Raichur: ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಲು ಒತ್ತಾಯ: ಒಂದೇ ಟಿಕೆಟ್‌ಗಾಗಿ 17 ಅರ್ಜಿ ಸಲ್ಲಿಕೆ

ಇಡೀ ರಾಜ್ಯದ ತುಂಬಾ ಈಗ ವಿಧಾನಸಭಾ ಚುನಾವಣೆಯ ಚರ್ಚೆಗಳು ಶುರುವಾಗಿವೆ‌. ಈ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅಂತ ಅಭ್ಯರ್ಥಿ ಳ ಆಯ್ಕೆಗಾಗಿ ಅರ್ಜಿ ಆಹ್ವಾನ ಮಾಡಿತ್ತು. ರಾಯಚೂರು ನಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಒಟ್ಟು 17 ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. 

Forced to give Congress ticket to Muslim community at raichur gvd

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು ‌

ರಾಯಚೂರು (ಡಿ.15): ಇಡೀ ರಾಜ್ಯದ ತುಂಬಾ ಈಗ ವಿಧಾನಸಭಾ ಚುನಾವಣೆಯ ಚರ್ಚೆಗಳು ಶುರುವಾಗಿವೆ‌. ಈ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅಂತ ಅಭ್ಯರ್ಥಿ ಳ ಆಯ್ಕೆಗಾಗಿ ಅರ್ಜಿ ಆಹ್ವಾನ ಮಾಡಿತ್ತು. ರಾಯಚೂರು ನಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಒಟ್ಟು 17 ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ 17 ಜನರಲ್ಲಿ 13 ಜನರು ಮುಸ್ಲಿಂ ನಾಯಕರು ಆಗಿದ್ದು, ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂಬ ಕೂಗು ಈಗ ಕೇಳಿಬರುತ್ತಿದೆ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ ಮುಸ್ಲಿಂ ನಾಯಕರು ಎಲ್ಲರೂ ಒಂದೇ ಕಡೆ ಸೇರಿ ಸಭೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.

ಯಾರಿಗಾದರೂ ‌ಕೊಡಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಿ: ರಾಯಚೂರು ನಗರದ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಾಗಿದೆ. ಹೀಗಾಗಿ ‌ಸಾಮಾನ್ಯ ವರ್ಗಕ್ಕೆ ‌ಮೀಸಲಾಗಿರುವ ಈ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ 17 ಜನರು ಅರ್ಜಿ ಸಲ್ಲಿಕೆ ‌ಮಾಡಿದ್ದಾರೆ. ಆ 17 ಜನರಲ್ಲಿ 13 ಜನರು ಮುಸ್ಲಿಂ ನಾಯಕರು ಇದ್ದಾರೆ. ಆದ್ರೂ ಹೈಕಮಾಂಡ್ ‌ಮುಸ್ಲಿಂಯೇತರ ಅಭ್ಯರ್ಥಿಗೆ ಟಿಕೆಟ್ ನೀಡಲು ಚಿಂತನೆ ‌ನಡೆಸಿದೆ ಎಂಬ ಮಾಹಿತಿ ‌ತಿಳಿದ ಕೂಡಲೇ ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳು ಒಂದೇ ಕಡೆ ಸೇರಿ ಸಭೆ ನಡೆಸಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಧ್ವನಿ ಶುರುವಾಗಿದೆ.

Karnataka Assembly Election 2023: ಕಾಂಗ್ರೆಸ್‌ನ ಒಂದೇ ಟಿಕೆಟ್‌ಗಾಗಿ 16 ಜನರ ಪೈಪೋಟಿ: ಅರ್ಜಿ ಸಲ್ಲಿಕೆ

ರಾಯಚೂರು ನಗರ ಕ್ಷೇತ್ರಕ್ಕೆ ಏಕೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ‌ನೀಡಬೇಕು: ರಾಯಚೂರು ಜಿಲ್ಲೆಯಲ್ಲಿರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತಗಳು ಹೆಚ್ಚಾಗಿವೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ 25 ಸಾವಿರದಿಂದ 45 ಸಾವಿರ ಮುಸ್ಲಿಂ ಸಮುದಾಯದ ಮತದಾರರಿದ್ದಾರೆ. ಅದರಲ್ಲೂ ರಾಯಚೂರು ನಗರದ ವಿಧಾನಸಭಾ ಕ್ಷೇತ್ರದಲ್ಲಿ 90 ಸಾವಿರಕ್ಕೂ ಅಧಿಕ ಮುಸ್ಲಿಂ ಮತಗಳು ಇವೆ. ಈವರೆಗೆ ‌ನಡೆದ ಬಹುತೇಕ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿದೆ. ಇಡೀ ರಾಯಚೂರು ‌ನಗರದ ಇತಿಹಾಸದಲ್ಲೇ ಎರಡು ಬಾರಿ ಮಾತ್ರ ಬೇರೆ ಪಾರ್ಟಿಗೆ ಮುಸ್ಲಿಂ ಸಮುದಾಯ ಬೆಂಬಲ ನೀಡಿದ್ದು ಬಿಟ್ಟರೇ ಇನ್ನುಳಿದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಿದೆ. ಈಗಲೂ ‌ಕೂಡ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದರೆ, ರಾಯಚೂರು ನಗರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲ್ಲಿಸುವುದಾಗಿ ಕುಲ್- ಜಮಾತಿ ಕೌನ್ಸಿಲ್ ‌ನಿರ್ಧಾರ ಮಾಡಿದೆ.

