Asianet Suvarna News Asianet Suvarna News

ಜನಾದೇಶ ಮಾರಿಕೊಂಡವರಿಗೆ ತಕ್ಕ ಪಾಠ ಕಲಿಸಿ: ಎಚ್‌.ಡಿ.ಕುಮಾರಸ್ವಾಮಿ

ಜನರ ಆಶೀರ್ವಾದ, ಜನಾದೇಶವನ್ನು ಮಾರಿಕೊಂಡವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ ಹೇಳಿದರು. ದೇವದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬುಧವಾರ ಜಾಲಹಳ್ಳಿ, ಗಾಣದಾಳ ಗ್ರಾಮಗಳಲ್ಲಿ ಸಾಗಿದ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದರು.

Former CM HD Kumaraswamy Slams On MLA K Shivanagouda Naik gvd
Author
First Published Jan 26, 2023, 3:00 AM IST

ದೇವದುರ್ಗ (ಜ.26): ಜನರ ಆಶೀರ್ವಾದ, ಜನಾದೇಶವನ್ನು ಮಾರಿಕೊಂಡವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ ಹೇಳಿದರು. ದೇವದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬುಧವಾರ ಜಾಲಹಳ್ಳಿ, ಗಾಣದಾಳ, ಗಲಗ,ಅರಕೇರಾ, ಕೊತ್ತದೊಡ್ಡಿ, ಸಾಸಿವೆಗೇರಾ ತಾಂಡಾ, ದೇವದುರ್ಗ, ಗಬ್ಬೂರು ಮತ್ತು ಮಸರಕಲ್‌ ಗ್ರಾಮಗಳಲ್ಲಿ ಸಾಗಿದ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕು ಹಾಲಿ ಶಾಸಕ ಕೆ.ಶಿವನಗೌಡ ನಾಯಕ ಅವರ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಅಭ್ಯರ್ಥಿ ಕರೆಮ್ಮ ಜಿ.ನಾಯಕ ಅವರಿಗೆ ಮತದಾರರು ಆಶೀರ್ವಾದ ಮಾಡಬೇಕು. ಕ್ಷೇತ್ರದಲ್ಲಿ ಜೆಡಿಎಸ್‌ ಅಲೆ ಪ್ರಬಲವಾಗಿದೆ. 

ಯುವಕರ ಸುನಾಮಿ ಎದ್ದಿದ್ದು ಪಾಪದ ದುಡ್ಡು ಸಂಪಾದಿಸಿದವರು ಈ ಸುನಾಮಿಯಲ್ಲಿ ಕೊಚ್ಚಿ ಹೋಗಲಿದ್ದಾರೆ. ಕೆಟ್ಟರಾಜಕಾರಣ ಬಹಳ ಕಾಲ ನಡೆಯುವುದಿಲ್ಲ ಎಂದು ಪರೋಕ್ಷವಾಗಿ ಶಾಸಕ ಶಿವನಗೌಡ ಅವರನ್ನು ಜರಿದರು. ರಾಜ್ಯದಲ್ಲಿ ನಡೆಯುತ್ತಿರುವ ಹಣದಾಹಿ ರಾಜಕೀಯದಿಂದ ಬಡತನ ನಿವಾರಣೆ ಮಾಡಲಿಕ್ಕೆ ಸಾಧ್ಯವಾಗಿಲ್ಲ. ಇಂದಿನ ರಾಜಕಾರಣಿಗಳು ಮತದಾರರ ಪ್ರೀತಿ ವಿಶ್ವಾಸವನ್ನು ಹಣದ ಆಸೆಗೆ ಮಾರಿಕೊಂಡು ರಾಜಕೀಯ ಅನುಭವಿಸುತ್ತಿದ್ದಾರೆ ಅಂತವರನ್ನು ದೂರವಿಡಬೇಕು. ರಾಜ್ಯದ ಬಡವರ ಬಡತನವನ್ನು ನಿವಾರಣೆ ಮಾಡುವ ಯೋಜನೆಗಳೊಂದಿಗೆ ರಾಜ್ಯದ ಉದ್ದಗಲಕ್ಕೂ ರಥ ಯಾತ್ರೆ ನಡೆಯುತ್ತಿದ್ದು ಮತದಾರರು ಜಾಗೃತರಾಗಬೇಕು. 

