ಸಿಎಂ ಬೊಮ್ಮಾಯಿ ಸೇರಿ ಬಿಜೆಪಿಯಲ್ಲಿ ಎಲ್ಲರೂ ಭ್ರಷ್ಟರು: ಸಿದ್ದರಾಮಯ್ಯ
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರವಾಹ ಬಂದಾಗ ಬರಲಿಲ್ಲ, ಕೊರೋನಾ ಕಷ್ಟಕಾಲದಲ್ಲಿ ಸಾವಿರಾರು ಜನರು ಸಾವನ್ನಪ್ಪಿದಾಗ ಬರಲಿಲ್ಲ.
ಬೆಳಗಾವಿ (ಮಾ.21): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರವಾಹ ಬಂದಾಗ ಬರಲಿಲ್ಲ, ಕೊರೋನಾ ಕಷ್ಟಕಾಲದಲ್ಲಿ ಸಾವಿರಾರು ಜನರು ಸಾವನ್ನಪ್ಪಿದಾಗ ಬರಲಿಲ್ಲ. ಈಗ ಅಧಿಕಾರಕ್ಕಾಗಿ, ಮತಕ್ಕಾಗಿ ಪದೇ ಪದೆ ಕರ್ನಾಟಕಕ್ಕೆ ಮೋದಿ ಬರುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮದು ಡಬಲ್ ಎಂಜಿನ್ ಸರ್ಕಾರ ಅಂತಾರೆ, ಒಂಬತ್ತು ವರ್ಷದಲ್ಲಿ ಮೋದಿ ಯುವಕರಿಗೆ ಮಾಡಿದ್ದೇನು? ಅಧಿಕಾರ, ವೋಟಿಗೋಸ್ಕರ ಪದೇ ಪದೇ ಬರುತ್ತಿದ್ದಾರೆ, ಸಿಎಂ ಆದಿಯಾಗಿ ಬಿಜೆಪಿಯಲ್ಲಿ ಎಲ್ಲರೂ ಭ್ರಷ್ಟರಾಗಿದ್ದಾರೆ.
ಅವರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಮೋದಿ ಮುಖ ತೋರಿಸಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ ಟೀಕಾಪ್ರಹಾರ ನಡೆಸಿದ್ದಾರೆ. ನಗರದ ಸಿಪಿಎಡ್ ಮೈದಾನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಅವರು ರಾಜ್ಯಕ್ಕೆ ಬಂದಾಗ ನಿರುದ್ಯೋಗ, ಭ್ರಷ್ಟಾಚಾರ, ರೈತರು, ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಕೇವಲ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪ ಮಾಡಿ ಜನರ ದಾರಿ ತಪ್ಪಿಸಲು ಹೊರಟಿದ್ದೀರಿ. ಇದರಿಂದ ನಿಮಗೆ ಪ್ರಯೋಜನವಾಗಲ್ಲ.
ಕಾಂಗ್ರೆಸ್‌ನವರಿಗೆ ಮತ ಕೇಳುವ ಯಾವ ನೈತಿಕ ಹಕ್ಕಿಲ್ಲ: ಬಿ.ಎಸ್.ಯಡಿಯೂರಪ್ಪ
ಇಂದು ಹಣದ ಮೂಲಕ ಚುನಾವಣೆ ಗೆಲ್ಲಬೇಕು ಎಂದು ಬಿಜೆಪಿಯವರು ಹೊರಟಿದ್ದಾರೆ. ಇದು ಕೂಡ ಅವರಿಂದ ಸಾಧ್ಯವಾಗಲ್ಲ. ಕಾರಣ ಇಲ್ಲಿನ ಸರ್ಕಾರ ಶೇ.40 ಕಮಿಷನ್ ಸರ್ಕಾರ ಎಂದು ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಜನಜನಿತವಾಗಿದೆ. ಇಲ್ಲಿ ನಡೆಯುವ ಎಲ್ಲ ನೇಮಕಾತಿಗಳಲ್ಲಿ ಲಂಚ ಕೊಡಬೇಕು, ನಾವು ಅಧಿಕಾರದಲ್ಲಿದ್ದಾಗ 1 ಲಕ್ಷದ 62 ಸಾವಿರ ಸರ್ಕಾರಿ ಉದ್ಯೋಗಗಳನ್ನು ಮತ್ತು ಖಾಸಗಿ ಕ್ಷೇತ್ರದಲ್ಲಿ 11ರಿಂದ 12 ಲಕ್ಷ ಉದ್ಯೋಗಗಳನ್ನು ಯುವಜನರಿಗೆ ನೀಡಿದ್ದೆವು. ಬಿಜೆಪಿ ಬಂದ ಮೇಲೆ ಉದ್ಯೋಗ ಸೃಷ್ಟಿನಿಂತು ಹೋಗಿದೆ. ಮತ್ತೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಆಗಬೇಕಾದರೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರು.
