Asianet Suvarna News Asianet Suvarna News

Karnataka Politics: ದಳಪತಿಗಳಿಗೆ ಮತ್ತೊಂದು ಆಘಾತ: ಕಾಂಗ್ರೆಸ್‌ ಸೇರ್ತಾರಾ ಜೆಡಿಎಸ್‌ ನಾಯಕ?

*   ಕಾಂಗ್ರೆಸ್‌ ಸೇರ್ಪಡೆ ಇನ್ನೂ ನಿರ್ಧರಿಸಿಲ್ಲ
*   ಬೆಂಬಲಿಗರೊಂದಿಗೆ ಚರ್ಚಿಸಿ ಎರಡು ತಿಂಗಳಲ್ಲಿ ತೀರ್ಮಾನ
*   ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಲು ನಿರ್ಧಾರ 
 

Former JDS MLA NH Konareddy React on Join Congress grg
Author
Bengaluru, First Published Dec 9, 2021, 12:25 PM IST

ಹುಬ್ಬಳ್ಳಿ(ಡಿ.09):  ಕಾಂಗ್ರೆಸ್‌(Congress) ಸೇರ್ಪಡೆ ಕುರಿತು ಇನ್ನೂ ನಿರ್ಧರಿಸಿಲ್ಲ. ಕ್ಷೇತ್ರದ ಜನತೆಯ ಜತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿರುವ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ(NH Konareddy), ಈ ಮೂಲಕ ಕಾಂಗ್ರೆಸ್‌ ಸೇರುವ ಸುಳಿವು ಬಿಟ್ಟುಕೊಟ್ಟರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದರು. ನವಲಗುಂದ(Navalgund) ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ನಿಮಗೆ ಅಂತೆ ಪ್ರಶ್ನೆಗೆ, ನಾನು ನವಲಗುಂದದಲ್ಲಿ ಪಕ್ಷೇತರರಾಗಿ ನಿಂತರೂ ಗೆದ್ದು ಬರುತ್ತೇನೆ ಎಂಬ ವಿಶ್ವಾಸವಿದೆ ಎಂದರು. ನನಗೆ ದೇವೇಗೌಡರು(HD Devegowda), ಸಿದ್ದರಾಮಯ್ಯ(Siddaramaiah), ಎಚ್‌.ಡಿ. ಕುಮಾರಸ್ವಾಮಿ(HD Kumaraswamy), ಡಿ.ಕೆ. ಶಿವಕುಮಾರ(DK Shivakumar) ಎಲ್ಲರೂ ನಾಯಕರೇ. ಹೀಗಾಗಿ ಎಲ್ಲರೊಂದಿಗೆ ಮಾತನಾಡುತ್ತಿರುತ್ತೇನೆ ಎಂದು ತಿಳಿಸಿದರು.

Alliance Politics: ಬಿಜೆಪಿ ಜತೆ ಮೈತ್ರಿ ಚರ್ಚೆ ಮಧ್ಯೆ ಕಾಂಗ್ರೆಸ್‌ ಪರ ಜೆಡಿಎಸ್‌ ನಾಯಕನ ಪ್ರಚಾರ

ಪಕ್ಷ ಸ್ಥಳೀಯವಾಗಿ ವಿಧಾನ ಪರಿಷತ್‌ ಚುನಾವಣೆಯ(Vidhan Parishat Election) ಮೈತ್ರಿ ಮಾಡಿಕೊಳ್ಳುವ ಕುರಿತು ಹೇಳಿತ್ತು. ಹೀಗಾಗಿ ಇಲ್ಲಿನ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಕಾಂಗ್ರೆಸ್‌ ಬೆಂಬಲಿಸಲು ನಿರ್ಧರಿಸಿದ್ದೇವೆ. ಸಲೀಂ ಅಹ್ಮದ್‌ ಪರವಾಗಿ ಮತಯಾಚಿಸುತ್ತಿದ್ದೇವೆ ಎಂದ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಮತಗಳು ಸಾವಿರವಿದ್ದು ಎಲ್ಲರೂ ಕಾಂಗ್ರೆಸ್‌ಗೆ ಮತ ಚಲಾಯಿಸುವಂತೆ ತಿಳಿಸಿದ್ದೇವೆ ಎಂದರು.

