ಹಿಂಬಾಗಿಲಿನಿಂದ ಬಂದ ಅನೈತಿಕ ಸರ್ಕಾರ ರಾಜ್ಯದಲ್ಲಿದೆ: ಡಬಲ್‌ ಇಂಜಿನ್ ಸರ್ಕಾರದ ವಿರುದ್ಧ ಸಿದ್ದು ವಾಗ್ದಾಳಿ

ಕೊಟ್ಟ ಮಾತಿಗೆ ತಪ್ಪುವವರಲ್ಲ ನಾವು, ಮುಂದೆ ಕೂಡಾ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸುತ್ತೇವೆ. ರಾಮಲಿಂಗ ರೆಡ್ಡಿ ಅನುಭವಿ ರಾಜಕಾರಣಿ. ಬೆಂಗಳೂರು ವಿಚಾರವಾಗಿ ರಾಮಲಿಂಗಾ ರೆಡ್ಡಿ ಅಭಿಪ್ರಾಯಕ್ಕೆ ಹೆಚ್ವಿನ ಮನೆ ಹಾಕುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Former CM Siddaramaiah Ouraged Againist BJP Government gvd

ಬೆಂಗಳೂರು (ಮಾ.25): ಸಂವಾದದ ಸಲಹೆ ಸೂಚನೆ ಕ್ರೋಡೀಕರಿಸಿ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡುತ್ತೇವೆ. ಅಧಿಕಾರಕ್ಕೆ ಬಂದರೆ ಜಾರಿಗೊಳಿಸಲು ಕ್ರಮ. ನಮ್ಮ ಅಧಿಕಾರ ಅವಧಿಯಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಕೆಪಿಸಿಸಿ ಅಪಾರ್ಟ್ಮೆಂಟ್ ಸೆಲ್ ಸಂವಾದದಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೊಟ್ಟ ಮಾತಿಗೆ ತಪ್ಪುವವರಲ್ಲ ನಾವು, ಮುಂದೆ ಕೂಡಾ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸುತ್ತೇವೆ. ರಾಮಲಿಂಗ ರೆಡ್ಡಿ ಅನುಭವಿ ರಾಜಕಾರಣಿ. ಬೆಂಗಳೂರು ವಿಚಾರವಾಗಿ ರಾಮಲಿಂಗಾ ರೆಡ್ಡಿ ಅಭಿಪ್ರಾಯಕ್ಕೆ ಹೆಚ್ವಿನ ಮನೆ ಹಾಕುತ್ತೇವೆ ಎಂದರು. 

ಬಿಜೆಪಿ ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದ ಪಕ್ಷ . ಆಪರೇಷನ್ ಕಮಲ ಮೊದಲು ಪರಿಚಯ ಮಾಡಿದ್ದು ಬಿಜೆಪಿ . ಹಿಂಬಾಗಿಲಿದ ಬಂದ ಅನೈತಿಕ ಸರ್ಕಾರ ರಾಜ್ಯದಲ್ಲಿ ಇದೆ. ಬಿಜೆಪಿ ಯಾವತ್ತೂ ನುಡಿದಂತೆ ನಡೆದಿಲ್ಲ. 2018 ರಲ್ಲಿ 600 ಭರವಸೆ ಕೊಟ್ಟಿದ್ದರು ಈಡೇರಿಸಿದ್ದು 50 ಮಾತ್ರ . ಡಬಲ್‌ ಇಂಜಿನ್ ಸರ್ಕಾರ ಹೇಳಿದ ರೀತಿಯಲ್ಲಿ ಕೆಲಸ ಮಾಡಿಲ್ಲ. ಯಾವ ಸಮಸ್ಯೆ ಬಗೆಹರಿಸಿಲ್ಲ, ಕ್ರೂಡ್ ಆಯಿಲ್ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಆಗಿದೆ. ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆಗೂ ಕಡಿಮೆ ಮಾಡಿಲ್ಲ. ಗ್ಯಾಸ್ ಸಿಲಿಂಡರ್ ದರವೂ ದುಬಾರಿ ಆಗಿದೆ. ಮಧ್ಯಮ ವರ್ಗದ ಜನರಿಗೆ ಇದರಿಂದ ದೊಡ್ಡ ಹೊಡೆತ ಆಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರಾಹುಲ್‌ ಗಾಂಧಿ ಅನರ್ಹತೆಯಿಂದ ಮೋದಿ ಹೇಡಿತನ ಸಾಬೀತು: ಸಿದ್ದರಾಮಯ್ಯ

ನಾವು ಅಧಿಕಾರಕ್ಕೆ ಬಂದ ಕೂಡಲೇ ಪಾಲಿಕೆ ಚುನಾವಣೆ ಮಾಡುತ್ತೇವೆ . ಚುನಾವಣೆ ಮಾಡದೆ ಆಯುಕ್ತರಿಗೆ ಅಧಿಕಾರ ಕೊಟ್ಟರೆ ಹೇಗೆ?. ಸಮರ್ಪಕವಾಗಿ ಕೆಲಸ ಕಾರ್ಯ ಆಗದೆ ಇದ್ದಿದ್ದರಿಂದ ಮಳೆ ಬಂದಾಗ ಅಪಾರ್ಟ್ಮೆಂಟ್ ಗಳಿಗೆ ನೀರು ಬರ್ತಿದೆ. 110 ಹಳ್ಳಿಗಳನ್ನು ಸೇರ್ಪಡೆ ಮಾಡಿದ್ದರೂ ಯಾವುದೇ ಅಭಿವೃದ್ಧಿ ಮಾಡಿಲ್ಲ. ಅಧಿಕಾರಕ್ಕೆ ಬಂದರೆ ಸಂವಾದ ಮಾಡಲು ಸಮಿತಿ ರಚನೆ ಮಾಡುತ್ತೇವೆ. ಅಪಾರ್ಟ್‌ಮೆಂಟ್ ಸಮಸ್ಯೆಗಳ ಬಗ್ಗೆ ವಿಭಾಗಾವಾರು ಸಮಿತಿ ಮಾಡುತ್ತೇವೆ. ಬೆಂಗಳೂರು ಉಸ್ತುವಾರಿ ಸಚಿವರು, ಶಾಸಕರು ಹಾಗೂ ಮೇಯರ್ ಒಳಗೊಂಡ ಸಮಿತಿ ರಚನೆ ಮಾಡುವ ಭರವಸೆಯನ್ನು ನೀಡಿದರು.

ಈಗಾಗಲೇ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಒಂದೆ ಹೆಸರು, ಗೊಂದಲ ಇಲ್ಲದ ಕ್ಷೇತ್ರ ಬಿಡುಗಡೆ ಆಗಿದೆ. ಸ್ಕ್ರೀನಿಂಗ್ ಹಾಗೂ ಸಿಇಸಿ ಸಭೆಯಲ್ಲಿ ಚರ್ಚೆ ಆಗಿತ್ತು. ಹೈಕಮಾಂಡ್ ವರುಣಾದಲ್ಲಿ ನಿಲ್ಲಿ ಅಂದಿದ್ದಾರೆ. ನಾನು ಕೋಲಾರ ಕೂಡ ಕೇಳಿದ್ದೇನೆ. ಆದ್ರೆ ಹೈಕಮಾಂಡ್ ನಿರ್ಧಾರ ಅಂತಿಮ ಎಂದರು. ಜೊತೆಗೆ ಆರು ಶಾಸಕರ ಟಿಕೆಟ್ ಬಿಡುಗಡೆ ಆಗದ ವಿಚಾರವಾಗಿ ಆ ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳು ಇದ್ದಾರೆ. ಹಾಗಾಗಿ ಬಿಡುಗಡೆ ಆಗಿಲ್ಲ.ಎರಡನೇ ಪಟ್ಟಿಯಲ್ಲಿ ಬಿಡುಗಡೆ ಆಗುತ್ತೆ ಎಂದು ಸಿದ್ದರಾಮಯ್ಯ ಹೇಳಿದರು.

ವರುಣ ಕ್ಷೇತ್ರದ ಬಗ್ಗೆ ಅಮಿತ್‌ ಶಾ ಜತೆ ಚರ್ಚೆ ಆಗಿದೆ: ಬಿ.ವೈ.ವಿಜಯೇಂದ್ರ

ಕಾಂಗ್ರೆಸ್‌ ಮೊದಲ ಪಟ್ಟಿ ರಿಲೀಸ್‌: 124 ವಿಧಾನಸಭಾ ಕ್ಷೇತ್ರಗಳ ಲಿಸ್ಟ್‌ ಹೀಗಿದೆ ನೋಡಿ..
