ಹೊಡಿ, ಬಡಿ ಸಂಸ್ಕೃತಿ ಉಳ್ಳವರು ಬಿಜೆಪಿಗರು: ಸಿದ್ದರಾಮಯ್ಯ

ಆಡಳಿತ ಪಕ್ಷದ ಅಧ್ಯಕ್ಷನಾಗಿ ಅಭಿವೃದ್ಧಿ ಬಗ್ಗೆ ಮಾತನಾಡದೇ ಜನರಿಗೆ ಭಾವನಾತ್ಮಕ ವಿಷಯಗಳನ್ನು ತುಂಬಿ, ದ್ವೇಷ ಅಸೂಹೆಗಳನ್ನು ಹುಟ್ಟುಹಾಕಿ ಅಧಿಕಾರ ಮಾಡುವವರು ನಾವಲ್ಲ. ಬಿಜೆಪಿಯವರು ಬರೀ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಇದ್ದಂತೆ ಎಂದು ಹರಿಹಾಯ್ದ ಸಿದ್ದರಾಮಯ್ಯ

Former CM Siddaramaiah Slams BJP grg

ರಾಮದುರ್ಗ(ಫೆ.17): ಟಿಪ್ಪುವನ್ನು ಮುಗಿಸಿದಂತೆ ಸಿದ್ದರಾಮಯ್ಯನವರನ್ನು ಮುಗಿಸಬೇಕು ಎಂದು ಹೇಳುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಯಾವ ಮನಸ್ಥಿತಿ ಹೊಂದಿದ್ದಾರೆ ಎಂಬುವುದು ಅವರ ಮಾತಿನಲ್ಲೇ ಗೊತ್ತಾಗುತ್ತದೆ. ಹೊಡಿ, ಬಡಿ ಸಂಸ್ಕೃತಿ ಉಳ್ಳವರು ಬಿಜೆಪಿಗರು. ಕ್ರಿಮಿನಲ್‌ ಹಿನ್ನೆಲೆ ಉಳ್ಳವರು ಮಾತ್ರ ಹೀಗೆ ಮಾತನಾಡುತ್ತಾರೆ. ಇವರಿಗೆ ಬುದ್ಧಿ ಇಲ್ಲ. ನಾಲಾಯಕ ನಾಯಕರು ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ತೇರ ಬಜಾರದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡ ಪ್ರಜಾಧ್ವನಿ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ತಿದ್ದುಪಡಿ ಮಾಡಿ, ಲಂಬಾಣಿ ಜನಾಂಗಕ್ಕೆ ಹಕ್ಕುಪತ್ರಗಳನ್ನು ತಯಾರಿಸಲು ಹೇಳಿದವರು ನಾವು. ಆದರೆ ಬಿಜೆಪಿಗರು ನರೇಂದ್ರ ಮೋದಿ ಅವರನ್ನು ಹಕ್ಕುಪತ್ರ ಕೊಡಿಸಲು ಕರಿಸಿದ್ದಾರೆ. ಅಡುಗೆ ಮಾಡಿದ್ದು ನಾವು, ಆದರೆ ಊಟ ಮಾಡಿದ್ದು ಮೋದಿ. ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನು ಮಾಡಬೇಕೆಂದು ತಿದ್ದುಪಡಿ ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ತಾಂಡಾಗಳ್ಳನ್ನು ಅಷ್ಟೇ ಅಲ್ಲ ಗೋಲ್ಲರಹಟ್ಟಿ, ಕುರುಬರಟ್ಟಿ, ನಾಯಕರಟ್ಟಿ ಮಜರೇಗಳನ್ನು ಸಹ ಕಂದಾಯ ಗ್ರಾಮಗಳಾಗಿ ಮಾಡಿದ್ದೇವೆ. ವಾಸಿಸುವವನೇ ಮನೆಯ ಒಡೆಯ ಎಂದು ನಮ್ಮ ಕಾಲದಲ್ಲಿ ಮಾಡಿದ್ದೇವೆ ಎಂದರು.

ಸಾಹುಕಾರ್ Vs ಹೆಬ್ಬಾಳ್ಕರ್: ಸಾಹುಕಾರನ ವಿರುದ್ಧ ಗೋಕಾಕ್‌ನಿಂದ ಸ್ಪರ್ಧಿಸ್ತಾರಾ ಲಕ್ಷ್ಮೀ ಹೆಬ್ಬಾಳ್ಕರ್?

