ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೆಸೆಯಿರಿ: ಪ್ರಜಾಧ್ವನಿ ಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕರೆ
ವಿಧಾನಸೌಧದಲ್ಲಿ ಪ್ರತಿಯೊಂದು ಗೋಡೆ ಲಂಚಾವಾತರದ ಸರ್ಕಾರ ಎಂದು ಪ್ರತಿಧ್ವನಿಸುತ್ತಿದೆ. ಹೋಟೆಲ್‌ಗಳಲ್ಲಿ ಪ್ರತಿ ಆಹಾರ ಪದಾರ್ಥಗಳಿಗೆ ದರ ಫಿಕ್ಸ್ ಮಾಡಿದಂತೆ ರಾಜ್ಯ ಸರ್ಕಾರ ಪ್ರತಿ ಕೆಲಸಕ್ಕೂ ಒಂದು ರೇಟ್ ಫಿಕ್ಸ್ ಮಾಡಿಕೊಂಡಿದ್ದಾರೆ.
ಚಡಚಣ (ಫೆ.14): ವಿಧಾನಸೌಧದಲ್ಲಿ ಪ್ರತಿಯೊಂದು ಗೋಡೆ ಲಂಚಾವಾತರದ ಸರ್ಕಾರ ಎಂದು ಪ್ರತಿಧ್ವನಿಸುತ್ತಿದೆ. ಹೋಟೆಲ್‌ಗಳಲ್ಲಿ ಪ್ರತಿ ಆಹಾರ ಪದಾರ್ಥಗಳಿಗೆ ದರ ಫಿಕ್ಸ್ ಮಾಡಿದಂತೆ ರಾಜ್ಯ ಸರ್ಕಾರ ಪ್ರತಿ ಕೆಲಸಕ್ಕೂ ಒಂದು ರೇಟ್ ಫಿಕ್ಸ್ ಮಾಡಿಕೊಂಡಿದ್ದಾರೆ. ಇಂತಹ ಸರ್ಕಾರ ಬೇಕಾ?, ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೆಸೆದು ಸ್ವಚ್ಛ, ಜನಪರ ಆಡಳಿತ ನೀಡುವ ಕಾಂಗ್ರೆಸ್ ಪಕ್ಷಕಕೆ ಬೆಂಬಲಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೋರಿದರು.
ಪಟ್ಟಣದ ಕೆಇಬಿ ಹತ್ತಿರದ ಆಯೋಜಿಸಲಾದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋಮವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂದುಕೊಂಡು ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡುವದರ ಮೂಲಕ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ತಂದೆವು. ಆದರೆ, ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ಸಿದ್ದರಾಮಯ್ಯ ಬೀಳಿಸಿದರು ಎಂದು ಆರೋಪಿಸುತ್ತಾರೆ. ಕೊಟ್ಟಕುದುರೆ ಏರದವನು ಶೂರನೂ ಅಲ್ಲ, ಧೀರನೂ ಅಲ್ಲ, ವೀರನೂ ಅಲ್ಲ ಎಂಬುವಂತೆ ಚೆನ್ನಾಗಿ ಅಧಿಕಾರ ಮಾಡಪ್ಪ ಅಂದರೇ ವೆಸ್ಟೆಂಡ್ ಹೋಟೆಲ್‌ದಲ್ಲಿ ಕುಳಿತು ಅಧಿಕಾರ ನಡೆಸಿ ಗಿರಾಕಿ ಅಧಿಕಾರ ಕಳೆದುಕೊಂಡಿತು.