ಚಿಕ್ಕೋಡಿ - ಗಣೇಶ್ ಹುಕ್ಕೇರಿ
ಕಾಗವಾಡ - ಭೀಮಗಗೌಡ ಕಾಗೆ
ಕುಡಚಿ - ಮಹೇಂದ್ರ ಕೆ
ಹುಕ್ಕೇರಿ - ಎ.ಬಿ.ಪಾಟೀಲ್
ಯಮಕನಮಡಿ - ಸತೀಶ್ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ - ಲಕ್ಷ್ಮಿ ಹೆಬ್ಬಾಳ್ಕರ್
ದೇವನಹಳ್ಳಿ - ಕೆ.ಎಚ್.ಮುನಿಯಪ್ಪ
ಖಾನಾಪು - ಅಂಜಲಿ ನಿಂಬಾಳ್ಕರ್
ಬೈಲಹೊಂಗಲ - ಮಹಾಂತೇಶ್ ಕೌಜಲಗಿ
ರಾಮದುರ್ಗ - ಅಶೋಕ್ ಪಟ್ಟಣ್
ಜಮಖಂಡಿ - ಆನಂದ್ ನ್ಯಾಮಗೌಡ
ಹುನಗುಂದ - ವಿಜಯಾನಂದ ಕಾಶಪ್ಪನವರ್
ಮುದ್ದೇಬಿಹಾಳ - ಅಪ್ಪಾಜಿ ನಾಡಗೌಡ
ಬಸವನ ಬಾಗೇವಾಡಿ - ಶಿವಾನಂದ ಪಾಟೀಲ್
ಬಬಲೇಶ್ವರ್ - ಎಂ.ಬಿ.ಪಾಟೀಲ್
ಇಂಡಿ - ಯಶವಂತರಾಯ ಗೌಡ ಪಾಟೀಲ್
ಜೇವರ್ಗಿ - ಅಜಯ್ ಸಿಂಗ್
ಸುರಪುರ - ರಾಜಾವೆಂಕಟಪ್ಪ ನಾಯಕ
ಶಹಪುರ_ಶರಣಬಸಪ್ಪ ಗೌಡ
ಚಿತ್ತಾಪುರ - ಪ್ರಿಯಾಂಕ್ ಖರ್ಗೆ
ಸೇಡಂ - ಶರಣಪ್ರಕಾಶ್ ಪಾಟೀಲ್
ಚಿಂಚೋಳಿ - ಸುಭಾಷ್ ರಾಠೋಡ್
ಕಲಬುರಗಿ ಉತ್ತರ - ಕನಿಜ ಫಾತಿಮಾ
ಆಳಂದ - ಬಿ.ಎಆರ್.ಪಾಟೀಲ್
ಹುಮ್ನಾಬಾದ್ - ರಾಜಶೇಖರ್ ಪಾಟೀಲ್
ಬೀದರ್ ದಕ್ಷಿಣ - ಅಶೋಕ್ ಖೇಣಿ
ಬೀದರ್ - ರಹೀಂ ಖಾನ್
ಬಾಲ್ಕಿ - ಈಶ್ವರ್ ಖಂಡ್ರೆ
ರಾಯಚೂರು ಗ್ರಾಮೀಣ - ಬಸನಗೌಡ ದದ್ದಲ್
ಮಸ್ಕಿ - ಬಸನಗೌಡ ತುರ್ವಿಹಾಳ
ಕುಷ್ಟಗಿ - ಅಮರೇಗೌಡ ಬಯ್ಯಾಪುರ
ಕನಕಗಿರಿ - ಶಿವರಾಜ್ ತಂಗಡಗಿ
ಯಲಬುರ್ಗಾ - ಬಸವರಾಜ ರಾಯರೆಡ್ಡಿ
ಕೊಪ್ಪಳ - ರಾಘವೇಂದ್ರ ಹಿಟ್ನಾಳ್
ಗದಗ - ಎಚ್.ಕೆ.ಪಾಟೀಲ್
ರೋಣ - ಜಿ.ಎಸ್.ಪಾಟೀಲ್
ಹುಬ್ಬಳ್ಳಿ-ಧಾರವಾಡ (ಪೂರ್ವ) - ಪ್ರಸಾದ್ ಅಬ್ಬಯ್ಯ
ಹಳಿಯಾಳ- ಆರ್.ವಿ.ದೇಶಪಾಂಡೆ
ಕಾರವಾರ - ಸತೀಶ್ ಸೈಲ್
ಭಟ್ಕಳ - ಮಂಕಾಳ ವೈದ್ಯ
ಹಾನಗಲ್ - ಶ್ರೀನಿವಾಸ್ ಮಾನೆ