ಬಿಜೆಪಿ ಸುಳ್ಳಿನ ಫ್ಯಾಕ್ಟರಿ:

ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು ಮಂಗಳೂರಿನಲ್ಲಿ ಸಭೆಯಲ್ಲಿ ಲವ್‌ ಜಿಹಾದ್‌ ಬಗ್ಗೆ ಮಾತಾಡುತ್ತಾರೆ. ಆಡಳಿತ ಪಕ್ಷದ ಅಧ್ಯಕ್ಷನಾಗಿ ಅಭಿವೃದ್ಧಿ ಬಗ್ಗೆ ಮಾತನಾಡದೇ ಜನರಿಗೆ ಭಾವನಾತ್ಮಕ ವಿಷಯಗಳನ್ನು ತುಂಬಿ, ದ್ವೇಷ ಅಸೂಹೆಗಳನ್ನು ಹುಟ್ಟುಹಾಕಿ ಅಧಿಕಾರ ಮಾಡುವವರು ನಾವಲ್ಲ. ಬಿಜೆಪಿಯವರು ಬರೀ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಇದ್ದಂತೆ ಎಂದು ಹರಿಹಾಯ್ದರು.
ಕೇಂದ್ರ ಗೃಹ ಸಚಿವ ಅಮಿತ್‌ ಶಾ ದಲಿತರು, ಹಿಂದುಳಿದವರ ಅಭಿವೃದ್ಧಿ, ಸೌಲಭ್ಯಗಳ ಬಗ್ಗೆ ಚರ್ಚೆ ಮಾಡದೇ ಅಬ್ಬಕ್ಕ ವರ್ಸಸ್‌ ಟಿಪ್ಪು ಸುಲ್ತಾನ್‌ ವಿಷಯದ ಬಗ್ಗೆ ಮಾತಾಡುತ್ತಾರೆ. ಹೀಗೆ ಮಾಡಿದರೆ ಅಭಿವೃದ್ಧಿಯಾಗುತ್ತಾ ಎಂದು ಪ್ರಶ್ನಿಸಿದರು.

ತೇಜಸ್ವಿ ನಾಲಾಯಕ ಸಂಸದ:

ಅನ್ನಭಾಗ್ಯ ಯೋಜನೆಯಲ್ಲಿ ನಾನು 7 ಕೆಜಿ ಅಕ್ಕಿ ಕೊಟ್ರೆ, ಇವರ ಮನೆ ಹಾಳಾದವರು 5 ಕೆಜಿಗೆ ನಿಲ್ಲಿಸಿದ್ದಾರೆ. ಅಧಿಕಾರಕ್ಕೆ ಬಂದ ತಕ್ಷಣ 10 ಕೆಜಿ ಹೆಚ್ಚಿಸುತ್ತೇವೆ. ನಾವು ಕೊಟ್ಟ ಭರವಸೆಯನ್ನು ಖಂಡಿತ ಈಡೇರಿಸುತ್ತೇವೆ. ರೈತರ ಕಷ್ಟಗೊತ್ತಿಲ್ಲದ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯನಿಗೆ ನಾನು ಅಮಾವಾಸ್ಯೆ ಎಂದು ಕರೆಯುತ್ತೇನೆ. ಉತ್ತಿ ಬಿತ್ತಿದ ಬೆಲೆ ಗೊತ್ತಿಲ್ಲದ ನಾಲಾಯಕ ಸಂಸದ ಎಂದು ದೂರಿದರು.

ಅಚ್ಚೇದಿನ ಬಂತಾ:

ಮೋದಿಯವರು ಅಚ್ಚೇ ದಿನ ಆಯೆಗೆ ಅಂತ ಹೇಳಿದ್ದರು ಬಂತಾ?. ಪೆಟ್ರೋಲ್‌, ಗ್ಯಾಸ್‌, ಗೊಬ್ಬರದ ಬೆಲೆ ಹೆಚ್ಚಳ. ರೈತರ ಸಾಲ ಹೆಚ್ಚಾಗಿದೇ ಹೊರತು ಅವರ ಆದಾಯ ಹೆಚ್ಚಿಸಿಲ್ಲ. ಪ್ರತಿ ದವಸ ದಾನ್ಯಗಳ ಮೇಲೆ ತೆರಿಗೆ ಹೇರಿ, ಬಡ ಜನರ ಹೊಟ್ಟೆಯ ಮೇಲೆ ಹೊಡೆದಿದ್ದಾರೆ. ಅಂಬಾನಿ, ಅದಾನಿಯ .12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ವರ್ಷಕ್ಕೆ 2 ಕೋಟಿ ಯುವಕರಿಗೆ ಉದ್ಯೋಗ ಕೊಡ್ತೀನಿ ಅಂತ ಹೇಳಿದ್ದರು. ಕೊಡಲಿಲ್ಲ. ಬರಗಾಲವಿದ್ದ ಸಮಯದಲ್ಲಿಯೂ .8165 ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ಕೊಡ್ತೀವಿ. ಹೆಣ್ಣು ಮಕ್ಕಳ ಅಕೌಂಟಿಗೆ ಪ್ರತಿ ತಿಂಗಳು .2 ಸಾವಿರ ಹಾಕುತ್ತೇವೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಎಚ್‌.ಕೆ. ಪಾಟೀಲ ಅವರು ಮಾತನಾಡಿ, ಸೂರ್ಯ-ಚಂದ್ರ ಇರುವುದು ಎಷ್ಟುಸತ್ಯವೋ ಅಷ್ಟೇ ಈ ಬಾರಿ ರಾಮದುರ್ಗದಲ್ಲಿ ಕಾಂಗ್ರೆಸ್‌ ಗೆಲುವು ಶತಸಿದ್ಧ. ಇದು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಡುವಿನ ಹೋರಾಟ ಅಲ್ಲ. ದೇಶದ ಅಳಿವು ಉಳಿವಿನ ಪ್ರಶ್ನೆ. ಪ್ರಜಾಪ್ರಭುತ್ವದ ಉಳಿವಿನ ಪ್ರಶ್ನೆ ಎಂದು ಹೇಳಿದರು.
ಮಾಜಿ ಸಚಿವ ಹಾಗೂ ಶಾಸಕ ಜಮೀರ್‌ ಅಹಮದ್‌ ಅವರು ಮಾತನಾಡಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಮುಖಂಡರಾದ ಚಿಕ್ಕರೇವಣ್ಣ, ಕೃಷ್ಣ ಮುಂಬರೆಡ್ಡಿ, ಮಾಜಿ ಸಂಸದ ಐ.ಜಿ. ಸಣದಿ, ಬೆಂಗಳೂರಿನ ಮಾಜಿ ಮೇಯರ್‌ ರಾಮಚಂದ್ರಪ್ಪ, ಅಶೋಕ ಪೂಜಾರಿ, ರಾಮದುರ್ಗ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಸೋಮಶೇಖರ ಸಿದ್ಲಿಂಗಪ್ಪನವರ, ಪ್ರದೀಪ ಪಟ್ಟಣ ಸೇರಿದಂತೆ ಇತರರು ಇದ್ದರು.