ಫೆಬ್ರವರಿ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ: ಸಿದ್ದರಾಮಯ್ಯ
ರಾಜ್ಯದಲ್ಲಿ ಎಂದೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಕಾರಣ ಜೆಡಿಎಸ್. ಈ ಪಕ್ಷಕ್ಕೆ ಒಂದು ತತ್ವ ಸಿದ್ಧಾಂತವಿಲ್ಲ. ನಾನು ಸೆಕ್ಯೂಲರ್ ಎಂದು ಹೇಳುವ ಹಾಗೂ ಗೆದ್ದೆತ್ತಿನ ಬಾಲ ಹಿಡಿಯುವ ಕುಮಾರಸ್ವಾಮಿಯನ್ನು ನಂಬಬೇಡಿ. ಮತ ನೀಡಿ ಮೋಸ ಹೋಗಬೇಡಿ ಎಂದು ತಿಳಿಸಿದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಮಾತನಾಡಿ, ಬಿಜೆಪಿ ಸರ್ಕಾರದ ವೈಫಲ್ಯಗಳು, ಕಾಂಗ್ರೆಸ್ ಸಾಧನೆ ಹಾಗೂ ಮುಂದಿನ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಲು ಈ ಪ್ರಜ್ಞಾಧ್ವನಿ ಯಾತ್ರೆ ಬಿಜೆಪಿ ಸರ್ಕಾರ ನೀಡಿದ 600 ಭರವಸೆಯಲ್ಲಿ 50 ಕೂಡಾ ಈಡೇರಿಸಲು ಸಾಧ್ಯವಾಗಿಲ್ಲ ಎಂದು ಲೇವಡಿ ಮಾಡಿದರು.
ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಗಳು ಉಳ್ಳವರ ಸರ್ಕಾರವಿದೆ ಹೊರತು ಆದರೆ, ಇಲ್ಲದವರ ಸರ್ಕಾರ ಅಲ್ಲ. ಬೆಲೆ ಏರಿಕೆಯ, ಬಡವರ ರಕ್ತ ಹೀರುವ ಸರ್ಕಾರ ಆರೋಪಿಸಿದರು. ಹಿಂದುತ್ವದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಬಿಜೆಪಿ ಸರ್ಕಾರವನ್ನು ಧಿಕ್ಕರಿಸಿ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ನಡೆಸುವ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿ ಸಿದ್ದರಾಮಯ್ಯ ಅವರನ್ನು ಕೈ ಬಲಪಡಿಸಿ ಎಂದು ಕೋರಿದರು.
ಮಾಜಿ ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ವಿಠ್ಠಲ ಕಟಕದೊಂಡ ಹಾಗೂ ರಾಜೂ ಆಲಗೂರ ಮಾತನಾಡಿ, ಇಬ್ಬರ ಜಗಳದಲ್ಲಿ ನಾಗಠಾಣ ಮತಕ್ಷೇತ್ರ ಬಡವಾಗಿದೆ. ಒಬ್ಬರು ಮಾಡೋದಿಲ್ಲ. ಇನ್ನೊಬ್ಬರು ಮಾಡೋಕೆ ಬಿಡೋದಿಲ್ಲ ಎಂಬಂತಾಗದೆ. ಇದರಿಂದ ಎಲ್ಲ ನಿರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ರಾಜ್ಯದಲ್ಲಿ ವಾಮಮಾರ್ಗದಿಂದ ಬಂದ ದತ್ತಕ ಸರ್ಕಾರದಿಂದ ಏನು ಅಭಿವೃದ್ಧಿ ಕಾಣಲು ಸಾಧ್ಯ. ಜನಪರ, ರೈತ ಪರ, ದೀನ ದಲಿತರ ಪರ, ಅಲ್ಪಸಂಖ್ಯಾರ ಪರವಾದ ಆಡಳಿತ ನೀಡುವ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಜಿಪಿ ಹಾಗೂ ಜೆಡಿಎಸ್ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ, ಪ್ರಕಾಶ ಹುಕ್ಕೇರಿ, ಮುಖಂಡರಾದ ಡಿ.