ಸಿದ್ದರಾಮಯ್ಯ ಷಡ್ಯಂತ್ರ ಬಿಚ್ಚಿಡಬೇಕಾ: ಎಚ್‌.ಡಿ.ಕುಮಾರಸ್ವಾಮಿ

ಆರೋಗ್ಯ, ಶಿಕ್ಷಣ ಉದ್ಯೋಗ, ವ್ಯವಸಾಯ ಹಾಗೂ ಮನೆ ನಿರ್ಮಾಣಕ್ಕೆ ಯಾವುದೇ ಸಾಲ ಮಾಡುವ ಅಗತ್ಯವಿಲ್ಲ. ಎಲ್ಲ ಸೌಲಭ್ಯಗಳನ್ನು ಪಂಚರತ್ನ ಯೋಜನೆಯಲ್ಲಿ ನೀಡುತ್ತೇವೆ. ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಅದು ಜೆಡಿಎಸ್‌ ನಿಂದ ಮಾತ್ರ ಸಾಧ್ಯ. ಪಂಚರತ್ನ ಯಾತ್ರೆಯಲ್ಲಿ ನಾಡಿನ ರೈತರು, ತಾಯಂದಿರು ತಮ್ಮ ಕಷ್ಟಗಳನ್ನು ನಮ್ಮ ಮುಂದೆ ಹೇಳಿಕೊಳುತ್ತಿದ್ದಾರೆ. ಪ್ರತಿ ಬಡ ಕುಂಟುಬಕ್ಕೆ ಮಾಸಿಕ ರು.5 ಸಾವಿರ ಸಹಾಯ ದನ ಕೊಡುತ್ತೇವೆ. ರೈತರಿಗೆ ದಿನದ 24 ಗಂಟೆಗಳ ಕಾಲ ನಿರಂತರ ವಿದ್ಯುತ್‌ ಪೂರೈಸಲಾಗುವುದು. ಜೆಡಿಎಸ್‌ ಗೆದ್ದರೆ ಅಧಿಕಾರ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದರು.

ಅರಕೇರಾ ಭಾಗದಲ್ಲಿ ನೀರಿನ ಸಮಸ್ಯೆ ಇದ್ದು ಅದನ್ನು ನಿವಾರಣೆ ಮಾಡಲಾಗುವುದು. ಇಲ್ಲಿನ ರೈತರಿಗೆ ವ್ಯವಸಾಯ ಮಾಡಲು ಅನುಕೂಲವಾಗುವಂತೆ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಧಿಕಾರ ಸಿಗಬೇಕು. ಈ ಬಾರಿ ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬಂಡೆಪ್ಪ ಖಾಶೆಂಪುರ, ಶಾಸಕ ವೆಂಕಟರಾವ ನಾಡಗೌಡ, ಅಭ್ಯರ್ಥಿ ಕರೆಮ್ಮ ಜಿ.ನಾಯಕ ಸೇರಿದಂತೆ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಜನರ ಸಂಕಷ್ಟ ನಿವಾರಣೆಗೆ ಜೆಡಿಎಸ್‌ಗೆ ಅಧಿಕಾರ ಕೊಡಿ: ಎಚ್‌.ಡಿ.ಕುಮಾರಸ್ವಾಮಿ

ದೇವೇಗೌಡ್ರು ರೈತರಿಗಾಗಿ ನೀರಾವರಿ ಮಾಡಿದ್ರು: ಮಾಜಿ ಪ್ರಧಾನಿ, ಮುತ್ಸದ್ದಿ ರಾಜಕಾರಣಿ ಮಣ್ಣಿನ ಮಗನಾದ ದೇವೇಗೌಡರು ನೇಗಿಲಯೋಗಿ ಬದುಕು ಹಸನಾಗಿಸಲು ನೀರಾವರಿ ಮಾಡಿದರು. ರೈತನ ಮಗ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಾಲಮನ್ನಾ ಮಾಡುವ ಮೂಲಕ ಬಡ ಜನರ ಬಾಳು ಉದ್ಧಾರ ಮಾಡಿದರು. ಇದನ್ನು ಅರಿತು 2023ರ ಚುನಾವಣೆಯಲ್ಲಿ ಜನರು ಹಕ್ಕು ಚಲಾಯಿಸಬೇಕೆಂದು ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡ ಜನ ಮಾತನಾಡಿಕೊಂಡರು. ಜೆಡಿಎಸ್‌ನಿಂದ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಬಸ್‌ನಿಲ್ದಾಣದ ವೃತ್ತದಲ್ಲಿ ಕ್ರೇನ್‌ ಮೂಲಕ ಬೃಹತ್‌ ರೊಟ್ಟಿಯ ಹಾರ ಹಾಕಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪಟ್ಟಣದಲ್ಲಿ ರಾತ್ರಿ ಭರ್ಜರಿ ಸ್ವಾಗತ ಕೋರಲಾಯಿತು.

Follow Us:
Download App:
  • android
  • ios