ಚಿಕ್ಕಮಗಳೂರಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್, ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಧ್ವಜಾರೋಹಣ ಪೊಲೀಸ್, ಗೃಹರಕ್ಷಕ, ಅರಣ್ಯ, ಅಗ್ನಿಶಾಮಕ ದಳದಿಂದ ಪಥ ಸಂಚಲನ, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್, ಶಾಸಕ ಹೆಚ್.ಡಿ. ತಮ್ಮಯ್ಯ ಸೇರಿದಂತೆ ಹಲವರು ಭಾಗಿ.  

Independence Day Celebration in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು(ಆ.15):  ಚಿಕ್ಕಮಗಳೂರಿನಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಗರದ ನೇತಾಜಿ ಸುಭಾಷುಚಂದ್ರಬೋಸ್ ಜಿಲ್ಲಾಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ. ಜಾರ್ಜ್ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.

ಪೋಲಿಸ್ ಸಿಬ್ಬಂದಿಗಳು ಹಾಗೂ ಗೃಹರಕ್ಷಕರದಳದಿಂದ ಪಥಸಂಚಲನ ನಡೆಯಿತು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.ಧ್ವಜಾರೋಹಣ ನಡೆಸಿ ಗೌರವವಂದನೆ ಸ್ವೀಕರಿಸಿದ್ರು. ನಂತರ ಮಾತನಾಡಿದ ಸಚಿವರು ಈ ದಿನ ಶುಭದಿನವಾಗಿದ್ದು ದೇಶಕ್ಕೆ ಅತಿ ಮುಖ್ಯ ದಿನವಾಗಿದೆ.ದೇಶದ ಶಾಂತಿ , ಸೌಹಾರ್ದತೆ, ಸಮೃದ್ದಿ ಮತ್ತು ನೆಮ್ಮದಿಗಾಗಿ ಕೆಲಸ ಮಾಡಲು ಪಣ ತೋಡೋಣ ಎಂದು ನೆರೆದಿದ್ದ ಜನತೆಗೆ ಕರೆ ನೀಡಿದ್ರು.

ಕರ್ನಾಟಕದ ಲೋಡ್‌ ಶೆಡ್ಡಿಂಗ್‌: ಗಾಳಿ- ಮಳೆ ಎರಡೂ ಇಲ್ಲವೆಂದ ಇಂಧನ ಸಚಿವ ಕೆಜೆ ಜಾರ್ಜ್‌

ರಾಷ್ಟ್ರಭಕ್ತರಿಗೆ ಅಭಿನಂದನೆಗಳನ್ನು ಸಮರ್ಪಿಸುವ ಸಮಯ : 

ತಮ್ಮ ವೈಯಕ್ತಿಕ ಸುಖ, ಸಂತೋಷ ಎಲ್ಲವನ್ನೂ ತ್ಯಾಗ ಮಾಡಿ ಸ್ವಾತಂತ್ರ್ಯಕ್ಕೆ ಬಲಿಯಾದವರು, ಹೋರಾಟದಲ್ಲಿ ಪೆಟ್ಟು ತಿಂದ, ಸೆರೆಮನೆ ವಾಸ ಅನುಭವಿಸಿದ ಸಹಸ್ರಾರು ದೇಶಭಕ್ತರನ್ನು ನೆನಪಿಸಿಕೊಳ್ಳುವ ಮತ್ತು ಆ ರಾಷ್ಟ್ರಭಕ್ತರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಮರ್ಪಿಸುವ ಸಮಯ ಇದಾಗಿದೆ, ನಮ್ಮ ಈ ಸ್ವಾತಂತ್ರ್ಯದ ಉಸಿರಿಗಾಗಿ ಹಲವು ರೀತಿಯ ಹೋರಾಟದ ಯಜ್ಞದಲ್ಲಿ ತಮ್ಮನ್ನು ತಾವೇ ಸಮರ್ಪಿಸಿಕೊಂಡ ತ್ಯಾಗಜೀವಿಗಳಾದ ಮಹಾತ್ಮ ಗಾಂಧೀಜಿ, ಗೋಪಾಲಕೃಷ್ಣ ಗೋಖಲೆ, ಲಾಲ ಲಜಪತ್ ರಾಯ್, ಭಗತ್ ಸಿಂಗ್, ಅರವಿಂದ ಘೋಷ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಪಂಡಿತ್ ಜವಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಡಾ..ಬಿ.ಆರ್.ಅಂಬೇಡ್ಕರ್, ಡಾ. ಮೌಲಾನಾ ಅಬ್ದುಲ್ ಕಲಾಂ ಆಜದ್, ಸುಭಾಷ್ ಚಂದ್ರ ಬೋಸ್, ಅನಿಬೇಸೆಂಟ್. ಇಂತಹ ಹಲವು ಮಹನೀಯರ ಜೊತೆಗೆ ಕರ್ನಾಟಕದ ಮಹಾನೀಯರುಗಳಾದ, ಟಿ. ಸುಬ್ರಹ್ಮಣ್ಯಂ, ಕಾರ್ನಾಡ್ ಸದಾಶಿವರಾವ್, ಶ್ರೀನಿವಾಸರಾವ್ ಕೌಜಲಗಿ, ನಿಟ್ಟೂರು ಶ್ರೀನಿವಾಸ್ ರಾವ್ ಮೊದಲಾದವರುಗಳ ಹೋರಾಟದಲ್ಲಿದ್ದರು ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಕೊಡುಗೆಯೂ ಅಪಾರ : 