ಎಲ್.ಚವ್ಹಾಣ, ಶರಣಪ್ಪ ಸುಣಗಾರ, ಅಪ್ಪಾಜಿ ನಾಡಗೌಡ, ಮಲ್ಲಿಕಾರ್ಜುನ ಲೋಣಿ, ಎಂ.ಆರ್.ಪಾಟೀಲ, ಬಿ.ಎಂ.ಕೋರೆ, ಸಿದ್ದಣ್ಣ ಸಾಹುಕಾರ ಬಿರಾದಾರ, ಆರ್.ಡಿ.ಹಕ್ಕೆ, ಕಾಂತಾ ನಾಯಕ, ಶ್ರೀದೇವಿ ಉತ್ಲಾಸಕರ, ಶ್ರೀನಾಥ ಪೂಜಾರಿ, ಸಂಜೀವ ಲಮಾಣಿ, ರವಿದಾಸ ಜಾದವ, ಪ್ರಕಾಶಗೌಡ ಪಾಟೀಲ, ಹಮೀದ್ ಮುಶ್ರೀಫ್, ಸುಜಾತಾ ಕಳ್ಳಿಮನಿ, ವಿದ್ಯಾರಾಣಿ ತುಂಗಳ, ಸತೀಶ ಉಟಗಿ, ಸಾಹೇಬಗೌಡ ಬಿರಾದಾರ, ಬಸುಸಾಹುಕಾರ ಬಿರಾದಾರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು.
ಸದಾ ಜನರ ಧ್ವನಿಯಾದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೇ ಪ್ರತಿ ಬಡ ಕುಟುಂಬಗಳಿಗೆ 10 ಕೆಜಿ ಉಚಿತ ಅಕ್ಕಿ, 200 ಯುನಿಟ್ ವಿದ್ಯುತ್ ಉಚಿತ ಹಾಗೂ ಕುಟುಂಬ ನಡೆಸುವ ಮಹಿಳೆಗೆ ಗೃಹಲಕ್ಷ್ಮೇ ಯೋಜನೆಯಡಿ ಪ್ರತಿ ತಿಂಗಳ .2 ಸಾವಿರ ಹಣ ನೀಡುತ್ತೇವೆ. ಬಿಜೆಪಿ ಶಾಸಕರೇ ಕಾಂಗ್ರೆಸ್ ಪಕ್ಷದೆಡೆ ಮುಖ ಮಾಡುತ್ತಿದ್ದಾರೆ. ಆದರೆ, ಎಲ್ಲರನ್ನೂ ನಾವು ಸೇರಿಸಿಕೊಳ್ಳುವುದಿಲ್ಲ. ಪಕ್ಷದ ತತ್ವಸಿದ್ಧಾಂತವನ್ನು ಒಪ್ಪಿಕೊಂಡು ಬೇಷರತ್ತಾಗಿ ಬರುವವರಿಗೆ ಮಾತ್ರ ಸೇರಿಸಿಕೊಳ್ಳುತ್ತೇವೆ.
-ಸಿದ್ದರಾಮಯ್ಯ ಮಾಜಿ ಸಿಎಂ.
ಸಿ.ಟಿ.ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ?: ಸಿದ್ದರಾಮಯ್ಯ ಗರಂ
ಬಿಜೆಪಿ ಭ್ರಷ್ಟಸರ್ಕಾರದ ಆಡಳಿತಕೆ ಬೇಸತ್ ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಾಗಠಾಣ ಮತಕ್ಷೇತ್ರದಲ್ಲಿ ಉಳದಿರುವ ನೀರಾವರಿ ಕಾಮಗಾರಿಗಳು ಪೂರ್ಣ ಮಾಡಿ ಚಡಚಣ ತಾಲೂಕಿನ ಕೆರೆಗಳು ತುಂಬಿಸಿ ಈ ಭಾಗದ ರೈತರ ಜೀವನ ಮಟ್ಟಸುಧಾರಣೆ ಮಾಡುವಂತೆ ಮಾಡುತ್ತೇವೆ.
-ಎಂ.ಬಿ.ಪಾಟೀಲ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು.