋಜನೆಗಳನ್ನ ಅನುಷ್ಠಾನ ಮಾಡುತ್ತೇವೆಂದು ಸುಳ್ಳು ಹೇಳಿ ಮೋಸ ಮಾಡಿದ್ದಾರೆ. ಹೆಣ್ಣು ಮಕ್ಕಳು ಕಸಬರಿಗೆ ತೆಗೆದುಕೊಂಡು ಶಾಸಕರನ್ನ, ಸಚಿವರನ್ನ ಬೆನ್ನು ಹತ್ತುವ ಕಾಲ ದೂರವಿಲ್ಲ. ಮುಂದೆ ರಾಜ್ಯದಲ್ಲಿ ಶಾಸಕರು, ಸಚಿವರು ಓಡಾಡುವುದು ಕಷ್ಟವಾಗುತ್ತದೆ: ಮಾಜಿ ಸಚಿವ ಗೋವಿಂದ ಕಾರಜೋಳ
ಬಾಗಲಕೋಟೆ(ಜೂ.27): ಹೆಣ್ಣು ಮಕ್ಕಳು ಕಸಬರಿಗೆ ಹಿಡಿದು ಕಾಂಗ್ರೆಸ್ ಸಚಿವರು, ಶಾಸಕರನ್ನು ಬೆನ್ನು ಹತ್ತುವ ಕಾಲ ದೂರವಿಲ್ಲ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ಸಿಗರು ಬೀದಿಗೆ ಬಂದು ಹೊಡೆದಾಡಿಕೊಳ್ತಾರೆ ಅಂತ ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ ಅವರು, ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರ ಇಲ್ಲ, ಇದು ಲಾಭಕ್ಕಾಗಿ ಬಡಿದಾಡುವ ಸರ್ಕಾರವಾಗಿದೆ. ಕೆಲವೇ ದಿನಗಳಲ್ಲಿ ಬೀದಿಗೆ ಬಂದು ಹೊಡೆದಾಡಿಕೊಂಡರೂ ಆಶ್ಚರ್ಯವಿಲ್ಲ. ನಾಡಿನ ಹೆಣ್ಣು ಮಕ್ಕಳು ಸರ್ಕಾರದ ವಿರುದ್ಧ ಕೆಂಡವಾಗಿದ್ದಾರೆ. ಯೋಜನೆಗಳನ್ನ ಅನುಷ್ಠಾನ ಮಾಡುತ್ತೇವೆಂದು ಸುಳ್ಳು ಹೇಳಿ ಮೋಸ ಮಾಡಿದ್ದಾರೆ. ಹೆಣ್ಣು ಮಕ್ಕಳು ಕಸಬರಿಗೆ ತೆಗೆದುಕೊಂಡು ಶಾಸಕರನ್ನ, ಸಚಿವರನ್ನ ಬೆನ್ನು ಹತ್ತುವ ಕಾಲ ದೂರವಿಲ್ಲ. ಮುಂದೆ ರಾಜ್ಯದಲ್ಲಿ ಶಾಸಕರು, ಸಚಿವರು ಓಡಾಡುವುದು ಕಷ್ಟವಾಗುತ್ತದೆ ಅಂತ ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ.
ಬಿಜೆಪೀಲಿ ಅಂತರ್ಯುದ್ಧ: ವಿಧಾನಸಭೆ ಚುನಾವಣೆ ಸೋಲಿನ ಬೆನ್ನಲ್ಲೇ ಭುಗಿಲೆದ್ದ ಬಣ ರಾಜಕೀಯ..!
ರಾಜ್ಯದಲ್ಲಿ ಬರ ಬಿದ್ದಿದೆ, ಬರಗಾಲದ ಪರಿಹಾರದ ಕೆಲಸಗಳನ್ನು ಸರ್ಕಾರ ಮಾಡವೇಕು.. ಜನ ಜಾನುವಾರುಗಳಿಗೆ ನೀರು, ಮೇವು ಒದಗಿಸಬೇಕು. ಹಳ್ಳಿಗಳಿಗೆ ನೀರು ನೀಡಿ, ಜಾನುವಾರುಗಳಿಗೆ ಮೇವು ನೀಡಿ, ಇಲ್ಲವಾದಲ್ಲಿ ಬರುವ ಜುಲೈ 4 ರಂದು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಹೋರಾಟ ಮಾಡ್ತೇವೆ. ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ರಾಜ್ಯಾದ್ಯಂತ ಹೋರಾಟ ಆರಂಭ ಮಾಡುತ್ತೇವೆ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನ ಕೂಡಲೇ ಅನುಷ್ಠಾನಕ್ಕೆ ತರಬೇಕು. ಇಲ್ಲವಾದಲ್ಲಿ ಹೋರಾಟ ಆರಂಭವಾಗಲಿದೆ ಎಂದ ಮಾಜಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.