ಬೃಹತ್‌ ಹೂವಿನ ಹಾರ

ಜನ ಜಾಗೃತಿಗಾಗಿ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡ ಪ್ರಜಾಧ್ವನಿ ಯಾತ್ರೆ ನೇತೃತ್ವ ವಹಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರು ರಾಮದುರ್ಗ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಬೃಹತ್‌ ಗಾತ್ರದ ಹಾರಹಾಕಿ ಅಭಿಮಾನಿಗಳು ಸ್ವಾಗತಿಸಿದರು. ನಾಯಕರು ನಿಗದಿತ ಸಮಯಕ್ಕಿಂತ 4 ಗಂಟೆ ತಡವಾಗಿ ಆಗಮಿಸಿದರೂ ಜನರ ಉತ್ಸಾಹ ಕಡಿಮೆಯಾಗಿರಲಿಲ್ಲ.

ಚುನಾವಣೆ ಹೊಸ್ತಿಲಲ್ಲಿ ಬಾಲ ಬಿಚ್ಚಿದ MES: 'ಚಲೋ ಮುಂಬೈ' ಮೂಲಕ ಮಹಾರಾಷ್ಟ್ರ ಸಿಎಂ ಭೇಟಿ

ನಿಮ್ಮ ಶಾಸಕ ಮಹಾದೇವಪ್ಪ ಏನೂ ಕೊಟ್ಟಿಲ್ಲ

ನಮ್ಮ ಆಡಳಿತ ಅವಧಿಯಲ್ಲಿ ವರ್ಷಕ್ಕೆ 3 ಲಕ್ಷ ಮನೆಗಳನ್ನು ಕಟ್ಟಿ ಕೊಟ್ಟಿದ್ದೇನೆ. ವೀರಭದ್ರೇಶ್ವರ, ಸಾಲಾಪೂರ ಏತ ನೀರಾವರಿ ಮಾಡಿದ್ದು ನಾವು. ನಿಮ್ಮ ಎಂಎಲ್‌ಎ ಮಹಾದೇವಪ್ಪ ಯಾದವಾಡ ಏನೂ ಕೊಟ್ಟಿಲ್ಲ. ಇನ್ನೆರಡು ತಿಂಗಳ ಮಾತ್ರ ಚುನಾವಣೆ ಇದೆ. ಜಾತಿ, ಹಣ ಯಾವುದಕ್ಕೂ ಬಲಿಯಾಗದೆ ಕೋಮುವಾದಿ ಬಿಜೆಪಿ ಸೋಲಿಸಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಬೇಕು. ನೀವು ಸೂಚಿಸಿದ ಅಭ್ಯರ್ಥಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವುದಾಗಿ ಸಿದ್ದರಾಮಯ್ಯ ಹೇಳಿದರು.

ನನ್ನ ತಂದೆ ಮತ್ತು ತಾಯಿ ಶಾಸಕರಾಗಿದ್ದ ವೇಳೆ ಮಾಡಿದ ಅಭಿವೃದ್ಧಿ ಮತ್ತು ಹೋರಾಟವೇ ನನಗೆ ಶ್ರೀರಕ್ಷೆ. ಜನನಾಯಕ ಸಿದ್ದರಾಮಯ್ಯನವರ ವಿಶೇಷ ಕಾಳಜಿಯಿಂದ ಕ್ಷೇತ್ರಕ್ಕೆ .2800 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಜನತೆ ಇನ್ನೋಮ್ಮೆ ಆಶೀರ್ವದಿಸಿ ಅಭಿವೃದ್ಧಿಗೆ ಬೆಂಬಲಿಸಿ ಅಂತ ಕೆಪಿಸಿಸಿ ಉಪಾಧ್ಯಕ್ಷ ಅಶೋಕ ಪಟ್ಟಣ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios