Asianet Suvarna News Asianet Suvarna News

ಐಎಎಸ್‌ ಮಕ್ಕಳು ಐಎಎಸ್ ಆಗ್ತಾರೆ, ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆಗ್ಬಾರ್ದೆ: ಎಚ್‌ಡಿಕೆ

ಹಾಸನದಲ್ಲಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಟಿಕೆಟ್‌ಗೆ ಬೇಡಿಕೆ ಇಟ್ಟ ಬೆನ್ನಲ್ಲಿಯೇ, ಸ್ವರೂಪ್‌ ಪ್ರಕಾಶ್‌ ಅವರಿಗೆ ಟಿಕೆಟ್‌ ಆಸೆ ಕಮರಿಹೋಗುವ ಲಕ್ಷಣ ಕಾಣುತ್ತಿದೆ. ಈ ನಡುವೆ ಕೊಪ್ಪಳದಲ್ಲಿ ಕುಮಾರಸ್ವಾಮಿ ಕುಟುಂಬ ರಾಜಕಾರಣಕ್ಕೆ ಹೊಸ ವ್ಯಾಖ್ಯಾನವನ್ನೇ ನೀಡಿದ್ದಾರೆ.

Former JDS chief minister H D Kumaraswamy talks on family politics in Koppal san
Author
First Published Jan 30, 2023, 6:07 PM IST

ಕೊಪ್ಪಳ (ಜ.30): ವೈದ್ಯರ ಮಕ್ಕಳು ವೈದ್ಯರಾಗ್ತಾರೆ, ಜಡ್ಜ್‌ಗಳ ಮಕ್ಕಳು ಜಡ್ಜ್‌ ಆಗ್ತಾರೆ.. ಕೊನೆಗೆ ಐಎಸ್‌ಎಸ್‌ ಅಧಿಕಾರಿಗಳ ಮಕ್ಕಳು ಐಎಎಸ್‌ ಮಾಡೋದಿಲ್ವಾ.. ಹಾಗಾದರೆ ರಾಜಕಾರಣಿಗಳ ಮಕ್ಕಳು ರಾಜಕಾರಣ ಮಾಡಿದರೇ ತಪ್ಪೇನು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಅದರೊಂದಿಗೆ ಕುಟುಂಬ ರಾಜಕಾರಣಕ್ಕೆ ಹೊಸ ವ್ಯಾಖ್ಯಾನವನ್ನೇ ನೀಡಿದ್ದಾರೆ. ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬದವರು ಮಾಡುವ ಕಾಯಕ, ಉದ್ಯೋಗವನ್ನು ಅವರು ಮಕ್ಕಳು ಇಷ್ಟಪಟ್ಟು ಮಾಡಿದರೆ ಅದು ತಪ್ಪಾ?, ವಯಸ್ಕರು ತಾವೇನು ಮಾಡಬೇಕು ಎನ್ನುವುದನ್ನು ನಿರ್ಧರಿಸಲು ಸ್ವತಂತ್ರತು ಆ ಹಕ್ಕನ್ನು ನಮಗೆ ಸಂವಿಧಾನವೇ ನೀಡಿದೆ.  ಅವರ ಇಚ್ವೆಯಂತೆ ಅವರು ರಾಜಕಾರಣಿಗಳಾದರೆ ತಪ್ಪೇನು ಎಂದು ಹೇಳುವ ಮೂಲಕ ಹಾಸನದಲ್ಲಿ ಟಿಕೆಟ್‌ ಫೈಟ್‌ ಬಗ್ಗೆ ಮಾರ್ಮಿಕವಾಗಿ ಉತ್ತರ ನೀಡಿದರು. ಇದಕ್ಕೂ ಮುನ್ನ ಅಮಿತ್ ಷಾ ಅವರು ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಅರೋಪಿಸಿದ್ದಕ್ಕೆ ಕೆರಳಿ ಕೆಂಡಮಂಡಲವಾದ ಅವರು, ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ. ಅತೀ ಹೆಚ್ಚು ಕುಟುಂಬ ರಾಜಕಾರಣ ಇರೋದು ಬಿಜೆಪಿಯಲ್ಲಿ. ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಇಲ್ಲವೇ ಎಂದು ಪ್ರಶ್ನಿಸಿದರು. 

ಅಮಿತ್‌ ಶಾ ಅವರಿಗೆ ಜೆಡಿಎಸ್‌ ಪಕ್ಷದ ನಾಯಕರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ. ಅಮಿತ್‌ ಶಾ ಅವರು ತಮ್ಮ ಪುತ್ರನನ್ನು ಬಿಸಿಸಿಐನ ಉನ್ನತ ಹುದ್ದೆಯಲ್ಲಿ ಯಾವ ಆಧಾರದಲ್ಲಿ ನೇಮಿಸುವಂತೆ ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಅವರಿಗೆ ಯಾವ ಕ್ರಿಕೆಟ್‌ ಅನುಭವ ಇದೆ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶವನ್ನೇ ಉಲ್ಲಂಘಿಸಿ ಮಗನನ್ನು ನೇಮಕ ಮಾಡಿಲ್ಲವೇ ಎಂದು ಹೇಳಿದರು.

ನಾನು ಬದುಕಿರುವವರೆಗೂ ಎಚ್‌ಡಿಕೆ ಜತೆ ಹೊಡೆದಾಡಲ್ಲ: ರೇವಣ್ಣ ಶಪಥ!

ಬಿಜೆಪಿ ಹಾಗೂ ಕಾಂಗ್ರೆಸ್‌ನವರು ಇಬ್ಬರೂ ಜೆಡಿಎಸ್‌ಗೆ ವೋಟ್‌ ಹಾಕಬೇಡಿ ಅನ್ನೋದು ಯಾಕೆ? ಹಾಗಾದರೆ ಯಾರಿಗೆ ವೋಟು ಹಾಕಬೇಕು ಅನ್ನೋದನ್ನಾದರೂ ಅವರು ಹೇಳಲಿದೆ. ಅದನ್ನು ಬಿಟ್ಟು ನನ್ನನ್ನು ಯಾಕೆ ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರವಾಗಿದೆ.‌ ಅಲ್ಲಿ ನಮ್ಮನ್ನು ಎಷ್ಟೇ ಟಾರ್ಗೆಟ್‌ ಮಾಡಿದರೂ, ಏನೂ ಮಾಡಲು ಸಾಧ್ಯವಿಲ್ಲ ಎಂದು ವಿಶ್ವಾಸದಲ್ಲಿ ಮಾತನಾಡಿದರು.

ಹಾಸನ ಟಿಕೆಟ್‌ ಫೈಟ್‌ಗೆ ತೆರೆ: ಪತ್ನಿ, ಮಕ್ಕಳಿಗೆ ನಿರಾಶೆ ಮಾಡಿದ ಎಚ್.ಡಿ. ರೇವಣ್ಣ

ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಪಂಚರತ್ನ ಯಾತ್ರೆಯಿಂದ ಜೆಡಿಎಸ್ ಪಕ್ಷದ ಸುನಾಮಿ ಎದ್ದಿದೆ. ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸುಮಾರು 40-50 ಸೀಟು ಗೆಲ್ಲುವುದರಲ್ಲಿ ಅನುಮಾನ ಇಲ್ಲ. ಕುಷ್ಟಗಿಯಲ್ಲಿ ಇಂಥ ಸಭೆ ಆಗಲಿದೆ ಎಂದು ಯಾರಾದರೂ ಉಹೆ ಮಾಡಿದ್ರಾ? ತಾವರಗೇರಾದಲ್ಲಿ ಸೇರಿದ ಜನರನ್ನು ನಾನು ಉಹೆ ಮಾಡಿರಲಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ನಮಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನು ಕಾಂಗ್ರೆಸ್ ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios