Asianet Suvarna News Asianet Suvarna News

ವೇದಿಕೆ ಮೇಲೆ ಮಾತಾಡುವಾಗ ಸಿದ್ದರಾಮಯ್ಯಗೆ ಗಂಟಲು ಒಣಗಿತ್ತು: ಶ್ರೀರಾಮುಲು

ಹಿಂದುಳಿದ ನಾಯಕರಾದ ದೇವರಾಜ ಅರಸು ಅವರನ್ನು ಅಧಿಕಾರದಿಂದ ಇಳಿಸಿದ್ದು, ಕಾಂಗ್ರೆಸಿನವರೇ. ಈಗ ನಿಮ್ಮನ್ನು ಇಳಿಸುವುದೂ ಕೂಡ ಶಿವಕುಮಾರ್‌ ಅವರೇ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಟಾಂಗ್‌ ನೀಡಿದರು.

Former bjp minister sriramulu outraged against siddaramaiah in mysuru chalo against muda scam rav
Author
First Published Aug 11, 2024, 6:09 AM IST | Last Updated Aug 11, 2024, 6:09 AM IST

 ಮೈಸೂರು (ಆ.11): ಹಿಂದುಳಿದ ನಾಯಕರಾದ ದೇವರಾಜ ಅರಸು ಅವರನ್ನು ಅಧಿಕಾರದಿಂದ ಇಳಿಸಿದ್ದು, ಕಾಂಗ್ರೆಸಿನವರೇ. ಈಗ ನಿಮ್ಮನ್ನು ಇಳಿಸುವುದೂ ಕೂಡ ಶಿವಕುಮಾರ್‌ ಅವರೇ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಟಾಂಗ್‌ ನೀಡಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಮೈಸೂರು ಚಲೋ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ನಿನ್ನೆ ಇದೇ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರು ಮಾತನಾಡುವಾಗ ಗಂಟಲು ಹಾರಿ ಹೋಗಿತ್ತು. ತುಟ್ಟಿಗಳು ಒಣಗಿತ್ತು. ವಾಲ್ಮೀಕಿ, ಎಂಡಿಎ ಹಗರಣ ವಿಷಯದಲ್ಲಿ ಹೋರಾಟ ಮಾಡಲಾಗುತ್ತಿದೆ. ಇದು ಮುಂದುವರೆಯುತ್ತದೆ ಕೂಡ ಎಂದರು.

ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಶ್ರೀರಾಮುಲು

ಪ.ಜಾತಿ, ಪ.ಪಂಗಡಕ್ಕೆ ಮೀಸಲಾದ ಕೋಟ್ಯಂತರ ರೂಪಾಯಿಯನ್ನು ಗ್ಯಾರಂಟಿ ಯೋಜನೆಗೆ ಬಳಸಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ಆರೋಪ ಬಂದಾಗ ಅವರು ಗೌರವಯುತವಾಗಿ ರಾಜೀನಾಮೆ ಕೊಟ್ಟರು. ಈಗ 14 ವರ್ಷದ ನಂತರ ನಿಮ್ಮ ಮೇಲೆ ಆರೋಪ ಬಂದಿದೆ. ನಾವೂ ಶ್ರೀರಾಮನ ವನವಾಸದಂತೆ ಪಾದಯಾತ್ರೆ ಮಾಡಿದ್ದೇವೆ. ನಿಮ್ಮ ರಾಜಿನಾಮೆ ಕೊಡುವತನಕ ಹೋರಾಟ ಬಿಡುವುದಿಲ್ಲ. ನಾವು ಜಗ್ಗಲ್ಲ, ಬಗ್ಗಲ್ಲ ಎಂಬುವರಿಗೆ ಕಾರ್ಯಕರ್ತರು ಮನಸ್ಸು ಮಾಡಿದರೆ ಎಂಥ ಬಂಡೆಯು ಪುಡಿಪುಡಿ ಆಗಬೇಕು. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದರು.

Latest Videos
Follow Us:
Download App:
  • android
  • ios