ಸತ್ಯ ಹೇಳಲು ಬಿಡಲ್ಲ, ನೂರು ಸಾರಿ ಅಸತ್ಯ ಹೇಳುತ್ತೀರಿ: ನಮಗೆ ಸತ್ಯ ಹೇಳಲು ಬಿಡಲ್ಲ, ನೀವು ನೂರು ಸಾರಿ ಅಸತ್ಯ ಹೇಳುತ್ತೀರಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು. ಕರ್ನಾಟಕ ಬಿಜೆಪಿ ಸರ್ಕಾರ 40 ಪರ್ಸೆಂಟೇಜ್ ಕಮಿಷನ್ ಸರ್ಕಾರ. ಯಾವ ಕಾಲದಲ್ಲಿ ಯೂ ಇಷ್ಟೊಂದು ಭ್ರಷ್ಟಸರ್ಕಾರ ಇರಲಿಲ್ಲ. 40 ಪರ್ಸೆಂಚ್ ಕಮಿಷನ್ ಬಗ್ಗೆ ಗುತ್ತಿಗೆದಾರರೇ ಪ್ರಧಾನಿಗೆ, ಅಮಿತ ಶಾಗೆ ದೂರು ನೀಡಿದ್ದಾರೆ. ಈ ದೂರಿನ ಬಗ್ಗೆ ಅವರು ಏಕೆ ತನಿಖೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ 4 ಸಾವಿರ ಕಿಮೀ ಪಾದಯಾತ್ರೆ ಮಾಡಿದ್ದಾರೆ.
ಅವರಿಗೆ ಹೇಳಿದಂತ ಮಾತನ್ನು ಜಮ್ಮು ಕಾಶ್ಮೀರ ಭಾಷೆಯಲ್ಲಿ ರಾಹುಲ್ ಗಾಂಧಿ 46 ದಿನಗಳ ಹಿಂದೆ ಹೇಳಿದ ಮಾತಿಗೆ ದೆಹಲಿಗೆ ಬಂದ ಪೊಲೀಸರು ಸಾಕ್ಷಿ ಕೊಡಿ ಎಂದು ಬಂದಿದ್ದಾರೆ . ಇಲ್ಲಿ ಗುತ್ತಿಗೆದಾರರು ಸಾಕ್ಷ್ಯ ಕೊಟ್ಟರೂ ತನಿಖೆ ಮಾಡುತ್ತಿಲ್ಲ. 40 ಪರ್ಸೆಂಟ್ ಅವರಿಗೆ 60 ಪರ್ಸೆಂಟ್ ನಿಮಗೆ, 100 ಪರ್ಸೆಂಚ್ ಕಮಿಷನ್, 100 ಕೆಲಸ ಇದ್ದರೆ 200 ಎಸ್ಟಿಮೇಚ್ ಮಾಡುತ್ತಾರೆ. ಮೊದಲು ಅದನ್ನು ತನಿಖೆ ಮಾಡಿ ಆ ಮೇಲೆ ರಾಹುಲ ಗಾಂಧಿ ಮನೆಗೆ ಬನ್ನಿ, ಅಸ್ಸಾಂನಲ್ಲಿ ಹಿಂದೆ ನಮ್ಮಲ್ಲಿದ್ದ ಸಿಎಂ ಅಲ್ಲಿ ಹೋಗಿ ಬಹಳ ಕರೆಪ್ಟ್ ಅದಾರ ಎಂದು ಹೇಳಿ ಏಕೆ ತನಿಖೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಐದು ವರ್ಷ ಜೆಡಿಎಸ್-ಬಿಜೆಪಿಯಿಂದ ರಾಜ್ಯದಲ್ಲಿ ಕೆಟ್ಟ ಆಡಳಿತ: ಚಲುವರಾಯಸ್ವಾಮಿ
18ಕ್ಕೆ 18ರಲ್ಲಿ ಕಾಂಗ್ರೆಸ್ ಗೆಲುವು: ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 18 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ನಾವು ಈ ಹಿಂದೆ 18 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತ ಬಂದಿದ್ದೇವು. ಈಗ ಕಾಂಗ್ರೆಸ್‌ಗೆ ಪೂರಕ ವಾತಾವರಣ ಇದೆ. ನಮ್ಮ ನಾಯಕರ ಒಗ್ಗಟ್ಟು ನೋಡಿದರೆ 18ಕ್ಕೆ 18 ಸ್ತಾನ ಗೆಲ್ಲುವ ವಿಶ್ವಾಸ ಇದೆ ಎಂದು ಖರ್ಗೆ ಹೇಳಿದರು. ನಾನು ಎಐಸಿಸಿ ಅಧ್ಯಕ್ಷ ಆದ ಮೇಲೆ ಮೊದಲ ಬಾರಿ ಬೆಳಗಾವಿಗೆ ಬಂದಿದ್ದೇನೆ. ಬೆಳಗಾವಿ ಕಾಂಗ್ರೆಸ್ ಪಕ್ಷಕ್ಕೆ ಪವಿತ್ರವಾದ ಭೂಮಿ. ಮಹಾತ್ಮ ಗಾಂಧಿ ಇದೇ ನೆಲದಲ್ಲೇ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು. ಇಂದು ನೀವೆಲ್ಲರೂ ಸೇರಿ ಅದೇ ಭೂಮಿಯಲ್ಲಿ ನನಗೆ ಅದೇ ಸ್ಥಾನದಲ್ಲಿ ಕೂರಿಸಿದ್ದಕ್ಕೆ ಧನ್ಯವಾದ ಹೇಳಿದರು.