ಹಾವೇರಿ - ರುದ್ರಪ್ಪ ಲಮಾಣಿ
ಬ್ಯಾಡಗಿ - ಬಸವರಾಜ ಶಿವಣ್ಣನವರ್
ಹಿರೆಕೇರೂರು - ಯು.ಬಿ.ಬಣಕಾರ್
ರಾಣೆಬೆನ್ನೂರು - ಪ್ರಕಾಶ್ ಕೋಳಿವಾಡ
ಹೂವಿನ ಹಡಗಲಿ - ಪರಮೇಶ್ವರ್ ನಾಯ್ಕ್
ಹಗರಿಬೊಮ್ಮನಹಳ್ಳಿ - ಭೀಮಾನಾಯ್ಕ್
ವಿಜಯನಗರ - ಎಚ್.ಆರ್.ಗವಿಯಪ್ಪ
ಕಂಪ್ಲಿ - ಗಣೇಶ್
ಬಳ್ಳಾರಿ ಗ್ರಾಮೀಣ - ನಾಗೇಂದ್ರ
ಸಂಡೂರು - ತುಕಾರಾಂ
ಚಳ್ಳಕೆರೆ - ರಘುಮೂರ್ತಿ
ಹಿರಿಯೂರು - ಡಿ.ಸುಧಾಕರ್
ಹೊಸದುರ್ಗ - ಗೋವಿಂದಪ್ಪ
ದಾವಣಗೆರೆ ಉತ್ತರ- ಎಸ್.ಎಸ್ ಮಲ್ಲಿಕಾರ್ಜುನ್
ದಾವಣಗೆರೆ ದಕ್ಷಿಣ - ಶಾಮನೂರು ಶಿವಶಂಕರಪ್ಪ
ಮಾಯಕೊಂಡ - ಕೆ.ಎಸ್.ಬಸವರಾಜ್
ಭದ್ರಾವತಿ - ಸಂಗಮೇಶ್ವರ್
ಸೊರಬ - ಮಧು ಬಂಗಾರಪ್ಪ
ಸಾಗರ - ಬೇಳೂರು ಗೋಪಾಲಕೃಷ್ಣ
ಬೈಂದೂರು - ಗೋಪಾಲ್ ಪೂಜಾರಿ
ಕುಂದಾಪುರ - ದಿನೇಶ್ ಹೆಗಡೆ
ಕಾಪು - ವಿನಯ್ ಕುಮಾರ್ ಸೊರಕೆ
ಶೃಂಗೇರಿ - ಟಿಡಿ ರಾಜೇಗೌಡ
ಚಿಕ್ಕನಾಯಕನಹಳ್ಳಿ - ಕಿರಣ್ ಕುಮಾರ್
ತಿಪಟೂರು - ಷಡಕ್ಷರಿ
ತುರುವೆಕೆರೆ - ಬೆಮೆಲ್ ಕಾಂತರಾಜ್
ಕುಣಿಗಲ್ - ರಂಗನಾಥ್
ಕೊರಟಗೆರೆ - ಪರಮೇಶ್ವರ್
ಶಿರಾ - ಟಿಬಿ ಜಯಚಂದ್ರ
ಪಾವಗಡ - ಎಚ್ವಿ ವೆಂಕಟೇಶ್
ಮಧುಗಿರಿ - ಕೆಎನ್ ರಾಜಣ್ಣ
ಗೌರಿಬಿದನೂರು ಶಿವಶಂಕರ ರೆಡ್ಡಿ
ಬಾಗೇಪಲ್ಲಿ - ಎಸ್.ಎನ್.ಸುಬ್ಬಾರೆಡ್ಡಿ
ಚಿಂತಾಮಣಿ - ಎಂಸಿ ಸುಧಾಕರ್
ಶ್ರೀನಿವಾಸಪುರ - ರಮೇಶ್ ಕುಮಾರ್
ಕೆಜಿಎಫ್ - ರೂಪಾ ಶಶೀಧರ್
ಬಂಗಾರಪೇಟೆ - ನಾರಾಯಣಸ್ವಾಮಿ
ಮಾಲೂರು - ನಂಜೇಗೌಡ
ಬ್ಯಾಟರಾಯನಪುರ - ಕೃಷ್ಣಭೈರೇಗೌಡ
ಆರ್.ಆರ್.ನಗರ - ಕುಸುಮಾ
ಮಲ್ಲೇಶ್ವರಂ - ಅನೂಪ್ ಅಯ್ಯಂಗಾರ್
ಹೆಬ್ಬಾಳ - ಭೈರತಿ ಸುರೇಶ್
ಸರ್ವಜ್ಞನಗರ - ಕೆಜೆ ಜಾರ್ಜ್
