ಪುದುಚೆರಿ (ಮಾ.19): ರಾಜ್ಯದಲ್ಲಿ ಸರ್ಕಾರ ಉಳಿಸಿಕೊಳ್ಳಲು ವಿಫಲರಾದ ಮತ್ತು ಇತ್ತೀಚೆಗೆ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನೇ ಉದ್ದೇಶಪೂರ್ವಕವಾಗಿ ದಿಕ್ಕುತಪ್ಪಿಸಿದ್ದ  ಪುದುಚೆರಿಯ ಮಾಜಿ ಮುಖ್ಯಮಂತ್ರಿ ನಾರಾಯಣಸಾಮಿಗೆ ಈ ಬಾರಿ ವಿಧಾನಸಭೆ ಟಿಕೆಟ್ ನಿರಾಕರಿಸಿದೆ. 

ಅವರಿಗೆ ಕೇವಲ ಚುನಾವಣಾ ಉಸ್ತುವಾರಿ ವಹಿಸುವ ಮೂಲಕ ಶಿಕ್ಷೆ ನೀಡಿದೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್‌ನ ಹಲವು ಶಾಸಕರು ಬಿಜೆಪಿ ಸೇರಿದ ಕಾರಣ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. 

ಮತ್ತೆ ಮೂವರು ಕಾಂಗ್ರೆಸ್‌ ಶಾಸಕರು ರಾಜೀನಾಮೆ: ಖಚಿತಪಡಿಸಿದ ಬಿಜೆಪಿ ನಾಯಕ

ಅದಕ್ಕೂ ಮುನ್ನ ರಾಹುಲ್ ಪ್ರವಾಸ ಕೈಗೊಂಡ ವೇಳೆಮೀನುಗಾರ ಮಹಿಳೆಯೊಬ್ಬರು ಸಿಎಂ ಸೇರಿ ಕಾಂಗ್ರೆಸ್‌ ನಾಯಕರ ವಿರುದ್ಧ ತಮಿಳಿನಲ್ಲಿ ದೂರು ಹೇಳಿದ್ದರು. 

ಆದರೆ ಸಾಮಿ ಆಕೆಯ ಮಾತನ್ನು ಇಂಗ್ಲೀಷ್‌ಗೆ ಭಾಷಾಂತರ ಮಾಡ ರಾಹುಲ್‌ಗೆ ಹೇಳುವ ವೇಳೆ ಚಂಡಮಾರುತದ ವೇಳೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಿದ್ದಾಗಿ ಸ್ಮರಿಸಿದ್ದಾಳೆ ಎಂದು ಹೇಳಿದ್ದರು. ಬಳಿಕ ಈ ವಿಚಾರ ರಾಹುಲ್ ಕಿವಿಗೆ ಬಿದ್ದಿತ್ತು.