Asianet Suvarna News Asianet Suvarna News

ಎಚ್​ಡಿಕೆ ರಹಸ್ಯವೆಲ್ಲ ಗೊತ್ತಿದೆ, ಬಾಯ್ಬಿಟ್ರೆ ಬೇರೆಯದೇ ಆಗುತ್ತೆ: ಯತ್ನಾಳ್ ಬಾಂಬ್

* ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಸನಗೌಡ ಪಾಟೀಲ್ ಯತ್ನಾಳ್ 
* ಕುಮಾರಸ್ವಾಮಿ ರಹಸ್ಯವೆಲ್ಲ ನನಗೆ ಗೊತ್ತಿದೆ ಎಂದು ಬಾಂಬ್ 
* ಸಿಂದಗಿ ಉಪಚುನಾವನೆಯ ಬಹಿರಂಗ ಪ್ರಚಾರದಲ್ಲಿ ಹೇಳಿಕೆ

Basanagouda Patil Yatnal Hits out at JDS Leader HD Kumaraswamy rbj
Author
Bengaluru, First Published Oct 19, 2021, 8:24 PM IST
  • Facebook
  • Twitter
  • Whatsapp

ವಿಜಯಪುರ, (ಅ.19): ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯ (By Election) ಕಾವು ರಂಗೇರಿದ್ದು, ತಮ್ಮ ಅಭ್ಯರ್ಥಿಗಳ ಗೆಲುವಿಗೆ ಘಟಾನುಘಟಿ ನಾಯಕರುಗಳು ಅಖಾಡಕ್ಕಿಳಿದಿದ್ದಾರೆ.

ಭರ್ಜರಿ ಪ್ರಚಾರದ ಮಧ್ಯೆ ಆರೋಪ-ಪ್ರತ್ಯಾರೋಪಗಳು ಸಹ ಜೋರಾಗಿವೆ. ಇದರ ಮಧ್ಯೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ಎಚ್‌ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.

ಉರಿಯುವ ಬೆಂಕಿಗೆ ಅಫೀಮು ಸುರಿದ ಬಿಜೆಪಿ ಶಾಸಕ ಯತ್ನಾಳ್

ಇಂದು (ಅ.19) ವಿಜಯಪುರ (Vijayapura) ಜಿಲ್ಲೆಯ ಆಲಮೇಲದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ನನಗೆ ಎಲ್ಲ ಗೊತ್ತಿದೆ. ಎಚ್​ಡಿಕೆ ರಹಸ್ಯ ನನ್ನ ಬಳಿ ಇದೆ. ಆ ಕುರಿತು ಬಾಯಿ ಬಿಟ್ಟರೆ ಅದು ಬೇರೆಯದೇ ಆಗುತ್ತದೆ ಎಚ್ಚರಿಕೆ ನೀಡಿದರು.

ಇನ್ನು ಇದೇ ವೇಳೆ ವಿ. ಸೋಮಣ್ಣ ಅವರಿಗೆ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನ ನೀಡಬೇಕು ಎಂದು ಪ್ರಚಾರ ಸಭೆ ವೇದಿಕೆ ಮೇಲೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಯತ್ನಾಳ್ ಮನವಿ ಮಾಡಿದರು.

ಹಳೆ ಮೈಸೂರು ಭಾಗದ ಹೊಣೆಯನ್ನು ಸೋಮಣ್ಣ ಅವರಿಗೆ ನೀಡಬೇಕು. ಸೋಮಣ್ಣ ಅವರಿಗೆ ತಾಕತ್ತಿದೆ. ಅವರು ಕೆಲಸ ಮಾಡುತ್ತಾರೆ. ಬರೀ ಬೆನ್ನುಹತ್ತಿ ಓಡಾಡುವವರಿಗೆ ಅವಕಾಶ ಕೊಡಬೇಡಿ ಎಂದರು.

ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ಗಂಭೀರ ಆರೋಪ
ಒಳಸಂಚು ಸಿದ್ದರಾಮಯ್ಯನವರ ಹುಟ್ಟು ಗುಣ, ನಮ್ಮದಲ್ಲ. 2009ರಲ್ಲಿ ಬೈಎಲೆಕ್ಷನ್​​ನಲ್ಲಿ ಸಿದ್ದರಾಮಯ್ಯ ಬಿ.ಎಸ್. ಯಡಿಯೂರಪ್ಪ ಜತೆ ಕೈಜೋಡಿಸಿದ್ದರು. ಯಡಿಯೂರಪ್ಪ ಜೊತೆ ಸಿದ್ದರಾಮಯ್ಯ ಕೈ ಜೋಡಿಸಿದ್ದರು ಎಂದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. 

Follow Us:
Download App:
  • android
  • ios