ಸಾಮಾಜಿಕ ನ್ಯಾಯದ ಅಡಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ‌ನೀಡಲು ಆಗ್ರಹ: ರಾಯಚೂರು ನಗರದಲ್ಲಿ 2ಲಕ್ಷ 23 ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ. ಅದರಲ್ಲಿ 90ಸಾವಿರಕ್ಕೂ ಅಧಿಕ ‌ಮುಸ್ಲಿಂ ಮತಗಳು ಇವೆ. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಸಿಕ್ಕರೆ ರಾಯಚೂರು ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸರಳವಾಗಿ ಆಗುತ್ತೆ. ಕಳೆದ 70 ವರ್ಷಗಳಿಂದ ರಾಯಚೂರು ನಗರ ಬಿಟ್ಟರೇ ಇನ್ನುಳಿದ ಯಾವ ಕ್ಷೇತ್ರದಲ್ಲಿಯೂ ಮುಸ್ಲಿಂ ಸಮುದಾಯದವರು ಟಿಕೆಟ್ ಕೇಳಿಲ್ಲ..ಅಷ್ಟೇ ಯಾಕೆ ಸ್ಪರ್ಧೆ ಕೂಡ ಮಾಡಿಲ್ಲ. ಹತ್ತಾರು ಚುನಾವಣೆಯಲ್ಲಿ ಮುಸ್ಲಿಂ ಸಮುದಾಯವೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿದೆ.ಹೀಗಾಗಿ ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಸಾಮಾಜಿಕ ನ್ಯಾಯದಡಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ಕಾಂಗ್ರೆಸ್ ಮುಖಂಡರು ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಮುಸ್ಲಿಂರಿಂದ ತಪ್ಪಿಸಿ ತಾವು ಪಡೆಯಲು ಪ್ರಯತ್ನಿಸುತ್ತಿರುವದು ಪಕ್ಷದ ಜಾತ್ಯಾತೀತ ನಿಲುವಿಗೆ ವಿರುದ್ಧವಾದದ್ದು ಮತ್ತು ಸಾಮಾಜಿಕ ನ್ಯಾಯದ ಪರವಾಗಿಲ್ಲ ಎನ್ನಬಹುದು, ಅವರು ಟಿಕೆಟ್ ಕೇಳುವದು ತಪ್ಪಲ್ಲ, ಆದರೆ ಒಂದು ಸಮುದಾಯದ ಪ್ರಾತಿನಿಧ್ಯ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವದು ಸರಿಯಲ್ಲ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಚಿಂತನೆ ‌ಮಾಡಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಲು ಆಗ್ರಹಿಸಿದರು.

ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದಿದ್ದರೆ ಪಕ್ಷಕ್ಕೆ ಧಕ್ಕೆ: ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 90 ಸಾವಿರ ಮುಸ್ಲಿಂ ಮತದಾರರಿದ್ದು, ಸಾಮಾಜಿಕವಾಗಿ ಇತರೆ ಸಮುದಾಯದ ಮತಗಳನ್ನು ಪಡೆದು ಒಬ್ಬ ಮುಸ್ಲಿಂ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಇಂತಹ ಒಂದು ಅವಕಾಶವೂ ಬಿಟ್ಟು ಕಾಂಗ್ರೆಸ್ ಹೈಕಮಾಂಡ್ ‌ಬೇರೆ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ‌ನೀಡಿದ್ರೆ ಕಾಂಗ್ರೆಸ್ ‌ಪಕ್ಷಕ್ಕೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಧಕ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ನಾವು ಇತ್ತೀಚಿಗೆ ನಗರದಲ್ಲಿ ಮುಸ್ಲಿಂ ಸಮುದಾಯದ ಎಲ್ಲಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಜೊತೆಗೆ ಸಭೆ ನಡೆಸಿದ್ದು, ಅವರೆಲ್ಲ ಒಂದಾಗಿ ಚುನಾವಣೆ ಏದುರಿಸಲು ತಯಾರಿದ್ದು, ಅರ್ಜಿ ಸಲ್ಲಿಸಿದ 13 ಜನರಲ್ಲಿ ಯಾರಾದರೂ ಒಬ್ಬರಿಗೆ ಟಕೆಟ್ ನೀಡಿದಲ್ಲಿ ಉಳಿದವರೆಲ್ಲರೂ ಬೆಂಬಲಿಸುವ ಬಗ್ಗೆ ಕುಲ್- ಜಮಾತಿ ಕೌನ್ಸಿಲ್ ಸಭೆಯಲ್ಲಿ ತೀರ್ಮಾನವಾಗಿದೆ. 

