ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ರಾಮನಗರ, (ಜ.11): ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ಸರ್ಕಾರ ವಿರುದ್ಧ ಗುಡುಗಿದ್ದಾರೆ. ಅಲ್ಲದೇ ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಾರೆ.
ರಾಮನಗರದಲ್ಲಿ ಇಂದು (ಸೋಮವಾರ) ಮಾತನಾಡಿದ ಕುಮಾರಸ್ವಾಮಿ, ಇಲ್ಲಿನ ಉಪನೋಂದಣಾಧಿಕಾರಿ(ಎಸಿ)ಯನ್ನ ತಗೆಯಬೇಕು ಎಂದು ನಿರ್ಧಾರ ಮಾಡಿದ್ದೆ. ಮುಖ್ಯಮಂತ್ರಿಗಳು ಕೂಡ ಆದೇಶದ ಮಾಡಿದ್ದರು. ನಂತರ ಅಲ್ಲಿ ಏನೇನು ಆಟ ನಡೆದಿದೆ ಎಂಬುದು ನನಗೆಲ್ಲ ಗೊತ್ತಿದೆ. ಸಿಎಂ ಕಚೇರಿಯಿಂದ ಯಾರ್ಯಾರಿಗೆ ಪೇಮೆಂಟ್ ಆಗಿದೆ ಅಂತಾನೂ ಗೊತ್ತಿದೆ. ನಾನು ನೇರವಾಗಿ ಹೇಳ್ತಿದ್ದೇನೆ. ಇಲ್ಲಿನ ಎಸಿ ನನಗೆ 3 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದರು ಎಂದು ಗಂಭೀರ ಆರೋಪ ಮಾಡಿದರು.
ರಾಧಿಕಾ ಬಗ್ಗೆ ಕೊನೆಗೂ ಮೌನ ಮುರಿದ ಕುಮಾರಸ್ವಾಮಿ...!
ವರ್ಗಾವಣೆ ತಡೆಯಲು ಕಮಿಷನ್ ಕೊಡು ಎಸಿ ರಾಮನಗರದ ಜನರನ್ನು ಉಳಿಸುತ್ತಾರಾ? ಅವರಿವರಿಗೆ ಕೊಟ್ಟ ಹಣವನ್ನ ಜನರಿಂದಲೇ ಅವರು ವಸೂಲಿ ಮಾಡಬೇಕಾಗುತ್ತೆ. ಇಲ್ಲಿನ ಅಧಿಕಾರಿಗಳು ಏಜೆಂಟ್ಗಳ ಮೂಲಕ ಹಣ ಕೊಟ್ಟು ನಂತರ ಜನರ ಜೇಬಿಗೆ ಕೈ ಹಾಕುತ್ತಾರೆ. ಈ ಸರ್ಕಾರಕ್ಕೆ ಮರ್ಯಾದೆ ಇದ್ರೆ ಇಂತಹ ಅಧಿಕಾರಿಗಳನ್ನ ಹಿಟ್ಟುಕೊಳ್ಳಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರದ ವಿರುದ್ಧ ನಾನು ಮಾತನಾಡುತ್ತಿಲ್ಲ. ರಾಜ್ಯದ ಜನತೆ ಮತ್ತು ಬಿಜೆಪಿ ಶಾಸಕರೇ ಆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಸಿಪಿವೈಗೆ ಎಚ್‌ಡಿಕೆ ಟಾಂಗ್
ಇನ್ನು ಸಿ.ಪಿ.ಯೋಗೇಶ್ವರ್ ವಿರುದ್ಧವೂ ಕಿಡಿಕಾರಿದ ಎಚ್‌ಡಿಕೆ, ಯೋಗೇಶ್ವರ್ ವಸೂಲಿ ಬಗ್ಗೆ ಊರುಗಳಲ್ಲೇ ಚರ್ಚೆ ಆಗುತ್ತಿದೆ, ಇದನ್ನ ನಾನು ಆರೋಪ ಮಾಡುತ್ತಿಲ್ಲ ಎಂದರು.
ಇನ್ನು ನಮ್ಮ ಕುಟುಂಬ ಯಾರಿಗೂ ರಾಜಿಯಾಗಲ್ಲ. ಪ್ರಧಾನಮಂತ್ರಿಯನ್ನೇ ನೋಡಿರುವ ಕುಟುಂಬ ನಮ್ಮದು. ಹಾಗಾಗಿ ಒಂದು ಮಂತ್ರಿ ಸ್ಥಾನಕ್ಕೆ ಹೆದರುತ್ತಾನಾ? ಯೋಗೇಶ್ವರ್ ಮಂತ್ರಿಯಾಗಿದ್ದಾಗಲೇ ಸೋಲಿಸಿದ್ದೇವೆ. ಚನ್ನಪಟ್ಟಣಕ್ಕೆ ನಾನು ಚುನಾವಣೆಯಲ್ಲಿ ಹೋಗಿರಲಿಲ್ಲ. ಆದರೂ ಕ್ಷೇತ್ರದ ಜನತೆಯೇ ನನಗೆ ಆಶೀರ್ವಾದ ಮಾಡಿದರು. ಇಂತಹ ಮಂತ್ರಿ ಸ್ಥಾನಗಳನ್ನ ಎಷ್ಟು ನೋಡಿಲ್ಲ ನಾನು ಎಂದು ಸಿಪಿವೈ ವಿರುದ್ಧ ವಾಗ್ದಾಳಿ ನಡೆಸಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 11, 2021, 3:25 PM IST