Asianet Suvarna News Asianet Suvarna News

ಮಾನಸಿಕ ಸ್ಥಿರತೆ ಕಳೆದುಕೊಂಡ ಕುಮಾರಸ್ವಾಮಿ: ಗುತ್ತೇದಾರ್‌

ಎಚ್.ಡಿ. ಕುಮಾರಸ್ವಾಮಿ ಸರ್ಕಾರದಲ್ಲಿ ಲಂಚ, ಕಮಿಷನ್, ಹಗರಣ ಇವುಗಳು ಹೆಚ್ಚಿನ ರೀತಿಯಲ್ಲಿ ನಡೆದಿದ್ದು, ಆದ್ದರಿಂದ ಎಚ್.ಡಿ. ಕುಮಾರಸ್ವಾಮಿಯವರಿಗೆ ಕಣ್ಣು ಕಾಮಣಿ ಆದಂತೆ ಲಂಚ ಕಮಿಷನ್ ಇದೆ ಕಂಡು ಬರುತ್ತದೆ ಎಂದು ದೂರಿದ ಜಗದೇವ್ ಗುತ್ತೇದಾರ್ ಕಾಳಗಿ 

Former CM HD Kumaraswamy Lost his Mental Stability Says Jagadev Guttedar Kalagi grg
Author
First Published Nov 18, 2023, 10:30 PM IST

ಕಲಬುರಗಿ(ನ.18): ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆಯ ಕುರಿತು ಲಂಚಕ್ಕಾಗಿ ಮಾತನಾಡಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಸುಳ್ಳು ಆರೋಪವಾಗಿದೆ. ಅವರು ಮಾನಸಿಕ ಸ್ಥಿರತೆ ಕಳೆದುಕೊಂಡು ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ಟೀಕಿಸಿದ್ದಾರೆ.

ಈ ಹಿಂದೆ ಪೆನ್‌ಡ್ರೈವ್ ಬಿಡುಗಡೆ ಮಾಡುತ್ತೇನೆಂದು ಸುಳ್ಳು ಹೇಳಿಕೆ ನೀಡಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯು ಸಂಪೂರ್ಣವಾದ ಸುಳ್ಳಾಗಿದ್ದು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಲಂಚ, ಕಮಿಷನ್ ಇನ್ನೀತರ ಅವ್ಯವಹಾರಗಳೇ ನಡೆದಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಎಚ್.ಡಿ. ಕುಮಾರಸ್ವಾಮಿ ಸರ್ಕಾರದಲ್ಲಿ ಲಂಚ, ಕಮಿಷನ್, ಹಗರಣ ಇವುಗಳು ಹೆಚ್ಚಿನ ರೀತಿಯಲ್ಲಿ ನಡೆದಿದ್ದು, ಆದ್ದರಿಂದ ಎಚ್.ಡಿ. ಕುಮಾರಸ್ವಾಮಿಯವರಿಗೆ ಕಣ್ಣು ಕಾಮಣಿ ಆದಂತೆ ಲಂಚ ಕಮಿಷನ್ ಇದೆ ಕಂಡು ಬರುತ್ತದೆ ಎಂದು ದೂರಿದ್ದಾರೆ.

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ರೀತಿ ಕಾಂಗ್ರೆಸ್‌ ಸರ್ಕಾರ: ಶ್ರೀರಾಮುಲು ಲೇವಡಿ

ಕುಮಾರಸ್ವಾಮಿಯವರಿಗೆ ಬೇರೆ ಕೆಲಸವಿಲ್ಲದೇ ಖಾಲಿ ಕುಳಿತು ಏನೇನೋ ಇಲ್ಲಸಲ್ಲದ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯಯವರು ಸುಮಾರು 40 ವರ್ಷಗಳ ಅನುಭವಿ ಹಾಗೂ ಕಳಂಕ ರಹಿತ ರಾಜಕಾರಣಿಯಾಗಿದ್ದಾರೆ. ಅನೇಕ ಗಂಭಿರ ಹಾಗೂ ಸಣ್ಣಪುಟ್ಟ ಹಗರಣಗಳಲ್ಲಿ ಭಾಗಿಯಾಗಿರುವ ಅವರು ಕೋಮುವಾದಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಜೆಡಿ(ಎಸ್) ಪಕ್ಷದ ಅನೇಕ ಹಾಲಿ ಹಾಗೂ ಮಾಜಿ ಶಾಸಕರು ಮತ್ತು ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಬಿಟ್ಟು ಹೊರಹೋಗಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಕ್ಕೆ ಮೆಚ್ಚಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದನ್ನು ಕಂಡು ಕುಮಾರಸ್ವಾಮಿಯವರು ಸಂಪೂರ್ಣವಾಗಿ ಮಾನಸಿಕ ಸ್ಥಿರತೆ ಕಳೆದುಕೊಂಡು ಸಂಬಂಧವಿಲ್ಲದಂತೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಹರಿಹಾಯ್ದಿದ್ದಾರೆ. ಇಂತಹ ಸುಳ್ಳು ಆರೋಪಗಳು ಮಾಡುತ್ತಿರುವದು ಒಬ್ಬ ಮಾಜಿ ಮುಖ್ಯಮಂತ್ರಿಗೆ ಶೋಭೆ ತರುವಂತದ್ದಲ್ಲ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios