Asianet Suvarna News Asianet Suvarna News

ನಾನು ಸಂಘದ ಸ್ವಯಂ ಸೇವಕ, ಡಿಕೆಶಿ ಕೊತ್ವಾಲ್ ರಾಮಚಂದ್ರನ ಶಿಷ್ಯ: ಸಿ.ಟಿ ರವಿ

ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಅವರು ನಮ್ಮ ದೇಶದ ಅತೀ ಶ್ರೀಮಂತ ಶಾಸಕ, ಅವರ ಕೈಯಲ್ಲಿ ಬೆಂಗಳೂರಿನ ಉಸ್ತುವಾರಿ, ಬೆಂಗಳೂರು ಅಬಿವೃದ್ಧಿ, ನೀರಾವರಿ ಎಲ್ಲಾ ಇಲಾಖೆಗಳಿವೆ. ನಾನು ಸೋತಿರುವವನು, ನನಗೆ ಟಾರ್ಗೆಟ್ ಮಾಡಿ ಅವರು ಸಿಎಂ ಆಗಲು ಸಾಧ್ಯವಿಲ್ಲ. ಅವರು ಟಾರ್ಗೆಟ್ ಮಾಡಲಿಕ್ಕೆ ಬೇರೆಯವರಿದ್ದಾರೆ ಎಂದು ಟೀಕಿಸಿದ ಸಿ.ಟಿ ರವಿ  

Former Minister CT Ravi Slams DCM DK Shivakumar grg
Author
First Published Aug 15, 2023, 10:30 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು(ಆ.15):  ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾಜಿಸಚಿವ ಸಿ.ಟಿ ರವಿ ನಡುವೆ ನಡೆಯುತ್ತಿರುವ ಟಾಕ್ ವಾರ್ ನಿಲ್ಲುವ ಲಕ್ಷಣ ಕಾಣ್ಣುತ್ತಿಲ್ಲ,. ಇಂದು ಕೂಡ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಚಿವ ಸಿ.ಟಿ ರವಿ  ವಾಗ್ದಾಳಿ ಮುಂದುವರಿಸಿದ್ದಾರೆ. 

ಸಿ.ಟಿ.ರವಿ ಅವರಿಗೂ ಟ್ರೀಟ್ಮೆಂಟ್‌ ಕೊಡೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಸಿ.ಟಿ ರವಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಂದಿದೆ ಎಂಬ ಅಹಂಭಾವದಲ್ಲಿ ಎಲ್ಲರಿಗೂ ಟ್ರೀಟ್ಮೆಂಟ್ ಕೊಡುವಂತಹ ಹುಮ್ಮಸ್ಸು ಬಂದಿರಬಹುದು ವ್ಯಂಗ್ಯವಾಡಿದರು. ನಾನೋ ಸಂಘದ ಸ್ವಂಯಂ ಸೇವಕ, ಅವರೋ ಕೊತ್ವಾಲ್ ರಾಮಚಂದ್ರನ ಶಿಷ್ಯ, ಅವರು ಎಲ್ಲರಿಗೂ ಟ್ರೀಟ್ಮೆಂಟ್ ಕೊಡುತ್ತಾರೆ. ಅವರದ್ದು ಕೊತ್ವಾಲ್ ಮಾದರಿ ಟ್ರೀಟ್ಮೆಂಟ್ ಎಂದು ನನಗೆ ಭಯವಾಗುತ್ತಿದೆ. ಈ ಕಾರಣಕ್ಕೆ ನನಗೆ ರಕ್ಷಣೆ ಕೊಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದರು.

