Asianet Suvarna News Asianet Suvarna News

ಜೆಡಿಎಸ್‌ ಶಾಸಕಾಂಗ ನಾಯಕರಾಗಿ ಎಚ್‌.ಡಿ.ಕುಮಾರಸ್ವಾಮಿ ಮರು ಆಯ್ಕೆ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುನರಾಯ್ಕೆಯಾಗಿದ್ದಾರೆ. ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷ ಆರ್‌.ವಿ.ದೇಶಪಾಂಡೆ ಅವರಿಂದ ಬುಧವಾರ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಮ್ಮ ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿದರು. 

Former CM HD Kumaraswamy re elected as JDS legislative leader gvd
Author
First Published May 25, 2023, 12:39 PM IST | Last Updated May 25, 2023, 12:38 PM IST

ಬೆಂಗಳೂರು (ಮೇ.25): ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುನರಾಯ್ಕೆಯಾಗಿದ್ದಾರೆ. ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷ ಆರ್‌.ವಿ.ದೇಶಪಾಂಡೆ ಅವರಿಂದ ಬುಧವಾರ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಮ್ಮ ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಸಭೆಯಲ್ಲಿ ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು.

ವಿಧಾನಮಂಡದಲಲ್ಲಿ ಜನಪರವಾಗಿ, ವಿಷಯಾಧಾರಿತವಾಗಿ ಹೋರಾಟ ನಡೆಸುವ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಚುನಾವಣೆಯಲ್ಲಿ ಪಕ್ಷ ಸೋಲನುಭವಿಸಿದೆ. ಸೋತ ಮಾತ್ರಕ್ಕೆ ಎದೆಗುಂದುವ ಅಗತ್ಯ ಇಲ್ಲ. ಇನ್ನೂ ಕೆಚ್ಚೆದೆಯಿಂದ ಪಕ್ಷವನ್ನು ಕಟ್ಟಬೇಕಿದೆ. ತಳಮಟ್ಟದಲ್ಲಿ ಸಂಘಟನೆಯನ್ನು ಬಲಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಚುನಾಯಿತ ಶಾಸಕರು, ಸ್ಪರ್ಧೆ ಮಾಡಿದ್ದ ಎಲ್ಲಾ ಅಭ್ಯರ್ಥಿಗಳು ಕೆಲಸ ಮಾಡಬೇಕಿದೆ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ಭರವಸೆ ನೀಡುವಾಗ ನಿಮಗೆ ತಲೆ ಇರಲಿಲ್ಲವೇ, ಕರೆಂಟ್‌ ಬಿಲ್‌ ಕಟ್ಟದಂತೆ ಕರೆ ನೀಡುವೆ: ಎಚ್‌ಡಿಕೆ

ಎಚ್‌ಡಿಕೆ ಸೇರಿ 9 ಶಾಸಕರಿಂದ ಪ್ರಮಾಣ ವಚನ: ವಿಧಾನಸಭೆ ಚುನಾವಣೆಯಲ್ಲಿ ವಿಜೇತರಾಗಿ ಪ್ರಮಾಣವಚನ ಸ್ವೀಕರಿಸದೆ ಬಾಕಿ ಉಳಿದಿದ್ದ ಒಂಭತ್ತು ಸದಸ್ಯರು ಸಭಾಧ್ಯಕ್ಷರ ಕಚೇರಿಯಲ್ಲಿ ಶಾಸಕರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಈ ಮೂಲಕ ಎಲ್ಲಾ 224 ಶಾಸಕರು ಪ್ರಮಾಣ ವಚನ ಸ್ವೀಕರಿಸಿದಂತಾಗಿದೆ. ಬುಧವಾರ ಹಂಗಾಮಿ ಸಭಾಧ್ಯಕ್ಷ ಆರ್‌.ವಿ.ದೇಶಪಾಂಡೆ ಹೊಸ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು. 

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಬಿ.ಎನ್‌.ರವಿಕುಮಾರ್‌, ಎಚ್‌.ಟಿ.ಮಂಜು, ಸಿ.ಬಿ.ಸುರೇಶ್‌ಬಾಬು, ಸ್ವರೂಪ್‌ ಪ್ರಕಾಶ್‌, ಎಚ್‌.ಸಿ.ಬಾಲಕೃಷ್ಣ, ಎ.ಬಿ.ರಮೇಶ್‌ ಬಂಡಿಸಿದ್ದನಗೌಡ ಮತ್ತು ಪ್ರಭುಚವ್ಹಾಣ್‌ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಸದನ ಆರಂಭವಾದ ಮೊದಲ ದಿನ ಮಂಗಳವಾರ 181 ಶಾಸಕರು ಪ್ರಮಾಣ ವಚನ ಸ್ವೀಕರಿಸಿದರೆ, ಎರಡನೇ ದಿನ ಮಂಗಳವಾರ 34 ಮತ್ತು ಮೂರನೇ ದಿನ ಬುಧವಾರ 9 ಶಾಸಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಈ ಮೂಲಕ ಎಲ್ಲಾ 224 ಶಾಸಕರು ಪ್ರಮಾಣ ವಚನ ಸ್ವೀಕರಿಸಿದಂತಾಗಿದೆ.

2ನೇ ದಿನ 34 ಶಾಸಕರ ಪ್ರಮಾಣ, ಇನ್ನೂ 9 ಮಂದಿ ಬಾಕಿ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ 16ನೇ ವಿಧಾನಸಭೆಗೆ ಪ್ರವೇಶಿಸಿರುವ ಶಾಸಕರ ಪ್ರತಿಜ್ಞಾವಿಧಿ ಸ್ವೀಕಾರ ಎರಡನೇ ದಿನ ಮಂಗಳವಾರವೂ ಮುಂದುವರಿದಿದ್ದು, ಸದನದಲ್ಲಿ 27 ಶಾಸಕರು ಪ್ರಮಾಣ ವಚನ ಸ್ವೀಕರಿಸಿದರೆ, ಸಭಾಧ್ಯಕ್ಷರ ಕಚೇರಿಯಲ್ಲಿ ಏಳು ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಒಟ್ಟು ಎರಡನೇ ದಿನ 34 ಶಾಸಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಅಧಿವೇಶನ ಪ್ರಾರಂಭವಾದ ಮೊದಲ ದಿನ ಸೋಮವಾರ 181 ಶಾಸಕರು ಪ್ರಮಾಣ ವಚನ ಸ್ವೀಕರಿಸಿದರೆ, ಮಂಗಳವಾರ 34 ಶಾಸಕರು ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಇನ್ನು 9 ಮಂದಿ ಪ್ರಮಾಣ ವಚನ ಸ್ವೀಕರಿಸುವುದು ಬಾಕಿ ಇದೆ.

ಭಗವಂತ ಅಥವಾ ಸಂವಿಧಾನದ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಬೇಕು ಎಂಬ ನಿಯಮಾವಳಿ ಇದ್ದರೂ ಬಹುತೇಕರು ತಮ್ಮ ಇಚ್ಛಾ ದೇವತೆ, ಕ್ಷೇತ್ರದ ಜನತೆಯ ಹೆಸರಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಎನ್‌.ಎಚ್‌.ಕೋನರೆಡ್ಡಿ ಮುಹೂರ್ತ ಸರಿ ಇಲ್ಲ ಎಂದು 15 ನಿಮಿಷ ತಡವಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಸಂಗ ನಡೆಯಿತು. ಹೊಸ ಸರ್ಕಾರ ರಚನೆಯಾದರೂ ನೂತನ ಶಾಸಕರಲ್ಲಿ ಸದನಕ್ಕೆ ಆಗಮಿಸುವ ಉತ್ಸಾಹ ಕಾಣಲಿಲ್ಲ. ಕಿರಿಯ ಮತ್ತು ಹಿರಿಯ ಸದಸ್ಯರ ಕೊರತೆ ಎದ್ದು ಕಾಣುತ್ತಿತ್ತು.

ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕಿ ಎಂದಿದ್ದ ಅಶ್ವತ್ಥ್‌ ವಿರುದ್ಧ ಎಫ್‌ಐಆರ್‌

ಅಧಿವೇಶನ ಆರಂಭವಾದ ನಂತರ ಸದನದಲ್ಲಿ 27 ಶಾಸಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸದಿದ್ದರೆ ಬುಧವಾರ ನಡೆಯುವ ಸಭಾಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಹಂಗಾಮಿ ಸಭಾಧ್ಯಕ್ಷ ಆರ್‌.ವಿ.ದೇಶಪಾಂಡೆ ಹೇಳಿ ಸದನ ಮುಂದೂಡಿಕೆ ಮಾಡಿದರು.

Latest Videos
Follow Us:
Download App:
  • android
  • ios