ಡಿಕೆಶಿ ಜೊತೆಗಿನ ಜೆಡಿಎಸ್ ಮಾಜಿ ಸಚಿವ ಸಿಎಸ್ ಪುಟ್ಟರಾಜು ಫೋಟೊ ವೈರಲ್!

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಕಳೆದ 2 ವರ್ಷದ ಹಿಂದೆ ತೆಗೆದಿದ್ದ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಿರಿಯ ಬಿಟ್ಟು ಸಣ್ಣತನ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹಾರಿಹಾಯ್ದರು.

Former JDS minister CS Puttarajus photo with DK Shivakumar went viral at mandya rav

ಪಾಂಡವಪುರ (ಫೆ.25): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಕಳೆದ 2 ವರ್ಷದ ಹಿಂದೆ ತೆಗೆದಿದ್ದ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಿರಿಯ ಬಿಟ್ಟು ಸಣ್ಣತನ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹಾರಿಹಾಯ್ದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಮ್ಮಿಶ್ರ ಸರಕಾರದಲ್ಲಿ ನಾನು ಮತ್ತು ಡಿ.ಕೆ.ಶಿವಕುಮಾರ್ ಸಚಿವರಾಗಿ ಕೆಲಸ ಮಾಡುತ್ತಿದ್ದೆವು. ಜತೆಗೆ ಕಳೆದ ಲೋಕಸಭಾ ಚುನಾವಣೆ ವೇಳೆ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ನಾನು ಮತ್ತು ಡಿಕೆಶಿ ಇಬ್ಬರು ಕೆಲಸ ಮಾಡಿದ್ದೇವೆ ಎಂದರು. 

ಕೆಆರ್‌ಎಸ್‌ ಡ್ಯಾಂ ಬಳಿಯ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಟ್ರಯಲ್‌ ಬ್ಲಾಸ್ಟ್‌ಗೆ ಹೈಕೋರ್ಟ್‌ ಅನುಮತಿ; ರೈತರಲ್ಲಿ ಆತಂಕ

ಒಂದಮ್ಮೆ ಆಕಸ್ಮಿಕವಾಗಿ ಏಟ್ರಿಯಾ ಹೋಟೆಲ್‌ನಲ್ಲಿ ಭೇಟಿಯಾದ ವೇಳೆ ಕಾರ್ಯಕರ್ತರೊಬ್ಬರು ನೀಡುತ್ತಿದ್ದ ಹೂಗುಚ್ಚ ಹಿಡಿದು ನಿಂತಿರುವ ಘೋಟೋವನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಎರಡು ವರ್ಷದ ಹಳೇಯ ಫೋಟೋವನ್ನು ಹಾಕುವ ಮೂಲಕ ಸೋಲಿನ ಭೀತಿಯಿಂದಾಗಿ ಕಾಂಗ್ರೆಸ್‌ನವರು ಈರೀತಿಯ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ವೇಳೆ ಜಿಲ್ಲೆಯ ಜನತೆ ಅವರಿಗೆ ತಕ್ಕ ಪಾಠಕಲಿಸಲಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯ ಗೆಲುವು ಖಚಿತ. ಶ್ರೀರಾಮನ ಆಶೀರ್ವಾದದಿಂದ ದೇಶದ ಪ್ರಧಾನಿ ನರೇಂದ್ರಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಬೆಂಬಲಿಸಬೇಕೆಂದು ಜಿಲ್ಲೆ ಸೇರಿದಂತೆ ರಾಜ್ಯದ ಜನ ತೀರ್ಮಾನಿಸಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲೂ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರದಿಂದ ಜಿಲ್ಲೆಗೆ ಕೃತಕ ಬರ: ರಾಜ್ಯದಲ್ಲಿ ಬರ ಎದುರಾಗಿದೆ. ಜಿಲ್ಲೆಯ ಜನರಿಗೆ ರಾಜ್ಯ ಸರಕಾರ ಕೃತಕ ಬರಗಾಲ ಎದುರಿಸುವಂತೆ ಮಾಡಿದ್ದಾರೆ. ಕೆಆರ್‌ಎಸ್ ಡ್ಯಾಂನಲ್ಲಿ 60 ಅಡಿ ನೀರು ಇದ್ದ ವೇಳೆಯೂ ವಿಸಿ, ಸಿಡಿಎಸ್ ಸೇರಿದಂತೆ ಜಿಲ್ಲೆಯ ನಾಲೆಗೆ ನೀರು ಹರಿಸಿ ರೈತರ ರೈತರ ಕಬ್ಬು, ತೆಂಗು, ಅಡಿಕೆ ಬೆಳೆಗಳಿಗೆ ನೀರು ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು. 

ಮಲ್ಲೇಶ್ವರ, ಕೆಂಗೇರಿ, ಮಂಡ್ಯ ಸೇರಿ 15 ರೈಲ್ವೆ ನಿಲ್ದಾಣಗಳಿಗೆ ಸ್ಮಾರ್ಟ್‌ ಟಚ್; 372.13 ಕೋಟಿ ವೆಚ್ಚ ಮೀಸಲು

ಆದರೆ, ಡ್ಯಾಂನಲ್ಲಿ 90 ಅಡಿ ನೀರಿದ್ದರೂ ಸಹ ನಾಲೆಗಳಿಗೆ ನೀರು ನಿಲ್ಲಿಸುವ ಮೂಲಕ ಬರಗಾಲ ಎದುರಾಗುವಂತೆ ಮಾಡಿದ್ದಾರೆ. ಜಿಲ್ಲೆಯ ಈ ವ್ಯವಸ್ಥೆಗೆ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ, ನೀರಾವರಿ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ. ಒಂದು ವಾರದೊಳಗೆ ನಾಲೆಗಳಿಗೆ ನೀರು ಹರಿಸುವ ಮೂಲಕ ತೋಟಗಾರಿಗೆ ಬೆಳೆಗಳು, ಕಬ್ಬು ಬೆಳೆ ರಕ್ಷಣೆ ಮಾಡದೆ ಹೋದರೆ ಜಿಲ್ಲೆಯ ರೈತರು ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Latest Videos
Follow Us:
Download App:
  • android
  • ios