ಚಿಕ್ಕಮಗಳೂರಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ನನ್ನ ಟಾರ್ಗೆಟ್ ಮಾಡಿ ಸಿಎಂ ಆಗಕ್ಕೆ ಆಗಲ್ಲ : 

ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಅವರು ನಮ್ಮ ದೇಶದ ಅತೀ ಶ್ರೀಮಂತ ಶಾಸಕ, ಅವರ ಕೈಯಲ್ಲಿ ಬೆಂಗಳೂರಿನ ಉಸ್ತುವಾರಿ, ಬೆಂಗಳೂರು ಅಬಿವೃದ್ಧಿ, ನೀರಾವರಿ ಎಲ್ಲಾ ಇಲಾಖೆಗಳಿವೆ. ನಾನು ಸೋತಿರುವವನು, ನನಗೆ ಟಾರ್ಗೆಟ್ ಮಾಡಿ ಅವರು ಸಿಎಂ ಆಗಲು ಸಾಧ್ಯವಿಲ್ಲ. ಅವರು ಟಾರ್ಗೆಟ್ ಮಾಡಲಿಕ್ಕೆ ಬೇರೆಯವರಿದ್ದಾರೆ ಎಂದು ಟೀಕಿಸಿದರು. ನನಗಿರುವ ಮಾಹಿತಿ ಪ್ರಕಾರ ಗ್ರಾ.ಪಂ.ಮಟ್ಟದಲ್ಲಿ ನಡೆಯುವ ಅಧಿಕಾರ ಹಂಚಿಕೆ ಮಾದರಿಯಲ್ಲಿ ಕಾಂಗ್ರೆಸ್ನಲ್ಲೂ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ತೀರ್ಮಾನವೂ ಆಗಿದೆ. ಸಚಿವ ಮುನಿಯಪ್ಪ ಅವರೇ ಇದನ್ನು ಹೇಳಿದ್ದಾರೆ ಎಂದರೆ ಏನೋ ಒಳ ಒಪ್ಪಂದ ನಡೆದಿರಬೇಕು. ಏನೆಂದು ನನಗೆ ಗೊತ್ತಿಲ್ಲ ಎಂದರು.

ಸರ್ಕಾರ ಬೀಳಬಹುದು

ಅಸಹನೆಯ ಆಕ್ರೋಶಕ್ಕೆ ತುತ್ತಾಗಿ ಸರ್ಕಾರ ಲೋಕಸಭೆ ಚುನಾವಣೆ ಆಸು ಪಾಸಿಗೆ ಬಿದ್ದರೂ ಬೀಳ ಬಹುದು. ಈ ಬಗ್ಗೆ ನನ್ನಲ್ಲಿ ಮಾಹಿತಿ ಇಲ್ಲ. ಆದರೆ ಬಸವನಗೌಡ ಯತ್ನಾಳರಿಗೆ ಈ ಬಗ್ಗೆ ನಿಖರ ಮಾಹಿತಿ ಇರಬಹುದು ಈ ಕಾರಣಕ್ಕೆ ಅವರು ಇದನ್ನು ಹೇಳಿರಬಹುದು ಎಂದು ಸಿ.ಟಿ.ರವಿ ಹೇಳಿದರು.ಒಂದು ಸರ್ಕಾರಕ್ಕೆ ಒಂದೆರೆಡು ತಿಂಗಳಲ್ಲಿ ಜನಾಕ್ರೋಶ ನಿರ್ಮಾಣವಾಗುವುದಿಲ್ಲ. ಈಗಲೇ ಹಳ್ಳಿಗಳಲ್ಲಿ ಪವರ್ ಕಟ್ ಆರಂಭವಾಗಿದೆ. ಉಚಿತ ವಿದ್ಯುತ್ ಜೊತೆಗೆ ಪವರ್ ಕಟ್ ಕೊಡುಗೆಯನ್ನೂ ಕೊಡುತ್ತಿದ್ದಾರೆ. ಮಳೆಗಾಲದಲ್ಲಿ ಯಾವ ಕಾಲದಲ್ಲೂ ಪವರ್ ಕಟ್ ಆಗುತ್ತಿರಲಿಲ್ಲ. ಜನರಿಗೆ ಅಸಹನೆ ನಿರ್ಮಾಣವಾಗುತ್ತಿದೆ. ಅದರ ಆಕ್ರೋಶ ಎಂತಹ ಬಲಾಢ್ಯರನ್ನೂ ಬಲಿ ತೆಗೆದುಕೊಳ್ಳುತ್ತದೆ ಎಂದರು.ಈ ಸರ್ಕಾರ ಬಂದು 3 ತಿಂಗಳು ಪೂರ್ಣವಾಗಿಲ್ಲ. ಅದಕ್ಕೆ ಮುಂಚೆಯೇ 30 ಜನ ಶಾಸಕರು ಆಕ್ರೋಶ ವ್ಯಕ್ತಪಡಿಸಿ ನಾವು ಕೊಡುವ ಪತ್ರಕ್ಕೆ ಬೆಲೆ ಇಲ್ಲ. ದಲ್ಲಾಳಿಗಳ ಮೂಲಕ ಕೆಲಸ ಆಗುತ್ತಿದೆ ಎಂದು ಪತ್ರ ಬರೆದಿರುವುದಿರಬಹುದು, ಬಸವರಾಜ ರಾಯರೆಡ್ಡಿ ಅವರು ಕರಪ್ಟ್ ಬ್ರಾಂಡ್ ಕರ್ನಾಟಕ ಎಂದು ಗುರುತಿಸಿಕೊಳ್ಳುತ್ತಿರುವ ಬಗ್ಗೆ ತಮ್ಮ ಅಸಹನೆ ಹೊರಕಹಾಕಿದ್ದೆಲ್ಲವೂ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸಂದೇಶ ಕೊಡುತ್ತಿದೆ ಎಂದರು.

ಸಮಾನ ನಾಗರೀಕ ಸಂಹಿತೆ ಕಾಯ್ದೆ : 

ನಾವು ಜಾತ್ಯತೀತ ಎಲ್ಲರೂ ಸಮಾನರು ಎಂದು ಹೇಳುತ್ತೇವೆ, ಸಂವಿಧಾನದ ಮೂಲ ಪೀಠಿಕೆಯಲ್ಲಿ ಸಮಾನತೆಯ ಪ್ರಸ್ತಾಪವಿದೆ ಎಂದರು. ಕಾನೂನು ಏಕೆ ಮತಕ್ಕೊಂದು, ಕೋಮಿಗೊಂದು ಇರಬೇಕು, ಏಕೆ ಸಮಾನ ಇರಬಾರದು ಎಂದು ಪ್ರಶ್ನೆ ಮಾಡಿದರು. ಓಲೈಕೆಯ ರಾಜನೀತಿಗೆ ಕಡಿವಾಣ ಬೀಳಬೇಕು ಈ ನಿಟ್ಟಿನಲ್ಲಿ  ಸಮಾನ ನಾಗರೀಕ ಸಂಹಿತೆ ಕಾಯ್ದೆ ಬರಬೇಕೆಂದರು. ಸಂವಿಧಾನ ಕೂಡ ದೇಶದ ಎಲ್ಲರೂ ಸಮಾನರೂ ಎಂಬ ಆಶಯವನ್ನ ಎತ್ತಿ ಹಿಡಿದಿದೆ, ಈ ನಿಟ್ಟಿನಲ್ಲಿ ಶೀಘ್ರವೇ ಸಮಾನ ನಾಗರೀಕ ಸಂಹಿತೆ ಬರಬೇಕೆಂಬ ಆಶಯವನ್ನು ಹೊರಹಾಕಿದರು. ಸಮಾನ ನಾಗರಿಕ ಸಮಿತೆ ಸಂವಿಧಾನದಲ್ಲಿ ಉಲ್ಲೇಖವಾಗಿದ್ದು 3ರಿಂದ 4 ಬಾರಿ ಸುಪ್ರೀಂ ಕೋರ್ಟ್ ಕೂಡ ನಾಗರೀಕ ಸಂಹಿತೆ ಅನುಷ್ಠಾನದತ್ತ ಹೆಜ್ಜೆ ಹಾಕಬೇಕೆಂದಿದೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಸ್ವಯಂ ಮಾತನಾಡಿದ ನಂತರ ಚರ್ಚೆಯ ವಿಷಯವಾಗಿದೆ ಎಂದರು.

Follow Us:
Download App:
  • android
  • ios