ಜಿಲ್ಲೆಯಲ್ಲಿ ಹಲವು ಸ್ವಾತಂತ್ರ್ಯ ಹೋರಾಟಗಳು ನಡೆದವು. ಅವುಗಳಲ್ಲಿ ಸಾಮಾಜಿಕ ಅಸಮಾನತೆಯ ವಿರುದ್ಧದ ಹೋರಾಟ, ವಿದೇಶಿ ವಸ ವಸ್ತುಗಳ ಬಹಿಷ್ಕಾರ, ಸ್ವದೇಶಿ ವಸ್ತುಗಳ ಬಳಕೆಗೆ ಪ್ರೋತ್ಸಾಹ, ಚರಕದಿಂದ ನೂಲು ತೆಗೆಯುವುದು, ಖಾದಿ ವಸ್ತ್ರಬಳಕೆ ಮಾಡುವುದು, ಕಾನೂನು ಭಂಗ ಚಳವಳಿ ಇಂತಹ ಅನೇಕ ಹೋರಾಟಗಳು ಜಿಲ್ಲೆಯಿಂದ ದಾಖಲಾಗಿವೆ ಎಂದು ಹೇಳಿದರು.ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲಿ ಬ್ರಿಟೀಷರ ವಿರುದ್ಧ ತಿರುಗಿ ನಿಂತ ಮೊದಲಿಗರಲ್ಲಿ ತರೀಕೆರೆ ಪಾಳೆಗಾರರು ಪ್ರಮುಖರು. ಪಾಳೆಗಾರ ರಂಗಪ್ಪನಾಯಕರು ಬ್ರಿಟೀಷರ ಬಂಧನದಲ್ಲಿ 25 ವರ್ಷ ಕಳೆದು ಸೆರೆಯಿಂದ ತಪ್ಪಿಸಿಕೊಂಡು ಬಂದು ಬ್ರಿಟೀಷರ ವಿರುದ್ಧದ ಹೋರಾಟದಲ್ಲೇ ಅಸುನೀಗಿದರೆ ಇವರ ಮಗ ಹನುಮಪ್ಪನಾಯಕರು ಬ್ರಿಟಿಷರ ಮೋಸದ ಬಲೆಗೆ ಸಿಲುಕಿ ಗಲ್ಲಿಗೇರಿದರು. 

ಮಧುಗುಂಡಿ ಡಬಲ್ ಮರ್ಡರ್ ಕೇಸ್: ತಂದೆಯನ್ನೇ ಕೊಂದ ಮಗ, ತಾಯಿಯ ಸ್ಥಿತಿ ಗಂಭೀರ!

ನಮ್ಮ ಜನಪದರು ಲಾವಣಿಯ ರೂಪದಲ್ಲಿ ಈ ಪ್ರಸಂಗವನ್ನು ಹಿಡಿದಿಟ್ಟು ಹಾಡುವುದನ್ನು ಕೇಳಿದ ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದಿರುವ ನೋವುಗಳು ಅರ್ಥವಾಗುತ್ತದೆ ಎಂದರು.ಈ ಎಲ್ಲಾ ರೀತಿಯ ಸಂಘಟನೆಗಳ ಹೋರಾಟ 1947ರ ಆಗಸ್ಟ್ 15 ರಲ್ಲಿ ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯದ ಫಲವನ್ನು ಕೊಡಿಸುವಲ್ಲಿ ಯಶಸ್ವಿಯಾಯಿತು. 

ದೇಶಕ್ಕೆ ದೇಶವೇ ಸಂಭ್ರಮಿಸಿದ ಹಬ್ಬದಲ್ಲಿ ನಮ್ಮ ಚಿಕ್ಕಮಗಳೂರು ಜಿಲ್ಲೆಯ ಹೆಮ್ಮೆಯ ಉಸಿರೂ ಸೇರಿತ್ತು. ಆ ಸಂಭ್ರಮವನ್ನು ಅನುಭವಿಸುವ ಈ ಸಮಯದಲ್ಲಿ ಇದಕ್ಕೆ ಕಾರಣರಾದ ಎಲ್ಲರಿಗೂ ನನ್ನ ನಮನಗಳು ಎಂದರು.ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್ , ಶಾಸಕ ಹೆಚ್ ಡಿ ತಮ್ಮಯ್ಯ ,ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಸೇರಿದಂತೆ  ಹಲವರು ಭಾಗಿಯಾಗಿದ್ದರು.

Latest Videos
Follow Us:
Download App:
  • android
  • ios