ಶಿವಾಜಿನಗರ - ರಿಜ್ವಾನ್ ಅರ್ಷದ್
ಶಾಂತಿನಗರ - ಎನ್.ಎಹ್ಯಾರಿಸ್
ಗಾಂಧಿನಗರ - ದಿನೇಶ್ ಗುಂಡೂರಾವ್
ರಾಜಾಜಿನಗರ - ಪುಟ್ಟಣ್ಣ
ಗೋವಿಂದರಾಜನಗರ - ಪ್ರಿಯಾಕೃಷ್ಣ
ವಿಜಯನಗರ - ಎಂ.ಕೃಷ್ಣಪ್ಪ
ಚಾಮರಾಜಪೇಟೆ - ಜಮೀರ್ ಅಹ್ಮದ್ ಖಾನ್
ಬಸವನಗುಡಿ - ಯುಬಿ ವೆಂಕಟೇಶ್
ಬಿಟಿಎಂ ಲೇಔಟ್ - ರಾಮಲಿಂಗಾರೆಡ್ಡಿ
ಜಯನಗರ - ಸೌಮ್ಯಾ ರೆಡ್ಡಿ
ಮಹದೇವಪುರ - ನಾಗೇಶ್
ಆನೇಕಲ್ - ಶಿವಣ್ಣ
ಹೊಸಕೋಟೆ - ಶರತ್ ಬಚ್ಚೇಗೌಡ
ದೇವನಹಳ್ಳಿ - ಕೆ.ಎಚ್.ಮುನಿಯಪ್ಪ
ದೊಡ್ಡಬಳ್ಳಾಪುರ - ವೆಂಕಟರಾಮಯ್ಯ
ನೆಲಮಂಗಲ - ಶ್ರೀನಿವಾಸ್ ಎನ್
ಮಾಗಡಿ - ಬಾಲಕೃಷ್ಣ
ರಾಮನಗರ - ಇಕ್ಬಾಲ್ ಹುಸೇನ್
ಕನಕಪುರ - ಡಿಕೆ ಶಿವಕುಮಾರ್
ಮಳವಳ್ಳಿ - ನರೇಂದ್ರ ಸ್ವಾಮಿ
ಶ್ರೀರಂಗಪಟ್ಟಣ - ರಮೇಶ್ ಬಂಡಿಸಿದ್ದೇಗೌಡ
ನಾಗಮಂಗಲ - ಚಲುವರಾಯಸ್ವಾಮಿ
ಹೊಳೆನರಸೀಪುರ - ಶ್ರೇಯಸ್ ಪಟೇಲ್
ಸಕಲೇಶಪುರ - ಮುರಳಿ ಮೋಹನ್
ಬೆಳ್ತಂಗಡಿ - ರಕ್ಷಿತ್ ಶಿವರಾಮ್
ಮೂಡಬಿದ್ರೆ - ಮಿಥುನ್ ರೈ
ಮಂಗಳೂರು - ಯುಟಿ ಖಾದರ್
ಬಂಟ್ವಾಳ - ರಮಾನಾಥ್ ರೈ
ಸುಳ್ಯ - ಕೃಷ್ಣಪ್ಪ ಜಿ
ವಿರಾಜಪೇಟೆ - ಪೊನ್ನಣ್ಣ
ಪಿರಿಯಾಪಟ್ಟಣ - ಕೆ.ವೆಂಕಟೇಶ್
ಕೆ.ಆರ್.ನಗರ - ಡಿ.ರವಿಶಂಕರ್
ಹುಣಸೂರು - ಎಚ್.ಪಿ.ಮಂಜುನಾಥ್
ಎಚ್.ಡಿ.ಕೋಟೆ - ಅನಿಲ್ ಚಿಕ್ಕಮಾದು
ನಂಜನಗೂರು -ದರ್ಶನ್ ಧ್ರುವನಾರಾಯಣ
ನರಸಿಂಹರಾಜ - ತನ್ವೀರ್ ಸೇಠ್
ವರುಣಾ - ಸಿದ್ದರಾಮಯ್ಯ
ಟಿ.ನರಸಿಪುರ - ಎಚ್.ಸಿ.ಮಹದೇವಪ್ಪ
ಹನೂರು - ನರೇಂದ್ರ
ಚಾಮರಾಜನಗರ - ಪುಟ್ಟರಂಗಶೆಟ್ಟಿ
ಗುಂಡ್ಲುಪೇಟೆ - ಗಣೇಶ್ ಪ್ರಸಾದ್

Latest Videos
Follow Us:
Download App:
  • android
  • ios