ಬೆಳಗಾವಿಯಲ್ಲಿ(Belagavi) ಡಿ. 13ರಿಂದ ನಡೆಯುವ ಚಳಿಗಾಲದ ಅಧಿವೇಶನದಲ್ಲಿ(Winter Session) ಉತ್ತರ ಕರ್ನಾಟಕದ(North Karnataka) ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಕಲ್ಯಾಣ ಕರ್ನಾಟಕ(Kalyana Karnataka), ಕಿತ್ತೂರು ಕರ್ನಾಟಕ(Kirrur Karnataka) ಎಂದು ಘೋಷಿಸಿ ಪ್ರಚಾರ ಪಡೆಯುತ್ತಿರುವ ಬಿಜೆಪಿ ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ(BJP) ಅಧಿಕಾರಕ್ಕೆ ಬಂದ ನಂತರ ಉತ್ತರ ಕರ್ನಾಟಕ(North Karnataka) ಭಾಗಕ್ಕೆ ಹೇಳಿಕೊಳ್ಳುವಷ್ಟು ಅನುದಾನ ಬಂದಿಲ್ಲ. ಅವರು ಘೋಷಿಸಿದ ಯೋಜನೆಗಳು ಪ್ರಚಾರಕ್ಕಷ್ಟೇ ಸೀಮಿತವಾಗಿದೆ. ಬೆಳಗಾವಿಯ ಅಧಿವೇಶನದಲ್ಲಿ ಮಹದಾಯಿ(Mahadayi), ಕಳಸಾ-ಬಂಡೂರಿ(Kalasa Banduri) ಯೋಜನೆ ಕಾಮಗಾರಿಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಈ ಯೋಜನೆ ಹೋರಾಟದ ಮುಂಚೂಣಿಯಲ್ಲಿದ್ದ ಬಸವರಾಜ ಬೊಮ್ಮಾಯಿ ಈಗ ಮುಖ್ಯಮಂತ್ರಿಯಾಗಿದ್ದು, ಟೆಂಡರ್‌ ಕರೆದು ಕಾಮಗಾರಿ ಆರಂಭಿಸಬೇಕು. ಈ ಅಧಿವೇಶನದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವ ಮೂಲಕ ಈ ಭಾಗಕ್ಕೆ ಸಿಹಿಸುದ್ದಿ ನೀಡಬೇಕು ಎಂದು ಒತ್ತಾಯಿಸಿದರು.

ಮಹದಾಯಿ ಹೆಸರು ತೆಗೆದರೆ ಸೂಕ್ಷ್ಮ ವಿಚಾರ ಎಂದು ಹೇಳುತ್ತಾರೆ. ಮಹದಾಯಿ ನ್ಯಾಯಾಧಿಕರಣ, ಸುಪ್ರೀಂಕೋರ್ಟ್‌ನಲ್ಲಿ(Supreme Court) ನಮ್ಮಂತೆ ಆಗಿದೆ. ಮತ್ತೇನು ಸೂಕ್ಷ್ಮ ವಿಚಾರ ಇರುವುದು. ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಕ್ರಮಕೈಗೊಳ್ಳಬೇಕಷ್ಟೇ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದೆಯಾ ಜೆಡಿಎಸ್‌..?

ಮಹದಾಯಿ ಹೋರಾಟಗಾರರ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಆದರೆ, ಈಗ ಮತ್ತೆ ಕೆಲವು ಹೋರಾಟಗಾರರಿಗೆ ಕೋರ್ಟ್‌ ನೋಟಿಸ್‌ ನೀಡಲಾಗಿದೆ. ಅಧಿಕಾರಿಗಳನ್ನು ಪ್ರಶ್ನಿಸಿದರೆ ತಮಗೆ ಗೊತ್ತಿಲ್ಲ ಎನ್ನುತ್ತಾರೆ. ಸರ್ಕಾರವೇ ಹಿಂಪಡೆದ ಪ್ರಕರಣಕ್ಕೆ ಮತ್ತೆ ಜೀವ ತುಂಬಿದ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕೋನರಡ್ಡಿ ಆಗ್ರಹಿಸಿದರು.

ಬೆಳೆ ವಿಮೆಗಾಗಿ ಪಾದಯಾತ್ರೆ:

ರೈತರಿಂದ(Farmers) ಬೆಳೆ ವಿಮೆ(Crop Insurance) ತುಂಬಿಸಿಕೊಂಡ ವಿಮಾ ಕಂಪನಿಗಳು, ಬೆಳೆ ನಷ್ಟದ ವಿಮೆ ನೀಡಲು ಮುಂದಾಗುತ್ತಿಲ್ಲ. ಕಂಪನಿ ವಿರುದ್ಧ ಗೋಕುಲ ಠಾಣೆಯಲ್ಲಿ ದೂರು ನೀಡಿದ್ದು, ಇನ್ನೂ ಕ್ರಮ ಕೈಗೊಳ್ಳುತ್ತಿಲ್ಲ. ಬೆಳೆವಿಮೆ ಹೆಸರಲ್ಲಿ ಕೋಟ್ಯಂತರ ರು. ಹಗರಣವಾಗಿದ್ದು ಈ ಕುರಿತು ಸ್ಪಷ್ಟನೆ ನೀಡಬೇಕು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹುಬ್ಬಳ್ಳಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ವರೆಗೂ ಪಾದಯಾತ್ರೆ ನಡೆಸಲಾಗುವುದು. ಅಧಿವೇಶನದ ವೇಳೆಯಲ್ಲೇ ಪಾದಯಾತ್ರೆ ನಡೆಸಲಾಗುವುದು. ಶೀಘ್ರವೇ ದಿನಾಂಕ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಹು-ಧಾ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ, ಗಂಗಾಧರ ಇದ್ದರು.
 

Follow Us:
Download App:
  • android
  • ios