ಅಲ್ಲದೇ ಸದರಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷವು ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾರಾದರೂ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಜಿಲ್ಲಾ ಅಧ್ಯಕ್ಷರಾದ ಜಿ.ವಿ.ನಾಯಕ ಅವರ ಗಮನಕ್ಕೆ ತರಲು ಬಯಸುತ್ತೇವೆ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ಕೇಂದ್ರ ನಾಯಕರಿಗೂ ಮನವಿ ಮಾಡಿಕೊಳ್ಳುತ್ತೇವೆ. ನಮ್ಮ ಸಂಘಟನೆಯ ವತಿಯಿಂದ ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕೇತ್ರಕ್ಕೆ ಭೇಟಿ ನೀಡಿ ಸಮುದಾಯದ ಸಭೆಗಳನ್ನು ನಡೆಸಿ ನಮ್ಮ ಜೊತೆಗೆ ಕೈಜೋಡಿಸಲು ಕೇಳಿಕೊಳ್ಳುತ್ತೇವೆ. ಒಂದು ವೇಳೆ ಕಾಂಗ್ರೆಸ್ ಪಕ್ಷವು ರಾಯಚೂರು ನಗರ ವಿಧಾನಸಭಾ ಕೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡದಿದ್ದಲ್ಲ ನಾವು ಇಡೀ ಸಮುದಾಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹಿಷ್ಕರಿಸುತ್ತೇವೆ, ಆ ಪಕ್ಷದ ವಿರುದ್ಧ ಹೋರಾಡಬೇಕಾಗುತ್ತದೆ ಎಂದು ಈ ಮೂಲಕ ಆ ಪಕ್ಷದ ನಾಯಕರ ಗಮನಕ್ಕೆ ತರಲು ಬಯಸುತ್ತೇವೆ. 

ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಸರ್ಕಾರ ಬದ್ಧ: ಸಚಿವ ಶ್ರೀರಾಮುಲು

ಇಲ್ಲಿ ನಾವು ಯಾವುದೇ ಸಮುದಾಯದ ವಿರುದ್ಧ ಇರುವದಿಲ್ಲ, ನಮ್ಮ ಸಮುದಾಯದ ಪ್ರಾತಿನಿಧ್ಯ ಮಾತ್ರ ಕೇಳುತ್ತಿದ್ದು, ಒಂದು ವೇಳೆ ಕಾಂಗ್ರೆಸ್ ನಮ್ಮ ಹಕ್ಕಿನ ವಿರುದ್ಧ ನಿರ್ಣಯ ಕೈಗೊಂಡರೆ, ನಾವು ಸಹ ಕಾಂಗ್ರೆಸ್ ಪಕ್ಷದ ವಿರುದ್ಧ ನಿರ್ಣಯ ಕೈಗೊಳ್ಳುವದು ಅನಿವಾರ್ಯವಾಗುತ್ತದೆ.  ಕಾಂಗ್ರೆಸ್ ಯಾವುದೇ ಕಾರಣಕ್ಕೂ ಜಿಲ್ಲೆಯ ಮುಸ್ಲಿಂ ಸಮುದಾಯದ ಭಾವನೆಗಳಗೆ ಧಕ್ಕೆ ಯಾಗದಂತೆ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಸಾಮಾಜಿಕ ನ್ಯಾಯದ ಆಧಾರದಲ್ಲಿ ಮುಸ್ಲಿಂ ಸಮುದಾಯದ ಒಬ್ಬ ನಾಯಕನಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಒಟ್ಟಿನಲ್ಲಿ ರಾಯಚೂರು ನಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಭಾರೀ ಪೈಪೋಟಿ ಶುರುವಾಗಿದೆ. ಆದ್ರೆ ಹೈಕಮಾಂಡ್ ಯಾವ ಸಮುದಾಯದ ನಾಯಕರಿಗೆ ಟಿಕೆಟ್ ನೀಡುತ್ತೆ, ಆಗ ಮುಸ್ಲಿಂ ಸಮುದಾಯದ ನಿರ್ಧಾರ ಏನಾಗುತ್ತೆ ಎಂಬುವುದು ‌ಕಾದುನೋಡಬೇಕಾಗಿದೆ.

Latest Videos
Follow Us:
Download App:
  • android
  • ios